ಅಮೇರಿಕದಲ್ಲಿ ನನ್ನ ೨೬ನೇ ಥ್ಯ್ಂಕ್ಸ್ ಗಿವಿಂಗ್ ಡೇ ಮತ್ತು ಡಿನ್ನರ್
ಇದು ನನ್ನ ಮೊದಲ ಬರಹ! ಸಿರಿ ಕನ್ನಡದಿಂದ ಆರಂಭ! ಬರಹದ ಬದಲು ಡ್ಯೇರಿ ಅಥವ ಬೋಗಳೆ ಎಂದರೆ ಸರಿಯೇನೋ? ಅಮೇರಿಕದಲ್ಲಿ ನನ್ನ ೨೬ನೇ ಥ್ಯ್ಂಕ್ಸ್ ಗಿವಿಂಗ್ ಡೇ ಮತ್ತು ಡಿನ್ನರ್ : ನಾಲ್ಕು ದಿನದ ವಿಕೆಂಡ್ನ ಮೋದಲ ದಿನವಾದ್ದ್ರರಿಂದ ಬೆಳಿಗ್ಗೆ ಎದ್ದಾಗ ೮:೦೦ ಹಲ್ಲುಜ್ಜಿ ಎರಡು ಕಪ್ಪ್ ಫ಼ಿಲ್ಟರ್ (ಆಮೇರಿಕದಲ್ಲು) ನೀರು ಕುಡಿದ ಮೇಲೆ ಪ್ರಿತಿಯ ಪತ್ನಿಯಿಂದ ಕಾಫ಼ಿ ಸಮಾರಾದನೆ ಮತ್ತೆ ಎರಡು ಕಪ್ಪ್ ನೀರು ಕುಡಿದು ಗಡ್ಡ ಶೇವ್ ಮಾಡುವ ಹೋತ್ತಿಗೆ ೯:೦೦ ಗಂಟೆ. ದಿನ ನಿತ್ಯ ಪ್ರಕ್ರತಿ ನಿವಾರಣೆಗೆ ಸಿಂಹಾಸನದ ಮೇಲೆ ಕೂರಿ ಪಾಕ್ಕೆಟ್ಟು ಪಿಸಿಯಲ್ಲಿ (ವ್ಯೆರ್ಲೆಸ್ಸ್) ಅಂತ್ರಜಾಲದ ಸುದ್ದಿಯನ್ನು ಒದಿ ಮುಗಿಸುವ ವೇಳೆಗೆ ೯:೩೦ ಮತ್ತೆ ಸ್ನಾನ (ಮದ್ಯೆ ಗಣೇಶನಿಂದ ಗರುಡನವರೆಗೆ ದೇವರ ನಾಮ ಹಾಡಿ (ಕತ್ತೆಗಳು ಇಲ್ಲಿ ಇಲ್ಲ!) ಬಚ್ಚಲಿಂದ ಹೋರಬಂದಾಗ ೧೦:೦೫. ಏಲ್ಲರು ಇಲ್ಲಿ ಟರ್ಕಿಯನ್ನು ತಿಂದರೆ ನಾವು ಸಸ್ಯಹಾರಿಗಳಾದರಿಂದ ವಿಶೇಷ ಆಡುಗೆ - ಬೆಳಿಗ್ಗೆ ಉಪಹಾರಕ್ಕೆ ಜೋಳದ ರೋಟ್ಟಿ - ಲಟ್ಟಿಸಲು ಕಷ್ಟವಾದ್ದ್ರರಿಂದ ಸ್ವಲ್ಫ ಗೋದಿಹಿಟ್ಟನ್ನು ಬೆರಸಿ ತಯಾರು ಅದಕ್ಕೆ ನನ್ನ ಪತ್ನಿ ಫ಼ರ್ಸ್ಟ್ ಕ್ಲಾಸ್ ಎಣ್ಣೆಗಾಯಿ (ಈರುಳ್ಳಿ ಇಲ್ಲದಿರ - ನನಗೆ ಈರುಳ್ಳಿ ಆಗುವುದಿಲ್ಲ) ಮಾಡಿದಳು. ನಾನಂತು ೭ ರೋಟ್ಟಿ ಹೋಡೆದು ಟಿವಿಯಲ್ಲಿ ಎನು (ಕಾಮ್ಕೆಸ್ಟ್ ಕೆಬಲ್ ಸಿ ಒ ಎಮ್ ಸಿ ಎ ಎಸ್ ಟಿ ) ನೋಡಲಿಕ್ಕೆ ಇರಲಿಲ್ಲವಾದ್ದರಿಂದ ಮಕ್ಕಳಿಗೆ ಅವರ ಇಷ್ಟದ ಚಾನೆಲ್ ನೋಡಿ ಎಂದು ಹೇಳಿ ನಾನು ಪತ್ನಿಯೋಡನೆ ೧೧:೩೫ಕ್ಕೆ ಹೋಗಿ ಮಲಗೆದ್ದಾಗ ೨:೧೦ಕ್ಕೆ! ಲೆಪ್ ಟಾಪಿನಲ್ಲಿ ಅಂಚೆಯನ್ನು ನೋಡುತ್ತಿರುವಾಗ ಪತ್ನಿಯು ಬಿಸಿ ಬಿಸಿ ಕಾಫ಼ಿ (ಸಾಯಿಮಿಲ್ಕ್ ಮತ್ಥು ಚಿಕೋರಿ ಮಿಶ್ರಣದ ಫ಼್ರ್ಂಚ್ ಕಾಪಿ) ಕೋಟ್ಟಾಗ ಸ್ವರ್ಗ! ಮಕ್ಕಳಿಬ್ಬರ ಜಗಳ ಬಿಡಿಸಿ ನಾವಿಬ್ಬಿರು ಎರಡು ಮ್ಯೆಲಿ ನಡೆದು ಬಂದು ಡಿನ್ನರ್ ತಯಾರು ಮಾಡಲು ಶುರು ಆರ್ದಾಂಗಿಯವರಿಂದ (೪:೩೦ಗೆ). ೧೦ ವರ್ಷದ ಮಗಳು ಅವಳ ಸ್ಪೆಷಲ್ ಮಸಾಲ ಆಲುಗಡ್ಡೆಗಳನ್ನು (ಅವಳೆ ಅಲುಗಡ್ಡೆಯನ್ನು ಕತ್ತರಿಸಿ, ಎಣ್ಣೆ ೧/೨ ಟಿಚಮಚ ಮತ್ತು ಮೆಣಸಿನಪುಡಿ ಹಾಗು ಕರಿಮೆಣಸು ಬೆರಸಿ) ಮತ್ತು ಡೆಸರ್ಟ್ಗಗೆ ಸ್ಕೋನ್ಸ್ ಒವೆನ್ನಲ್ಲಿ ೪೨೫ ಡೀಗ್ರಿ(ಫ಼ರನಹೀಟ್) ೨೦ ನಿಮಿಷಕ್ಕೆ ಇಟ್ಟಳು. ೫:೫೫ಕ್ಕೆ ನಾವೆಲ್ಲರು ಊಟಕ್ಕೆ ಮೇಜಿಗೆ ಬಳಿ ನಿಂತು ಎಲ್ಲರು ಕ್ಯೆ ಹಿಡಿದು ದೇವರಿಗೆ ನಮಿಸಿ (ಗಣಪತಿ, ಲಕ್ಷ್ಮಿನರಸಿಂಹ - ಮನೆದೇವರು ಹಾಗು ಶ್ರೀರಾಮ,ಲಕ್ಶ್ಮಿ,ಸರಸ್ವತಿ,ಚಾಮುಂಡೆಶ್ವರಿಗೆ ಥ್ಯಾಂಕ್ಸ್ ಹೇಳಿ) ಕುಳಿತು ಕೆಂಪಕ್ಕಿಯ ಪಾಸ್ಟ್ವ(೧೫ ವರ್ಷದ ಮಗನಿಗೆ ಇಷ್ಟದ ಡಿಷ್) ಮತ್ತು ಪತ್ನಿಯ ಕ್ಯೆ ಚಳಕದ ಮಸಾಲ ತರಕಾರಿ (ಬ್ರೋಕೋಲಿ,ಕಾರೆಟ್ಟು) ಹಾಗು ಸ್ಟ್ರಿಂಗ್ ಬಿನ್ಸ್ (ಎಳೆ ಹುರುಳಿಕಾಯಿ ಕತ್ತರಿಸದೆ), ಮಸಾಲ ಆಲುಗಡ್ಡೆ ತಿಂದು ಸ್ಕೋನ್ ತಿನ್ನುವ ಹೋತ್ತಿಗೆ ಹೋಟ್ಟೆ ಬಾರವಾಗಿ ಟಿವಿ ಮುಂದೆ ಕುಳಿತು ಇ ಬರಹ ಶುರು ಮಾಡಿದೆ. ಥ್ಯಾಂಕ್ಸ್ ಟು ದಟ್ಸಕನ್ನಡ.ಕಾಂ,ಕನ್ನಡಪ್ರಭ,ಕನ್ನಡರತ್ನ.ಕಾಂ ಮತ್ತು ಇತರ ಕನ್ನಡ ವೆಬ್ಬ್ ಸ್ಯೇಟ್ಸ್ಗಗೆ - ಆಡುಗೆ ಕಾಲ್ಂಗೆ! ಮತ್ತು ಸಂಪದ.ನೆಟ್ ನನ್ನ ಮೋದಲ ಕನ್ನಡ ಬ್ಲಾಗ್ಸ್ ಪರಿಚಯಕ್ಕೆ! ಡಿಎಸ್ ವಿರಾಂ.