ಅಪ್ಪ ಕಟ್ಟಿದ ಜೋ....ಕಾಲಿ
ಅಪ್ಪ ಕಟ್ಟಿದ್ದ ಜೋಕಾಲಿ...!
ನನಗೆ ತಮ್ಮ ಬಂದಾಗ..!
ಆವರೆಗೆ ನನಗೆ ತೊಟ್ಟಿಲೇ ಜೋಕಾಲಿ
ಇಬ್ಬರೂ ಈಗ ಜೋಕಾಲಿ ಜೀಕುವಷ್ಟು..
ಗಟ್ಟಿಗರು...... ಆದರೆ
ತಮ್ಮನ ಜೀಕಿನ ಹರುಷ ನೋಡುತ್ತ.
ನಾನು ....ಅಮ್ಮನ ಅಡುಗೆ ಮನೆಯ
ಕಿಟಕಿ ಸರಳಿನ ಹಿಂದೆ
ಆಸೆಗಣ್ಣಿನ ಇಣುಕಿನೊಂದಿಗೆ,
ಕಳೆದು ಹೋಯಿತು...........ವರುಷ
ಅದೇ ಆಸೆಗಣ್ಣು...........
"ನೀನು ಹುಡುಗಿ ಜೋಕಾಲಿಯಿಂದ ಬಿದ್ದು
ಕಾಲು ಮುರಿದರೆ" ಅಮ್ಮ ನನ್ನಾಸೆಯ
ಗೋಣು ಮುರಿಯುತ್ತಿದ್ದಳು
ಆ................ದಿನ
ಕಗ್ಗತ್ತಲ ಬಾನಿನಲ್ಲೊಂದು ಚಿಕ್ಕ ಬೆಳಕು
ಜೀಕುತ್ತಿದ್ದ ತಮ್ಮನ ಕಾಲಮೇಲೇರಿ
ಬಿಗಿಸರಪಳಿ ಜೋಕಾಲಿ ಹಿಡಿದು..
ಜೀಕಿದೆ...........ನಾನು ತಮ್ಮನಂತೆ !
ಕಾಲು ಮುರಿದು ಕೊಳ್ಳದೆ,
ಆದರೆ...........
ಅದನು ನೋಡಬೇಕಾದವರು .!
ಅಲ್ಲಿರಲಿಲ್ಲ..........
Rating
Comments
ಉ: ಅಪ್ಪ ಕಟ್ಟಿದ ಜೋ....ಕಾಲಿ