ಅರ್ಬನ್ ಲ್ಯಾಡ್ಸ್
ಇತ್ತೀಚೆಗೆ ’ಅರ್ಬನ್ ಲ್ಯಾಡ್ಸ್’ ಎಂಬ ರಾಕ್ ಸಂಗೀತದ ಕನ್ನಡ ಹಾಡನ್ನು ಯಾರೋ ಕಳಿಸಿದ್ದರು.
ಇದರ ಸಿ.ಡಿ ಯೂ ಇತ್ತೀಚೆಗೆ ಬಿಡುಗಡೆಯಾಯಿತೆಂದು ವಿ.ಕ.ದಲ್ಲಿ ಓದಿದೆ. ಉತ್ತರ ಕರ್ನಾಟಕ/ದ.ಕರ್ನಾಟಕ ಶೈಲಿಯ ಕನ್ನಡಗಳನ್ನು ಬಹಳ ಪ್ರಾಸಬದ್ಧವಾಗಿ ಈ ಹಾಡಿನಲ್ಲಿ ಬಳಸಿದ್ದಾರೆ.
ನನಗಂತೂ ಹಾಡನ್ನು ಕೇಳಿ ಬಹಳ ಇಂಪ್ರೆಸ್ ಆಯಿತು. ಕನ್ನಡದಲ್ಲಿ ಇಂತಹ ಪ್ರಯೋಗ ನಡೆದಿರುವುದು ನೋಡಿ ಖುಷಿಯಾಯಿತು. ಇಂತಹ ಹಾಡುಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬಂದು ನಮ್ಮೂರಿನ ಹೈಟೆಕ್ ಮಾಲ್ ಗಳಲ್ಲಿ, ಕಾಫಿ ಡೇಗಳಲ್ಲಿ, ಪಿಜ್ಜಾ ಹಟ್ ಗಳಲ್ಲಿ ಇಂತಹ ಕನ್ನಡ ಸಂಗಿತಗಳು ಕೇಳಿಬರಬೇಕು.
ಕೆಲವು ವೇಳೆ ರಾತ್ರಿಪಾರ್ಟಿಗಳಲ್ಲಿ ಕಂಠಿ ಚಿತ್ರದ ’ಕಮಲಾ..’ ಹಾಡುಗಳನ್ನು ಕೇಳಿದ್ದೆ. ಇನ್ನು ಮುಂದೆ ಹೊಸಪ್ರಯೋಗಗಳು ಗುರುಕಿರಣ್ ಗಳು, ಮನೋಮೂರ್ತಿಗಳಿಗಷ್ಟೇ ಸೀಮಿತವಾಗದೆ ನಮ್ಮ ಓರಗೆಯ ಪ್ರತಿಭಾವಂತ ಹುಡುಗರೂ ಇಂತಹ ಹಾಡುಗಳನ್ನು ಸೃಷ್ಟಿಸಲಿ.
Rating