ಅರಸನ ಮಗನಾಗಿದ್ದೇ ತಪ್ಪಾಯಿತಾ...?

ಅರಸನ ಮಗನಾಗಿದ್ದೇ ತಪ್ಪಾಯಿತಾ...?

ನಮಸ್ಕಾರ ಸ್ನೇಹಿತರೇ...

ಸ್ವಲ್ಪ ದಿನದಿಂದ ಯಾವ ದಿನಪತ್ರಿಕೆ ತೆರೆದರೂ, ಯಾವ ಕನ್ನಡ ವೆಬ್ ಸೈಟ್ ತೆರೆದರೂ ಅಲ್ಲಿ ಕಾಣಸಿಗುತ್ತಿದ್ದುದು "ರಾಜ್-The Show Man", ಚಿತ್ರದ ಹಾಡುಗಳ ಬಗ್ಗೆ ಮತ್ತು ದಾಖಲೆ ಮಾರಟ ಕಂಡ ಬಗ್ಗೆ. ಇದನ್ನು ನೋಡಿದಾಗ ಬಹಳ ಖುಷಿಯಾಯಿತು. ಯಾಕೆಂದರೆ ಬಹಳ ವರ್ಷಗಳ("ಜೋಗಿ" ಚಿತ್ರದ) ನಂತರ ಹಾಡುಗಳಿಗೆ ಈ ರೀತಿಯ ಒಂದು ಬೇಡಿಕೆ ಬಂದಿರುವುದು "ರಾಜ್" ಚಿತ್ರಕ್ಕೆ ಮಾತ್ರ. ಇದಕ್ಕೆ ಕಾರಣ ಪುನೀತ್ ರಾಜ್ ಕುಮಾರ್ ಅವರಿಗಿರುವ craze ಹಾಗು ನಿರ್ದೇಶಕ ಪ್ರೇಮ್ ಅವರ ಪ್ರಚಾರ ರೀತಿ ಮತ್ತು ಉತ್ತಮ ಹಾಡುಗಳನ್ನು ಹೊರತೆಗೆದಿರುವ ಅವರ ಕಾರ್ಯವೈಖರಿ ಹಾಗು ಹರಿಕ್ರಿಷ್ಣ ಅವರ ಸಂಗೀತದ ಮೋಡಿ.
ಹಾಡುಗಳಿಂದ ಚಿತ್ರದ ಬಗ್ಗೆ ಕುತೂಹಲ ಇಮ್ಮಡಿ ಗೊಂಡಿರುವುದಂತೂ ನಿಜ.

ಈಗ ವಿಷಯಕ್ಕೆ ಬರೋಣ... ಒಮ್ಮೆ ಸುವರ್ಣ ವಾಹಿನಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಸಂದರ್ಶನ ಬರಿತ್ತಿತ್ತು. ನಿರೂಪಕಿ ಪುನೀತ್ ಅವರ ಚಿತ್ರರಂಗ ಪ್ರವೇಶವಾದ ಸಂದರ್ಭದ ಬಗ್ಗೆ ಕೇಳಿದರು. ಆಗ್ ಪುನೀತ್ ಉತ್ತರ ಹೀಗಿತ್ತು, "Actually ಅಣ್ಣಾವ್ರ ಮಗ ಅನ್ನೋ credit ಗಿಂತ, disadvantage ಜಾಸ್ತಿ ಇತ್ತು, ಯಾಕೆಂದರೆ ಜನ ನಮ್ಮ ಅಣ್ಣಾವ್ರ ಮಗ ಮಾಡಿದಾನೆ ನೋಡೋಣ ಅನ್ನೋದಕ್ಕಿಂತ, ಹೇಗೆ ಮಾಡಿದಾನೆ ನೋಡೋಣ ಅಂತ ಚಿತ್ರಕ್ಕೆ ಬರ್ತಿದ್ರು. ಚೆನ್ನಾಗಿ ಮಾದಿದ್ರೆ ತೊಂದರೆ ಇಲ್ಲ ಆದ್ರೆ ಚೆನ್ನಾಗಿ ಮಾಡಿಲ್ಲ ಅಂದ್ರೆ, ತು ಏನಪ್ಪ ಅಂತ ತಂದೆಗೆ ಇಂತ ಮಗನಾ ಅಂತ ಅಂದುಬಿಡ್ತಾರೇನೋ ಅನ್ನೋ ಭಯ ಇತ್ತು."
No doubt Puneeth Raj Kumar performed well and won and became highest paid actor in KFI. ಇವತ್ತೂ ಸಹ ಪುನೀತ್ ರಾಜ್ ಕುಮಾರ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ಬಲ್ಲ ಮೂಲಗಳ ಪ್ರಕಾರ ಅವರ ಈಗಿನ ಸಂಭಾವನೆ 2.5 ಕೋಟಿ.
ವಿಪರ್ಯಾಸ ಅಂದರೆ, ಅಂದು "ಅಪ್ಪು" ಚಿತ್ರ ಬಂದಾಗ ತುಂಬಾ ಜನ(Dr || ರಾಜ್ ಯೇತರ ಅಭಿಮಾನಿಗಳು) ಹೇಳುತ್ತಿದ್ದುದು ಇವರ ಆಟ ಎಲ್ಲ ಅಣ್ಣಾವ್ರು ಬದುಕಿರೋವರೆಗು ಅಷ್ಟೆ, ಅಮೇಲೆ ಇವರನ್ನ ಕೇಳೋರೆ ಇರೊಲ್ಲ ಅಂತ. ೩ ವರ್ಷಗಳ ಹಿಂದೆ ಅಣ್ಣಾವ್ರು ಸ್ವರ್ಗಾಸ್ತವಾದರು. ಆದರೆ ಈಗಲು ಪುನೀತ್ ಅಗ್ರಸ್ಥಾನದಲ್ಲೆ ಇದಾರೆ. ಪುನಹ ಜನರ ಮಾತು ಬದಲಾಯಿತು. ಇದೆಲ್ಲ ಪಾರ್ವತಮ್ಮ ಇರೋವರೆಗು ಅಷ್ಟೆ ಅಂತ. ಕೆಲವರು ಬೇರೆ ರೀತಿಯೇ ಹೇಳಿಕೆಗಳನ್ನ ಹೇಳ್ತಾರೆ.
ನಿಜ, ಪುನೀತ್ ಸ್ಪುರದ್ರೂಪಿ ನಟ ಅಲ್ಲ. ಅದನ್ನ ಬಹಿರಂಗವಾಗಿ ಅವರೆ "ದುನಿಯಾ ಚಿತ್ರದ 100 days ಸಮಾರಂಭದಲ್ಲಿ ಹೇಳಿದ್ದಾರೆ".
ಆದರೂ "ದುನಿಯಾ" ಚಿತ್ರದ ನಟ ವಿಜಯ್ ಎಷ್ಟು ಸುಂದರವಾಗಿದ್ದಾರೆ? ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಎಷ್ಟು ಸುಂದರವಾಗಿದ್ದಾರೆ?
ಶಂಕರ್ ನಾಗ್? ಪ್ರಭಾಕರ್, ಅಂಬರೀಷ್? ಇನ್ನೂ ತುಂಬಾ ನಟರಿದ್ದಾರೆ...
ಇವರೆನ್ನೆಲ್ಲಾ ಅಪ್ಪಿ, ಒಪ್ಪಿರೋವಾಗ, ಪುನೀತ್ ರಜ್ ಕುಮಾರ್ ಗೆ ಏಕೆ ಈ ಮಲತಾಯಿ ದೋರಣೆ?
ರಾಜನ ಮಗನಾಗಿ ಹುಟ್ಟಿದ್ದೆ ಶಾಪವಾಯಿತೆ? ನಟನೆಯಲ್ಲಿ ಇನ್ನೂ ಪಳಗಬೇಕು ನಿಜ, ಆದರೆ ಇತ್ತೀಚಿನ ಚಿತ್ರಗಳಾದ "ಮಿಲನ", "ವಂಶಿ" ನೋಡಿದರೆ ಅವರ ಅಭಿನಯದಲ್ಲಿ ಬೆಳವನಿಗೆ ನೋಡಬಹುದು.....
ನೃತ್ಯದಲ್ಲಿ, ಸಾಹಸ ಸನ್ನಿವೇಶಗಳಲ್ಲಿ ಇವರನ್ನು ಹಿಂದಿಕ್ಕಲು ಸಾಧ್ಯವಿಲ್ಲ..

ನಮ್ಮ ಜನರೇಕೆ ಹೀಗೆ?????
ಜನಕ್ಕಿಂತ ಹೆಚ್ಚಾಗಿ ಜನರ ಮತ್ತು ನಟರ ಮದ್ದ್ಯೆ ಇರುವ ಮಾದ್ಯಮದವರೇಕೆ ಹೀಗೆ?????

ಸಂಪದದಲ್ಲಿ ನನಗೆ ಇಲ್ಲಿಯವರೆಗೆ ಚಲನಚಿತ್ರಗಳ ಕುರಿತಾದ ಲೇಖನಗಳು ಹೆಚ್ಚಾಗಿ ಕಂಡುಬಂದಿಲ್ಲ.
ಸಂಪದದಲ್ಲಿ ಏಕೆ ಹೀಗೆ? ಚಲನಚಿತ್ರ ಕನ್ನಡ ಭಾಷೆಯನ್ನು ಬಿಂಬಿಸುವ ಅತಿ ಹೆಚ್ಚು ಪ್ರಬಲವಾದ ಮಾಧ್ಯಮ. ಅದಕ್ಕೇಕೆ ನಿರ್ಲಕ್ಷ್ಯ???
"ರಾಜ್-The Showman" ಚಿತ್ರದ ಹಾಡುಗಳ ವಿಮರ್ಶೆ ಏಕಿಲ್ಲ? (ನನಗೆ ಸಂಪದದಲ್ಲಿ ಇದುವರೆಗೆ ಕಂಡುಬಂದಿಲ್ಲ, ಬಹುಶಹ ನನಗೆ ಹುಡುಕಲು ಬಂದಿಲ್ಲವಾದರೆ, ಎಲ್ಲರೂ ದಯವಿಟ್ಟು ಕ್ಷಮಿಸಿ).....
ಬಿಡುಗಡೆಯಾಗಿತ್ತಿರುವ ಚಿತ್ರಗಳ ವಿಮರ್ಶೆಗಳಿಲ್ಲ... ಚಿತ್ರರಂಗವನ್ನೇಕೆ ಕಡೆಗಣಿಸುತ್ತಿದೆ ಸಂಪದ?????

Rating
No votes yet

Comments