ಅಮರ‌..ಮಧುರ..ಪ್ರೇಮ = ಭಾಗ 12

ಅಮರ‌..ಮಧುರ..ಪ್ರೇಮ = ಭಾಗ 12

ಬೆಂಗಳೂರು ತಲುಪಿದಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಅಮರ್ ಮಧುರಳನ್ನು ಪೀಜೀಯ ಬಳಿ ಬಿಟ್ಟಾಗ ಮಧುರ ಅಮರನ ಕೈ ಕುಲುಕಿ ಅಮರ್ ನಿಜಕ್ಕೂ ಈ ದಿನ ನನ್ನ ಜೀವನದಲ್ಲಿ ಮರೆಯಲಾರದ ದಿನ ಕಣೋ. ಇದೊಂದು ಒಳ್ಳೆಯ ಅನುಭವ. ಬಹುಶಃ ಇದುವರೆಗೂ ನಾನು ಇಷ್ಟು ಎಂಜಾಯ್ ಮಾಡಿದ ದಿನವೇ ಇಲ್ಲ ಎನಿಸುತ್ತದೆ. ತುಂಬಾ ತುಂಬಾ ಥ್ಯಾಂಕ್ಸ್ ಈ ಟ್ರಿಪ್, ಬೋಟ್ ರೈಡಿಂಗ್, ಸಫಾರಿ, ಬರ್ತ್ ಡೇ ಸ್ಪೆಷಲ್ ಅರೆಂಜ್ಮೆಂಟ್ಸ್, ಚಾಕಲೇಟ್ ಕೇಕ್, ಆ ಮುತ್ತಿನ ಹಾರ ಎಲ್ಲಕ್ಕೂ ತುಂಬಾ ತುಂಬಾ ಥ್ಯಾಂಕ್ಸ್ ಕಣೋ. ಹೇ ಮಧು ಅಷ್ಟೆಲ್ಲ ಥ್ಯಾಂಕ್ಸ್ ಹೇಳಿ ನನ್ನನ್ನು ದೂರದವನನ್ನಾಗಿ ಮಾಡುತ್ತಿದ್ದೀಯ. ನಮ್ಮಿಬ್ಬರ ನಡುವೆ ನೋ ಥ್ಯಾಂಕ್ಸ್ ನೋ ಸಾರಿ ಓಕೆ.. ಹೋಗಿ ಮಲಗು ತುಂಬಾ ಲೇಟಾಗಿದೆ ಆಮೇಲೆ ಸುಮ್ಮನೆ ತೊಂದರೆ ಆಗುತ್ತದೆ. ನಾಳೆ ಕಾಲೇಜಿನಲ್ಲಿ ಭೇಟಿ ಮಾಡೋಣ ಗುಡ್ ನೈಟ್ ಮಧು. ಗುಡ್ ನೈಟ್ ಅಮರ್...ಬೈ


ಅಮರ್ ಗೆ ಎರಡನೇ ದಿನವೂ ನಿದ್ರೆ ಬರಲಿಲ್ಲ. ಹಿಂದಿನ ದಿನ ಊರಿಗೆ ಹೋಗುವ ತವಕದಲ್ಲಿ ನಿದ್ರೆ ಬಂದಿರಲಿಲ್ಲ, ಇಂದು ಊರಿನಲ್ಲಿ ಕಳೆದ ಆ ಸುಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾ ನಿದ್ರೆ ಮಾಡಲಿಲ್ಲ.


ಅಮರನಿಗೆ ಒಂದು ಯೋಚನೆ ಬಂತು. ಹೌದು ಇಂದು ನನಗೆ ಒಳ್ಳೆಯ ಅವಕಾಶ ಇದ್ದರೂ ನಾನ್ಯಾಕೆ ಮಧುರಳಿಗೆ ನನ್ನ ಪ್ರೇಮದ ವಿಷಯ ತಿಳಿಸಲಿಲ್ಲ? ಬಹುಶಃ ಅವಳ ಮುಗ್ಧತೆ ನನ್ನನ್ನು ಕಟ್ಟಿ ಹಾಕಿತ? ಅಥವಾ ಹೇಳಿದರೆ ಎಲ್ಲಿ ಅವಳು ತಿರಸ್ಕರಿಸುತ್ತಾಳೋ ಎಂಬ ಭಯ ತಡೆಯಿತ? ಅಥವಾ ಅವಳ ಹುಟ್ಟು ಹಬ್ಬದ ದಿನ ಅವಳ ಮನಸಿಗೆ ನೋವುಂಟು ಮಾಡಬಾರದೆಂಬ ಕಾಳಜಿ ಹೇಳದಂತೆ ಮಾಡಿತ? ಒಟ್ಟಿನಲ್ಲಿ ಅವಳಿಗೆ ಈ ದಿನ ಹೇಳದೆ ಇದ್ದದ್ದೇ ಒಳ್ಳೆಯದಾಯಿತು. ಒಂದು ವೇಳೆ ಹೇಳಿದ್ದಿದ್ದರೆ ಅವಳು ಒಪ್ಪುತ್ತಿದ್ದಳೇನೋ  ಆದರೆ ನಾನು ಕೊಟ್ಟ ಮುತ್ತಿನ ಹಾರಕ್ಕೆ ಅವಳ ಪ್ರೀತಿಯನ್ನು ಬೆಲೆ ಕಟ್ಟಿದಂತಾಗುತ್ತಿತ್ತು. ನಿಜಕ್ಕೂ ಒಳ್ಳೆಯ ಕೆಲಸ ಮಾಡಿದೆ ಎಂದು ಮತ್ತೊಮ್ಮೆ ಮಧುರಳ ಜೊತೆ ಕಳೆದ ಮಧುರ ಕ್ಷಣಗಳನ್ನು ನೆನೆಯುತ್ತ ನಿದ್ರೆಗೆ ಜಾರಿದ.


ಮರುದಿನ ಕರ್ನಾಟಕ ಬಂದ್ ಇದ್ದದ್ದರಿಂದ ಕಾಲೇಜ್ ಇರಲಿಲ್ಲ. ಎರಡು ದಿನದಿಂದ ಸರಿಯಾಗಿ ನಿದ್ರೆ ಇರದಿದ್ದರಿಂದ ಅಮರ್ ಎದ್ದಾಗ ಹನ್ನೆರಡು ಗಂಟೆ ಆಗಿತ್ತು. ಎದ್ದು ಫೋನ್ ನೋಡಿದರೆ ಮಧುರ ಇಂದ ಐದು, ಪ್ರೇಮ ಇಂದ ಹನ್ನೆರಡು ಮಿಸ್ಡ್ ಕಾಲ್ ಇತ್ತು. ಮೊದಲು ಯಾರಿಗೆ ಮಾಡೋದು ಎಂದು ಯೋಚಿಸಿ, ಪ್ರೇಮಗೆ ಕರೆ ಮಾಡಿದರೆ ಅವಳು ನೆನ್ನೆಯ ಬಗ್ಗೆ ಕೇಳುತ್ತಾಳೆ. ಮೊದಲು ಮಧುಗೆ ಕರೆ ಮಾಡಿ ಅವಳು ಏನಾದರೂ ಮಾತಾಡಿದಾಳ ಎಂದು ಖಚಿತಪಡಿಸಿಕೊಂಡು ನಂತರ ಪ್ರೇಮಗೆ ಕರೆ ಮಾಡುವುದು ಒಳಿತು ಎಂದು ಮಧುರಗೆ ಕರೆ ಮಾಡಿದ.


ಏನ್ಸಾರ್ ನಿದ್ದೆ ಜೋರಾ? ಈಗಿನ್ನೂ ಸೂರ್ಯನ ದರ್ಶನ ಆಯ್ತಾ ತಮಗೆ? ಎಷ್ಟು ಸಲ ಕರೆ ಮಾಡೋದು?ಹೌದು ಮಧು ಇನ್ನೂ ಈಗಷ್ಟೇ ಎದ್ದೆ. ಎದ್ದ ತಕ್ಷಣ ಫೋನ್ ನೋಡಿದರೆ ನಿಂದು ಪ್ರೇಮದು ಇಬ್ಬರದೂ ಮಿಸ್ಡ್ ಕಾಲ್ ಇತ್ತು. ನೀನು ನೆನ್ನೆಯ ಬಗ್ಗೆ ಪ್ರೇಮಗೆ ಏನಾದರೂ ಹೇಳಿದ್ದರೆ ಎಂದು ತಿಳಿದುಕೊಳ್ಳಲು ಕರೆ ಮಾಡಿ ಆಮೇಲೆ ಪ್ರೇಮಗೆ ಮಾಡೋಣ ಎಂದುಕೊಂಡೆ. ಬುದ್ಧಿವಂತ ಕಣೋ ನೀನು, ನಾನು ಅವಳಿಗೆ ನೆನ್ನೆಯ ಬಗ್ಗೆ ಏನೂ ಹೇಳಿಲ್ಲ. ನಾನು ಯಥಾಪ್ರಕಾರ ಹೇಗೆ ಮಾತಾಡಬೇಕೋ ಹಾಗೆ ಮಾತಾಡಿದ್ದೇನೆ. ನೀನು ಸಹ ಯಾವುದೇ ವಿಷಯವನ್ನು ಬಾಯಿ ಬಿಡಬೇಡ. ಮಾಮೂಲಿನಂತೆ ಮಾತಾಡು. ಅವಳಿಗೆ ಸ್ವಲ್ಪ ಸಮಾಧಾನ ಮಾಡೋ. ನಿನ್ನ ಮಾತು ಕೇಳುತ್ತಾಳೆ. ಇನ್ನೂ ಅವಳ ಮನಸು ಸರಿಯಾಗಿಲ್ಲ. ಬೇಗನೆ ಕಾಲೇಜಿಗೆ ಬರಲು ಹೇಳು ಓಕೆನ. ನಾನು ಆಮೇಲೆ ಫೋನ್ ಮಾಡ್ತೀನಿ. ಬೈ


ಮಧುರಳ ಕರೆ ಕಟ್ ಮಾಡಿ, ಪ್ರೇಮಗೆ ಕರೆ ಮಾಡಿದರೆ ಏನಪ್ಪಾ ಹೀರೋ ಜೋರಾ ಬರ್ತ್ ಡೇ ಸೆಲೆಬ್ರೇಶನ್. ಎಲ್ಲಿ ಹೋಗಿದ್ರಿ ಹೇಗೆ ಸೆಲೆಬ್ರೇಟ್ ಮಾಡಿದ್ರಿ? ಏನು ಗಿಫ್ಟ್ ಕೊಟ್ಟೆ ನಿನ್ನ ನಾಯಕಿಗೆ? ನಾನು ಹೇಳಿದ್ದು ಅಂತ ಹೇಳಲಿಲ್ಲ ತಾನೇ?


ಹಲೋ ಹಲೋ...ಮೇಡಂ ಏನು ಎಲ್ಲ ಪ್ರಶ್ನೆಗಳನ್ನು ಒಮ್ಮೆಲೇ ಕೇಳಿಬಿಟ್ಟರೆ ಹೇಗೆ? ಎಲ್ಲೂ ಹೋಗಿಲ್ಲ. ಅದೇನು ಆಶ್ಚರ್ಯವೋ ಗೊತ್ತಿಲ್ಲ ಕರೆದ ತಕ್ಷಣ ಕಾಫಿ ಡೇ ಗೆ ಬಂದಳು. ಅಲ್ಲೇ ಅವಳಿಗಿಷ್ಟವಾದ ಚಾಕಲೇಟ್ ಕೇಕ್ ಕತ್ತರಿಸಿ ಒಂದು ಸಣ್ಣ ಮುತ್ತಿನ ಹಾರ ಗಿಫ್ಟ್ ಕೊಟ್ಟೆ ಅಷ್ಟೇ. ಆಮೇಲೆ ಅವಳ ಪಾಡಿಗೆ ಅವಳು ಪೀಜೀಗೆ ಹೋದಳು, ನನ್ನ ಪಾಡಿಗೆ ನಾನು ಮನೆಗೆ ಬಂದೆ.ಏನು ಸಣ್ಣ ಮುತ್ತಿನ ಹಾರನ?


ಏನಪ್ಪಾ ಇನ್ನೂ ಅವಳಿಗೆ ಅಸಲಿ ವಿಷಯನೇ ಹೇಳಿಲ್ಲ ಆಗಲೇ ಅಷ್ಟೊಂದು ಕಾಸ್ಟ್ಲಿ ಗಿಫ್ಟ್ ಎಲ್ಲ ಕೊಡ್ತಾ ಇದ್ದೀಯ. ಇನ್ನು ನೀನು ಅವಳನ್ನು ಪ್ರೀತಿಸುವುದಾಗಿ ಹೇಳಿ ಅವಳು ಒಪ್ಪಿಕೊಂಡು ಬಿಟ್ಟರೆ ಇನ್ನು ಎಷ್ಟರ ಮಟ್ಟಿಗೆಅವಳಿಗೆ ಉಡುಗೊರೆ ನೀಡುತ್ತೀಯೋ ಭಗವಂತನೇ ಬಲ್ಲ. ಅದು ಸರಿ ಎಷ್ಟಾಯ್ತಪ್ಪ ಆ "ಸಣ್ಣ" ಮುತ್ತಿನ ಹಾರಕ್ಕೆ?  ನೋಡು ಇಷ್ಟು ದಿನದಲ್ಲಿ ನನಗೆ ಫ್ರೆಂಡ್ ಎಂದು ಒಂದಾದರೂ ಗಿಫ್ಟ್ ಕೊಟ್ಟಿದ್ದೀಯ...ನಡೀಲಿ ನಡೀಲಿ. ಹೌದು ಅವಳು ಅಷ್ಟು ಸುಲಭವಾಗಿ ನೀನು ಕೊಟ್ಟ ಗಿಫ್ಟ್ ತೆಗೆದುಕೊಂಡಲ? 


ಪ್ರೇಮ ಸುಮ್ಮನೆ ಏನೇನೋ ಮಾತಾಡಬೇಡ. ನಿನಗೆ ಗಿಫ್ಟ್ ಕೊಡೋಣ ಅಂತಾನೆ ನಿನ್ನ ಬರ್ತ್ ಡೇ ಯಾವಾಗ ಅಂತ ಕೇಳಿದ್ದು. ನೀನೆ ಹೇಳಲಿಲ್ಲ ನಾನೇನು ಮಾಡಲಿ. ಆಯ್ತು ಬಿಡಪ್ಪ ನಿನಗೂ ಒಂದು ಗಿಫ್ಟ್ ಕೊಡುತ್ತೇನೆ.


ಹಲೋ ಹಾಗೆಲ್ಲ ಕೇಳಿ ತೆಗೆದುಕೊಳ್ಳುವ ಅಭ್ಯಾಸ ನನಗಿಲ್ಲ. ಅದು ಬಿಡು, ಎಷ್ತಾಯ್ತೋ ಆ ಹಾರಕ್ಕೆ, ಹಾಗೆ ಅವಳು ಅಷ್ಟು ಸುಲಭವಾಗಿ ತೆಗೆದುಕೊಂಡಲ?


ಅಯ್ಯೋ ರೇಟ್ ಎಲ್ಲ ಯಾಕೆ ಮಧುರಳ ಮುಂದೆ ಅದು ಏನೂ ಅಲ್ಲ. ನಾನು ಗಿಫ್ಟ್ ಕೊಟ್ಟಾಗ ಮೊದಲು ಅವಳು ತೆಗೆದುಕೊಳ್ಳಲು ನಿರಾಕರಿಸಿದಳು. ನಂತರ ನನ್ನ ಮನಸಿಗೆ ನೋವಾಗಬಾರದೆಂದು ತೆಗೆದುಕೊಂಡಳು. ನನಗಂತೂ ಬಹಳ ಖುಷಿಯಾಯ್ತು. ಆದರೆ ಅದೇಕೋ ಗೊತ್ತಿಲ್ಲ ಅವಳ ಮುಂದೆ ನನ್ನ ಮನಸಿನ ವಿಷಯ ಹೇಳಲು ಆಗಲಿಲ್ಲ ಪ್ರೇಮ.  ಅದು ಸರಿ ಈಗ ತಮ್ಮ ಮನಸು ಹೇಗಿದೆ? ಯಾವಾಗಿಂದ ಕಾಲೇಜಿಗೆ ಬರ್ತಾ ಇದ್ದೀಯ...ಮೊದಲು ನೀನು ಕಾಲೇಜಿಗೆ ಬಾ. ಇಬ್ಬರನ್ನೂ ಒಟ್ಟಿಗೆ ನೋಡಬೇಕು ಎಂದು ಅನಿಸುತ್ತಿದೆ. ನಿಮ್ಮಿಬ್ಬರಲ್ಲಿ ಒಬ್ಬರು ಇಲ್ಲದಿದ್ದರೂ ಕಾಲೇಜ್ ಬೋರ್ ಹೊಡೆಯುತ್ತೆ.


ಹಲೋ ಸರ್ ಸಾಕು ಸಾಕು..ಈ ನಾಟಕ ಎಲ್ಲ. ಈಗ ನನ್ನ ಮನಸು ಸರಿಯಾಗಿದೆ. ಸೋಮವಾರದಿಂದ ಕಾಲೇಜ್ ಗೆ ಬರುತ್ತೇನೆ. ಸರಿ ಈಗ ಫೋನ್ ಇಡ್ತೀನಿ ಬೈ.. ಬೈ ಪ್ರೇಮ ಟೆಕ್ ಕೇರ್...

Rating
No votes yet

Comments