ಅಮ್ಮನಿಗೊಂದು ಪತ್ರ
ನನ್ನ ಪ್ರತಿ ಸುಖ ದುಃಖಗಳಲ್ಲೂ ಜೊತೆಗಿರುವೆ
ನಿನ್ನ ಋಣ ತೀರಿಸುವ ಪರಿಯಾದರೂ ಏನು? ಅರಿಯೆ ನಾ
ಏನು ಬೇಕು? ನಿಸ್ವಾರ್ಥ ಮನದಿಂದ "ಕಂದಾ ನೀ ಚೆನ್ನಾಗಿರು"
ಪರರಿಗಾಗಿ ಹಾರೈಸುವ ಮಹಾನ್ ಸಾಧ್ವಿ.
ನಿನಗಾಗಿ ಏನು ಬೇಡವೇ
ನೀವೆಲ್ಲಾ ಇರುವಾಗ ಮತ್ತೇನು ಬೇಕು ಹಸನ್ಮುಖಿಯಾಗಿ ಅಂದವಳು ನೀನು.
ಬಾಲ್ಯದಲ್ಲಿ ಬಿದ್ದಾಗ ನನಗಿಂತ ಮೊದಲು ಅತ್ತವಳು
ಹಸಿವಾದಾಗ ಬಚ್ಚಿಟ್ಟಿದ್ದನ್ನು ಸೆರಗಲ್ಲಿ ಮುಚ್ಚಿ ಕೊಡುತ್ತಿದ್ದವಳು
ದೇಹದ ಆರೋಗ್ಯದ ಪರಿವೆ ಇಲ್ಲೆದೆಯೇ ಮಕ್ಕಳಿಗೆಂದು ದುಡಿದವಳು
ಲವಲವಿಕೆಯಿಂದ ಓಡಾಡುತ್ತಾ ಉಣ ಬಡಿಸುತ್ತಿದ್ದವಳು
ನಿನ್ನಿಂದ ಕಲಿತ ದಾನ, ಧರ್ಮದ ಪಾಠಗಳು ಅವೆಷ್ಟೋ.
ಕಣ್ಣು ಮುಚ್ಚಿದಾಗ ಕಾಣುವ ನೀ. ನನ್ನ ಸರ್ವಸ್ವ
ನೀನಿಲ್ಲದ ಲೋಕ ಬೇಡವೇ ಬೇಡವೆನಿಸುತ್ತಿದೆ.
ನೀನು ಇತರರಂತೆ ಜರಿದು ದೂರವಿಟ್ಟಿದ್ದರೆ
ಚೆನ್ನಾಗಿರುತ್ತಿತ್ತು. ಈಗ ಅನ್ನುತ್ತಿದೆ ಮನಸು.
ಆದರೆ ನಿನ್ನ ಮೆಚ್ಚುಗೆಯ ನುಡಿಗಳು, ಬಿಸಿ ಆಲಿಂಗನ.
ಉತ್ತುಂಗ ಸ್ಥಾನಕ್ಕೆ ಏರಿಸಿರುವುದಂತೂ ಸತ್ಯ
ಅದನ್ನು ನೋಡಲು ನೀನೆ ಇಲ್ಲವೆ.
ಇನ್ಯಾಕೆ ಬೇಕು ಈ ಬಂಗಲೆ, ಕಾರು, ಹಣ, ಗೌರವ, ಜೀವನ
ನೀನೊಬ್ಬಳು ಇದ್ದಿದ್ದರೆ ನನಗದೇ ಸಾಕಾಗಿತ್ತು.
ನೀ ಯಾವತ್ತೂ ಹಿಂತಿರುಗಿ ಬರಲಾರೆ
ಇದು ಸತ್ಯ. ನಮ್ಮ ತಪ್ಪನ್ನು ಮನ್ನಿಸಿ
ಒಮ್ಮೆಯಾದರೂ ನನ್ನಲ್ಲಿಗೆ ಬರಬಾರದೇ?
ಖಂಡಿತಾ ನೀ ಇದ್ದಲ್ಲಿಗೆ ನಾನೇ ಬರುತ್ತೇನೆ
ತೊಡೆಯ ಮೇಲೆ ಮಲಗುವ ಮಹಾದಾಸೆ
ತಲೆ ನೇವರಸಿಕೊಳ್ಳುವ ಆಸೆ
ಬಾಲ್ಯದ ದಿನಗಳನ್ನು ಮತ್ತೊಮ್ಮೆ ನಿನ್ನಿಂದ ನೆನಪಿಸಿಕೊಳ್ಳುವ ಆಸೆ
ಅಮ್ಮಾ ನಾನು ಬರುತ್ತೇನೆ
ನಿನ್ನ ಜೊತೆ ಖಂಡಿತಾ ಸೇರುತ್ತೇನೆ.
ಇಲ್ಲ ಎನ್ನಬೇಡ ಅಮ್ಮಾ!
ಇಂತಿ ನಿನ್ನ ಮಗ
ಕೋಮಲ್
ಅಮ್ಮ ತೀರಿ ಸೆಪ್ಟಂಬರ್ಗೆ ಎರಡು ವರ್ಷ.
Comments
ಉ: ಅಮ್ಮನಿಗೊಂದು ಪತ್ರ
In reply to ಉ: ಅಮ್ಮನಿಗೊಂದು ಪತ್ರ by manju787
ಉ: ಅಮ್ಮನಿಗೊಂದು ಪತ್ರ
In reply to ಉ: ಅಮ್ಮನಿಗೊಂದು ಪತ್ರ by komal kumar1231
ಉ: ಅಮ್ಮನಿಗೊಂದು ಪತ್ರ
ಉ: ಅಮ್ಮನಿಗೊಂದು ಪತ್ರ
In reply to ಉ: ಅಮ್ಮನಿಗೊಂದು ಪತ್ರ by sudhichadaga
ಉ: ಅಮ್ಮನಿಗೊಂದು ಪತ್ರ
ಉ: ಅಮ್ಮನಿಗೊಂದು ಪತ್ರ
In reply to ಉ: ಅಮ್ಮನಿಗೊಂದು ಪತ್ರ by asuhegde
ಉ: ಅಮ್ಮನಿಗೊಂದು ಪತ್ರ
In reply to ಉ: ಅಮ್ಮನಿಗೊಂದು ಪತ್ರ by komal kumar1231
ಉ: ಅಮ್ಮನಿಗೊಂದು ಪತ್ರ
ಉ: ಅಮ್ಮನಿಗೊಂದು ಪತ್ರ
In reply to ಉ: ಅಮ್ಮನಿಗೊಂದು ಪತ್ರ by raghusp
ಉ: ಅಮ್ಮನಿಗೊಂದು ಪತ್ರ
ಉ: ಅಮ್ಮನಿಗೊಂದು ಪತ್ರ
In reply to ಉ: ಅಮ್ಮನಿಗೊಂದು ಪತ್ರ by kavinagaraj
ಉ: ಅಮ್ಮನಿಗೊಂದು ಪತ್ರ
ಉ: ಅಮ್ಮನಿಗೊಂದು ಪತ್ರ
In reply to ಉ: ಅಮ್ಮನಿಗೊಂದು ಪತ್ರ by gopinatha
ಉ: ಅಮ್ಮನಿಗೊಂದು ಪತ್ರ