ತನ್ನ ಒಡಹುಟ್ಟಿದವರಲ್ಲಿ ಅಲ್ಯೋಶಾ ಕಿರಿಯವನು. ಅವನಿಗೆ "ಮಡಕೆ" ಅನ್ನೋ ಅಡ್ಡಹೆಸರಿತ್ತು. ಕಾರಣ ಇಷ್ಟೆ!! ಅವನ ಅಮ್ಮ ಚರ್ಚಿನ ಅಧಿಕಾರಿಯೊಬ್ಬರ ಮನೆಗೆ ಹಾಲು ಕೊಟ್ಟುಬಾರೋ ಅಂತ ಹಾಲಿನ ಮಡಕೆ ಕೊಟ್ಟಿದ್ದರೆ, ಅವನು ದಾರಿಯಲ್ಲಿ ಮುಗ್ಗರಿಸಿ ಅದನ್ನು ಒಡೆದುಹಾಕಿದ್ದ. ಇದಕ್ಕಾಗಿ ಅವನಮ್ಮ ಅವನನ್ನು ಸರಿಯಾಗಿ ಚಚ್ಚಿದ್ದಷ್ಟೇ ಅಲ್ಲ, ಹಳ್ಳಿಯ ಹುಡುಗರೂ ಅವನನ್ನು ಈ ಕಾರಣಕ್ಕೆ ಅವನನ್ನು "ಮಡಕೆ" ಅಂತಲೋ, "ಮಡಕೆ ಅಲ್ಯೋಶಾ" ಅಂತಲೋ ಕರೆಯೋಕ್ಕೆ ಶುರು ಮಾಡಿದರು. ಅವನಿಗೆ ಈ ಅಡ್ಡಹೆಸರು ಬಿದ್ದಿದ್ದು ಹೀಗೆ!!
ಅಲ್ಯೋಶಾ ಒಬ್ಬ ಸಣಕಲ ಹುಡುಗ. ಜೊತೆಗೆ ಜೋಲುಕಿವಿ ಬೇರೆ! ಅವನ ಕಿವಿಗಳು ಒಳ್ಳೆ ರೆಕ್ಕೆಯ ಹಾಗೆ ಚಾಚಿಕೊಂಡಿದ್ದವು. ಸಾಲದ್ದಕ್ಕೆ ಡೊಣ್ಣೆ ಮೂಗು! "ಅಲ್ಯೋಶಾನ ಮೂಗು ಕಂಬದಮೇಲಿನ ಕುಂಬಳಕಾಯಿ ಇದ್ದಹಾಗಿದೆ" ಅಂತಲೂ ಹಳ್ಳಿಯ ಪಡ್ಡೆ ಹೈಕಳು ಚುಡಾಯಿಸುತ್ತಿದ್ದವು.
ಅವನ ಹಳ್ಳಿಯಲ್ಲಿ ಒಂದು ಶಾಲೆಯೂ ಇತ್ತು. ಓದೋ ಬರೆಯೋ ಅಂಥ ವಿದ್ಯೆ ಅವನಿಗೆ ಸರಾಗವೇನೂ ಆಗಲಿಲ್ಲ. ಜೊತೆಗೆ ಓದೋಕ್ಕಾದರೂ ಪುರಸೊತ್ತೆಲ್ಲಿತ್ತು? ಅವನ ಪಟ್ಟಣದ ವ್ಯಾಪಾರಿಯೊಬ್ಬನಲ್ಲಿ ಕೆಲಸಕ್ಕಿದ್ದ. ತಾನಿನ್ನೂ ಚಿಕ್ಕವನಿದ್ದಾಗಲೇ ಅಲ್ಯೋಶಾ ಅಪ್ಪನಿಗೆ ನೆರವಾಗುವುದಕ್ಕೆ ಶುರುಮಾಡಿದ್ದ. ಅವನಿಗೆ ಬರೀ ಆರು ವರ್ಷವಾಗುವ ಹೊತ್ತಿಗೆ ತನ್ನ ತಂಗಿಯ ಜೊತೆಗೆ ಕಾವಲಿನಲ್ಲಿ ತಮ್ಮ ಮನೆಯ ದನ-ಕರು, ಕುರಿ ಅಂತ ನೋಡಿಕೊಳ್ಳುವಷ್ಟಾಗಿದ್ದ. ಬೆಳೆದು ದೊಡ್ಡವನಾಗೋಕ್ಕೆ ಮುಂಚೇನೇ ಹಗಲು-ರಾತ್ರಿ ತಮ್ಮ ಕುದುರೆಗಳ ನಿಗಾ ನೋಡುತ್ತಿದ್ದ. ಹನ್ನೆರಡು ವರ್ಷಕ್ಕೆ ಉಳುಮೆ, ಗಾಡಿ ಹೊಡೆಯೋದು ಬಂತು. ಈ ಎಲ್ಲ ಚಾಕರಿಗೂ ಅವನಲ್ಲಿ ತ್ರಾಣವಿದ್ದದ್ದು ಅಷ್ಟರಲ್ಲೇ ಇತ್ತು. ಆದರೆ ಅವನದೇನೋ ಒಂದು ರೀತಿ!-ಯಾವಾಗಲೂ ಖುಷಿಯಾಗಿರುತ್ತಿದ್ದ. ಮಕ್ಕಳು ಅವನನ್ನು ಗೇಲಿಮಾಡಿದರೆ ಸುಮ್ಮನಿದ್ದುಬಿಡುತ್ತಿದ್ದ. ಇಲ್ಲದಿದ್ದರೆ ತಾನೂ ನಗುತ್ತಿದ್ದ. ಅವನಪ್ಪ ಅವನನ್ನು ಬೈದರೆ ಸುಮ್ಮನೆ ನಿಂತು ಕೇಳಿಸಿಕೊಳ್ತಿದ್ದ.
ಅಲ್ಯೋಶಾಗೆ ಹತ್ತೊಂಭತ್ತು ವರ್ಷವಾದಾಗ ಅವನಣ್ಣನನ್ನು ಸೈನ್ಯಕ್ಕೆ ಸೇರಿಸಿಕೊಂಡರು. ಅವನಪ್ಪ ಅಲ್ಯೋಶಾನನ್ನು ವ್ಯಾಪಾರಿಯ ಮನೆಯ ಚಾಕರಿಗೆ ಅವನಣ್ಣನ ಜಾಗಕ್ಕೆ ಸೇರಿಸಿದ. ಅವನಿಗೆ ಅವನಣ್ಣನ ಬೂಟುಗಳನ್ನೂ ಅಪ್ಪನ ಟೋಪಿಯನ್ನೂ ಕೊಟ್ಟು ಪಟ್ಟಣಕ್ಕೆ ಕರೆದೊಯ್ದರು. ತನ್ನ ಹೊಸ ದಿರಿಸಿನಿಂದ ಅಲ್ಯೋಶಾಗೆ ತುಂಬಾ ಖುಷಿಯಾಯಿತು. ಆದರೆ ವ್ಯಾಪಾರಿಗೆ ಮಾತ್ರ ಅವನ ವೇಷ ಕಂಡರೆ ಏನೋ ಒಂಥರಾ ತೀರಾ ಅತೃಪ್ತಿ. ಅವನು ಅಲ್ಯೋಶಾನನ್ನು ಎಚ್ಚರಿಕೆಯಿಂದ ಗಮನಿಸುತ್ತ ಅವರಪ್ಪನ ಬಳಿ " ನೀನು ಸಿಮ್ಯೋನ್ನ ಥರ ಕಟ್ಟುಮಸ್ತಾದವನನ್ನೇ ಕರ್ಕೊಂಡು ಬರ್ತೀಯ ಅಂದ್ಕೊಂಡಿದ್ದೆ. ನೀನು ನೋಡಿದ್ರೆ ಅಂಥ ಅಳುಬುರುಕನನ್ನು ಹಿಡ್ಕೊಂಡು ಬಂದಿದ್ದೀ. ಇವನೇನು ಮಹಾ ಚಾಕರಿ ಮಾಡೀಯಾನು?" ಅಂದಾಗ ಅವನಪ್ಪ "ಆಹಾ, ಇವನು ಯಾವ ಕೆಲಸವನ್ನಾದರೂ ಮಾಡಿಯಾನು. ಬೇಕಾದ್ರೆ ಗಾಡಿ ಹೂಡಿ ಎಲ್ಲಿಗೆ ಬೇಕಾದರೂ ಹೊಡೆದಾನು. ಒಳ್ಳೆ ರಾಕ್ಷಸನಂಥ ಕೆಲಸಗಾರ. ಕೋಲಿನಹಾಗೆ ಕಂಡರೂ ಒಳ್ಳೆ ಗಟ್ಟಿಗ. ಅಷ್ಟೇ ಅಲ್ಲ, ಅವನು ತೀರಾ ಸಾಧು. ಕೆಲಸ ಮಾಡೋದು ಅಂದ್ರೆ ಅವನಿಗಿಷ್ಟ" ಅಂತ ಬದಲು ಹೇಳಿದ.
ಅಲ್ಯೋಶಾ
(ಟಾಲ್ಸ್ಟಾಯ್ ಅವರ ರಷ್ಯನ್ ಕತೆಯ ಅನುವಾದ ( ಇಂಗ್ಲಿಷ್ನಿಂದ ಕನ್ನಡಕ್ಕೆ)
ತನ್ನ ಒಡಹುಟ್ಟಿದವರಲ್ಲಿ ಅಲ್ಯೋಶಾ ಕಿರಿಯವನು. ಅವನಿಗೆ "ಮಡಕೆ" ಅನ್ನೋ ಅಡ್ಡಹೆಸರಿತ್ತು. ಕಾರಣ ಇಷ್ಟೆ!! ಅವನ ಅಮ್ಮ ಚರ್ಚಿನ ಅಧಿಕಾರಿಯೊಬ್ಬರ ಮನೆಗೆ ಹಾಲು ಕೊಟ್ಟುಬಾರೋ ಅಂತ ಹಾಲಿನ ಮಡಕೆ ಕೊಟ್ಟಿದ್ದರೆ, ಅವನು ದಾರಿಯಲ್ಲಿ ಮುಗ್ಗರಿಸಿ ಅದನ್ನು ಒಡೆದುಹಾಕಿದ್ದ. ಇದಕ್ಕಾಗಿ ಅವನಮ್ಮ ಅವನನ್ನು ಸರಿಯಾಗಿ ಚಚ್ಚಿದ್ದಷ್ಟೇ ಅಲ್ಲ, ಹಳ್ಳಿಯ ಹುಡುಗರೂ ಅವನನ್ನು ಈ ಕಾರಣಕ್ಕೆ ಅವನನ್ನು "ಮಡಕೆ" ಅಂತಲೋ, "ಮಡಕೆ ಅಲ್ಯೋಶಾ" ಅಂತಲೋ ಕರೆಯೋಕ್ಕೆ ಶುರು ಮಾಡಿದರು. ಅವನಿಗೆ ಈ ಅಡ್ಡಹೆಸರು ಬಿದ್ದಿದ್ದು ಹೀಗೆ!! ಅಲ್ಯೋಶಾ ಒಬ್ಬ ಸಣಕಲ ಹುಡುಗ. ಜೊತೆಗೆ ಜೋಲುಕಿವಿ ಬೇರೆ! ಅವನ ಕಿವಿಗಳು ಒಳ್ಳೆ ರೆಕ್ಕೆಯ ಹಾಗೆ ಚಾಚಿಕೊಂಡಿದ್ದವು. ಸಾಲದ್ದಕ್ಕೆ ಡೊಣ್ಣೆ ಮೂಗು! "ಅಲ್ಯೋಶಾನ ಮೂಗು ಕಂಬದಮೇಲಿನ ಕುಂಬಳಕಾಯಿ ಇದ್ದಹಾಗಿದೆ" ಅಂತಲೂ ಹಳ್ಳಿಯ ಪಡ್ಡೆ ಹೈಕಳು ಚುಡಾಯಿಸುತ್ತಿದ್ದವು.
ಅವನ ಹಳ್ಳಿಯಲ್ಲಿ ಒಂದು ಶಾಲೆಯೂ ಇತ್ತು. ಓದೋ ಬರೆಯೋ ಅಂಥ ವಿದ್ಯೆ ಅವನಿಗೆ ಸರಾಗವೇನೂ ಆಗಲಿಲ್ಲ. ಜೊತೆಗೆ ಓದೋಕ್ಕಾದರೂ ಪುರಸೊತ್ತೆಲ್ಲಿತ್ತು? ಅವನಣ್ಣ ಪಟ್ಟಣದ ವ್ಯಾಪಾರಿಯೊಬ್ಬನಲ್ಲಿ ಕೆಲಸಕ್ಕಿದ್ದ. ತಾನಿನ್ನೂ ಚಿಕ್ಕವನಿದ್ದಾಗಲೇ ಅಲ್ಯೋಶಾ ಅಪ್ಪನಿಗೆ ನೆರವಾಗುವುದಕ್ಕೆ ಶುರುಮಾಡಿದ್ದ. ಅವನಿಗೆ ಬರೀ ಆರು ವರ್ಷವಾಗುವ ಹೊತ್ತಿಗೆ ತನ್ನ ತಂಗಿಯ ಜೊತೆಗೆ ಕಾವಲಿನಲ್ಲಿ ತಮ್ಮ ಮನೆಯ ದನ-ಕರು, ಕುರಿ ಅಂತ ನೋಡಿಕೊಳ್ಳುವಷ್ಟಾಗಿದ್ದ. ಬೆಳೆದು ದೊಡ್ಡವನಾಗೋಕ್ಕೆ ಮುಂಚೇನೇ ಹಗಲು-ರಾತ್ರಿ ತಮ್ಮ ಕುದುರೆಗಳ ನಿಗಾ ನೋಡುತ್ತಿದ್ದ. ಹನ್ನೆರಡು ವರ್ಷಕ್ಕೆ ಉಳುಮೆ, ಗಾಡಿ ಹೊಡೆಯೋದು ಬಂತು. ಈ ಎಲ್ಲ ಚಾಕರಿಗೂ ಅವನಲ್ಲಿ ತ್ರಾಣವಿದ್ದದ್ದು ಅಷ್ಟರಲ್ಲೇ ಇತ್ತು. ಆದರೆ ಅವನದೇನೋ ಒಂದು ರೀತಿ!-ಯಾವಾಗಲೂ ಖುಷಿಯಾಗಿರುತ್ತಿದ್ದ. ಮಕ್ಕಳು ಅವನನ್ನು ಗೇಲಿಮಾಡಿದರೆ ಸುಮ್ಮನಿದ್ದುಬಿಡುತ್ತಿದ್ದ. ಇಲ್ಲದಿದ್ದರೆ ತಾನೂ ನಗುತ್ತಿದ್ದ. ಅವನಪ್ಪ ಅವನನ್ನು ಬೈದರೆ ಸುಮ್ಮನೆ ನಿಂತು ಕೇಳಿಸಿಕೊಳ್ತಿದ್ದ.
ಅಲ್ಯೋಶಾಗೆ ಹತ್ತೊಂಭತ್ತು ವರ್ಷವಾದಾಗ ಅವನಣ್ಣನನ್ನು ಸೈನ್ಯಕ್ಕೆ ಸೇರಿಸಿಕೊಂಡರು. ಅವನಪ್ಪ ಅಲ್ಯೋಶಾನನ್ನು ವ್ಯಾಪಾರಿಯ ಮನೆಯ ಚಾಕರಿಗೆ ಅವನಣ್ಣನ ಜಾಗಕ್ಕೆ ಸೇರಿಸಿದ. ಅವನಿಗೆ ಅವನಣ್ಣನ ಬೂಟುಗಳನ್ನೂ ಅಪ್ಪನ ಟೋಪಿಯನ್ನೂ ಕೊಟ್ಟು ಪಟ್ಟಣಕ್ಕೆ ಕರೆದೊಯ್ದರು. ತನ್ನ ಹೊಸ ದಿರಿಸಿನಿಂದ ಅಲ್ಯೋಶಾಗೆ ತುಂಬಾ ಖುಷಿಯಾಯಿತು. ಆದರೆ ವ್ಯಾಪಾರಿಗೆ ಮಾತ್ರ ಅವನ ವೇಷ ಕಂಡರೆ ಏನೋ ಒಂಥರಾ ತೀರಾ ಅತೃಪ್ತಿ. ಅವನು ಅಲ್ಯೋಶಾನನ್ನು ಎಚ್ಚರಿಕೆಯಿಂದ ಗಮನಿಸುತ್ತ ಅವರಪ್ಪನ ಬಳಿ " ನೀನು ಸಿಮ್ಯೋನ್ನ ಥರ ಕಟ್ಟುಮಸ್ತಾದವನನ್ನೇ ಕರ್ಕೊಂಡು ಬರ್ತೀಯ ಅಂದ್ಕೊಂಡಿದ್ದೆ. ನೀನು ನೋಡಿದ್ರೆ ಅಂಥ ಅಳುಬುರುಕನನ್ನು ಹಿಡ್ಕೊಂಡು ಬಂದಿದ್ದೀ. ಇವನೇನು ಮಹಾ ಚಾಕರಿ ಮಾಡಿಯಾನು?" ಅಂದಾಗ ಅವನಪ್ಪ "ಆಹಾ, ಇವನು ಯಾವ ಕೆಲಸವನ್ನಾದರೂ ಮಾಡಿಯಾನು. ಬೇಕಾದ್ರೆ ಗಾಡಿ ಹೂಡಿ ಎಲ್ಲಿಗೆ ಬೇಕಾದರೂ ಹೊಡೆದಾನು. ಒಳ್ಳೆ ರಾಕ್ಷಸನಂಥ ಕೆಲಸಗಾರ. ಕೋಲಿನಹಾಗೆ ಕಂಡರೂ ಒಳ್ಳೆ ಗಟ್ಟಿಗ. ಅಷ್ಟೇ ಅಲ್ಲ, ಅವನು ತೀರಾ ಸಾಧು. ಕೆಲಸ ಮಾಡೋದು ಅಂದ್ರೆ ಅವನಿಗಿಷ್ಟ" ಅಂತ ಬದಲು ಹೇಳಿದ.
-ಮುಂದುವರೆಯುವುದು