ಅವಳು ಮಾತುಗಾರ್ತಿ....

ಅವಳು ಮಾತುಗಾರ್ತಿ....

ಆದ್ರೆ. ತುಂಬಾನೆ ಪ್ರಾಕ್ಟಿಕಲ್.
ಆದಾಗ್ಯೂ ಅವಳು ಎಂದೂ ಬರದ ಅದಾರನ್ನೋ
ನೆನೆಯುತ್ತಾಳೆ.

ಆದರೂ ಅವಳು ಮಾತುಗಾರ್ತಿ...

ಅವಳು ನಿಜಕ್ಕೂ ಬುದ್ದಿವಂತೆ. ಆದ್ರೆ, ಅದರಿಂದ ಎಲ್ಲರ
ಮೇಲೂ ಹರಿಹಾಯುತ್ತಾಳೆ. ಆದ್ರೆ, ತಕ್ಷಣವೇ ಅವಳ
ಮನದ ಮೂಲೆಯಲ್ಲಿ ಪಾಪದವರು ಅನ್ನೊ ಸಾಲುಗಳು
ಮೂಡಿ ಹೋಗುತ್ತವೆ.

ಆದರೂ ಅವಳು ಮಾತುಗಾರ್ತಿ...

ಅವಳ ಪ್ರತಿ ಮಾತು ಬರದ ಆ ವ್ಯಕ್ತಿಯನ್ನ ಬಿಂಬಿಸುತ್ತವೆ
ಆದ್ರೆ, ಅವು ಯಾರಿಗೂ ಕೇಳಲ್ಲ. ಏಕೆಂದರೆ, ಅವೆಲ್ಲ ಈಗ
ಮಸುಕು,ಮಸಕಾಗಿವೆ.

ಆದರೂ ಅವಳು ಮಾತುಗಾರ್ತಿ...

-ರೇವನ್...

ಈ ಸಾಲುಗಳನ್ನ ಓದಿದ ನಿಮಗೆ ಯಾರಪ್ಪಾ ಅದು ಅನ್ನೋ ಭಾವ ಮೂಡತ್ತದೆ.
ಆದ್ರೆ, ಅವಳನ್ನ ಹುಡುಕುವುದು ನಿಮಗೆ ತುಂಬಾನೆ ಸುಲಭ. ಏಕೆಂದರೆ, ಅವಳು
ಸದಾ ನಿಮ್ಮ ಬಳಿಯಲ್ಲಿಯೇ ಇರುತ್ತಾಳೆ....

Rating
No votes yet

Comments