ಅವರಿಬ್ಬರ ನಡುವೆ ಏನು ನಡೆಯಿತೋ ತಿಳಿಯಲಿಲ್ಲ

ಅವರಿಬ್ಬರ ನಡುವೆ ಏನು ನಡೆಯಿತೋ ತಿಳಿಯಲಿಲ್ಲ

ಮಳೆಯ ಸಂಭ್ರಮವನ್ನು ಸವಿಯಲು

ಕಿಟಕಿಯ ಬಳಿ ಬಂದಾಗ ನಾ ಕಂಡೆ ದೃಶ್ಯವೊಂದ   

ಎದುರಿನ ಮಹಡಿಯ ಮೇಲೆ ಜೋಡಿಯೊಂದು  

ಮಳೆಯಲ್ಲಿ ತೋಯ್ದು ಬಂದು ನಿಂತಿದ್ದರು 

ಮೊದಲು ದೂರ ದೂರ ನಿಂತಿದ್ದ ಆ ಜೋಡಿ 

ತುಸು ಸನಿಹಕ್ಕೆ ಬಂದು ಏನೋ ಮಾತನಾಡಿದರು

ಸ್ವಲ್ಪ ಕಮ್ಮಿಯಾದಂತೆ ಕಂಡುಬಂದ ಮಳೆ

ಮತ್ತೆ ಜೋರಾಗಿ ಬರಲು ಶುರುವಾಯಿತು

ಮಳೆಯ ನೋಡಲೆಂದು ತಿರುಗಿ ಮತ್ತೆ ಆ ಜೋಡಿಯ

ಕಡೆ ತಿರುಗಿ ನೋಡಿದಾಗ ಮತ್ತೆ ದೂರ ಸರಿದಿದ್ದರು 

ಅಷ್ಟರಲ್ಲಿ ಅವರಿಬ್ಬರ ನಡುವೆ ಏನು ನಡೆಯಿತೋ ತಿಳಿಯಲಿಲ್ಲ 

ಮತ್ತೆ ಮಳೆ ಕಮ್ಮಿಯಾದಂತೆ ಹಾರಿ ಹೋಯಿತು

ಆ ಜೋಡಿ ಕರಿ ಪಾರಿವಾಳಗಳು      
Rating
No votes yet