ಅರಮನೆ ಮೈದಾನದಲ್ಲಿ- ಆರೋಗ್ಯ ವಸ್ತು ಪ್ರದರ್ಶನ-ಚೆನ್ನಾಗಿದೆ.

ಅರಮನೆ ಮೈದಾನದಲ್ಲಿ- ಆರೋಗ್ಯ ವಸ್ತು ಪ್ರದರ್ಶನ-ಚೆನ್ನಾಗಿದೆ.

 ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಆಯುಷ್ ಇಲಾಖೆ ಜಂಟಿಯಾಗಿ ನಡೆಸುತ್ತಿರುವ "ಆರೋಗ್ಯ ವಸ್ತು ಪ್ರದರ್ಶನ" ಗಾಯತ್ರಿ ವಿಹಾರ, ಅರಮನೆ ಮೈದಾನದಲ್ಲಿ ಇಂದಿನಿಂದ ಆರಂಭವಾಗಿದೆ. ಸಂಜೆ ನನ್ನ ಕೆಲಸ ಮುಗಿದ ಮೇಲೆ ನೆಟ್ಟಗೆ ಅರಮನೆ ಮೈದಾನಕ್ಕೆ ಹೋದೆನು. ಹೋಗುವಾಗ ಟ್ರಾಫಿಕ್ ಪ್ರಾಬ್ಲಂ ಬಿಟ್ಟರೆ, ಅರಮನೆ ಮೈದಾನದಲ್ಲಿ ಪಾರ್ಕಿಂಗ್‌ಗೆ ಆರಾಮ ಸ್ಥಳವಿದೆ.

ಸರ್ಕಾರಗಳ ಇಲಾಖೆಗಳು ನಡೆಸುತ್ತಿರುವುದರಿಂದ ಇನ್ನೂ ಮಳಿಗೆಗಳು(೩೦೦!) ಆರಂಭವಾಗಿದೆಯೋ ಇಲ್ಲವೋ? ಆಗಿದ್ದರೆ ಎಷ್ಟರ ಮಟ್ಟಿಗೆ ಕಳಪೆಯಾಗಿರಬಹುದು ಎಂದು ಆಲೋಚಿಸುತ್ತಾ ಹೋದೆ! ಆಶ್ಚರ್ಯ!! ನನ್ನ ಆಲೋಚನೆಗೆ ವಿರುದ್ಧವೇ ಅಲ್ಲಿತ್ತು. ಸುಂದರ ವ್ಯವಸ್ಥೆ. ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಹೋಮಿಯೋಪತಿಗಳ ಮಳಿಗೆಗಳು ಒಂದಕ್ಕಿಂತ ಒಂದು ಸೂಪರ್. ಮಳಿಗೆಗಳಲ್ಲಿ ಪ್ರತಿಯೊಬ್ಬರು ವಿವರಿಸುವುದರಲ್ಲಿ ಉತ್ಸುಕರಾಗಿದ್ದರು.ಅವರು ಕೊಟ್ಟ ವಿವರಗಳನ್ನುಳ್ಳ ಪೇಪರ್/ಕೈಪಿಡಿಗಳನ್ನೆಲ್ಲಾ ಓದಲು ಇನ್ನು ಒಂದು ವಾರ ಬೇಕು!

ಹಾಗೇ ಅನೇಕ ಸಸ್ಯಗಳನ್ನು (ಹೆದರಬೇಡಿ..ಅದರ ಬಗ್ಗೆ ಬರೆಯುವುದಿಲ್ಲ.. :) ) ಸಂಗ್ರಹಿಸಿಟ್ಟಿದ್ದಾರೆ.

ಸಮಯದ ಅಭಾವವಿದ್ದುದರಿಂದ ಬೇಗನೆ ಹೊರಟು ಬಂದೆ. ಆಸಕ್ತರಿಗೆ ತಿಳಿಯಲು ಬಹಳಷ್ಟು ಇದೆ.

೧೩-೧೨-೨೦೧೦ರವರೆಗೆ ಪ್ರದರ್ಶನವಿದೆ.

-ಗಣೇಶ.

Rating
No votes yet

Comments