ಅವರೆಕಾಳಿನ ಕತೆ .....

ಅವರೆಕಾಳಿನ ಕತೆ .....

ನಾಣಿ ಬೇಜಾರಿನಲ್ಲಿ ಕುಳಿತ್ತಿರುತ್ತಾನೆ.....

ಅಷ್ಟರಲ್ಲಿ ಅವರ ತಾತ ಬರ್ತ್ತಾರೆ ,
ಯಾಕ್ ಬೇಜಾರು ಆಗಿದ್ದಿಯಾ ?
"ಬಿಟ್ಟ ಬೇಜಾರು" .... ಅಂತಾನೆ ನಾಣಿ

ಬಾ ಕಥೆ ಹೇಳ್ತ್ತಿನಿ

ರಾಮಾಯಣ ಯುದ್ದ ಅದ್ಮೇಲೆ ರ್‍ಆಮ ಎಲ್ಲಾ ಮಂಗಗಳಿಗು ಭರ್ಜರಿ ಊಟ ರೆಡಿ ಮಾಡಿದ್ದ. ಎಲ್ಲಾ ಮಂಗಗಳು ಸಾಲಾಗಿ ಕೂತುಕೊಂಡವು. ರ್‍ಆಮ ಊಟಕ್ಕೆ ಎನ್ ಸಾರ್ ಮಾಡಿಸಿದ್ದ ?

"ಎನ್ ಸಾರು " .. ಅಂತ ನಾಣಿ ಕಣ್ಣರಳಿಸಿ ಕೇಳ್ದ

"ಅವರೇಕಾಳ್ ಸಾರು" .... ಎಲ್ಲ ತಿಂತಿದ್ವ, ಒಂದು ಮಂಗ ಸುಮ್ನೆ ಇರಲಾರದೆ ಅವರೆ ಕಾಳ್ನ ಚಿದಕ್ತು, ಅದು ಮಂಗನ ತಲೆ ಮೇಲೆ ಹಾರೊಯ್ತು .

ಮೊದ್ಲೆ ಮಂಗ , ನನ್ ತಲೆ ಮೇಲ್ ಹಾರ್ತ್ತಿಯ ಅಂತ "ಸುಮ್ನೆ ಜಿಗಿದು ಕೊತ್ಕೊಕು.
ಪಕ್ಕದಲ್ಲಿ ಇದ್ದ ಮಂಗ, ನಾನ್ ನೋಡು ಅಂತ ಈ ಮಂಗಕ್ಕಿಂತ ಮೇಲ್ ಹಾರಿ ಕೊತ್ಕೊತು. ಈಗೆ ಎಲ್ಲಾ ಮಂಗಗಳು ಹಾರೋಕೆ ಶುರು ಮಾಡಿದ್ವು. ಕೊನೆಗೆ ಆಂಜನೇಯ ಬಂದ, ಅವ್ನು ಆಕಾಶಕ್ಕೆ ಹಾರಿ ಕೊತ್ಕೊಂಡ ...

ನೋಡು ಮಂಗ ಒಂದು ಅವರೆ ಕಾಳಿಂದ ಹೆಂಗೆ ಸ್ಪೊರ್ತಿ ತಗೋತು, Find something to be done and start doing it...

ಒಕೆ ತಾತ ನಾನು ಸ್ನೇಹಿತನ ಮನೆಗೆ ಹೋಗಿ ಬರ್ತಿನಿ.... ಅಂತ ನಾಣಿ ಹೊರಟ ...

Rating
No votes yet