ಅಬುಭಾಬಿ: ನಂ. 5 + ನಂ. 7 =? 12, ಅಲ್ಲ ನಲವತ್ತಾರು ಕೋಟಿ

ಅಬುಭಾಬಿ: ನಂ. 5 + ನಂ. 7 =? 12, ಅಲ್ಲ ನಲವತ್ತಾರು ಕೋಟಿ

ನಲವತ್ತಾರು ಕೋಟಿ ಎಂಭತ್ತು ಲಕ್ಷ ರೂಪಾಯಿ ಮಾತ್ರ

ಅಬುಧಾಬಿ, ಫೆಬ್ರವರಿ 14: ಯು.ಎ.ಇ.ಯಲ್ಲಿ ಒಂದಂಕೆಯ ವಾಹನ ನೋಂದಣೆ ಸಂಖ್ಯೆ ಅತಿಪ್ರಮುಖರಿಗೆ ಮೀಸಲು. ಸಂಖ್ಯೆ ನಂ.1 ಆಯಾ ಸಂಸ್ಥಾನದ ಆಡಳಿತಗಾರಿಗೆ ಮೀಸಲು. ಉಳಿದ ಅಂಕೆಗಳು ಬೇಕೆಂದರೂ ಅತ್ಯಂತ ದುಬಾರಿ. ಅಂತ್ಯದಲ್ಲಿ 786 ಬರುವ ಸಂಖ್ಯೆಗಳಿಗೂ ಹೆಚ್ಚಿನ ಬೆಲೆ. ವಿಶೇಷ ಸಂಖ್ಯೆಗಳನ್ನು ದುಬೈ, ಅಬುಧಾಬಿ ಸರ್ಕಾರಗಳು ಹರಾಜು ಹಾಕುತ್ತಲೇ ಇರುತ್ತವೆ.

 

ಇತ್ತೀಚೆಗೆ ಅಬುಧಾಬಿಯ ಶ್ರೀಮಂತ ವಾಣಿಜ್ಯೋದಮಿಯಾಗಿರುವ ತಲಾಲ್ ಖೋರಿಯವರು ತಮ್ಮ ಎರೆಡು ರೋಲ್ಸ್ ರಾಯ್ಸ್ ಕಾರುಗಳಿಗೆ ಸಂಖ್ಯೆ ೫ ಹಾಗೂ ಸಂಖ್ಯೆ 7 ನ್ನು ಕ್ರಮವಾಗಿ 25.2 ಮಿಲಿಯನ್ ಹಾಗೂ ಹನ್ನೊಂದು ಮಿಲಿಯನ್ ದಿರ್ಹಾಮ್(ಒಟ್ಟು ಮೂವತ್ತಾರು ಮಿಲಿಯನ್ ದಿರ್ಹಾಂ - ನಲವತ್ತಾರು ಕೋಟಿ ಎಂಭತ್ತು ಲಕ್ಷ ರೂಪಾಯಿಗಳು) ನೀಡಿ ಖರೀದಿಸಿದ್ದಾರೆ. ಈ ಬೆಲೆ ಕಾರಿನ ಬೆಲೆಗಿಂತಲೂ ಹೆಚ್ಚಾಗಿದ್ದು ಒಂದು ವಿಶ್ವದಾಖಲೆಯಾಗಿದೆ.ಈ ಬೆಲೆಯನ್ನು ಹರಾಜಿನಲ್ಲಿ ಕೂಗಿದಾಗ ಬೇರೆ ಯಾರೂ ಬೆಲೆ ಏರಿಸದಿದ್ದುದರಿಂದ 25.2 ಮಿಲಿಯನ್ ದಿರ್ಹಾಂಗಳಿಗೆ ಮಾರಟವಾಗಿತ್ತೇ ಹೊರತು ಒಂದು ವೇಳೆ ಬೇರೆ ಯಾರಾದರೂ ಸ್ಪರ್ಧಿಗಳಿದ್ದಿದ್ದರೆ ಇದರ ಬೆಲೆ ಐವತ್ತು ಮಿಲಿಯನ್ ನೀಡಲೂ ಖೋರಿ ತಯಾರಾಗಿದ್ದರು.ಈ ಮೊತ್ತವನ್ನು ಯು.ಎ.ಇ.ಯಲ್ಲಿ ಅಪಘಾತದಲ್ಲಿ ಮಡಿದವರ ಬಂಧುಗಳಿಗೆ ಹಾಗೂ ಗಾಯಗೊಂಡವರಿಗೆ ನೆರವು ನೀಡುವಲ್ಲಿ ಮತ್ತು ವಿಕಲಚೇತನರಿಗೆ ಹೆಚ್ಚಿನ ನೆರವು ನೀಡುವಲ್ಲಿ ಬಳಸಲಾಗುವುದು ಎಂದು ಅಬುಧಾಬಿ ಪೋಲೀಸ್ ಇಲಾಖೆಯ ವಾಹನ ನೋಂದಣೆ ವಿಭಾಗದ ನಿರ್ದೇಶಕರಾದ ಮೇಜರ್ ಸುಹೈಲ್ ಅಲ್ ಖಲೀಲಿಯವರು ತಿಳಿಸಿದ್ದಾರೆ.ಉಳಿದ ಸಂಖ್ಯೆಗಳ ಹರಾಜು ನಡೆದು ಒಟ್ಟು ಎಪ್ಪತ್ತಾರು ಮಿಲಿಯನ್ ದಿರ್ಹಾಂ (ಸುಮಾರು ತೊಂಭತ್ತೆಂಟು ಕೋಟಿ ರೂಪಾಯಿಗಳು) ಸಂಗ್ರಹವಾಗಿದ್ದು ಎಲ್ಲವೂ ಅಪಘಾತ ಪೀಡಿತರಿಗೆ ಹಾಗೂ ವಿಕಲಚೇತನರಿಗೆ ನೆರವಾಗಲಿದೆ. ಮೊದಲು ತನಗೆ 5 ಸಂಖ್ಯೆಯ ಮೇಲೆ ಮೋಹವಿದ್ದಿತ್ತಾದರೂ ಹೆಚ್ಚಿನ ಹಣ ಕೊಟ್ಟು ಕೊಳ್ಳಲೇಬೇಕೆಂಬ ಹಟವಿರಲಿಲ್ಲ. ಆದರೆ ಆ ಹಣದ ಬಳಕೆ ಎಲ್ಲಿ ಆಗಲಿದೆಯೆಂದು ಗೊತ್ತಾದ ಬಳಿಕ ಐವತ್ತು ಮಿಲಿಯನ್ ದಿರ್ಹಾಂವರೆಗೂ ನೀಡಲು ತಾನು ತಯಾರಿದ್ದೆ ಎಂದು ಖೋರಿ ತಿಳಿಸಿದ್ದಾರೆ.ಉತ್ತಮ ಧ್ಯೇಯವಿದ್ದರೆ ಸಹಾಯ ಎಲ್ಲಿಂದ ಬೇಕಾದರೂ ಬರಬಹುದು ಅಲ್ಲವೇ?

Rating
No votes yet

Comments