ಅಬಲೆಯೇ ಮಹಿಳೆ???

ಅಬಲೆಯೇ ಮಹಿಳೆ???

ನಾರಿ ಅಬಲೆಯೇ???

ಮಟಮಟ ಮಧ್ಯಾಹ್ನದಲ್ಲಿ ಎತ್ತಿನ ಗಾಡಿಯ ಕಬ್ಬಿನ ರಾಶಿಯ ಮೇಲೆ ಕುಳಿತು ಕಬ್ಬನ್ನು ಸಾಗಿಸುವ ಈ ಮಹಿಳೆಯ ಹೆಸರು ಬಿಯಾಮಾ ಹುಸೇನ ಸಾಹೇಬ ಶೇಖ ನಾಗರಾಳ ಇಲ್ಲಿ ಇವಳೊಬ್ಬಳೇ ಅಲ್ಲ, ಆ ಊರಿನ ಸಮಸ್ಥ ಮಹಿಳೆಯರದೂ ಇದೇ ಕಾಯಕ. ಬಿಸಿಲಿರಲಿ ಮಳೆಯಿರಲಿ ಕಡಿದ ಕಬ್ಬನ್ನು ಸಾಗಿಸುವುದೇ ಇವರ ಉದರಂಭರಣಕ್ಕೆ ದಾರಿ. ಜಾತಗಾರ್ ಜನಾಂಗದ ೫೦೦ ಮನೆಗಳಿರುವ ಈ ಊರಿನಲ್ಲಿ ಪ್ರತಿಯೊಂದು ಮನೆಗಳಲ್ಲೂ ಎತ್ತಿನ ಗಾಡಿ ಇದೆ. ಪ್ರತಿ ಮಹಿಳೆಗೂ ಎತ್ತಿನಬಗ್ಗೆ ಗೊತ್ತು. ಮದ್ಯಾನ್ಹದಲ್ಲಿ ನಿರ್ಜನ ಪ್ರದೇಶದಲ್ಲಿ, ಮಧ್ಯ ರಸ್ಥೆಯಲ್ಲಿ ಗಾಡಿಗೆ ಅಡ್ಡನಿಂತು ಒಂಟಿ ಮಹಿಳೆಯ ಫೋಟೋ ತೆಗೆಯುವುದು ಸರಳವಾಗಿರಲಿಲ್ಲ. ಅನಂತರ ದಾರಿಯಲ್ಲಿ ಬಂದ ಒಬ್ಬಿಬ್ಬರಿಗೆ ನನ್ನ ಪರಿಚಯ ಹೇಳಿ ಪರಿಪರಿ ಬೇಡಿಕೊಂಡ ಮೇಲೆಯೇ ಕೆಲವು ಫೋಟೋಗಳನ್ನು ತೆಗೆಯಲು ಸಾಧವಾಯಿತು. ಬುರುಕಾ ತೊಟ್ಟು ಮನೆಯಲ್ಲಿರಬಹುದಾದ ಈ ಘಟ್ಟಿಗಿತ್ತಿಯರು ಸಂತೆಯ ಜನ ಸಂಧಣಿಯಲ್ಲಿ ತಮ್ಮ ಎತ್ತುಗಳನ್ನು ಕಂಟ್ರೋಲ್ ನಲ್ಲಿ ಇಡಲು ಹೆಣಗುತ್ತಾ ಎಡಗೈಯಲ್ಲಿ ಮೂಗುದಾರ, ಬಲಗೈಯಲ್ಲಿ ಚಾಟಿ ಕೋಲನ್ನು ಹಿಡಿದು ಸಾಗುವಾಗ ನನಗೆ ನೆನಪಾದದ್ದು ರಾಣಿ ಚೆನ್ನಮ್ಮ. ಅದೇ ಜಿಲ್ಲೆಗೆ ಸೇರಿದವರು ಇವರು.

Rating
No votes yet

Comments