ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ ಓದೀದೆನೋ ದೇವರೇ ಬಲ್ಲ !
ನಾವು ( ನಾನು ಮತ್ತು ನನ್ನ ಶ್ರೀಮತಿ) ಕನ್ನಡ ಪತ್ರಿಕೆಗಳಾದ ಸುಧಾ, ತರಂಗ, ಮಯೂರ, ತುಷಾರ, ಓದುವ ಹವ್ಯಾಸವಿದ್ದವರು. ಬೆಂಗಳೂರಿನಲ್ಲಿದ್ದಾಗ, ಪ್ರಜಾವಾಣಿ, ಕನ್ನಡ ಪ್ರಭ, ವಿಜಯಕರ್ನಾಟಕ, ಡೆಕ್ಕನ್ ಹೆರಾಳ್ಡ್, ಹಿಂದು, ಪತ್ರಿಕೆಗಳು ನಮ್ಮ ಮುಂದೆ ಸುಳಿಯುತ್ತಿದ್ದವು. ಆದರೆ, ಮುಂಬೈನಲ್ಲಿದ್ದಾಗಲಂತೂ ಉದಯವಾಣಿ, ಕರ್ನಾಟಕ ಮಲ್ಲ, ಟೈಮ್ಸ್ ಆಫ್ ಇಂಡಿಯ ಓದುವುದು ರೂಢಿಯಾಗಿತ್ತು. ಆದರೆ ಅಮೆರಿಕೆಯಲ್ಲಿ ಕನ್ನಡ ಪತ್ರಿಕೆಗಳು ಲಭ್ಯವಾಗದಿದ್ದಾಗ, ಎಂತಮಾಡುವುದು ? ಹಳೆಯ ಪತ್ರಿಕೆಗಳನ್ನೇ ಎಲ್ಲಿಹೋದರಲ್ಲಿ ತೆಗೆದುಕೊಂಡು ಹೋಗಿ ಅತಿಆಸಕ್ತಿಯಿಂದ ಮತ್ತೆ ಮತ್ತೆ, ಓದುವ ಅಭ್ಯಾಸವನ್ನು ಶುರುಮಾಡಬೇಕಾಯಿತು. ಸಿಯಾಟಲ್ ಟೈಮ್ಸ್, ಆರೇಂಜ್ ಕೌಂಟಿ ಟೈಮ್ಸ್, ಇಂಡಿಯ ಅಬ್ರಾಡ್, ಮತ್ತೆ ಕೊಲಂಬಿಯ ಟ್ರಿಬ್ಯೂನ್ ಗಳನ್ನು ಓದಿದಾಗ ನನಗೆ ಮುಂಬೈ ಎಡಿಶನ್ ನ ಟೈಮ್ಸ್ ಆಫ್ ಇಂಡಿಯ ಓದಿದ ಸವಿದೊರೆಯಲಿಲ್ಲ. ಅದರಲ್ಲೂ ಟೈಮ್ಸ್ ಜೊತೆ ಸಪ್ಲಿಮೆಂಟ್ ಇದೆಯಲ್ಲ, " ಮುಂಬೈ ಮಿರರ್ " ನಷ್ಟು ವೈವಿಧ್ಯಮಯ ಮಸಾಲೆದಾರ್, ಚಕ್ಮಕಿ ಪತ್ರಿಕೆ ನನಗೆ ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ಅದರ ಇನ್ವೆಸ್ಟಿಗೇಟೀವ್ ಲೇಖನಗಳು ಎಷ್ಟು ಖಾತ್ರಿಯಾದ ಸುದ್ದಿಗಳನ್ನು ವರದಿಮಾಡುತ್ತವೆ ! ನನಗೆ ಲಕ್ಷ್ಮಣ್ ರವರ ವ್ಯಂಗ್ಯಚಿತ್ರ, ’ಯು ಸೆಡ್ ಇಟ್,” ಮತ್ತು ಮುಂಬೈ ಮಿರರ್ ನ ಕಾಲಂಗಳು ಅತಿಪ್ರಿಯ ಅಂದರೆ ಅತಿಪ್ರಿಯ !
ಈ ಲೇಖನ ೨೦೦೮ ರಲ್ಲೇ ಸಂಪದದಲ್ಲಿ ಪ್ರಕಟಿತವಾಗಿತ್ತು. ಆದರೆ ಈಗ ಅದರ ನೆನಪಾದಾಗ ನೋಡಿದರೆ ಚಿತ್ರ ಕಾಣಿಸುತ್ತಿಲ್ಲ. ಅದಕ್ಕಾಗಿ ಮತ್ತೆ ನಾನು ಅದನ್ನು ಬರೆದೆ.
Comments
ಉ: ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ...
ಹಿರಿಯರೇ -ನೀವ್ ಹೇಳಿದ ಆ ಎಲ್ಲ ದಿನ ಪತ್ರಿಕೆ -ವಾರ- ಮಾಸ ಪತ್ರಿಕೆಗಳನ್ನು ಮತ್ತು ಅವುಗಳ ದೀಪಾವಳಿ -ಯುಗಾದಿ ವಿಶೇಷಾಂಕಗಳನ್ನು ಓದುವ ಹವ್ಯಾಸ ನನಗೂ ಇದೆ ..
ತುಷಾರ -ಕಸ್ತೂರಿ -ಮಯೂರ -ಅಚ್ಚು ಮೆಚ್ಚು - ಕಾಲಕಾಲಕ್ಕೆ ತಕ್ಕಂತೆ ಓದುಗರ ಅಭಿರುಚಿ ಮನಗಂಡು ಹತ್ತು ಹಲವು ಬದಲಾವಣೆ ಸಹಿತ ಈಗಲೂ ಮುದ್ರಣ ಕಂಡು ನಮ್ ಕೈ ಸೇರುತ್ತಿರುವ ಅವುಗಳಲ್ಲಿ ನನಗೆ ತುಷಾರ ಮತ್ತು ಮಯೂರ ಅಚ್ಚು ಮೆಚ್ಚು ಕಾರಣ -ನವ ನವೀನ ವಸ್ತು ವಿಷ್ಯ ಕುರಿತ ಬರಹಗಳು . ಉದಾ:ಮಯೂರದಲ್ಲಿ ಈಗ ಸಖೀ ಗೀತ (ಹೆಸರಾಂತ ವ್ಯಕ್ತಿಗಳ ಸಾಧಕರ ದಾಂಪತ್ಯ ಜೀವನ -ನೋವು ನಲಿವಿನ ಚಿತ್ರಣ ಅವರ ಮಾತುಗಳಲ್ಲೇ ),ಬುತ್ತಿ ಚಿಗುರು (ಸವಿ ನೆನಪಿನ ಘಟನೆಗಳ ಬರಹಗಳು)-ಕೆಲ ತಿಂಗಳುಗಳ ಹಿಂದೆ ಹಿರಿಯ ಕವಿ ಬೀ ಆರ್ ಲಕ್ಷ್ಮಣ್ ರಾವ್ ಅವರು ಬರೆಯುತ್ತಿದ್ದ ಅವರ ಖ್ಯಾತನಾಮ ಸ್ನೇಹಿತರುಗಳ ಬಗೆಗಿನ ಬರಹ (ಸಿ ಅಶ್ವಥ್ -ಎಚ್ ಎಸ್ವಿ ,ಜಿ ಎಸ್ ಎಸ್ ಇತ್ಯಾದಿ ),ಸಿನೆಮ ರಂಗದ ಬಗ್ಗೆ ಎನ್ವಿ ಅವರ ಕೊನೆ ಪೇಜಿನ ಕುಟುಕು ಬರಹ ,ಸಖತ್ ಕಥೆ ಕವನಗಳು , ಅದೇ ರೀತಿ ತುಷಾರದ ನಮ್ಮೂರು -ನಮ್ಮ ಜಿಲ್ಲೆ - ನಮ್ಮ ರಾಜ್ಯ -ನಮ್ ದೇಶ -ಈಗ ಭಾರತದ ಸುತ್ತ ಮುತ್ತಲಿನ ಈ ಹಿಂದೆ ನಮ್ಮೊಡನೆ ಇದ್ದ ದೇಶಗಳ ಬಗೆಗಿನ ಬರಹ -ಪ್ರೇಮ ಶೇಖರ್ ಅವರಿಂದ (ಇವರು ನಿಮಗೂ ಗೊತ್ತು -ಸಂಪದದಲ್ಲಿ ಹಲವು ಕಥೆ ಕವನ ಬರೆದಿರುವರು ),ಆಯಾಯ ಪ್ರದೇಶ ಭಾಷೆಗಳ ಅನುವಾದಿತ ಕಥೆ ಕವನ ಇತ್ಯಾದಿ ಎಲ್ಲವೂ ಸಖತ್ ..
ಪ್ರತಿ ತಿಂಗಳೂ ಒಂದೊಂದು ವಿಶೇಷ ಸಂಚಿಕೆ (ಪತ್ತೆಧಾರಿ-ಮಕ್ಕಳ ಸಾಹಿತ್ಯ -ವೈಜ್ಞಾನಿಕ ಕಥೆ ಹೀಗೆ ) ಎಲ್ಲವೂ ಸೂಪರ್ //
ತರಂಗ ( ಈ ಹಿಂದೆ ಸಂತೋಷ್ಕುಮಾರ್ ಗುಲ್ವಾಡಿ ಅವರು ಸಂಪಾದಕರಾಗಿದ್ದಾಗ ),ಸುಧಾ ,ಕರ್ಮವೀರ ಸಹ ಓದಿರುವೆ -ಓದುವೆ ..
ಪ್ರತಿ ವಾರ ತಿಂಗಳು ತಪ್ಪದೆ ಆ ಪುಸ್ತಕಗಳನ್ನು ಖರೀದಿಸುವೆ ..
ಆ ಎಲ್ಲ ಸಂಚಿಕೆಗಳನ್ನು ಪ್ರತಿ ಬಾರೀ ಮನೆ ಬದಲಾಯಿಸುವಾಗ ಮೂಟೆಯಲ್ಲಿ ಹಾಕಿ ಸಾಗಿಸಿರುವೆ .. !
ಈಗಲೂ ಆಗಾಗ ಹಳೆಯ ಸಂಚಿಕೆಗಳನ್ನು ಓದುವೆ ..
ಓದೋದ್ರಲ್ಲಿ ಇರೋ ಮಜಾ ಯಾವ ೩ ಡಿ ,೧೦ ಡಿ ಸಿನೆಮ ನೋಡಿದರೂ ಸಿಗೋಲ್ಲ ಬಿಡಿ ...!
ಶುಭವಾಗಲಿ
\। /
In reply to ಉ: ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ... by venkatb83
ಉ: ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ...
ಓದೋದ್ರಲ್ಲಿ ಇರೋ ಮಜಾ ಯಾವ ೩ ಡಿ ,೧೦ ಡಿ ಸಿನೆಮ ನೋಡಿದರೂ ಸಿಗೋಲ್ಲ ಬಿಡಿ ...! +1
In reply to ಉ: ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ... by partha1059
ಉ: ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ...
ಸ್ವಾಮಿ ತಮಗೆ ಓದಿನಬಗ್ಗೆ ಇರುವ ಆಸ್ತೆ ನಿಜಕ್ಕೂ ಅಭಿನಂದನೀಯ. ಆದರೆ ನಾನು ಬರೆದಿರೋದಕ್ಕೆ ನೀವು ಸ್ಪಂದಿಸಿಲ್ಲ ಅಂತ ನನ್ನ ಅನಿಸಿಕೆ.
ನಾನು ಹೇಳುತ್ತಿರುವುದು, ಪರದೇಶದಲ್ಲಿ ಹೋದಾಗ ನಮ್ಮ ಜನ, ಜಲ, ಮಣ್ಣು, ಸಂಸ್ಕೃತಿ, ಹಾಡು ಹಸೆ ತಕ್ಷಣ ಜ್ಞಾಪಕಕ್ಕೆ ಬರುತ್ತೆ. ಅನ್ನೋವಿಚಾರವನ್ನು !
ನಾನಿದ್ದ ಜಾಗ ಕೇವಲ್ ವಿಶ್ವವಿದ್ಯಾಲಯ ಹಾಗೂ ೨೦ ಸಾವಿರ ಜನ ಹುಡುಗ/ಹುಡುಗಿಯರ ಪರಿಸರ. ಅಲ್ಲೆಲ್ಲಿಬರಬೇಕು ಕನ್ನಡ ಪತ್ರಿಕೆಗಳು,(೨೦೦೮)ಯೂನಿವರ್ಸಿಟಿ ಆಫ್ ಮಿಸ್ಸೌರಿಯ ಪರಿಸರದಲ್ಲಿ
ಹಾಗಾಗಿ ನಾವಾಗಲೇ ತಿರುವುಹಾಕಿದ್ದ ಮಯೂರ ಪತ್ರಿಕೆಯನ್ನು ನಾವಿಬ್ಬರೂ ೨ ವರೆ ತಿಂಗಳು ಸಂಭಾಳಿಸಿಕೊಂಡು ಹೋದ ಬಗೆಯನ್ನು ಕುರಿತು ಬರೆದಿರುವ ಲೇಖನ ನಿಧಾನವಾಗಿ ಓದಿನೋಡಿ. ಭಾವುಕರಾಗಿ ಒಮ್ಮೊಮ್ಮೆ ಏನೂ ನೋಡದೆ ಬುಡು-ಬುಡು ನುಗ್ಗುತ್ತೇವೆ. ಅಲ್ಲವೇ !
In reply to ಉ: ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ... by venkatesh
ಉ: ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ...
ಪಾರ್ಥರವರಿಗೆ, ನಮಸ್ಕಾರಗಳು.
In reply to ಉ: ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ... by venkatb83
'ಸಂಪದ' ಇನ್ನೂ ಅತಿಹೆಚ್ಚುಹೆಚ್ಚು…
'ಸಂಪದ' ಇನ್ನೂ ಅತಿಹೆಚ್ಚುಹೆಚ್ಚು ಪರಿಣಾಮಕಾರಿಯಾಗಬೇಕಾದರೆ, ಇದರಲ್ಲಿ ಪ್ರಕಟವಾದ ನಮ್ಮ ಲೇಖನಗಗಳನ್ನು 'ಫೇಸ್ಬುಕ್' ನಲ್ಲಿ ಹಾಕಿದಾಗ ಅದು ಸ್ವಲ್ಪ ಚೆನ್ನಾಗಿ ಕಾಣಿಸಬೇಕು. ನಿಜಹೇಳಬೇಕೆಂದರೆ ಅವು ಕಾಣುವುದಿರಲಿ ಓದಲೂ ಯಾರನ್ನೂ ಪ್ರಚೋದಿಸುವುದಿಲ್ಲ. ಇದು ನಿಜ. ಅದರಿಂದ ಸ್ವಲ್ಪ ಚೆನ್ನಾಗಿ ಕಾಣಿಸುವಂತೆ ಹೊರಕವಚದ 'ಡಿಸೈನ್' ಬದಲಿಸಿ ಅಥವಾ ಉತ್ತಮಪಡಿಸಿ. ಇದು ಅತಿಮುಖ್ಯ. ಅದೆಷ್ಟೋ ಇಂಟರ್ನೆಟ್ ತಾಣಗಳು ಲಭ್ಯವಿವೆ. (ಕನ್ನಡದಲ್ಲೂ ಸಹಿತ) ಈಗ ನಾನು ಬರೆದ ಲೇಖನ ಪ್ರಕಟಿಸಿದ್ದೀರಿ. ಸಂತೋಷ. ಮತ್ತೆ ಬರೆಯಲು ಇಚ್ಛೆಯಾಗುತ್ತಿದೆ. ಇದು ನಿಮಗೆ ಅರ್ಥವಾಗಿದೆ ಅಂದುಕೊಳ್ಳುತ್ತೇನೆ. ಲೇಖನಗಳ ಗುಣಮಟ್ಟ ಖಂಡಿತವಾಗಿಯೂ ಚೆನ್ನಾಗಿದೆ. ಅದರ ಜೊತೆಗೆ ಹೊರರೂಪವೂ ಮುಖ್ಯವೆಂದು ನನಗೆ ಅನ್ನಿಸಿದೆ.
ಉ: ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ...
ಹಿರಿಯರೇ ನಿಮ್ಮ ಮರು ಪ್ರತಿಕ್ರಿಯೆ ಓದಿದೆ ..
ದೂರದ ದೇಶದಲ್ಲಿ -ಕನ್ನಡ ಪತ್ರಿಕೆ ಪುಸ್ತಕ ಸಿಗದೇ ನೀವ್ ಓದಿದ್ದನ್ನೇ ಮತ್ತೆ ಮತ್ತೆ ಓದಿದ್ರಿ ಅನ್ತ ಗೊತ್ತಾಯ್ತು .
ಹಲವು ಪತ್ರಿಕೆ ಪುಸ್ತಕಗಳು ಈಗ (ಬಹುಶ ಬಹು ದಿನಗಳಿಂದ ) ಈ ಪೇಪರ್ ಆಗಿ ನೆಟ್ನಲ್ಲಿ ಲಭ್ಯ -ಅದರಲ್ಲೂ ನೀವ್ ಹೇಳಿದ ಸುಧಾ , ಮಯೂರ ಸಹ ಹಾಗೆಯೇ ಹಲವು ದಿನ ಪತ್ರಿಕೆಗಳು ಸಹ ..
ಸುಧಾ ಲಿಂಕ್ :http://sudhaezine.com/
ಮಯೂರ ಲಿಂಕ್ :http://mayuraezine.com/
ಡೆಕ್ಕನ್ ಹೆರಾಲ್ಡ್ :http://deccanheraldepaper.com/
ಪ್ರಜಾವಾಣಿ :http://prajavaniepaper.com/
ಈ ಎಲ್ಲ ಈ ಪೇಪರ್ -ಪುಸ್ತಕ ಓದಲು ಕೆಲವಕ್ಕೆ ನೊಂದಾಯಿಸಬೇಕಾಗುವುದು ..
ಆದರೂ ಕೈನಲ್ಲಿ ಹಿಡಿದು ಓದುವ ಫಿಸಿಕಲ್ ಪೇಪರ್ ಪತ್ರಿಕೆ ಕೊಡುವ ಓದಿನ ಮಜವನ್ನ ಈ ಕನ್ನಡಿಯ ಗಂಟಿನ ತರಹದ ಈ ಪೇಪರ್ ಪುಸ್ತಕ ಕೊಡಲಾರವು ..!!
ನಾ ದಿನ ನಿತ್ಯ ನೆಟ್ನಲ್ಲಿ ವಿಜಯವಾಣಿ -ವಿಜಯ ಕರ್ನಾಟಕ ಓದುವೆ ..
ಶುಭವಾಗಲಿ
\।/
In reply to ಉ: ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ... by venkatb83
ಉ: ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ...
ಹಲವು ಪತ್ರಿಕೆ ಪುಸ್ತಕಗಳು ಈಗ (ಬಹುಶ ಬಹು ದಿನಗಳಿಂದ ) ಈ ಪೇಪರ್ ಆಗಿ ನೆಟ್ನಲ್ಲಿ ಲಭ್ಯ -ಅದರಲ್ಲೂ ನೀವ್ ಹೇಳಿದ ಸುಧಾ , ಮಯೂರ ಸಹ ಹಾಗೆಯೇ ಹಲವು ದಿನ ಪತ್ರಿಕೆಗಳು ಸಹ ..ಸರಿ ನೀವು ಹೇಳಿದ್ದು. 2008 ರಲ್ಲಿ ನನಗೆ ಇಂಟರ್ನೆಟ್ ಮತ್ತು ಕಂಪ್ಯೂಟರ್ ಎಲ್ಲಾ ಹೊಸದು. ಇನ್ನೂ ಸುಧಾ, ಮಯೂರ ನೆಟ್ ನಲ್ಲಿ ಲಭ್ಯವಿರಲಿಲ್ಲ. ಈಗ ನನ್ನ ತಿಳುವಳಿಕೆ ಹೆಚ್ಚಾಗಿದೆ. ಪರವಾಗಿಲ್ಲ.
ಇನ್ನೂ ನಿಮ್ಮ ಕೈನಲ್ಲಿ ಹಿಡಿದು ಓದುವ ಅಭ್ಯಾಸದಲ್ಲಿ ಸಿಗುವ ಮಾಜದ ಬಗ್ಗೆ. ನಿಮ್ಮ ಮಾತನ್ನು ನಾನೇಕೆ ಎಲ್ಲರೂ ಅನುಮೋದಿಸುತ್ತೇವೆ. ಸರಿಯೆ. ನಿಮಗೆ ಸಮಾಧಾನವಾಯಿತೆ ? ಧನ್ಯವಾದಗಳು. ಶುಭರಾತ್ರಿ...