ಅಮೆರಿಕೆಯ ಹೌದಣ್ಣ
ವಂಚನೆ ಮತ್ತು ಸುಳ್ಳನ್ನು ಎಷ್ಟೇ ಸುಂದರವಾಗಿ ಪ್ರಸ್ತುತಪಡಿಸಿದರೂ ಅವು ಸತ್ಯವನ್ನು ಮರೆಮಾಚಲಾರದು. ಬ್ರಿಟನ್ನಿನ ಟೋನಿ ಬ್ಲೇರ್ ಈಗ ವಂಚಕ ಮತ್ತು ಕೊಲೆಗಾರ ಎಂದು ಬಣ್ಣಿಸಲ್ಪಡುತ್ತಿರುವುದು ಅಮೆರಿಕೆಯ ಹೌದಣ್ಣನಾಗಿ ಬುಶ್ ನ ಸಂಗಾತಿಯಾಗಿ ಇರಾಕ್ ದೇಶದ ಮೇಲೆ ಮಾಡಿದ ನಗ್ನ ಆಕ್ರಮಣ ಮತ್ತು ದಶಲಕ್ಷಕ್ಕೂ ಮೀರಿದ ನಾಗರೀಕರ ಹತ್ಯೆ ಕಾರಣದಿಂದ. ತನ್ನ ಇರಾಕ್ ದುಸ್ಸಾಹಸದ ಬಗ್ಗೆ ವಿವರಣೆ ನೀಡಲು ಚಿಲ್ಕಾಟ್ ಆಯೋಗದ ಮುಂದೆ ನಿಂತು ಸುಳ್ಳಿನ ಸರಮಾಲೆಯನ್ನೇ ಹೆಣೆಯುತ್ತಿರುವ ಬ್ಲೇರ್ ಈಗ ಹೇಳುತ್ತಿರುವುದು ಇರಾನ್ ದೇಶದ ಮೇಲೆ ಆಕ್ರಮಣ ಮಾಡಬೇಕೆಂದು. ಆಯೋಗದ ಎದುರು ಸ್ವಲ್ಪವೂ ಲಜ್ಜೆಯಿಲ್ಲದೆ ಯುದ್ಧವನ್ನು ಸಮರ್ಥಿಸುತ್ತಿದ್ದ ಬ್ಲೇರ್ ನನ್ನು ಗ್ಯಾಲೆರಿಯಲ್ಲಿದ್ದ ಜನ ಸುಳ್ಳ, ಕೊಲೆಗಡುಕ ಎಂದು ಕೂಗಿ ಮೂದಲಿಸಿದರು. ಆದರೆ ಅದರ ಪ್ರಯೋಜನವಾದರೂ ಏನು? ರಾಜಕಾರಣಿಗಳು ಮತ್ತು ರಾಜಕಾರಣವೇ ಹಾಗಲ್ಲವೇ? ಮಾಡಿದ ತಪ್ಪಿನ ಬಗ್ಗೆ ಪಶ್ಚಾತ್ತಾಪ ಇರಲಿ ಅದನ್ನು ಸಮರ್ಥಿಸುವ ದಾರ್ಷ್ಟ್ಯತನವನ್ನು ಬಹಳ ಧೈರ್ಯದಿಂದ ಮಾಡುತ್ತಾರೆ ಆಳುವ ಮಂದಿ. ೨೦೦೩ ರ ಇರಾಕ್ ಆಕ್ರಮಣಕ್ಕೆ ಕಾರಣನಾದ ಬ್ಲೇರ್ ಸದ್ದಾಮನ ಹತ್ತಿರ ಅಮೆರಿಕೆಯನ್ನೂ, ಮತ್ತು ಇತರೆ ಯಾವುದೇ ಐರೊಪ್ಯ ರಾಷ್ಟ್ರಗಳನ್ನು ಮಣಿಸುವಂಥ ಆಯುಧಗಳಿರಲಿಲ್ಲ ಎಂದು ಹೇಳಿದಾಗ ಆತ ಕೊಟ್ಟ ಉತ್ತರ, ಭವಿಷ್ಯದಲ್ಲಿ ಸದ್ದಾಮ್ ಅಪಾಯಕಾರಿಯಾಗಬಹುದು ಎಂದು. ಈತ ರಾಜಕಾರಣಿ ಮಾತ್ರವಲ್ಲ ಜ್ಯೋತಿಷಿ ಕೂಡ ಎಂದು ಸಾರಿದ ಬ್ಲೇರ್.
ಬುಶ್ ನ ಪ್ರತಿ ಕೆಲಸಕ್ಕೂ ತನ್ನ ಒಪ್ಪಿಗೆ ಕೊಡುತ್ತಿದ್ದ ಬ್ಲೇರ್ ಬಗ್ಗೆ ಬ್ರಿಟನ್ನಿನ ಪತ್ರಿಕೆಗಳು ಹಿಗ್ಗಾ ಮುಗ್ಗಾ ಟೀಕಿಸಿದ್ದವು. ಒಂದು ಪತ್ರಿಕೆಯಂತೂ ಬ್ಲೇರ್ ನನ್ನು ಬುಶ್ ನ ಸಾಕು ನಾಯಿ ಎಂದು ಗೇಲಿ ಮಾಡಿತ್ತು .
weapons of mass destruction (WMD) ಇದೆ ಎಂದು ವಿಶ್ವವನ್ನು ವಂಚಿಸಿದ ಬುಶ್ ಬ್ಲೇರ್ ಬಗ್ಗೆ ಈ ದುಷ್ಟರೀರ್ವರೂ ಹೇಳಿದ್ದು "words of mass deception" ಗೇಲಿ ಮಾಡುತ್ತಿದ್ದಾರೆ.
Comments
ಉ: "ಕುದುರೆ ಜೊತೆ ತಂಗಚ್ಚೀನೂ ಪೋಚಿ"