ಅಲೆದಾಟ

ಅಲೆದಾಟ

ಭಾವನೆಗಳ ಹೂದೋಟದಲ್ಲಿ ಬಯಕೆಯ
ಬೇಲಿಯೊಳಗೆ ವಿಹರಿಸುತಿರುವೆ ನಾನು

ಮಕರಂದ ಹೀರಲು ಬರುವ ದುಂಬಿಯಂತೆ
ಅಲೆಯುತಿರುವೆ ನೀನು

ಕಡಲ ಕಿನಾರೆಯಲಿ ಹೆಜ್ಜೆಗಳನಿಡುತಾ
ಸಾಗುತಿರುವೆ ನಾನು

ನೆನಪುಗಳ ಕಡಲಿನಲಿ
ಅಲೆಗಳಂತೆ ಅಪ್ಪಳಿಸುತಿರುವೆ  ನೀನು

ಪಯಣದ ಹಾದಿಯಲಿ ಸಂಚಾರಿಯಂತೆ
ಸಾಗುತಿರುವೆ ನಾನು

ದಾರಿಯಲಿ ಸಿಗುವ ಝರಿಯಂತೆ
ಬಂದು ಹೋಗುತಿರುವೆ ನೀನು

ಎಲೆಯ ಮೇಲಿರುವ
ಇಬ್ಬನಿಯಾಗಿರುವೆ ನಾನು

ಜಾರಿ ಬೀಳುವ ಆ ಹನಿಗೆ
ಕೈಯಾಗು ನೀನು

Rating
No votes yet

Comments