ಅಲೆಮಾರಿಗೆ
No man can cross a river twice.
ಕಾಲ ಹರಿಯುತ್ತದೆ
ಸರಿಯುತ್ತದೆ ನದಿಯಂತೆ
ಹರಿವ (ದ) ನದಿಯನು ದಾಟಿದೆ
ಎನ್ನುವ ಮಾತಿಗೇನು ಅರ್ಥ ?
ಅಲೆಮಾರಿ ನಿನಗೆ ನಿಂತ ಕಾಲ(ಲು)
ನೆಲವೆಲ್ಲ ಬರೀ ಹಗಲುಗನಸು
ನೆಲೆ ನಿಲ್ಲುವ ಪರಿ ಗೊತ್ತಿಲ್ಲದ ಮೇಲೆ
ಸ್ಥಾವರಕ್ಕೆ ಅಳಿವಿರಲೆಬೇಕಲ್ಲ …
ಈ ಮಣ್ಣ ಕಣ್ಣಲ್ಲೇನು ಕಂಡೆ?
ಕ್ಷಣಿಕತೆಯ ಕ್ಷಣ ಕಾಡುವ ಮಾಯೆಯನ್ನೆ?
ಕೈಚಾಚಿದಷ್ಟೇ ಆಕಾಶ, ಬೊಗಸೆಯಷ್ಟೇ ನೀರು
ಗಡಿಯಾರದಂಗಡಿಯ ಮುಂದೆ ಕಣ್ಕಾಪು
ಕಟ್ಟಿದ ಕುದುರೆಗೆ ಚಾಟಿ ಏಟಿನ ಗೀರು….
Rating
Comments
ಉ: ಅಲೆಮಾರಿಗೆ