ಅರುಣನ ಹಾಡು
ಬೆಳಕಿನ ಬೆಳಗು
ಹರಿದಿದೆ ನೋಡು
ಅರುಣನ ಕಾಂತಿಗೆ
ಹರಿಷಿನ ಜೋಡು
ಬೆಳಕಿನ ಬೆಡಗೇ
ಇಳಿದೆದೆ ನೋಡು
ಹಕ್ಕಿಗಳುಲಿದಿವೆ
ಉದಯದ ಹಾಡು
ಹಿಮಮಣಿ ಮಿನುಗಿದೆ
ಚುಮುಚುಮು ಚಳಿಚಳಿ
ಸುಮಗಳು ಅರಳಿವೆ
ಘಮಘಮ ಪರಿಮಳ
ರವಿರಥ ಹರಿದಿದೆ
ಬಾನಿನ ಮೇಲೆ
ಭುವಿಜನ ನಡೆಸಿದೆ
ಬದುಕಿನ ಲೀಲೆ
ಅರಳಿದ ಪ್ರೀತಿಗೆ
ಬದುಕಿನ ಕನಸು
ಬದುಕಿನ ಬಂಡಿಗೆ
ಬೆವರಿನ ದಿರಿಸು
ಸುಡುಸುಡು ಬಿಸಿಲಿಗು
ಬಗ್ಗದ ಹುರುಪು
ಹನಿಹನಿ ಮಳೆಯಲು
ಕುಗ್ಗದ ಬಿಸುಪು
ಮರೆಯಾದರು ಆ ರವಿ
ಸಂಜೆಯಲಿ
ಮರಳುವನುದಯದಿ
ಬೆಳಕಿನಲಿ
ಕಾಯುವ ಈ ಕವಿ
ಆಸೆಯಲಿ.
Rating