ಅಮ್ಮಾ.. ಅಮ್ಮ... ಅಮ್ಮಾ.....ಆಅಅಅ....

ಅಮ್ಮಾ.. ಅಮ್ಮ... ಅಮ್ಮಾ.....ಆಅಅಅ....

ಅಮ್ಮಾ.. ಅಮ್ಮ... ಅಮ್ಮಾ.....ಆಅಅಅ....


ಈಗೊಂದೆರಡು ದಿನದ ಹಿಂದೆ, ಅಂದು ಸಂಜೆ ಸಹೋದ್ಯೋಗಿಗಳೊಡನೆ ಸಂಜೆಯ ವಿಹಾರ ಮುಗಿಸಿ ಮನೆಗೆ ಹಿಂದಿರುಗುವಾಗ, ಒಂದು ಉದ್ಯಾನವನದ ಮೂಲಕ ಬರುತ್ತಿದ್ದೆವು. (ದಿನವೂ ಹಾಗೆಯೇ ಬರುವುದು). ಆದರೆ, ಇಂದು ಒಂದು ಪುಟ್ಟ ಘಟನೆ(??) ನಡೆಯಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆಯಾಯಿತು. ಅದೇನದು, ಎಂದರೆ???

ಸುಮಾರು ೨ ರಿಂದ ೩ ವರ್ಷದ ಮಗು ಅಳುತ್ತಿದೆ.

ಅಪ್ಪ `ಅಳಬೇಡ` ಎನ್ನುತ್ತಿದ್ದಾರೆ.

ಮಗು: ನಾನು ಬಿದ್ದೆ. ಪೆಟ್ಟಾಯ್ತು.... ಅಮ್ಮಾ ... ಅಪ್ಪಾಅ..... ಅಳುತ್ತಿದೆ.

ಅಪ್ಪ: ಅಳಬೇಡ. ಜಾಸ್ತಿ ಪೆಟ್ಟಾಗಿಲ್ಲ. ಬಾ ಎತ್ಕೊಂಡು ಹೋಗ್ತೀನಿ. ಅಳಬೇಡ. ಆತನ ಸಾಂತ್ವನ ಮಗುವಿಗೆ.

ಆದರೆ,
ಮಗುವಿನ ಮುಗ್ಧ ಪ್ರಶ್ನೆ: ನಾನು ಬಿದ್ದೆ. `ಯಾಕೆ ಅಳಬಾರದು'? ನಾನು . ನೀನೇ ಬೀಳಿಸಿದ್ದು. ನೀನೇ ಸರಿಯಾಗಿ ಕೈ ಹಿಡಕೊಳ್ಳದೆ ಬೀಳಿಸಿದ್ದು.

ಅಪ್ಪ: ಸರಿ. ಆದರೆ, ಅಳಬೇಡ. ಮನೆಗೆ ಹೋಗೋಣ. ಔಷಧಿ ಹಾಕ್ತೀನಿ. (ದಾರಿಯಲ್ಲಿ ನಡೆಯುತ್ತ.. ಬರುತ್ತಿದ್ದಾರೆ).

ಮಗು: ಯಾಕಪ್ಪಾ `ಅಳಬಾರ್‍ದು'? ಅಮ್ಮಂಗೆ ಹೇಳು, 'ನೀನೇ ಬೀಳಿಸಿದ್ದು' ಅಂತ. (ಅಂದರೆ, ಅಪ್ಪನೇ ಬೀಳಿಸಿದ್ದು...)

ಹೀಗೆ ಅಪ್ಪ, ಮಗಳ ಸಂಭಾಷಣೆ ಸಾಗುತ್ತಾ ಇತ್ತು. ನಾವು ಈ ಮಗುವಿನ ಮಾತನ್ನು ಕೇಳುತ್ತಾ...ಆ ಪ್ರಶ್ನೆಗಳಿಗೆ, ಉತ್ತರಕ್ಕೆ ನಗುತ್ತಾ ಮನೆಯ ಕಡೆಗೆ ಹೊರಟಿದ್ದೆವು.

***

ಮಕ್ಕಳ ಮುಗ್ಧಪ್ರಶ್ನೆಗಳಿಗೆ ಉತ್ತರ ಕೊಡೋದು ಹೇಗೆ? ನನ್ನ ತಲೆಯೊಳಗೆ ಪ್ರಶ್ನೆಯಾಗಿಯೇ ಉಳಿಯಿತು!

Rating
No votes yet