ಅವನು ಅಪ್ಪಟ ಬಂಗಾರ ನಿಜ ; ಅದರೆ ಆಭರಣಕ್ಕೆ ಬಾರದೇ ? (ಸತ್ಯಕಾಮ ಕತೆ - ಭಾಗ - ೪)
ಹಿಂದಿನ ಭಾಗ ಓದಿದಿರಾ ? ಇಲ್ಲಿ ಅದನ್ನು ಓದಿ http://www.sampada.net/blog/shreekantmishrikoti/22/11/2007/6365
ನಮ್ಮ ನಾಯಕ ಈಗಲೂ ಅವಳನ್ನು ಮದುವೆಯಾಗಿ , ಗೌರವದ ಬಾಳು ಕೊಡಲು ಸಿದ್ಧ .
ಅದರಂತೆ ಅವಳನ್ನು ಮದುವೆಯೂ ಆಗುತ್ತಾನೆ . ಅದೇಕೋ ಅವಳ ಜತೆ ಸಂಬಂಧ ಇಟ್ಟುಕೊಳ್ಳುವದಿಲ್ಲ .
ಮುಂದೆ ಒಂದು ಮಗು ಹುಟ್ಟುತ್ತದೆ . ಅದನ್ನೂ ತನ್ನ ಮಗು ಎಂದೇ ಒಪ್ಪಿಕೊಳ್ಳುತ್ತಾನೆ.
ಸಂಪ್ರದಾಯಸ್ಥ ತಂದೆ ಇದೆಲ್ಲವನ್ನೂ ಹೇಗೆ ಸಹಿಸಿಯಾನು? , ಕೆಳ ಜಾತಿಯವಳು , ಅದರಲ್ಲೂ ವೇಶ್ಯೆಯ ಮಗಳು ,ಅವಳನ್ನು ಸೊಸೆಯಾಗಿ , ಅವಳಿಗೆ ಬೇರಾರಿಂದಲೋ ಆದ ಮಗುವನ್ನು ತನ್ನ ಮೊಮ್ಮಗನಾಗಿ ಆ ಸಂಪ್ರದಾಯದ ಜೀವ ಹೇಗೆ ಒಪ್ಪಿಕೊಳ್ಳಲು ಸಾಧ್ಯ ?
ಹೆಂಡತಿ ಹಾಗೂ ಮಗುವಿನೊಂದಿಗೆ ಬಂದ ಮಗನನ್ನು ಮನೆಯ ಒಳಗೆ ಸೇರಿಸುವದಿಲ್ಲ .
ಸತ್ಯವೃತನ ಹೆಂಡತಿ , ಮಗುವಿನೊಡನೆಯ ಸಂಬಂಧದ ಬಗೆಯನ್ನು ಬಹಿರಂಗಪಡಿಸಿಲ್ಲ . ಈ ವಿಷಯ ಅವನ ಆಪ್ತ ಮಿತ್ರನಿಗೆ ಮಾತ್ರ ಗೊತ್ತು .
ಅತ್ತ ಉದ್ಯೋಗದ ವಿಷಯದಲ್ಲಿ ಅವನು ತೊಂದರೆಪಡುತ್ತಿದ್ದಾನೆ , ಸುಳ್ಳು ಬಿಲ್ಲುಗಳು , ಕಳಪೆ ಗುಣಮಟ್ಟದ ಕೆಲಸ ಇತ್ಯಾದಿಗಳಿಗೆ ನೆರವಾಗನು . ಹಾಗಾಗಿ ಅವನ ವರ್ಗಾವಣೆ ಆಗುತ್ತಿರುತ್ತದೆ , ಬಡ್ತಿಗಳು ತಪ್ಪುತ್ತವೆ , ಈ ಮಧ್ಯೆ ಅವನಿಗೆ ಆರೋಗ್ಯ ಕೆಟ್ಟಿದೆ ; ಕ್ಯಾನ್ಸರ್ ಆಗಿ ಕೊನೆಯ ಹಂತದಲ್ಲಿದ್ದಾನೆ . ಅವನ ಆಸ್ಪತ್ರೆ ಖರ್ಚು ಭರಿಸುವ ಕಂಟ್ರಾಕ್ಟರ್ ಅವನಿಂದ ಹಳೆಯ ಬಿಲ್ಲೊಂದಕ್ಕೆ ಸಹಿ ಬಯಸಿದ್ದಾನೆ . ಇವನು ಅದಕ್ಕೆ ತಯಾರಿಲ್ಲ ; ಆಗ ಅವನು ಸತ್ಯವೃತನ ಹೆಂಡತಿಯೊಂದಿಗೆ ಮಾತನಾಡುತ್ತಾನೆ . "ನನಗೆ ಈ ಬಿಲ್ಲು ಸಹಿಯಾಗದಿದ್ದರೆ ಸ್ವಲ್ಪ ನಷ್ಟವಾಗಬಹುದು ; ಅಷ್ಟೇ ; ಪರವಾಗಿಲ್ಲ, ನಾನು ಅದನ್ನು ಸಹಿಸಬಲ್ಲೆ ; ಆದರೆ ನಿಮ್ಮ ಗಂಡನ ನಂತರ ನಿಮ್ಮ ಮತ್ತು ಮಗುವಿನ ಗತಿ ಏನು ? ಈ ಬಿಲ್ಲಿಗೆ ಸಹಿ ಮಾಡಿಸಿ ಕೊಟ್ಟರೆ ನಿಮಗೇ ಅನುಕೂಲವಾಗುತ್ತದೆ " . ಎಮ್ದು ಹೇಳಿ ಆ ಬಿಲ್ಲನ್ನು ಅವಳ ಹತ್ತಿರ ಬಿಟ್ಟು ಹೋಗುತ್ತಾನೆ .
ಅದೇನೋ ಸರಿ , ಅದರೆ ಮರಣ ಶಯ್ಯೆಯಲ್ಲಿ , ಗಂಡನನ್ನು ಅವನು ಎಲ್ಲಕ್ಕಿಂತ ಹೆಚ್ಚಾಗಿ ಈವರೆಗೆ ಕಾಪಾಡಿಕೊಂಡು ಬಂದ ಸತ್ಯ , ಪ್ರಾಮಾಣಿಕತೆಯ ಆದರ್ಶಗಳನ್ನು ಕೈ ಬಿಡು ಎಂದು ಕೇಳುವದು ಹೇಗೆ?
ಯಾರೋ ಅವಳ ಬಳಿ ಈ ನಡುವೆ "ನಿನ್ನ ಗಂಡ ಅಪ್ಪಟ ಚಿನ್ನ ಕಾಣಮ್ಮ " ಅನ್ನುತ್ತಾರೆ . ಹೌದು, ಆದರೆ ಅಪ್ಪಟ ಚಿನ್ನದಿಂದ ಏನು ಉಪಯೋಗ ; ಒಂದಿಷ್ಟು ಹಿತ್ತಾಳೆಯೋ ತಾಮ್ರವೋ ಕಲಬೆರಕೆ ಆಗದ ಹೊರತು ಯಾವ ಆಭರಣಕ್ಕೂ ಬಾರದು !
ಏನೂ ಮಾತನ್ನಾಡದೇ , ಆ ಬಿಲ್ಲನ್ನು ಅವನ ಬಳಿ ಬಿಟ್ಟು ಬಂದು ಬಿಡುತ್ತಾಳೆ .
ಮರುದಿನ ಅವಳು ಅಸ್ಪತ್ರೆಗೆ ಹೋದಾಗ
ಆ ಬಿಲ್ಲಿಗೆ ಸಹಿ ಮಾದಿದ್ದಾನೆ ಸತ್ಯವೃತ . " ನನಗೆ ಗೊತ್ತಿತ್ತು ನೀನು ಸಹಿ ಮಾಡ್ತೀಯಾ , ಅಂತ " ಅಂದು ಅದನ್ನು ಹರಿದು ಬಿಡುತ್ತಾಳೆ . " ನನಗೆ ಗೊತ್ತಿತ್ತು , ನೀನು ಹರಿದು ಬಿಡ್ತೀಯಾ ಅಂತ " ಅಂತ ಸತ್ಯವೃತನ ಮಾತು .
ಅವರ ಮೇಲಿನ ಪ್ರೇಮಕ್ಕಾಗಿ ತನ್ನ ಧ್ಯೇಯಾದರ್ಶಗಳನ್ನೂ ತ್ಯಜಿಸಿದ್ದಾನೆ ಅವನು ;
ತನ್ನ ಸುಖಕ್ಕಾಗಿ ಅವನ ಧ್ಯೇಯಾದರ್ಶಗಳಿಗೆ ತಿಲಾಂಜಲಿಯನ್ನು ಅವಳು ಬಯಸಳು ;
ಎಂಥ ಸನ್ನಿವೇಶ ನೋಡಿ?
ಇನ್ನು ಒಂದೇ ಕಂತು ಬಾಕಿ ಇದೆ .. ಅಲ್ಲಿ ಭಾರೀ ಕ್ಲೈಮಾಕ್ಸ್ ಇದೆ ....
ದಯವಿಟ್ಟು ಈ ತೊಂದರೆ ಸಹಿಸಿಕೊಳ್ಳಿ .
ಮುಂದಿನ ಭಾಗ ಇಲ್ಲಿದೆ . http://www.sampada.net/blog/shreekantmishrikoti/23/11/2007/6381