ಅಪ್ರೈಸಲ್
To PM by Programmer:
ನಿನ್ನಿಂದಲೆ ನಿನ್ನಿಂದಲೆ ತಲೆನೋವು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ತಲೆ ಎರಡು ಹೋಳಾಗಿದೆ
ಈ ಎದೆಯಲ್ಲಿ ಕಹಿಯಾದ ಕೋಲಾಹಲ ನನ್ನ ಎದುರಲ್ಲಿ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ಒಳ್ಳೆ Programmer ಆಗುವಾ ಹಂಬಲ
ನನ್ನ career ಹಾಳಾಯಿತು ನಿನ್ನಿಂದಲೆ
ಇರುಳಲ್ಲಿ Bug ಅಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
Appraisal Time ನಲ್ಲಿ ಮಾಡಿ ಏನೋ ಮೋಡಿ
Bug Fix ಮಾಡು ಅನ್ನುವುದು ಸರಿಯೇನು
ಈ ಬದುಕಿಗೆ ಈ Lifeಗೆ ಬೇರೆ Company ಇಂದ ಕರೆಬಂದಿದೆ
ನಿನ್ನಿಂದಲೆ ನಿನ್ನಿಂದಲೆ ತಲೆನೋವು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ತಲೆ ಎರಡು ಹೋಳಾಗಿದೆ
ಇದು ಇವತ್ತು ನನಗೆ ಬಂದ fwd.... :-)
ನಿಜಾ PM ಅಂದ್ರೆ ಸ್ವಲ್ಪ ಅಷ್ಟಕ್ಕಷ್ಟೇ....ದೊಡ್ಡ ತಲೆ ನೋವು. (PMಗಳೇ ಕ್ಷಮೆಯಿರಲಿ)...... Appraisal timeನಲ್ಲಿ full fighting :-)
ಬೇಕಾದಷ್ಟು ಸಲಾ ಸಲಹೆ ಕೋಡೊವಾಗ ನಾನು ಕೇಳಿದ್ದುಂಟು:
कर्मन्ये वाधिकारस्थे मा फलेषु कदाचन !!
ಕರ್ಮ ಮಾಡು ಫಲದ ಆಸೆ ಪಡಬೇಡ!!
ಸರಿನೇ, ಆದರೆ ಹೇಳೋದು ಸುಲಭ ಆಚರಿಸೋದು ಕಷ್ಟ..Appraisal ಸಮಯದಲ್ಲಿ ಎಷ್ಟು ಜನಕ್ಕೆ ಇದು ಜ್ಞಾಪಕ ಇರತ್ತೆ ಹೇಳಿ?......ತುಂಬ ಕಡಿಮೆ.....ಆ ಸಮಯದಲ್ಲಿ promotion,hike ಇಷ್ಟೆ.... ನಮ್ಮ ನಿರೀಕ್ಷೆಗಿಂತಾ ಜಾಸ್ತಿ ಬಂದರೆ ಖುಷಿ (ಅಪರೂಪ).. ಇಲ್ಲಾಂದ್ರೆ ಜಗಳ ಮನಸ್ತಾಪ.....ಹೇಳುವುದು ಒಂದು ಮಾಡುವುದು ಇನ್ನೊಂದು......ತಪ್ಪೇನಲ್ಲ ಅಲ್ವ ವರ್ಷವಿಡೀ ಕೆಲಸ ಮಾಡಿ, ಈಗ ಅಪ್ಪ್ರೈಸಲ್ ಬಂದಾಗ ಭಗವದ್ಗೀತೆ, ಕರ್ಮ, ಫಲ ಅಂದ್ರೆ ಕೇಳೋದಿಕ್ಕೆ ಕಷ್ಟಾನೇ......
ಆದರೆ ಇದೊಂದೇ ನಮ್ಮನ್ನ, ನಮ್ಮ ಕೆಲಸವನ್ನ, ನಮ್ಮ ಸಾಮರ್ಥ್ಯವನ್ನ ಅಳೆಯೋ ಮಾಪಕ ಅಲ್ಲ ಅಲ್ವ? ಒಬ್ಬರನ್ನ ಇನ್ನೋಬ್ಬರು ಹೀಗೆ ಅಂತ ಮಾಪನ ಮಾಡುವುದು ಕಷ್ಟ.....ನಮಗೆ ನಿಲುಕದ್ದು ತುಂಬಾ ಇದೆ....
Comments
ಉ: Appraisal