ಅಪ್ಪ..
ಚಿತ್ರ

ಅಪ್ಪ
=====
ಮೂರು ದಿನದ
ತನ್ನ ಮಗುವಿನ ಮುಖ ಕಂಡು
ಸಾರ್ಥಕತೆಯಲ್ಲಿ ಮೈಮರೆತವ
...
ಮೂರು ತಿಂಗಳ
ಮಗುವಿನ ನಗುವ ಕಂಡು
ನಲಿವಲಿ ಮುದದಲಿ ತೇಲಿದವ
...
ಮೂರು ವರ್ಷದ
ಮಗುವಿನ ನುಡಿ ಕೇಳಿ ಆನಂದಿಸಿದವ
...
ಹದಿಮೂರು ವರ್ಷದ
ಮಗುವಿನ ಬುದ್ದಿವಂತಿಕೆಗೆ ಹೆಮ್ಮೆ ಪಟ್ಟವ
...
ಇಪ್ಪತ ಮೂರು ವರ್ಷದ
ಮಗನ
ಸ್ವಾರ್ಥಕ್ಕೆ ಬೆಚ್ಚಿಬಿದ್ದವ
...
ಮುವತ್ತ ಮೂರನೆ ವಯಸ್ಸಿನಲ್ಲಿ
ತನ್ನ ಆಸ್ತಿಯನ್ನು ತನಗೆ ಕೊಟ್ಟುಬಿಡು
ಎನ್ನುವ ಮಗನ ಮಾತಿಗೆ
ಕಣ್ತುಂಬಿ ನಿಂತಿದ್ದಾನೆ
..................... ಅಪ್ಪ
ಚಿತ್ರವನ್ನು internet ನಿಂದ ಪಡೆದು ಬದಲಾಯಿಸಿದೆ.
========================================
ಕಳೆದವಾರದ ಕೊನೆಯಲ್ಲಿ ಬರೆದೆ, ಪ್ರಥಮವಾಗಿ ಸಂಪದದಲ್ಲಿ ಪ್ರಕಟಿಸುವ
ವ್ರತಕ್ಕೆ ಭಂಗಬರಬಾರದೆಂದು ಹಾಗೆ ಇಟ್ಟು , ಈಗ ಹಾಕುತ್ತಿರುವೆ :))
Rating