ಅಭಿನಂದನೆ

ಅಭಿನಂದನೆ

ಆಕಸ್ಮಿಕವಾಗಿ ಸಂಪದ ನನ್ನ ದೃಶ್ಠಿಗೆ ಬಿತ್ತು,ಇದು ಸಾಹಿತ್ಯಾಸಕ್ತರಿಗೆ ಅನೂಕೂಲಕರವಾದ

    ಮಾಧ್ಯಮವಾಗಿದೆ. ಎಂದನಿಸಿತು ನನಗೆ.ಎಲ್ಲಾ ಸಂಭಂದಪಟ್ಟವರಿಗೆ ನನ್ನ ಅಭಿನಂದನೆಗಳು.  ನಾನು,

ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದಲ್ಲಿ ಜನಿಸಿದವ. ಕುಂಸಿ ಮಲೆನಾಡಿನ ಒಂದು ಗ್ರಾಮ. ಕುಮದ್ವತಿ

ನದಿಯ ದಡದ ಅಣತಿದೂರದಲ್ಲಿದೆ ನನ್ನ ಊರು. ಇಲ್ಲಿ ಪ್ರಕೃತಿಸಂಪತ್ತು ಅತೀಯಾಗಿದೆ.ನೂರಾರುಜಾತಿಯ ಮರಗಳು,
ಖನಿಜ ಸಂಪ್ಪತ್ತು,ಅತೀಯಾಗಿದೆ.  ಆದರೆ ಬಡತನ ಹೆಚ್ಚಾಗಿದೆ,ಇತ್ತೀಚಿಗೆ  ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ,ನಮ್ಮ
ಊರಿಂದ ಪಟ್ಟಣಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.ಬಡತನದ ಬೇನೆಯ ಅರಿವು ನನಗೆ ಚೆನ್ನಾಗಿದೆ.
ಆದ್ದರಿಂದ ನಾನು ಬಡತನದ ಬಗ್ಗೆ ಹೆಚ್ಚು ಚಿಂತಿಸುತ್ತೇನೆ. ಚಿಕ್ಕಂದಿನಲ್ಲಿ ಹಸಿವು ತಾಳಲಾರದೆ ನನ್ನ ತಾಯಿ ನನ್ನ ತಂದೆಗೆ
 ತಿಳಿಯದಹಾಗೆ  ಇದ್ದ ಅಲ್ಪ ಬಂಗಾರವನ್ನು ಅಕ್ಕಸಾಲಿಗನಿಗೆ ಮಾರಲು ನನಗೆ ಕಳುಹಿಸಿದ್ದಾಗ, ಅವನು ಮೋಸಮಾಡಿ
  ಅಲ್ಪಹಣ ಕೊಟ್ಟುಕಳುಹಿಸಿದ್ದ, ಅದನ್ನುತಂದು ನಾವು ಅಡಿಗೆ ಮಾಡಿ ಊಟ ಮಾಡಿದ್ದ ಸಮಯದ ನೆನಪು ಮರೆಯಲು

ನನಗೆ ಸಾಧ್ಯವೇಇಲ್ಲ. ಹಸಿವು ಮನುಶ್ಯನಿಗೆ ಅತೀ ಕೆಟ್ಟಮಟ್ಟಕ್ಕೆ ತಗೆದುಕೊಂಡು ಹೋಗುತ್ತದೆ, ಸಂಸ್ಕ್ರುತಿ  ಉತ್ತಮ
ವಾಗಿರಬೇಕಾದರೆ  ಅಲ್ಲಿ ಹಸಿವು ಇರಬಾರದು ಎಂಭ ನಂಬಿಕೆ ನನ್ನದು. ಹಸಿವು ಇರಬಾದು ಎಂದಾದರೆ  ಮನುಶ್ಯ
ಉದ್ಯೋಗಿ ಆಗಿರಬೇಕು, ಎಷ್ಟಾದರು ಆಗಲಿ ಅಮನುಶ್ತ್ಯ ದುಡಿಯಬೇಕು,ಉದ್ಯೋಗ ಮಾಡಲೇಬೇಕು. ರಾಶ್ಟ್ರ ಅದಕ್ಕೆ
 ವ್ಯವಸ್ಥೆ ಮಾಡಲೇಬೇಕು.ಆಗಮಾತ್ರ ಸುಖಿ ರಾಷ್ಟ್ರದ ಕನಸ್ಸು ನನಸಾಗುವುದು.     



 

Rating
No votes yet

Comments