ಅಪಹೃತ ಇಸ್ರೇಲ್ ಪ್ರಜೆಗಳ ರಕ್ಷಣೆಯ ನೈಜ ಘಟನೆಯ ಕುರಿತ ಚಿತ್ರಗಳು...
ಚಿತ್ರ
ಅಪರೇಷನ್ ಥಂಡರ್ ಬೋಲ್ಟ್(1977) -ಮತ್ತು ರೇಡ್ ಆನ್ ಎಂಟೆಬ್ಬೆ(1977)
ಕಟ್ಮಂಡುವಿನಿಂದ ಭಾರತಕ್ಕೆ ಹೊರಟಿದ್ದ ನಮ್ಮ ದೇಶದ ಇಂಡಿಯನ್ ಏರ್ಲೈನ್ಸ್ -ಐ ಸಿ -814 ವಿಮಾನವನ್ನು ಡಿಸೆಂಬರ್ 24 1999ರಲ್ಲಿ ಅಪಹರಿಸಿ ಕಂದಹಾರ್ ಗೆ ಹೊಯ್ದು ಅಲ್ಲಿ ಪ್ರಯಾಣಿಕರನ್ನು ಒತ್ತೆಯಾಳಾಗಿಸಿ ಬೇಡಿಕೆ ಇಟ್ಟ ಪಾಕಿಸ್ಥಾನದ ಉಗ್ರಗಾಮಿಗಳ(ಹರ್ಕತುಲ್ ಮುಜಾಹಿದೀನ್ -ಹುಜಿ ) ಬೇಡಿಕೆಗೆ-ಬೆದರಿಕೆಗೆ ಮಣಿದು ಉಗ್ರಗಾಮಿ ನಾಯಕ ಮೌಲಾನ ಮಸೂದ್ ಅಜರ್ನನು ಮತ್ತಿಬ್ಬರನ್ನು ನಮ್ಮ ಸರ್ಕಾರ ಭಾರತದ ಜೈಲುಗಳಿಂದ ಮುಕ್ತಗೊಳಿಸಿ ರಾಜಾತಿಥ್ಯದಿಂದ ಬಿಟ್ಟು ಪ್ರಯಾಣಿಕರನ್ನು ಮರಳಿ(ಅದಾಗಲೇ ಒಬ್ಬ ಪ್ರಯಾಣಿಕನನ್ನು ಉಗ್ರಗಾಮಿಗಳು ಸಾಯಿಸಿದ್ದರು ) ಕರೆ ತಂದ ಘಟನೆ ಬಗ್ಗೆ ಎಲ್ಲರಿಗೂ ಗೊತ್ತಿರುವುದೆ ...
ಈ ವಿಮಾನ ಹೈಜಾಕ್ -ಅಥವಾ ಅಪಹರಣ ಮಾಡಿ ಪ್ರಯಾಣಿಕರನ್ನು ಒತ್ತೆಯಾಳಾಗಿಸಿಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉಗ್ರಗಾಮಿಗಳ ಈ ಪ್ರವೃತ್ತಿ ಶುರು ಆಗಿ ಎಸ್ಟೋ ವರುಷಗಳೇ ಆದವು( ಮೊದಲ ವಿಮಾನ ಅಪಹರಣ-ಫೆಬ್ರುವರಿ 21- 1931ರಲ್ಲಿ ಪೆರು ದೇಶದ ಅರೆಕ್ವಿಪದಿಂದ ) ಆಗಿಂದ ಆಗಾಗ್ಗೆ ಅಲ್ಲಲಿ ( 22 ಜೂನ್ 1977ರಲ್ಲಿ ಇಸ್ರೇಲ್ ಪ್ರಜೆಗಳು ಮತ್ತು ಇನ್ನಿತರ ದೇಶದವರು ಇದ್ದ ಫ್ರಾನ್ಸ್ ವಿಮಾನ ಅಪಹರಣದ ಬಗ್ಗೆಯೇ ಈ ಬರಹ) ಮತ್ತು ಅಮೇರಿಕಾದಲ್ಲಿ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ವಿಮಾನವನ್ನು ಆಯುಧ-ಸಾಧನವಾಗಿ ಮಾಡಿಕೊಂಡು ನುಗ್ಗಿಸಿ ಧ್ವಂಸ ಮಾಡಿ ಅಪಾರ ಜನರ ಸಾವು ನೋವಿಗೆ ಕಾರಣವಾದ ನಂತರ ಬಹುತೇಕ ಎಲ್ಲ ದೇಶಗಳಲ್ಲಿ ಪ್ರಯಾಣಿಕರನ್ನು ಬಹು ಹಂತಗಳಲ್ಲಿ ಅಮೂಲಾಗ್ರ ತಪಾಸಣೆ ಮಾಡುವರು...ಈ ತಪಾಸಣೆ ಕಿರಿಕಿರೀ -ಮುಜುಗರ ತರುವುದು ನಿಜವಾದರೂ ಪ್ರಯಾಣಿಕರ ಸುರಕ್ಷತೆಯೇ ಆಧ್ಯತೆಯಾಗಿರುವುದರಿಂದ ತುಟಿ ಪಿಟಕ್ಕೆನದೆ ತಪಾಸಣೆಗೆ ಒಳಗಗಾಗದೆ ತಪ್ಪದು...!!
ವಿಮಾನ ಅಪಹರಣ-ಉಗ್ರಗಾಮಿಗಳಿಂದ ಸಾಮಾನ್ಯ ಜನರ- ಅಧಿಕಾರಿಗಳ-ಸಚಿವರ ಅಪಹರಣ ಆದಾಗ ಸಾಮಾನ್ಯವಾಗಿ 'ಇಸ್ರೇಲ್'ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಿಡಿಸಿ ತರಬೇಕು-ಎಂಬ ಹೇಳಿಕೆಗಳು -ಅಭಿಪ್ರಾಯ -ಅನಿಸಿಕೆಗಳು ವ್ಯಕ್ತವಾಗುವುದು..
ಏನಿದು ಇಸ್ರೇಲ್ ವಿಧಾನ?
ವೈರಿಗಳು- ಉಗ್ರಗಾಮಿಗಳು ಆಗಾಗ ವಿಮಾನ-ಇಲ್ಲವೇ ಜನರನ್ನು ಅಪಹರಿಸಿ -ಹತ್ಯೆಗೆಯ್ಯುವ (ಗೆಯ್ದ) ಬೆದರಿಕೆ ಹಾಕಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದಾಗ -ಅವರ ಬೇಡಿಕೆಗಳಿಗೆ ಮಣಿಯದೆ -ತಮ್ಮವರೊಬ್ಬರ ಕೂದಲೂ ಕೊಂಕಾಗದಂತೆ ರಹಸ್ಯ-ಸದ್ಧಿಲ್ಲದ ಸೇನಾ ಕಾರ್ಯಾಚರಣೆ ನಡೆಸಿ ಜನರನ್ನು ವಾಪಾಸ್ ತರುವ ರೀತಿ...
ನಿಮಗಾಗಿ ಇಲ್ಲಿದೆ ಅದರ ಬಗ್ಗೆ ಮಾಹಿತಿ:
ಇಸ್ರೇಲಿನ ಮ್ಯೂನಿಚ್ ಮಾರಣಹೋಮದ ವಿಫಲ ಕಾರ್ಯಾಚರಣೆ
ಇಸ್ರೇಲಿನ 11 ಜನ ಒಲಂಪಿಕ್ ಆಟಗಾರರು 1972ರಲ್ಲಿ ಮ್ಯೂನಿಚ್ನಲ್ಲಿ ಸಮ್ಮರ್ ಒಲಂಪಿಕ್ಸ್ ಪಂದ್ಯದಲ್ಲಿ ಭಾಗವಹಿಸಿದ್ದ ಸಂಧರ್ಭದಲ್ಲಿ ಅವರೆಲ್ಲರನು ಅಪಹರಿಸಿ ಇಸ್ರೇಲಿನ ಜೈಲುಗಳಲ್ಲಿ ಇರುವ ತಮ್ಮ 234 ಖೈದಿಗಳನ್ನು ಬಿಡುಗಡೆ ಮಾಡಿ ಎಂದು ಪ್ಲ್ಯಾಲೆಸ್ತೆನಿಯಾದ 'ಬ್ಲಾಕ್ ಸೆಪ್ಟಂಬರ್' ಹೆಸರಿನ ಉಗ್ರಗಾಮಿ ಸಂಘಟನೆಯ ಸದಸ್ಯರು ಇಸ್ರೇಲಿಗೆ ಬೆದರಿಕೆ ಹಾಕಿದ್ದರು..
ಅವರ ಬೇಡಿಕೆಗೆ ಬಗ್ಗದೆ ಜಗ್ಗದೆ -ಸೇನಾ ಕಾರ್ಯಾಚರಣೆ ನಡೆಸಿ ತಮ್ಮ ಆಟಗಾರರನ್ನು ಬಿಡಿಸಿಕೊಂಡು ಬರಲು ಸೂಚಿಸಿದ ಇಸ್ರೇಲಿನ ಸರಕಾರದ ಆಜ್ಞೆಯಂತೆ -ಇಸ್ರೇಲಿ ಆಟಗಾರರನ್ನು ಒತ್ತೆಯಾಳಾಗಿಸಿದ್ದ ಪ್ರದೇಶಕ್ಕೆ ನುಗ್ಗಿ ರಕ್ಷಿಸುವ ಹೋರಾಟದಲ್ಲಿ -ಹತಾಶರಾದ ಉಗ್ರಗಾಮಿಗಳು ಎಲ್ಲ 11 ಜನರನ್ನು ಹತ್ಯೆಗೆಯ್ದಿದ್ದರು. ಮತ್ತು 8 ಜನ ಉಗ್ರಗಾಮಿಗಳಲ್ಲಿ 5 ಜನರನ್ನು ಸೈನ್ಯದವರು ಸಾಯಿಸಿ ಮೂವರನ್ನು ಸೆರೆ ಹಿಡಿದಿದ್ದರು.
ಈ ವಿಫಲವಾದ ಕಾರ್ಯಾಚರಣೆ -ಆ ಕಾರ್ಯಾಚರಣೆಗೆ ಸಜ್ಜಾದ ಇಸ್ರೇಲಿನ ಈ ಕ್ರಮ ವ್ಯಾಪಕ ಟೀಕೆಗೆ ಒಳಗಾಯ್ತು-ದೇಶದಲ್ಲಿ ಜನ ಸರಕಾರದ ವಿರುದ್ಧ ತಿರುಗಿ ಬಿದ್ದರು-ಈ ಆಘಾತ -ಮತ್ತು ವಿಫಲ ಕಾರ್ಯಾಚರಣೆಯಿಂದ ಇಸ್ರೇಲಿನ ಆತ್ಮ ಶಕ್ತಿ ಕುಗ್ಗಿತ್ತು. ತನ್ನ ಸೇನಾ ಕಾರ್ಯ ದಕ್ಷತೆಗೆ - ಕ್ಷಮತೆಗೆ -ಸಿದ್ಧತೆಗೆ ಸಂಬಂದಿಸಿದಂತೆ ಜನರಲ್ಲಿ ಇತರ ದೇಶಗಳಲಿ ಇರುವ ಅಭಿಪ್ರಾಯವನ್ನು ಬದಲಿಸುವ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಇಸ್ರೇಲಿಗೆ ಆ ಸಂದರ್ಭ ಬೇಗನೆ ಬಂತು...!
ಚಿತ್ರದ ಕಥೆ:
ಹಲವು ದೇಶಗಳ ಪ್ರಯಾಣಿಕರಿದ್ದ (ಹೆಚ್ಚಿನವರು ಇಸ್ರೆಲಿಗರು ) ಫ್ರಾನ್ಸ್ ವಿಮಾನವನ್ನು ಅಪಹರಿಸಿ ಉಗಾಂಡದ ಎಂಟೆಬ್ಬೆ ವಿಮಾನ ನಿಲ್ದಾಣದಲ್ಲಿ ಒಯ್ದು ನಿಲ್ಲಿಸಿದ ಪ್ಯಾಲೆಸ್ತೀನ್ ಉಗ್ರಗಾಮಿಗಳಿಗೆ ಉಗಾಂಡದ ವಿಚಿತ್ರ -ಉನ್ಮತ್ತ -ಸ್ವಯಂ ಘೋಷಿತ ಸರ್ವಾಧಿಕಾರಿ -ದೇವರ ದೂತ ಎಂದು ಕರೆದುಕೊಳ್ಳುವ - ಉಗಾಂಡ ಅದ್ಯಕ್ಷ- 'ಇದಿ ಅಮಿನ್' ಶಹಭಾಷ್ಗಿರಿ ನೀಡಿ ಅವರಿಗೆ ಸಾಥ್ ನೀಡಿದ.
ನೂರರ ಹತ್ತಿರ ಇರುವ ಇಸ್ರೇಲಿನ ಜನರನ್ನು ಬೇರೆ ಮಾಡಿ ಇನ್ನಿತರ ಬೇರೆ ಬೇರೆ ದೇಶದವರನ್ನು ಅದೇ ವಿಮಾನದಲ್ಲಿ ಕಳುಹಿಸಿದ ಉಗ್ರಗಾಮಿಗಳು ಇಸ್ರೇಲ್ ಸರಕಾರಕ್ಕೆ ತಮಮ್ ಉಗ್ರಗಾಮಿ ಖೈದಿಗಳನ್ನು ಬಿಡುಗಡೆ ಮಾಡಿ ಪ್ಯಾಲೆಸ್ಟೈನ್ನ ಸ್ವಾಯತ್ತೆ ಘೋಷಿಸುವಂತೆ -ತಮ್ಮ ಮೇಲೆ ಅತಿಕ್ರಮಣ ಮಾಡದಿರುವಂತೆ ಆಗ್ರಹಿಸಿದರು.
ಉಗಾಂಡದ ಜೊತೆಗೆ ಯಾವುದೇ ರಾಜನೀತಿ ಸಂಬಂಧ ಇಲ್ಲದ ಆ ದೇಶದ ಮೇಲೆ ಆರ್ಥಿಕ ನಿರ್ಬಂಧ ಹೇರಿದ ಎಲ್ಲ ದೇಶಗಳ ವಿರುದ್ಧ ಇದಿ ಅಮಿನ್ ಸಿಟ್ಟಾಗಿದ್ದ-ಅವನಿಗೂ ಪರ ದೇಶಗಳ ಗರ್ವ -ಅಹಂಕಾರ ಅಳಿಸುವ ಇರಾದೆ -ಹಿಂದೊಮ್ಮೆ ಆದ ಇಸ್ರೇಲ್ ವಿಫಲ ಕಾರ್ಯಾಚರಣೆ ಕಾರಣವಾಗಿ-ಈ ಸಲವೂ ಅದೂ ತನ್ನ ದೇಶದಲ್ಲಿ ನುಗ್ಗಿ ಕಾರ್ಯಾಚರಣೆ ನಡೆಸಲಿಕ್ಕಿಲ್ಲ ಎಂಬ ಭಾವ!
ಹಿಂದೊಮ್ಮೆ ಆದ ವಿಫಲ ಕಾರ್ಯಾಚರಣೆ-ಅತ್ತ ಉಗ್ರಗಾಮಿಗಳನ್ನು ಬಿಡುಗಡೆ ಮಾಡಲು ಇಷ್ಟ ಪಡದೆ ಮತೊಮ್ಮೆ ಸೇನಾ ಕಾರ್ಯಾಚರಣೆ ನಡೆಸಿ ತನ್ನ ದೇಶದ ಪ್ರಜೆಗಳನ್ನು ಬಿಡಿಸಿಕೊಂಡು ಬರಲು ಮಿಲಿಟರಿ ಅಪರೇಷನ್- ಅಪರೇಷನ್ ತಂಡರ್ ಬೋಲ್ಟ್ ಗೆ ಹಸಿರು ನಿಶಾನೆ ತೋರಿದ ಇಸ್ರೇಲ್ ಸರಕಾರದ ತನ್ನ ಸೇನೆಯ ಬಗೆಗಿನ ನಂಬಿಕೆ -ಇಸ್ರೇಲಿನ ಪ್ರಯಾಣಿಕರ ಅಳಿವು-ಉಳಿವು ಪ್ರಶ್ನೆಯಾಗಿ ಆ ಕಾರ್ಯಚರಣೆಯೂ ಯಶಸ್ವಿಯಾಗಿ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಇಸ್ರೇಲಿಗೆ ಮರಳಿದರು.
ಕಡಿಮೆ ಸಮಯದಲಿ ಅತಿ ಅಪಾಯಕಾರಿ ಕಾರ್ಯಾಚರಣೆಗೆ ಸಜ್ಜಾಗಿ -ಸದ್ದಿಲ್ಲದೇ ಉಗಾಂಡದಲ್ಲಿ ನುಸುಳಿ ರಾತ್ರಿ ಕಾರ್ಯಾಚರಣೆ ನಡೆಸಿ ಎಲ್ಲ ಉಗ್ರಗಾಮಿಗಳನ್ನು ಕೊಂದು ಎಲ್ಲ ಇಸ್ರೇಲ್ ಪ್ರಯಾಣಿಕರನ್ನು(ಒಬ್ಬ ವಯಸ್ಸಾದ ವೃದ್ಧೆ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದರಿಂದ ಇಸ್ರೇಲಿಗೆ ಮರಳದೆ ಆಮೇಲೆ ಆ ವೃಧ್ಧೆ ಏನಾದಳು ಎಂದು ಗೊತ್ತಾಗಲಿಲ್ಲ.) ಸುರಕ್ಷಿತವಾಗಿ ಬಿಡಿಸಿ ಕರೆ ತರುವ ಬಗ್ಗೆಯೇ ಈ ಚಲನ ಚಿತ್ರಗಳು...
1.ಆಪರೇಶನ್ ಥಂಡರ್ ಬೋಲ್ಟ್ -1977 ಇಸ್ರೇಲ್ ಸರಕಾರವೇ ನಿರ್ಮಿಸಿದ ಚಿತ್ರ (ಬಹುತೇಕ ಆ ಕಾರ್ಯಾಚರಣೆಗೆ ಸಂಬಂಧಿಸಿದ ನೈಜ ವ್ಯಕ್ತಿಗಳು ಅಭಿನಯಿಸಿದ್ದು)
2. ರೈಡ್ ಆನ್ ಎಂಟೆಬ್ಬೆ -1977 -ಹಾಲಿವುಡ್ ಚಿತ್ರ (ಹಾಲಿವುಡ್ ನಟ ಚಾರ್ಲ್ಸ್ ಬ್ರಾನ್ಸನ್ ನಾಯಕತ್ವದಲ್ಲಿ )
- ಮೊದಲನೆಯದು ಸರಕಾರೀ ಚಿತ್ರ ಮತ್ತು ಅಂದಿನ ಘಟನೆಯ ಪ್ರತಿ ಕ್ಷಣದ ನೈಜ ಮಾಹಿತಿಯನ್ನು ದೃಶ್ಯ ಪರದೆಗೆ ಸೇರಿಸುವ ಯತ್ನ(ಬಹುತೇಕ ಭಾಗ ಇಸ್ರೇಲಿನ ಭಾಷೆಯಲ್ಲಿದೆ) ಹಾಗೂ ನಟರಲ್ಲದವರ ಅಭಿನಯದಿಂದ ಕೊಂಚ ಪೇಲವ ಅನ್ನಿಸುವದು
- ಎರಡನೆಯ ಚಿತ್ರ ಇದರ ಖ್ಯಾತ ನಾಯಕ ನಟ 'ಚಾರ್ಲ್ಸ್ ಬ್ರಾನ್ಸನ್' -ಮತ್ತು ಹಾಲಿವುಡ್ ಶೈಲಿಯ ಚಿತ್ರೀಕರಣದ ಕಾರಣವಾಗಿ ಇಷ್ಟವಾಗುವುದು .
ರೇಡ್ ಆನ್ ಎಂಟೆಬ್ಬೆ ಚಿತ್ರದಲ್ಲಿನ ಕೆಲವು ಮುಖ್ಯ ಸನ್ನಿವೇಶಗಳು :
1. ಇಸ್ರೇಲ್ ಮತ್ತು ಬೇರೆ ದೇಶದ ಪ್ರಯಾಣಿಕರನ್ನು ಬೇರೆ ಬೇರೆ ಮಾಡುವ ಇಸ್ರೇಲ್ ಪ್ರಜೆಯ ವಿದೇಶಿ ಗೆಳತಿಯನ್ನು ದೂರ ದೂರ ಮಾಡುವ ದೃಶ್ಯ.
2. ಇದಿ ಅಮಿನ್ ಆಗಮನ ಅವನನ್ನು ಹೋಲುವ ಮಗ ಜ್ಯೂ: ಇಡಿ ಅಮಿನ್ ಕಾರಿಂದ ಇಳಿದು ನಡೆಯುವ ಮಾತಾಡುವ ಶೈಲಿ.
ಅಪಹರಣಕ್ಕೊಳಗಾದ ಜನರನ್ನು ಉದ್ಧೇಶಿಸಿ ತಾನು ಅವರಿಗೆ ಎಸ್ಟೆಲ್ಲ ಹೇಗೆಲ್ಲ ಸಹಾಯ ಮಾಡುತ್ತಿರುವೆನು ಎಂದು ಹೇಳುತ್ತಾ ತನ್ನನ್ನು ತಾನೇ ಹೊಗಳಿಕೊಳ್ಳುವ ಆಗಾಗ ಕೈ ಎತ್ತಿ ಬೀಸುವ ಹಲ್ಲು ಕಿಸಿವ ತನ್ನನು ಪ್ರೆಸಿಡೆಂಟ್ ಎಂದ ಪ್ರಯಾಣಿಕಳೊಬ್ಬಳಿಗೆ ತನ್ನನ್ನು ಹಿಸ್ ಎಕ್ಸಲೆನ್ಸಿ ಎಂದು ಸಂಬೋಧಿಸುವಂತೆ ಹೇಳುವ ದೃಶ್ಯ.
3. ವೃದ್ಧೆ ಒಬ್ಬಳು ಇದಿ ಅಮಿನ್ಗೆ ರೋಪ್ ಹಾಕುವ್ದು(ತಾನು ದೇವರ ದೂತ-ಹಿಸ್ ಎಕ್ಸಲೆನ್ಸಿ -ಎಂದು ಹೇಳಿಕೊಂಡಾಗ )-ಆ ವೃದ್ಧೆಯ ನೀ ಯಾರದರೆ ನನಗೇನು? ಎನ್ನುವ ಐ ಡೋಂಟ್ ಕೇರ್ ಆಟಿಟ್ಯೂಡ್ .
4. ಇಸ್ರೇಲಿನ ಹುಡುಗಿಯೊಬ್ಬಳು ಹೇಗೂ ತಾ ಬದುಕಿ ವಾಪಾಸ್ಸು ಈಸ್ರೆಲಿಗೆ ಹೋಗುವ ಸಂಭವ ಇಲ್ಲ ಎಂದು ಭಾವಿಸಿ ತನ್ನ ಪುಟ್ಟ ನಾಯಿಯನ್ನು ವಿದೇಶಿಗಳ ಕೈಗೆ ಕೊಟ್ಟು ಆ ನಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳುವ ದೃಶ್ಯ.
5.ಇದಿ ಅಮಿನ್ಗೆ ಹತ್ತಿರವಾದ ರಾಜತಾಂತ್ರಿಕ ಸ್ನೇಹಿತನೊಬ್ಬನ ಮೂಲಕ ಇದಿ ಅಮಿನ್ಗೆ ಫೋನ್ ಮಾಡಿ ಪ್ಯಾಲೆಸ್ತೆನಿಯನ್ನರನ್ನು ಸಾಯಿಸಿ ಇಲ್ಲವೇ ಸೆರೆ ಹಿಡಿದು ತಮ್ಮ ಪ್ರಯಾಣಿಕರನ್ನು ವಾಪಾಸ್ಸು ಕಳುಹಿಸಬೇಕು ಎಂದು ಇಸ್ರೇಲ್ ಕೋರಿದಾಗ ಪ್ಯಾಲೆಸ್ತೆನಿಯನ್ನರಿಗೆ ಇದಿ ಅಮಿನ್ ಸಹಾಯ ಮಾಡುತ್ತಿರುವನು ಎಂದು ಹೇಳಿದಾಗ ಕೋಪಗೊಂಡು ತನ್ನನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲವೆಂದು -ತಾನು ಆ ಪ್ರಯಾಣಿಕರಿಗೆ ಒಳ್ಳೆ ಊಟೋಪಚಾರ ಹಾಸಿಗೆ ವ್ಯವಸ್ಥೆ ಮಾಡಿ ಅವರ ಬಿಡುಗಡೆಗೆ ಪ್ರಯತ್ನಿಸುತ್ತಿರುವೆ ಎಂದು ಹೇಳುವ ದೃಶ್ಯ.
6.ಇಸ್ರೇಲಿನ ಅಧಿಕಾರದಲ್ಲಿರುವ ಪಕ್ಷದ ಅಧ್ಯಕ್ಷರು ತಮ್ಮ ವಿರೋಧ ಪಕ್ಷದ ನಾಯಕರನ್ನು ಕರೆಸಿಕೊಂಡು ಅವ್ರಿಗೆ ಈ ಅಪಹರಣದ ಬಗ್ಗೆ ಅಪಹರಣಕಾರರ ಬೇಡಿಕೆ ಬಗ್ಗೆ ತಿಳಿಸಿ ಅವ್ರಿಗೆ ಆವ ಮಿಲಿಟರಿ ಕಾರ್ಯಾಚರಣೆ ನಡೆಸಿ ಜನರನ್ನು ವಾಪಾಸ್ ತರುವ ಬಗ್ಗೆ ನಿರ್ಧರ್ಸಿದ್ದರ ಬಗ್ಗೆ ಮತ್ತು ವಿರೋಧ ಪಕ್ಷದ ಸಹಾಯ ಬೇಕು ಎಂದಾಗ ಯಾಕಿಷ್ಟು ತಡ ಮಾಡಿದಿರಿ? ನಮ್ಮ ಬೆಂಬಲ ಯಾವತ್ತು ಇದೆ ಎಂದು ಹೇಳಿ ಕಾರ್ಯಾಚರಣೆಗೆ ಸಜ್ಜಾಗಲು ಹೇಳುವ ದೃಶ್ಯ..(ನಮ್ಮ ದೇಶದಿ ಕಂದಹಾರ್ ವಿಮಾನ ಅಪಹರಣ ಆದಾಗ ಹೀಗೆಯೇ ಆಯ್ತು-ಆದರೆ ಆಮೇಲೆ ವಿರೋಧ ಪಕ್ಷದವರು ಉಗ್ರಗಾಮಿಗಳನ್ನು ಬಿಟ್ಟಿದ್ದು ತಪ್ಪುಇಸ್ರೇಲ್ ರೀತಿ ಕಾರ್ಯಾಚರಣೆ ನಡೆಸಬೇಕಿತ್ತು ಎಂದೆಲ್ಲ ವೋಟ್ ರಾಜಕೀಯ ಮಾಡಿದರು )
7.ಇಸ್ರೆಲಿಗರ ಅಪಹರಿಸಿ ಒತ್ತೆ ಇಟ್ಟ ಅಪಹರಣಕಾರರಲ್ಲಿ ಒಬ್ಬ ಬೆಳಗ್ಗೆ ತನ್ನ ಮನೆಯಿಂದ ಹೊರಡುವಾಗ -ಅವನ ತಾಯಿ ಇಷ್ಟು ಬೇಗ ಎಲ್ಲಿಗೆ ಎಂದಾಗ?ತಾನು ಮೀನು ಹಿಡಿಯಲು ಹೋಗುತ್ತಿರುವುದಾಗಿ ಸುಳ್ಳು ಹೇಳಲು ಕಷ್ಟ ಪಡುವುದು ತಂದೆಯೂ ಆ ಬಗ್ಗೆ ವಿಚಾರಿಸಿದಾಗ ಅದನ್ನೇ ಹೇಳಿದಾಗ-ತನಗೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ ಎಂತಲೂ-ಯ್ತನಗೆ ಎಲ್ಲವೂ ಗೊತ್ತು ಎಂದು ಕೆಲಸದಲಿ ಯಶಸ್ವಿಯಾಗು ಹುಷಾರ್ ಎಂದು ಹೇಳಿ ಕಳುಹಿಸುವ ದೃಶ್ಯ...!
8.ಕಾರ್ಯಾಚರಣೆಗೆ ಮುಂಚಿನ ಅಣುಕು ತಯಾರಿಯಲಿ ಹಲವು ಜನ ಸೈನಿಕರು ಒಟ್ಟಿಗೆ ದ್ವಾರದತ್ತ ನುಗ್ಗುತ್ತಾ ಹೋಗಿ ಅಣುಕು ಕಾರ್ಯಾಚರಣೆ ನಂತರ ತಮ್ಮ ತಯಾರಿ ಹೇಗಿತ್ತು ಎಂದಾಗ ಚಾರ್ಲ್ಸ್ ಬ್ರಾನ್ಸನ್ ನೀವು ಎಲ್ಲ 100ಜನ ಇಸ್ರೆಲಿಗರನ್ನು ಸಾಯಿಸಿದಿರಿ ಎನ್ನುವನು..!
ತಮ್ಮ ತಪ್ಪು(ಜೋರಾಗಿ ಸದ್ಧು ಮಾಡುತ್ತಾ-ಕಿರುಚುತ್ತ-ಒಟ್ಟೊಟ್ಟಿಗೆ ದ್ವಾರದಲ್ಲಿ ನುಗ್ಗುವ) ಅರಿವಾಗಿ ಮತ್ತೆ
ಹಲವು ಬಾರಿ ಪ್ರಯತ್ನಿಸಿ ಅತಿ ಕಡಿಮೆ ಅವಧಿಯಲ್ಲಿ (55 ನಿಮಿಷದಿಂದ 20 ನಿಮಿಷಕ್ಕೆ )ಕಾರ್ಯಾಚರಣೆ ನಡೆಸಲು ಸಜ್ಜಾಗುವರು.
9.ಸರ್ವ ಪಕ್ಷ ಸಭೆಯಲ್ಲಿ ತೀರ್ಮಾನ ಮಾಡಿ ಅವರ ಒಪ್ಪಿಗೆ ಪಡೆದು 20 ನಿಮಿಷಗಳಲ್ಲಿ ಕಾರ್ಯಾಚರಣೆ ನಡೆಸಬೇಕೆ ಬೇಡವೇ? ಎಂದು ಹೇಳುವೆವು ಯಾವುದಕ್ಕೂ ನೀವ್ ವಿಮಾನಗಳಲಿ ಹೊರಡಿ ಎಂದ ಸರಕಾರದವರು ವಿಮಾನಗಳಲಿ ಹೋಗುತ್ತಾ ವೀರವೇಶದ ಭಾವ ಉಕ್ಕಿಸುವ ದೇಶ ಭಕ್ತಿ ಗೀತೆ ಹಾಡುತ್ತ-ಹಾಗಯೇ ಉಗ್ರಗಾಮಿಗಳ ಮುಖ ಚಹರೆ ಚೆನಾಗಿ ನೆನಪಿಟ್ಟುಕೊಳ್ಳುವ ಸೈನಿಕರ ಜ್ಞಾಪಕ ಶಕ್ತಿ..
10.ಕಾರ್ಯಚರಣೆ ನಡೆಸಬೇಕೆ ಬೇಡವೇ? ಈ ಹಿಂದೆ ಮ್ಯೂನಿಚ್ನಲಿ ಆದ ಹಿನ್ನಡೆ ಸಾವು -ನೋವು ಸಂಬಂಧ ಆಡಳಿತ ಪ್ರತಿ ಪಕ್ಷದ ಕೆಲವು ಸದಸ್ಯರು ಗುದ್ದಾಡುತ್ತ ಅಸಲು ವಿಷಯವೇ ಮರೆತು ಜಗಳ ಆಡುವಾಗ ತಾಳ್ಮೆ ಕಳೆದುಕೊಂಡ ಇಸ್ರೇಲ್ ಅದ್ಯಕ್ಷರು ಕೋಪದಿಂದ -ಇದು ಬಹು ಮುಖ್ಯ ಸಮಸ್ಯೆಯೊಂದರ ಬಗ್ಗೆ ಚರ್ಚಿಸುತ್ತಿರುವ ವಿಷ್ಯ-ಈಗಾಗಲೇ 20 ನಿಮಿಷ ವ್ಯರ್ಥ ಆಗಿದೆ ಇನ್ನು ಹತ್ತು ನಿಮಿಷಗಳಲ್ಲಿ ನಾವ್ ಎಸ್ ನೋ ಎಂದು ಹೇಳದಿದ್ದರೆ -ಸೈನಿಕರು ವಾಪಾಸ್ಸು ಬರುವರು ಎಂದಾಗ ಎಲ್ಲರೂ ವಿಷಯದ ಪ್ರಾಮುಖ್ಯತೆ ಅರ್ಥ ಆಗಿ ಒಕ್ಕೊರಲಿಂದ ಕಾರ್ಯಾಚರಣೆಗೆಒಪ್ಪುವ ಓಕೆ ಹೇಳುವ ದೃಶ್ಯ-ಇತ್ತ ಇದನ್ನೆಲ ನೇರವಾಗಿ ಕೇಳುತ್ತಿದ್ದ ವಿಮಾನದಲ್ಲಿದ್ದ ಚಾರ್ಲ್ಸ್ ಬ್ರಾನ್ಸನ್ -ನಾವಿಲ್ಲಿ ಕಾರ್ಯಾಚರಣೆಗೆ ಸಜ್ಜಾಗಿ ಅವರ ಆಜ್ಞೆಗೆ ಕಾಯ್ತಿದ್ದ್ರೆ ಈ ಸರಕಾರದವರು -ವಿರೋಧ ಪಕ್ಷದವರು ಸುಮ್ನೇ ಚರ್ಚೆ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿರುವರು ಎಂದು ಹೇಳುವ ಸನ್ನಿವೇಶ.
ಕೊನೆ ತುಂತುರು:
- ರೈಡ್ ಆನ್ ಎಂಟೆಬ್ಬೆ ಚಿತ್ರದಲ್ಲಿ ಎಲ್ಲ ನಟ ವರ್ಗ- ತಂತ್ರಜ್ಞ ತಂಡ ಚೆನ್ನಾಗಿ ಕೆಲಸ ಮಾಡಿದ್ದು -ಚಿತ್ರ ನೋಡುವಾಗ ಅದು ಅನುಭವಕ್ಕೆ ಬರುವದು..
- ಎರಡೂ ಚಿತ್ರಗಳು ಒಂದೇ ವರ್ಷದಲ್ಲಿ ನಿರ್ಮಾಣವಾಗಿ ಬಿಡುಗಡೆ ಆಗಿ ಯಶಸ್ವಿ ಆದದ್ದು .
- ಸರಕಾರಗಳು ತಮ್ಮ ಸಾಧನೆಗಳು ಇತ್ಯಾದಿ ಬಗ್ಗೆ ಸಿನೆಮ -ಜಾಹೀರಾತು ನಿರ್ಮಿಸುವುದು ಮಾಮೂಲಿ-ಆದ್ರೆ ಇಲ್ಲಿ ಇಸ್ರೇಲ್ ಸರಕಾರ ಖುದ್ದು ತಾನೇ ಪ್ರಾಯೋಜಿಸಿ ಚಿತ್ರ ನಿರ್ಮಿಸಿದ್ದು..
- ಎರಡೂ ಚಿತ್ರಗಳು ಹತ್ತು ಹಲವು ಪ್ರಶಸ್ತಿಗಳನ್ನು ಪಡೆದು ಅಪಾರ ಹಣ ಗಳಿಸಿವೆ..
ಚಿತ್ರ ನೋಡಿ-ಅಂದು ನಾವ್ ನೋಡಿರದಿದ್ದ ಆದರೆ ಹಲವು ಬಾರಿ ಕೇಳಿದ್ದ (ಮುಂದೂ ಕೇಳುವ ) ಒಂದು ಅದ್ಭುತ ಸೈನಿಕ ಕಾರ್ಯಾಚರಣೆಯ ಸನ್ನಿವೇಶಗಳಿಗೆ ಸಾಕ್ಷಿ ಆಗಿ..
,ಅಲ್ಲಾದದ್ದು ಇಲ್ಯಾಕೆ ಆಗದು ಎಂದು ನಿಮ್ಮ ಮನದಲ್ಲಿ ಭಾವ ಮೂಡದೆ ಇರದು.
ಚಿತ್ರ ಮೂಲಗಳು:
ಐ ಎಂ ಡಿ ಬಿ :
ಐ ಎಂ ಡಿ ಬಿ : ನನ್ನ ಬರಹ:
ವಿಕಿಪೀಡಿಯ ಮಾಹಿತಿ:
ಈ ಚಿತ್ರಗಳು ಯುಟುಬ್ನಲ್ಲಿ ಅಧಿಕೃತವಾಗಿ ಪೂರ್ಣ ಪ್ರಮಾಣದಲ್ಲಿ :
ಮ್ಯೂನಿಚ್ ಘಟನೆ ನಂತರದ ಘಟನೆಗಳ ಕುರಿತ ಚಿತ್ರ:
Rating
Comments
ಸಪ್ತಗಿರಿ ಈದಿನ ಈ ಸಿನಿಮಾವನ್ನು
ಸಪ್ತಗಿರಿ ಈದಿನ ಈ ಸಿನಿಮಾವನ್ನು ಪೂರ್ಣವಾಗಿ ಕುಳಿತು ನೋಡಿದೆ (thunderbolt) , ಚಿತ್ರ ಸಹಜವಾಗಿದೆ, ಚೆನ್ನಾಗಿದೆ, ಕೆಲವೊಮ್ಮೆ ಕತ್ತಲಲ್ಲಿ ಜಾಸ್ತಿ ತೆಗೆದಿರುವದರಿ0ದ ಎನು ಆಗುತ್ತಿದೆ ಅ0ತ ತಿಳಿಯುವದಿಲ್ಲ. ಸೈನ್ಯ ನುಗ್ಗಿಸಿ ಬ0ದಿಗಳನ್ನು ಬಿಡಿಸುವುದು ತು0ಬಾ ದೈರ್ಯದ ನಿರ್ದಾರ , ಅದು ಬೇರೆ ದೇಶದೊಳಗೆ
ಉತ್ತಮ ಚಿತ್ರದ ವಿಮರ್ಶೆ ನೀಡಿದಕ್ಕೆ ವ0ದನೆಗಳು
ಪಾರ್ಥಸಾರಥಿ
In reply to ಸಪ್ತಗಿರಿ ಈದಿನ ಈ ಸಿನಿಮಾವನ್ನು by partha1059
ಗುರುಗಳೇ-ನೀವು ಆಪರೇಶನ್ ಥಂಡರ್
ಗುರುಗಳೇ-ನೀವು ಆಪರೇಶನ್ ಥಂಡರ್ ಬೋಲ್ಟ್ ಬದಲಿಗೆ -ರೇಡ್ ಆನ್ ಎಂಟೆಬ್ಬೆ ನೋಡಬೇಕಿತ್ತು...
ಕಾರಣ ಅಲ್ಲಿ ಎಲ್ಲ ಸಂಭಾಷಣೆ ಆಂಗ್ಲ ಭಾಷೆಯಲ್ಲಿದೆ ..
ಹೌದು ಇಡೀ ಕಾರ್ಯಾಚರಣೆ ಕತ್ತಲಲ್ಲಿ ನಡೆದುದರಿಂದ ಚಿತ್ರೀಕರಣವನ್ನು ಅಥೆಂಟಿಕ್ ಮಾಡಲು ಅದೇ ರೇತಿ ಕತ್ತಲಲ್ಲಿ ಚಿತ್ರೀಕರಿಸಿರುವರು..
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\\||
ಸಪ್ತಗಿರಿ, ಸಿನೆಮಾ ಕತೆಯನ್ನಲ್ಲದೇ
ಸಪ್ತಗಿರಿ, ಸಿನೆಮಾ ಕತೆಯನ್ನಲ್ಲದೇ ಅದರ ಹಿನ್ನಲೆ ಸಾದ್ಯಂತ ವಿವರಿಸಿರುವುದು ಓದಲು ಚೆನ್ನಾಗಿತ್ತು. ಸಮಯ, ಅವಕಾಶ ಸಿಕ್ಕಿದಾಗ ನೋಡಲು ಈ ಸಿನೆಮಾ ನನ್ನ ಲಿಸ್ಟಲ್ಲಿರುವುದು.-ಗಣೇಶ.
In reply to ಸಪ್ತಗಿರಿ, ಸಿನೆಮಾ ಕತೆಯನ್ನಲ್ಲದೇ by ಗಣೇಶ
ಗಣೇಶ್ ಅಣ್ಣ-
ಗಣೇಶ್ ಅಣ್ಣ-
ನೋಡದ
ನೋಡಬೇಕಾದ -
ನೋಡಲೇ ಬೇಕಾದ ಚಿತ್ರಗಳು ತುಂಬಾ ಇವೆ.
ಅವುಗಳ ಬಗ್ಗೆ ಬರೆಯುತ್ತ ಹೋದರೆ ಮುಗ್ಯೋದೆ ಇಲ್ಲ ಅನ್ಸುತ್ತೆ..
ಈಗಲೂ ದಿನ ನಿತ್ಯ ಹತ್ತು ಹಲವು ಹೊಸ ಹಳೆಯ ಚಿತ್ರಗಳು ಸಿಗುತ್ತಿವೆ.
ಅವುಗಳ ಬಗ್ಗೆ ಮುಂದೊಮ್ಮೆ ಬರೆವೆ...
ಸರಣಿ ಮುಂದುವರೆಯಲಿದೆ..
>>ನೀವು ಬಹಳ ದಿನಗಳ ನಂತರ ಮತ್ತೆ ಬರಹ ಬರೆಯಲು ಆರಂಭಿಸಿರುವುದು ನೋಡಿ ಓದಿ ಖುಷಿ ಆಯ್ತು...
ನಿಮ್ಮ ಬರಹಗಳು ಸದಾ ಬರುತ್ತಿರಲಿ..
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ.
\|