ಅರ್ಥವಾಗದ........

ಅರ್ಥವಾಗದ........

ವಿನ್ಯಾಸ(Design)
ಒಂಥರಾ ಗೋಮುಖ ಗಾರ್ದಭ.

ತಪ್ಪು (Segmentation Fault)
ಹನ್ನೊಂದನೇ Signaಲು ತಿವಿ-ತಿವಿದು ಹೇಳಿದ್ದು, ಅದು ನಿನ್ನದಲ್ಲ ಅಥವಾ ಅಲ್ಲೇನೂ ಇಲ್ಲ ಅಂತ...........

ಭ್ರಷ್ಟಾಚಾರ (Corruption)
ಸ್ಮ್ರುತಿಯನ್ನು ಮನಬಂದಂತೆ ಉಪಯೋಗಿಸಿದಾಗ ಎಲ್ಲರೂ ಬಡಬಡಿಸುವ ಶಬ್ದ.

ಸಂಗ್ರಹಿಸುವಲ್ಲಿನ ತಪ್ಪುಗಳು (Compilation Error)
ನೆಗಡಿಯಾದಾಗಿನ ತೆಳು ಸಿಂಬಳದಂತೆ, ಒರೆಸಿಕೊಂಡರು ನಿಲ್ಲದಿರುವವು.

ಎಚ್ಚರಿಕೆ (Warning)
Errorಗಳನ್ನ ಕಡೆಗಣಿಸಿ ಬರೀ ಇವನ್ನೇ ಸಾಲ್ವಿಸಲು ತಿಣುಕುವ ’ತಂಡ’ಮೇಟು.

ಕೊಂಡಿ ಹಾಕುವಾಗಿನ ತಪ್ಪುಗಳು(Linking Errors)
Girlfriend ಫೋನಿಸಿದಾಗ ಕಟ್ ಮಾಡುವ Boyfriend ಅಥವಾ vice-versa ಅಥವಾ ರಾಂಗ್ ನಂಬರ್.

ಸಂವಹನೆ (Communication )
ಪ್ರಕ್ರಿಯೆ-ಪ್ರಕ್ರಿಯೆಗಳ ಮತ್ತು ದಾರ-ದಾರಗಳ ನಡುವೆ ಎಂದೂ ನೆಟ್ಟಗೆ ಏರ್ಪಡದ್ದು.

ಅರ್ಥವಿಲ್ಲದ್ದು (Undefined)
ಓಡುತ್ತಿರುವುದು ಒಮ್ಮೆಲೆ dump ಯಾಕೆ ಹೊಡೆದದ್ದು, dump ಹೊಡೆಯೋದು ಖರೆ ಆಗಿದ್ರ ಒಡಿದ್ದ್ಯಾಕೆ...? (ಕೈಕೊಟ್ಟ ಪ್ರೇಯಸಿಯ ನೆನಪಿಸುವಂತದ್ದು).

ಕೋಡ್(CODE)
"ನನ್ನದಲ್ಲಾ........" ಅಂತ ಕೂಗಿ ಹೇಳಬೇಕೆನಿಸಿರುವಂತಿರುವುದು.

ಪಾಪ (ನಿಜಕ್ಕೂ ಪಾಪ ಅನ್ನಿಸ್ತತಿ )
Client ಅದನ್ನ ತೆಗೆದುಕೊಂಡೊಯ್ಯುವಾಗ..,(ಆಮೇಲೆ ಪಾಪದ ಫಲ ಅವನುಣ್ಣುವಾಗ....)

ಕರ್ಮ(ಪಾಪ ಮಾಡದೇ ಅನುಭವಿಸುವುದು)
ಕೋಡು-ಕಟ್ಟೆ ಗೊತ್ತಿಲ್ದೇ, ಬರೆದಿರೋರಿಗೆ ಶಾಪ-ಶಾಪ ಹಾಕುವ ಮೆಂಟೇನಿಗ.

ದ್ವಂಧ(confusion)
ಏನೋ ಬರಿಯಾಕ ಹೋಗಿ ಏನೇನೋ ಬರ್ದೆ ಅಂತ (ಇದನ್ನ ಮತ್ತ ofcourse ಕೋಡನ್ನ...)

Release ಐತ್ರಲೇ....... ಅಂತ ಕೂಗುವ ಗುರುವನ್ನು, ’while(1)’ ಲೂಪಲ್ಲಿ ಹಾಕಿ, ಈ ಕಡೆ ಬರ್ಲಿಲ್ಲಂಗ ಮಾಡಿ ಬರಿದಿರದು ;) .......

Rating
No votes yet

Comments