ಅಮರ‌..ಮಧುರ..ಪ್ರೇಮ = ಭಾಗ 17

ಅಮರ‌..ಮಧುರ..ಪ್ರೇಮ = ಭಾಗ 17

ಮೂರನೇ ವರ್ಷದ ಪರೀಕ್ಷೆಗಳು ಮುಗಿದು ಪ್ರೇಮ ಮತ್ತು ಮಧುರ ರಜೆಯನ್ನು ಕಳೆಯಲು ಊರಿಗೆ ಹೋಗಿದ್ದರು. ಪರೀಕ್ಷೆ ಮುಗಿಯುವುದನ್ನೇ ಕಾದು ಕೂತಿದ್ದ ಅಮರ್ ಮಧುರಗೆ ಕರೆ ಮಾಡಲು ಪ್ರಯತ್ನಿಸಿದಾಗ ಭ್ರಮ ನಿರಸನ ಕಾದಿತ್ತು. ಇಬ್ಬರ ಫೋನ್ ಗಳು  ಸ್ವಿಚ್ ಆಫ್ ಆಗಿತ್ತು.  ಅಮರ್ ಗೆ ಮಧುರಳ ಜೊತೆ ಮಾತಾಡಿ ೨೦ ದಿನಗಳಾಗಿದೆ ಎಂದು ತಲೆ ಕೆಟ್ಟು ಹೋಗಿತ್ತು. ಪರೀಕ್ಷೆಗಳು ಮುಗಿದಿವೆ ಈಗ ಯಾಕೆ ಫೋನ್ ಆಫ್ ಮಾಡಬೇಕು. ಬೇಕೆಂದೇ ನನ್ನ ಸಹನೆಯನ್ನು ಪರೀಕ್ಷಿಸುತ್ತಿದ್ದಾರೆ. ಇವಳೊಬ್ಬಳೆ ಹೀಗ? ಅಥವಾ ಹುಡುಗಿಯರೇ ಹೀಗ? ತಮ್ಮ ಹಿಂದೆ ಬರುವ ಹುಡುಗರನ್ನು ಆಟ ಆಡಿಸುವಲ್ಲಿ ಅವರಿಗೆ ಅದೇನು ಸಂತೋಷ ಅಡಗಿದೆಯೋ ಆ ಭಗವಂತನೇ ಬಲ್ಲ.  ಇವಳನ್ನು ಪ್ರೀತಿಸುವ ಮುಂಚೆ ನಾನು ನೆಮ್ಮದಿಯಿಂದಲೇ ಇದ್ದೆ. ಈ ಅವಸ್ಥೆ ಶತ್ರುಗಳಿಗೂ ಬೇಡ...ಥೂ...


ರಜೆ ಮುಗಿಸಿಕೊಂಡು ಮತ್ತೆ ಕಾಲೇಜ್ ಶುರುವಾಯಿತು. ಅಮರನಿಗೂ ಮಧುರಳ ವರ್ತನೆಯಿಂದ ಬೇಸರವಾಗಿ ಅವನೂ ಫೋನ್ ಮಾಡಲು ಪ್ರಯತ್ನಿಸಿರಲಿಲ್ಲ. ಕಾಲೇಜ್ ಶುರುವಾಗಿ ಒಂದು ತಿಂಗಳು ಕಳೆಯಿತು. ನಂತರ ಒಂದು ದಿನ ಅಮರ್ ಮಧುರಳ ಜೊತೆ ಮಾತಾಡಲೆಂದು ಕರೆ ಮಾಡಿದ. ಹಲೋ ಅಮರ್, ಏನೋ ಯಾಕೋ ಇಷ್ಟು ದಿವಸದಿಂದ ಫೋನ್ ಮಾಡಿಲ್ಲ. ನಾನು ಎಷ್ಟು ಕಾದೆ ಗೊತ್ತ ನಿನ್ನ ಫೋನ್ ಸಲುವಾಗಿ. ಪರೀಕ್ಷೆಗಳು ಮುಗಿದು ಕಾಲೇಜ್ ಶುರುವಾಗಿ ಒಂದು ತಿಂಗಳ ನಂತರ ಕರೆ ಮಾಡಿದ್ದೀಯ. ಏನಪ್ಪಾ ನನ್ನ ನೆನಪಾಗದಷ್ಟು ಬ್ಯುಸಿ ಆಗಿದ್ದೀಯ?


ಮಧು, ನೀನು ಏನೇ ಮಾತಾಡಿದರೂ ನನಗೆ ನಿನ್ನ ಮೇಲೆ ಕೋಪ ಬರುವುದಿಲ್ಲ. ಅದೇ ನನ್ನ ಸಮಸ್ಯೆ. ಮಧು, ಪರೀಕ್ಷೆ ಮುಗಿದ ಮರುದಿನದಿಂದಲೇ ನಾನು ನಿನಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ನಿನ್ನ ಫೋನ್ ಸ್ವಿಚ್ ಆಫ. ಹೋಗಲಿ ಪ್ರೇಮ ಜೊತೆ ಮಾತಾಡೋಣ ಎಂದರೆ ಅವಳ ನಂಬರ್ ಕೂಡ ಸ್ವಿಚ್ ಆಫ್.  ನೀನು ಫೋನ್ ಆಫ್ ಮಾಡಿದ್ದರೂ ದಿನಕ್ಕೆ ಇಪ್ಪತ್ತು ಬಾರಿ ಪ್ರಯತ್ನಿಸುತ್ತಿದ್ದೆ. ಒಮ್ಮೆಯಾದರೂ ನಿನ್ನ ಫೋನ್ ರಿಂಗಾಗುತ್ತೆ, ಒಮ್ಮೆಯಾದರೂ ನಿನ್ನ ಬಳಿ ಮಾತಾಡೋಣ ಎಂದು. ಆದರೆ ಹ್ಮ್ಮ್....ಮಧು, ಇಪ್ಪತ್ತು ದಿನ ಸತತವಾಗಿ ಟ್ರೈ ಮಾಡಿ ಮಾಡಿ ಸಾಕಾಗಿ ಹೋಯ್ತು. ಈ ಇಪ್ಪತ್ತು ದಿನದಲ್ಲಿ ಮಾನಸಿಕವಾಗಿ ನಾನೆಷ್ಟು ಜರ್ಜರಿತನಾಗಿದ್ದೇನೆ ಎಂದು ಗೊತ್ತ ನಿನಗೆ?. ಪ್ರತಿ ಕ್ಷಣ ನಿನ್ನದೇ ನೆನಪು. ಆಫೀಸಿನಲ್ಲಿ, ಮನೆಯಲ್ಲಿ, ಊಟ ಮಾಡಬೇಕಾದರೆ, ನಿದ್ರೆ ಮಾಡಬೇಕಾದರೆ ಎಲ್ಲ ಸಮಯದಲ್ಲೂ ನಿನ್ನದೇ ನೆನಪು. ಆದರೆ ಈಗ ನೀನು ಹೇಗೆ ಮಾತಾಡುತ್ತ ಇದ್ದೀಯ ಎಂದರೆ ನನಗೆ ನಿನ್ನ ಬಗ್ಗೆ ಕಾಳಜಿಯೇ ಇಲ್ಲ ಎನ್ನುವ ಹಾಗೆ ಮಾತಾಡ್ತಾ ಇದ್ದೀಯ.


ಅಮರ್ ಐ ಅಂ ರಿಯಲಿ ಸಾರಿ ಕಣೋ. ನಾನು ಪರೀಕ್ಷೆ ಮುಗಿದ ದಿನವೇ ಊರಿಗೆ ಹೊರಟು ಬಿಟ್ಟೆ ಕಣೋ. ಊರಿನಲ್ಲಿ ಇದ್ದಷ್ಟು ದಿನ ಫೋನ್ ಗಳಿಗೆ ರೆಸ್ಟ್ ಕೊಟ್ಟಿದ್ದೆವು. ಹಾಗಾಗಿ ನಿನಗೆ ಉತ್ತರಿಸಲು ಆಗಲಿಲ್ಲ. ನಾನು ನಿನಗೆ ಮೊದಲೇ ತಿಳಿಸಬೇಕಿತ್ತು ನಾವು ಊರಿಗೆ ಹೋಗುವ ವಿಷಯ. ಸಾರಿ ಕಣೋ. ಆದರೆ ರೆಜೆ ಮುಗಿದ ಕೂಡಲೇ ನಾವು ಕಾಲೇಜ್ ಗೆ ಬಂದು ಬಿಟ್ಟೆವು ಕಣೋ. ಆಮೇಲಾದರೂ ನೀನು ಫೋನ್ ಮಾಡಿದ್ದರೆ ಮಾತಾಡಬಹುದಿತ್ತು. ಹೋಗಲಿ ಬಿಡು..ಇನ್ನು ಮುಂದೆ ಊರಿಗೆ ಹೊರಡುವ ಮುನ್ನ ನಿನಗೆ ತಿಳಿಸಿ ಹೋಗುತ್ತೇನೆ ಆಯ್ತಾ. ಹೇಗಿದ್ದೀಯ ನೀನು?


ಹಾ ಮಧು ಚೆನ್ನಾಗಿದೀನಿ. ನೀನು ಹೇಗಿದ್ದೀಯ? ಪ್ರೇಮ ಹೇಗಿದಾಳೆ. ಹೇಗಿತ್ತು ಪರೀಕ್ಷ್ತೆಗಳು, ಚೆನ್ನಾಗಿ ಮಾಡಿದೀರಾ?


ಹಾ ಅಮರ್ ಎಲ್ಲ ಚೆನಾಗಿದೀವಿ. ಪರೀಕ್ಷೆಗಳು ಹ್ಮ್...ಪರವಾಗಿಲ್ಲ ಚೆನ್ನಾಗೆ ಮಾಡಿದ್ದೀವಿ. ಈ ವರ್ಷ ಕಡೆಯ ವರ್ಷ...ಇದೊಂದು ವರ್ಷ ಶ್ರಮ ಹಾಕಿಬಿಟ್ಟರೆ ಸಾರ್ಥಕವಾಗುತ್ತದೆ. ಆಮೇಲೆ ಯಾವುದಾದರೂ ಒಳ್ಳೆ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಬಿಟ್ಟರೆ ಅಷ್ಟು ಸಾಕು. ಹೇ ಅಮರ್ ನಿಮ್ಮ ಕಂಪನಿಯಲ್ಲಿ ನನಗೊಂದು ಕೆಲಸ ಕೊಡಿಸ್ತೀಯ? ನನ್ನನ್ನೇನು ನಿನ್ನ ಸ್ನೇಹಿತೆ ಎಂಬ ಶಿಫಾರಸಿನಲ್ಲಿ ಕೆಲಸ ಕೊಡಿಸಬೇಡಪ್ಪ. ನನ್ನ ವಿದ್ಯಾರ್ಹತೆ ಮೇಲೆ ಕೊಡಿಸು ಸಾಕು. ಆಮೇಲೆ ನನಗೆ ಸಂಬಳಾನು ಹೆಚ್ಚೇನೂ ಬೇಡ. ಮೊದಲಿಗೆ ಒಂದು ೨೫,೦೦೦ ಕೊಡು ಆಮೇಲೆ ಒಂದೈವತ್ತು ಕೊಟ್ರೆ ಸಾಕು...ಏನೋ ಕೊಡಿಸ್ತೀಯ?


ಹ್ಹ...ಹ್ಹ...ಹ್ಹ.. ಕೊಡಿಸೋಣ ಬಿಡು ಮಧು. ನಿನಗಿಲ್ಲದ ಕೆಲಸಾನ? ಅದು ಸರಿ ಮಧು ಕೆಲಸದ ನಂತರ ಏನು ನಿನ್ನ ಪ್ಲಾನ್ಸ್? ಅದು ಅದು....ಮದುವೆ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀಯ?


ಅಯ್ಯೋ ಸುಮ್ಮನಿರಪ್ಪ ನನಗೆ ನಾಚಿಕೆ ಆಗುತ್ತೆ...ಹ್ಮ್..ಅಮರ್ ಮೊದಲು ಕೆಲಸಕ್ಕೆ ಸೇರಿ ಒಂದು ವರ್ಷ ದುಡಿದು ಮೊದಲು ನಾನು ಸೆಟ್ಲ್ ಆಗಬೇಕು. ಆಮೇಲೆ ಅಪ್ಪ ಅಮ್ಮ ಯಾರನ್ನು ಮದುವೆ ಆಗು ಅನ್ನುತ್ತಾರೋ ಅವರನ್ನು ಮದುವೆ ಆಗುವುದು ಅಷ್ಟೇ.


ಮಧು ಒಂದು ವಿಷಯ ಕೇಳಲ? ಹೇಗೆ ಕೇಳಬೇಕು ಎಂದು ಗೊತ್ತಾಗುತ್ತಿಲ್ಲ...ಬಹಳ ದಿನದಿಂದ ನನ್ನ ಮನಸಿನಲ್ಲಿ ಈ ವಿಷಯ ಕೊರೆಯುತ್ತಿದೆ. ಆದರೆ ಹೇಳಿದರೆ ಎಲ್ಲಿ ನೀನು ಬೇಸರ ಪಡುತ್ತೀಯೋ ಎಂದು ಹೇಳಿರಲಿಲ್ಲ. ಆದರೆ ಈಗ ಆ ಸಮಯ ಬಂದಿದೆ ಎನಿಸುತ್ತಿದೆ.


ಹೇಳು ಅಮರ್ ಅದೇನು ಅಂತ...ನಾನು ಬೇಸರ ಪಡುವಂಥ ವಿಷಯ ಏನಪ್ಪಾ ಅದು?


ಎಲ್ಲ ಗೊತ್ತಿದ್ದೂ ಏನೆಂದು ಕೇಳುತ್ತೀಯಲ್ಲ ಮಧುರ ಎಂದುಕೊಂಡು ಮಧು ಒಂದು ವೇಳೆ ನಿಮ್ಮಪ್ಪ ಅಮ್ಮ ನನ್ನನ್ನು ಮದುವೆ ಆಗು ಎಂದರೆ ಆಗುತ್ತೀಯ?


ಮಧುರ ನಗುತ್ತ ಏನಂದೆ ಅಮರ್...ನಿನ್ನ ಮಾತಿನ ಅರ್ಥ ನೀನು ನನ್ನನ್ನು ಪ್ರೀತಿಸುತ್ತಿದ್ದೀಯ?


ಹೌದು ಮಧು, ಐ ಲವ್ ಯೂ ಮಧು, ನಿನ್ನನ್ನು ನೋಡಿದ ಮೊದಲ ಕ್ಷಣದಿಂದಲೇ ನನಗೆ ನಿನ್ನ ಮೇಲೆ ಪ್ರೀತಿ ಉಂಟಾಯಿತು ಮಧು. ಅಂದಿನಿಂದ ನಿನ್ನ ಬಳಿ ಈ ವಿಷಯ ಹೇಳದೆ ನನ್ನಲ್ಲಿ ನಾನು ಎಷ್ಟು ಒದ್ದಾಡುತ್ತಿದ್ದೆ ಗೊತ್ತ? ಆದರೆ ಈಗಲೂ ಹೇಳದೆ ಇದ್ದಾರೆ ಎಲ್ಲಿ ನಿನಗೆ ಇನ್ಯಾರೋ ಹಿಡಿಸಿ, ಅಥವಾ ನಿಮ್ಮ ಅಪ್ಪ ಅಮ್ಮ ಇನ್ಯಾರನ್ನೋ ತೋರಿಸಿ ನಿನಗೆ ಮದುವೆ ಮಾಡಿ ಬಿಡುತ್ತಾರೋ ಎಂಬ ಭಯ ಶುರುವಾಗಿದೆ. ಮಧು, ಅಲ್ಲಿದ್ದಾಗ ನಿನ್ನನ್ನು ಪ್ರೀತಿಸುತ್ತಿದ್ದೆ ಎಂದು ಗೊತಿತ್ತ್ತು. ಆದರೆ ಅದರ ಆಳ ಗೊತ್ತಾಗಿದ್ದು ಇಲ್ಲಿಗೆ ಬಂದ ಮೇಲೇನೆ. ನಿನ್ನನ್ನು ಬಿಟ್ಟಿರದ ಒಂದೊಂದು ದಿನವೂ ನನಗೆ ಒಂದೊಂದು ಯುಗದಂತೆ ಅನಿಸುತ್ತಿದೆ ಮಧು. ಇಷ್ಟು ವರ್ಷದಲ್ಲಿ ಯಾರನ್ನೂ ಇಷ್ಟು ಹಚ್ಚಿಕೊಳ್ಳದವನು ನಿನ್ನನ್ನು ಆ ಪರಿ ಹಚ್ಚಿಕೊಂಡಿದ್ದೇನೆ ಮಧು. ನಿನ್ನೊಡನೆ ಒಂದು ಬಾರಿ ಮಾತಾಡಿದರೆ ಏನೋ ಹೊಸ ಚೈತನ್ಯ ಮೂಡಿದಂತಾಗುತ್ತದೆ. ನಿನ್ನ ನಡತೆ, ಆ ಮುಗ್ಧತೆ, ನಿನ್ನ ಧ್ವನಿ, ನಿನ್ನ ಸರಳತೆ, ನಿನ್ನ ನಗು ಎಲ್ಲವೂ ಸೇರಿ ನನ್ನನ್ನು ಮಂತ್ರಮುಗ್ಧ ನನ್ನಾಗಿಸಿದೆ. ಮಧು ನೀನಿಲ್ಲದೆ ನನ್ನ ಬಾಳನ್ನು ಕಲ್ಪಿಸಿಕೊಳ್ಳಲೂ ನನ್ನ ಕೈಲಿ ಸಾಧ್ಯವಿಲ್ಲ.  ಮಧು ಪ್ಲೀಸ್ ಮಧು ನನ್ನ ಪ್ರೀತಿಯನ್ನು ಅಂಗೀಕರಿಸು ಮಧು..ಐ ಲವ್ ಯೂ, ಐ ಲವ್ ಯೂ ಸೊ ಮಚ್.


ಅಮರ್ ನನಗೆ ಗೊತ್ತು ಕಣೋ ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದೀಯ ಎಂದು. ನನಗೂ ಅಷ್ಟೇ ಅಮರ್ ನಿನ್ನನ್ನು ಕಂಡರೆ ಬಹಳ ಇಷ್ಟ. ನನಗೆ ನಿನ್ನಲ್ಲಿ ಹಿಡಿಸಿದ ದೊಡ್ಡ ಗುಣ ಎಂದರೆ ನೀನೆಷ್ಟೇ ಸಿರಿವಂತನಾದರೂ ನಿನ್ನಲ್ಲಿ ಆ ದರ್ಪ, ಅಹಂಕಾರದ ಗುಣ ಇಲ್ಲ. ನಿನ್ನ ಆ ಸರಳತೆಯೇ ನನಗೆ ಬಹಳ ಇಷ್ಟ ಆಗಿದ್ದು ಕಣೋ. ಆಮೇಲೆ ನೀನು ಎಲ್ಲರೊಂದಿಗೂ ಬೆರೆಯುವ ರೀತಿ, ಯಾರನ್ನೂ ಮೇಲು ಕೀಳೆಂದು ನೋಡದ ನಿನ್ನ ಗುಣ, ಎಲ್ಲರೊಂದಿಗೂ ನಗು ನಗುತ್ತ ಬೆರೆಯುವ ನಿನ್ನ ಸ್ವಭಾವ ಎಲ್ಲವೂ ನನಗೆ ಮೆಚ್ಚುಗೆಯಾಗಿದೆ ಕಣೋ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಾನು ಮದುವೆ ಆಗುವ ಹುಡುಗ ಹೇಗೆ ಇರಬೇಕೆಂದು ಕನಸು ಕಂಡಿದ್ದೇನೋ ಅದನ್ನೆಲ್ಲ ಸಾಕಾರಗೊಳಿಸುವ ವ್ಯಕ್ತಿತ್ವ ಇರುವ ಪರಿಪೂರ್ಣ ವ್ಯಕ್ತಿ ಕಣೋ ನೀನು. ಆದರೆ ಕಾಲೇಜ್ ಸಮಯದಲ್ಲಿ ಈ ಪ್ರೀತಿ ಪ್ರೇಮ ಎಂದು ಅದರ ಹಿಂದೆ ಬಿದ್ದರೆ ಎಲ್ಲಿ ಓದಿಗೆ ತಡೆ ಆಗುವುದೋ ಎಂದು ನನ್ನ ಆಸೆಗಳನ್ನು ಮನಸಿನಲ್ಲಿಯೇ ಸುಪ್ತವಾಗಿ ಇಟ್ಟುಕೊಂಡಿದ್ದೆ. ನನಗೂ ನೀನೆಂದರೆ ಇಷ್ಟ ಕಣೋ ಅಮರ್. ಐ ಲವ್ ಯೂ ಕಣೋ..ಐ ಲವ್ ಯೂ ಸೊ ಮಚ್...


ವೌ...ಎಂದು ಜೋರಾಗಿ ಕಿರುಚಿದ ಅಮರ್. ಮಧು ಥ್ಯಾಂಕ್ಸ್ ಅ ಲಾಟ್..ಉಫ್..ಮಧು ಐ ಕಾಂಟ್ ಬಿಲೀವ್ ದಿಸ್...ಹೋ...ಮಧು ಐ ಲವ್ ಯೂ ಸೊ ಮಚ್...ಎಲ್ಲಿ ನೀನು ನನ್ನ ಪ್ರೀತಿಯನ್ನು ಒಪ್ಪುತ್ತೀಯೋ ಇಲ್ಲವೋ ಎಂದುಕೊಂಡಿದ್ದೆ. ತುಂಬಾ ಥ್ಯಾಂಕ್ಸ್ ಮಧು. ಅಬ್ಬ ಈಗ ನನ್ನ ಮನಸ್ಸು ನಿರಾಳವಾಯ್ತು. ಮಧು ಹಾಗಿದ್ದರೆ ನಾನು ಇಲ್ಲಿಂದ ಬಂದ ತಕ್ಷಣ ನಿಮ್ಮಪ್ಪನ ಬಳಿ ಮಾತಾಡಬಹುದ?


ಇಲ್ಲ ಅಮರ್ ಅದು ಅಷ್ಟು ಸುಲಭವಲ್ಲ. ನಮ್ಮಪ್ಪನಿಗೆ ಈ ಪ್ರೀತಿ ಪ್ರೇಮ ಎಲ್ಲ ಆಗಲ್ಲ. ಅಪ್ಪಿ ತಪ್ಪಿ ಅವರಿಗೆ ನಾನು ಪ್ರೀತಿಸುತ್ತಿದ್ದೇನೆ ಎಂದು ಏನಾದರೂ ತಿಳಿದರೆ ಅಷ್ಟೇ ಅವರು ನನ್ನನ್ನು ಕೊಂದೇ ಬಿಡ್ತಾರೆ. ನನ್ನ ಅತ್ತೆ ಅಂದರೆ ನಮ್ಮ ತಂದೆ ತಂಗಿ ಒಬ್ಬನನ್ನು ಪ್ರೀತಿಸಿ ಅವನಿಂದ ಮೋಸ ಹೋಗಿದ್ದರು. ಅಂದಿನಿಂದ ನಮ್ಮ ತಂದೆಗೆ ಪ್ರೀತಿ ಪ್ರೇಮ ಎಂದರೆ ಆಗಲ್ಲ. ನಾವು ಇಲ್ಲಿ ಕಾಲೇಜಿಗೆ ಸೇರಬೇಕಾದರೆ ಎಷ್ಟು ಕಷ್ಟ ಪಡಬೇಕಾಯಿತು ಗೊತ್ತ. ಬೆಂಗಳೂರಿನ ಹುಡುಗರು ಸರಿಯಿಲ್ಲ. ಪ್ರೀತಿ ಪ್ರೇಮ ಎಂದು ತಲೆ ಕೆಡಿಸುತ್ತಾರೆ ಎಂದು ಇಲ್ಲಿಗೆ ಕಳುಹಿಸಲು ಒಪ್ಪಿರಲಿಲ್ಲ. ಆಮೇಲೆ ಅಮ್ಮನ ಬಲವಂತಕ್ಕೆ ನಮ್ಮ ಕೈಲಿ ಪ್ರಮಾಣ ಮಾಡಿಸಿಕೊಂಡು ಸೇರಿಸಿದರು.  ಪರಿಸ್ಥಿತಿ ಹೀಗಿರುವಾಗ ನಮ್ಮ ಮದುವೆ ಸಾಧ್ಯವಿಲ್ಲ ಅಮರ್.


ಮಧು....ಈ ಸಮಸ್ಯೆ ಜಟಿಲವಾಗೆ ಇದೆ..ಆದರೆ ಒಂದು ವೇಳೆ ನಿಮ್ಮ ಅಪ್ಪ ಅಮ್ಮ ಒಪ್ಪಿದರೆ ನೀನು ರೆಡಿ ತಾನೇ. ಅಮರ್, ಅವರು ಒಪ್ಪಿದರೆ ನನ್ನದೇನೂ ಅಭ್ಯಂತರ ಇಲ್ಲ...ಹಾಗಾದರೆ ಉಳಿದ ವಿಷಯ ನನಗೆ ಬಿಟ್ಟು ಬಿಡು ಮಧು. ಇನ್ನು ನಿನ್ನ ಪಾಡಿಗೆ ನೀನು ಓದಿನ ಕಡೆ ಗಮನ ಕೊಡು ಓಕೆನ...ಮತ್ತೊಮ್ಮೆ ತುಂಬಾ ಥ್ಯಾಂಕ್ಸ್ ಮಧು...ಐ ಲವ್ ಯೂ ಸೊ ಮಚ್...ಟೆಕ್ ಕೇರ್ ಬೈ...

Rating
No votes yet