ಅಮರ‌..ಮಧುರ..ಪ್ರೇಮ = ಭಾಗ 22

ಅಮರ‌..ಮಧುರ..ಪ್ರೇಮ = ಭಾಗ 22

ಮಧುರ ಅಮರ ಹೋದ ದಾರಿಯನ್ನೇ ನೋಡುತ್ತಾ ನಿಂತಿದ್ದಳು. ಅವನ ಮನಸಿನಲ್ಲಿ ಎದ್ದಿರುವ ಬಿರುಗಾಳಿ ತಣ್ಣಗಾಗಲು ಸಮಯ ಹಿಡಿಯುತ್ತದೆ ೦ದು ಅರಿತು ಅವನನ್ನು ತಡೆಯಲು ಪ್ರಯತ್ನಿಸಲಿಲ್ಲ.  ಮುಂದಿನ ದಾರಿ ಏನೆ೦ದು ಯೋಚಿಸುತ್ತ ಮನೆಗೆ ಬಂದಳು. ಅವಳು ಬರುವ ಹಾದಿಯನ್ನೇ ಕಾದು ಕೂತಿದ್ದ ಪ್ರೇ ಅವಳ ಬಳಿ ಬಂದು ಮಧು, ಅಮರ್  ಮೀಟ್ ಮಾಡಿದೆಯಅವನಿಗೆ ಎಲ್ಲ ವಿಷಯ ತಿಳಿಸಿದೆಯ? ಅವನ ಪ್ರತಿಕ್ರಿಯೆ ಹೇಗಿತ್ತುಪ್ಲೀಸ್ ಮಧು ಹೇಳು ಮಧು.

 

ಮಧುರ ಒಮ್ಮೆ ಪ್ರೇಮಳ ಕಡೆ ತೀಕ್ಷ್ಣವಾಗಿ ನೋಡಿದಳು. ಪ್ರೇಮಗೆ  ನೋಟವನ್ನು ಎದುರಿಸುಷ್ಟು ಧೈರ್ಯ ಸಾಲದೇ ತಲೆ ಕೆಳಗೆ ಮಾಡಿದಳು. ಪ್ರೇಮನೀನು ಎಂಥಹ ದೊಡ್ಡ ತಪ್ಪು ಮಾಡಿದ್ದೀಯ ಎಂದು ನಿನಗೆ ಅರಿವಿದೆಯಒಬ್ಬರ ಮನಸಿನ ಜೊತೆ ಆಟ ಆಡಿದ್ದೀಯ. ಅದೂ ನನ್ನ ಹೆಸರನ್ನು ಬಳಸಿ ಪ್ರೀತಿಯ ಆಟ ಆಡಿದ್ದೀಯ. ಪ್ರೇಮ, ನಿನಗೆ ಯಾಕೆ ಇಂಥಹ ದುರ್ಬುದ್ಧಿ ಹುಟ್ಟಿತು. ಒಮ್ಮೆಯಾದರೂ ನೀನು ನನ್ನ ಬಳಿ  ವಿಷಯವನ್ನು ಹೇಳಬಹುದಿತ್ತು. ನನ್ನಿಂದ ಯಾಕೆ ಮುಚ್ಚಿಟ್ಟೆ. ಇಂದು ಅಮರನ ಜೊತೆ ಮಾತಾಡುತ್ತಿದ್ದಾಗ ಗೊತ್ತಾಯಿತು. ಅವನ ಪ್ರೀತಿ ನೀರಿನಷ್ಟು ನಿರ್ಮಲವಾದ ಪ್ರೀತಿ ಎಂದು. ಆದರೆ ನೀನು ಅದನ್ನು ಕಲ್ಮಶ ಮಾಡಿಬಿಟ್ಟೆ. ನೀನು ಎಲ್ಲರಿಗೂ ದ್ರೋಹ ಮಾಡಿರುವೆ ಪ್ರೇಮ. ಪ್ರೇಮ, ಅಮರ್ ಏನಂದ ಗೊತ್ತ? ನೀನು ಮಾಡಿರುವ ದ್ರೋಹಕ್ಕೆ ಅವನು ನಿನ್ನನ್ನು ಜೀವನ ಪೂರ್ತಿ ಕ್ಷಮಿಸುವುದಿಲ್ಲ ಎಂದಿದ್ದಾನೆ. ನಿನ್ನ ಮುಖ ಕೂ ನೋಡುವುದಿಲ್ಲ ಎಂದು ಹೇಳಿದ್ದಾನೆ. ಪ್ರೇಮ ನೀನು ನನ್ನ ಒಡಹುಟ್ಟಿದವಳು ಎಂದಷ್ಟೇ ನಾನು ಇಷ್ಟು ಮಾತಾಡುತ್ತಿದ್ದೇನೆ ಇಲ್ಲವಾದರೆ ನಾನು ಸಹ ನಿನ್ನನ್ನು ಮಾತಾಡಿಸುತ್ತಿರಲಿಲ್ಲ.

 

ಮಧು..ಹೌದು ಮಧು ನಾನು ಕೆಟ್ಟವಳು. ನಾನು ಸರಿ ಇಲ್ಲ..ನಾನು ದ್ರೋಹ ಮಾಡಿದೆ...ಆದರೆ..ಆದರೆ ಆ ಸಮಯಕ್ಕೆ ಅಮರನ ಹತ್ತಿರ ಆಗಲು ನನಗೆ ಬೇರೆ ಯಾವುದೇ ದಾರಿ ತಿಳಿಯಲಿಲ್ಲ. ಅದಕ್ಕೆ ನಾನು ನಿನ್ನಂತೆ ನಟಿಸಬೇಕಾಯ್ತು. ಮಧು ಒಮ್ಮೆ ಯೋಚನೆ ಮಾಡು ನಾವಿಬ್ಬರೂ ನೋಡಲು ಒಂದೇ ರೀತಿ ಇದ್ದರೂ ಅವನು ನನ್ನ ಪ್ರೀತಿಯನ್ನು ನಿರಾಕರಿಸಿ ನಿನ್ನನ್ನು ಇಷ್ಟ ಪಡುತ್ತಿದ್ದಾನೆಂದು ತಿಳಿದು ನಾನೆಷ್ಟು ನೋವನ್ನು ಅನುಭವಿಸಿರಬೇಡ. ಮಧುಅಮರನನ್ನು ನೋಡಿದ ದಿನದಿಂದಲೇ ನನಗೆ ಅವನ ಮೇಲೆ ಪ್ರೀತಿ ಹುಟ್ಟಿತು. ಆದರೆ ಅವನು ನಿನ್ನ ಗುಣವನ್ನು ಇಷ್ಟ ಪಟ್ಟು ನನ್ನ ಗುಣ ಇಷ್ಟ ಆಗಿಲ್ಲ ಎಂದಾಗ ನನಗೆ ಹೇಗೆ ಆಗಿರಬೇಡ. ಮಧು...ಆ ನೋವು ಅನುಭವಿಸಿದವಳು ನನಗೆ ಗೊತ್ತು  ಕಷ್ಟ ಏನೆಂದು. ಹೌದು ನಾನು ನಿನ್ನ ಹೆಸರನ್ನು ದುರುಪಯೋಗ ಪಡಿಸಿಕೊಂಡೆ, ನನಗೆ ಬೇರೆ ದಾರಿ ತೋಚಲಿಲ್ಲ ಮಧು.  ಲವ್ ಹಿಂ ಧು...ಐ ಲವ್ ಹಿಂ ಎಂದು ನಿಂತಲ್ಲಿಯೇ ಕುಸಿದು ಅಳಲು ಶುರು ಮಾಡಿದಳು.

 

ಮಧುರಗೆ ಅವಳನ್ನು ಸಮಾಧಾನ ಮಾಡಬೇಕೆಂದು ಅನಿಸದೆ ಸುಮ್ಮನೆ ಹೊರಟು ಹೋದಳು. ಒಂದು ವಾರ ಮಧುರ ಪ್ರೇಮ ಬಳಿ ಮಾತಾಡಲಿಲ್ಲ. ಪ್ರೇಮ ಪ್ರತಿ ಬಾರಿ ಮಾತಾಡಲು ಬಂದರೂ ಸುಮ್ಮನೆ ಹೊರಟು ಹೋಗುತ್ತಿದ್ದಳು. ಅಮರನ ಜೊತೆ ಮಾತಾಡಲು ಪ್ರಯತ್ನಿಸಿದರೆ ಅಮರ್ ಫೋನನ್ನು ಆಫ್ ಮಾಡಿಟ್ಟು ಕೊಂಡಿದ್ದ. ಪ್ರೇಮ ಒಬ್ಬಂಟಿಯಾಗಿ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದಳು.  

 

ಒಂದು ವಾರದಿಂದ ನಿದ್ರೆ ಊಟ ಬಿಟ್ಟು ಪ್ರೇಮ ಅಳುವುದನ್ನು ನೋಡಲಾಗದೆ ಮಧುರ ಅಮರ್ ಗೆ ಕರೆಮಾಡಿದಳು. ಹಲೋ...ಅಮರ್ಮಧು ಪ್ಲೀಸ್ ನನ್ನನ್ನು ಬಿಟ್ಟು ಬಿಡು. ದಯವಿಟ್ಟು ನನ್ನನ್ನು ಡಿಸ್ಟರ್ಬ್ ಮಾಡಬೇಡಿ. ನನಗೆ ಯಾರೂ ಬೇಡ. ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಬಿಡಿ. ಅಮರ್ಒಮ್ಮೆ ನನ್ನ ಮಾತು ಕೇಳಿ. ಪ್ಲೀಸ್ ಅಮರ್. ನಿಮ್ಮ ಬಳಿ ಸ್ವಲ್ಪ ಮಾತಾಡಬೇಕು. ದಯವಿಟ್ಟು ಇಲ್ಲ ಎನ್ನಬೇಡಿ. ಪ್ಲೀಸ್ ಎಲ್ಲಿ ಸಿಗುತ್ತೀರ ಹೇಳಿ. ಕೆ ಮಧು ಎರಡು ಘಂಟೆ ಹೊತ್ತಿಗೆ ಕಾಲೇಜ್ ಬಳಿ ಸಿಗುತ್ತೇನೆ.

 

ಸರಿಯಾಗಿ ಎರಡು ಘಂಟೆಗೆ ಮಧುರ ಪ್ರೇಮಳನ್ನು ಕರೆದುಕೊಂಡು ಕಾಲೇಜ್ ಬಳಿ ಬಂದಿದ್ದಳು. ಅಲ್ಲಿಗೆ ಬಂದ ಅಮರ್ ಅವರಿಬ್ಬರನ್ನು ನೋಡಿ ಅವನ ಮುಖದಲ್ಲಿ ವಿಚಿತ್ರವಾದ ಭಾವನೆ ಮೂಡಿತು. ಅದನ್ನು ಮನಗಂಡ ಮಧುರ ಅವನ ಬಳಿ ಹೋಗಿ ಅಮರ್ ತುಂಬಾ ಥ್ಯಾಂಕ್ಸ್ ಅಮರ್ ನನ್ನ ಮಾತಿಗೆ ಬೆಲೆ ಕೊಟ್ಟು ಬಂದಿದ್ದಕ್ಕೆ. ಅಮರ್ ಇಲ್ಲಿಯವರೆಗೂ ನಡೆದಿದ್ದಕ್ಕೆ ಪ್ರೇಮಳೆ ಕಾರಣ ಅದಕ್ಕೆ ಅವಳನ್ನೂ ಕರೆದುಕೊಂಡು ಬಂದಿದ್ದೇನೆ. ನೀವೇ ಅವಳ ಜೊತೆ ಒಮ್ಮೆ ಮಾತಾಡಿ.

ಏಕೆಂದರೆ ಇಂಥಹ ವಿಷಯಗಳು ನೇರವಾಗಿ ಮಾತಾಡಿಬಿಟ್ಟರೆ ಇಬ್ಬರಿಗೂ ನೆಮ್ಮದಿ. ಇಬ್ಬರಿಗೂ ಮನಸು ನಿರಾಳವಾಗುತ್ತದೆ. 

 

ಮಧು ನಾನು ಇಲ್ಲಿಗೆ ಬಂದದ್ದು ನಿಮ್ಮೊಡನೆ ಮಾತಾಡಲು. ನೀವು ಅವಳನ್ನು ಕರೆದು ಕೊಂಡು ಬರುವುದಾಗಿ ಹೇಳಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ನನಗೆ ಅವಳ ಜೊತೆ ಮಾತಾಡಲು ಇಷ್ಟವಿಲ್ಲ ಮಧು. ನೀವು ಏನಾದರೂ ಹೇಳುವುದಿದ್ದರೆ ಹೇಳಿ. ಇಲ್ಲವಾದರೆ ನಾನು ಹೊರಡುತ್ತೇನೆ. ತಕ್ಷಣ ಮಧ್ಯ ಪ್ರವೇಶಿಸಿದ ಪ್ರೇಮ ಅಮರ್ ನನಗೆ ಗೊತ್ತು. ನಿಮಗೆ ನನ್ನ ಮೇಲೆ ಷ್ಟು ಕೋಪ ಇದೆ ಎಂದು. ಅಮರ್ ದಯಮಾಡಿ ನನ್ನನ್ನು ಕ್ಷಮಿಸು  ಅಮರ್

ಪ್ಲೀಸ್ ಅಮರ್ ನನ್ನೊಡನೆ ಮಾತಾಡಲ್ಲ ಎಂದು ಮಾತ್ರ ಹೇಳಬೇಡ. ನಾನು ಬದುಕಿರುವುದೇ ನಿನಗಾಗಿ ಪ್ಲೀಸ್ ಅಮರ್. ಬೇಡ ಪ್ರೇಮ ದಯವಿಟ್ಟು ನೀನು ಹೀಗೆಲ್ಲ ನಾಟಕ ಆಡಬೇ ನನಗೆ ಇನ್ನೂ ಕೋಪ ಬರುತ್ತದೆ. ಆಮೇಲೆ ನಾನೇನು ಮಾಡುತ್ತೇನೋ ನನಗೆ ಗೊತ್ತಿಲ್ಲ.

 

ಮಧು ನಾನಿನ್ನು ಹೊರಡುತ್ತೇನೆ. ಅಮರ್..ಒಂದು ನಿಮಿಷ ನಿಲ್ಲಿ, ನಾನು ನಿಮ್ಮನ್ನು ಇಲ್ಲಿಗೆ ಕರೆದದ್ದು ಒಂದು ವಿಷಯ ಪ್ರಸ್ತಾಪಿಸಲು. ಅದನ್ನು ಪ್ರಸ್ತಾಪಿಸಲು ಇದು ಸೂಕ್ತ ಸಮಯ ಅಲ್ಲ. ಆದರೂ ನನಗೆ ಬೇರೆ ದಾರಿ ತೋಚುತ್ತಿಲ್ಲ. ಇದನ್ನು ಹೀಗೆ ಬಿಟ್ಟರೆ ಇನ್ನಷ್ಟು ಹದಗೆಡುತ್ತದೆ. ಹಾಗಾಗಿ ಈಗಲೇ ಇತ್ಯರ್ಥ ಆದರೆ ಒಳ್ಳೆಯದು. ಏನು ಮಧು ಅದು...ಅಮರ್ ನೀವು ಪ್ರೇಮಳನ್ನು ಮದುವೆ ಆಗಬೇಕು.

 

 ಮಾತನ್ನು ಕೇಳಿದ ತಕ್ಷಣ ಅಮರ್ ಬಿದ್ದು ಬಿದ್ದು ನಗಲು ಶುರುಮಾಡಿದ. ಮಧು ನೀನೇನು ಮಾತಾಡುತ್ತಿದ್ದೀಯ ಎಂದು ನಿನಗೆ ಪ್ರಜ್ಞೆ ಇದೆಯಾಇಷ್ಟೆಲ್ಲಾ ಆದ ಮೇಲೂ  ಮಾತನ್ನು ಕೇಳಲು ನಿನಗೆ ಮನಸಾದರೂ ಹೇಗೆ ಬಂತು ಮಧು.

ಬೈ ಮಧು ಇನ್ನೂ ಇಲ್ಲಿದ್ದರೆ ಇನ್ನು ಏನೇನು ಹೇಳುತ್ತೀರೋ ಬೇಡವೇ ಬೇಡ. ನಾನು ಹೊರಡುತ್ತೇನೆ ಬೈ.

 

ಅಮರ್ ಮೊದಲು ನನ್ನ ಮಾತನ್ನು ಪೂರ್ತಿಯಾಗಿ ಕೇಳಿ ಆಮೇಲೆ ಹೊರಡಿ ಪ್ಲೀಸ್ ಇದೊಂದು ಸಲ. ಆಯ್ತು ಮಧು ಹೇಳು. ಅಮರ್ ಈ ಎರಡು ವರ್ಷದಲ್ಲಿ ನೀನು ಪ್ರೀತಿಸಿದ್ದು ಮಧುರಳ ಹೆಸರಿನಲ್ಲಿದ್ದ ಪ್ರೇಮಳನ್ನು. ಈಗ ಅವಳ ಹೆಸರು ಪ್ರೇಮ ಎಂದು ತಿಳಿದು ನೀನು ಅವಳನ್ನು ನಿರಾಕರಿಸುತ್ತಿದ್ದೀಯ ಹೌದು ತಾನೇ? ಹೌದು ಮಧು. ಅಮರ್ ಹಾಗಾದರೆ ನಿನಗೆ ಇಲ್ಲಿ ಸಮಸ್ಯೆ ಆಗುತ್ತಿರುವುದು ಹೆಸರಿನಿಂದ ಎಂದ ಹಾಗಾಯಿತು. ಮಧು ಅದು ಹಾಗಲ್ಲ. ಅಮರ್ ಮೊದಲು ನಾನು ಪೂರ್ತಿ ಮುಗಿಸುತ್ತೇನೆ. ಅಮರ್ ನಿಜ ಹೇಳಬೇಕೆಂದರೆ ಮೊದಲಿನಿಂದಲೂ ನನಗೆ ನಿಮ್ಮ ಮೇಲೆ ಯಾವುದೇ ಭಾವನೆ ಇಲ್ಲ. ಈಗಲೂ ಇಲ್ಲ. ತಕ್ಷಣ ಅಮರನ ಮುಖ ಪೆಚ್ಚಾಯಿತು.

 

ಅಮರ್ ದಯವಿಟ್ಟು ತಪ್ಪು ತಿಳಿಯಬೇಡ. ನಿನ್ನ ಮನಸಿಗೆ ನೋವುಂಟು ಮಾಡಬೇಕೆಂದು ಹೀಗೆ ಹೇಳುತ್ತಿಲ್ಲ. ಅಮರ್, ಒಂದು ವೇಳೆ ಪ್ರೇಮ ನಿನಗೆ ಮೋಸ ಮಾಡಿದ ಸಂಗತಿ ನಾನು ನಿನಗೆ ತಿಳಿಸದೇ ಆ ಸುಳ್ಳನ್ನೇ ನಿಜ ಎಂದು ಮಾಡಿ ನಿಮ್ಮಿಬ್ಬರ ಮದುವೆ ನಡೆಸಬಹುದಿತ್ತು. ಆದರೆ  ರೀತಿ ದ್ರೋಹ ಮಾಡಲು ನನಗೆ ನಸಾಗಲಿಲ್ಲ. ಅದಕ್ಕೆ ನಿನ್ನ ಬಳಿ ಸತ್ಯ ಹೇಳಿದೆ. ಅಮರ್, ಇನ್ನೂ ಒಂದು ವಿಷಯ ಪ್ರೇಮ ಈಗ ಮೊದಲಿನ ಹಾಗೆ ಇಲ್ಲ. ನನ್ನಂತೆ ನಟಿಸಿ ಅವಳಿಗೂ ನನ್ನದೇ ಗುಣ ಬಂದಿದೆ. ಅಮರ್ ನಿನಗೆ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಈ ಎರಡು ವರ್ಷ ನೀನು ಅವಳ ಜೊತೆ ಪ್ರೀತಿಯಿಂದ ಇದ್ದೀಯ. ನಿನಗೆ ಎಂದಾದರೂ ಅವಳು ಪ್ರೇಮ ಎಂದು ಅನುಮಾನ ಬಂದಿತ್ತ. ಇಲ್ಲ ತಾನೇ. ಅಮರ್ ಅವಳೂ ನಿನ್ನನ್ನು ಬಹಳ ಹಚ್ಚಿಕೊಂಡಿದ್ದಾಳೆ. ಅವಳನ್ನು ನೋಡಿದರೆ ನಿನಗೆ ಗೊತ್ತಾಗುತ್ತದೆ. ಒಂದು ವಾರದಿಂದ ಊಟ ನಿದ್ರೆ ಬಿಟ್ಟು ಹೇಗೆ ಆಗಿದ್ದಾಳೆ ನೋಡು.

 

ಅಮರ್ ನೀನು ಮಾನಸಿಕವಾಗಿ ನನ್ನನ್ನು ಇಷ್ಟ ಪಟ್ಟಿರಬಹುದು. ಆದರೆ ದೈಹಿಕವಾಗಿ ನೀನು ಇಷ್ಟ ಪಟ್ಟಿರುವುದು ಪ್ರೇಮಳನ್ನು. ಅಮರ್ ನಿನ್ನ ಮನಸಿನಿಂದ ನನ್ನನ್ನು ಅಳಿಸುವುದು ಸುಲಭ, ಆದರೆ ನೀನು ಅವಳೊಂದಿಗೆ ಕಳೆದ ಕ್ಷಣಗಳ ನೆನಪನ್ನು ಅಳಿಸುವುದು ಕಷ್ಟ. ಅಮರ್, ಪ್ಲೀಸ್ ನನ್ನ ಮಾತು ಕೇಳಿ ಅವಳನ್ನು ಮದುವೆ ಮಾಡಿಕೊ.

ಮಧು, ನೀನು ಹೇಳಿದ್ದೆಲ್ಲ ಸರಿ..ಆದರೆ ನಾನು ಇದರ ಬಗ್ಗೆ ಈಗಲೇ ಏನೂ ಹೇಳು ಗಲ್ಲ. ನನಗೆ ಸ್ವಲ್ಪ ಸಮಯ ಬೇಕು. ನಂತರ ನನ್ನ ನಿರ್ಧಾರ ತಿಳಿಸುತ್ತೇನೆ. ಬೈ

Rating
No votes yet

Comments