ಅವಳು...

ಅವಳು...

ನಾ ಹೊರ ಬಂದಾಗ

ಅವಳು ನಿಂತಿದ್ದಳು,

ಇಲ್ಲೇ...ಐದೇ ಐದು ಅಂಗುಲ ದೂರದಲ್ಲಿ...

ನಾ ನೋಡಿದೆ

ಅವಳೂ ನೋಡಿದಳು...

ನೋಡಿ ನಕ್ಕಳು...

ನಾ ನೋಡಿ ಬೆರಗಾದೆ...

     ಹಿಂದುರುಗಿ ನೋಡಲು

     ಯಾರೂ ಇರಲಿಲ್ಲ...

     ಅವಳು ಆ ಸುಂದರ

     ನಗು ತೆಗೆದು ಕೊಟ್ಟದ್ದು

     ನನಗೆಂದು ಖಾತರಿಯಾಗಿ

     ತಿರುಗಲು...

     ಅವಳು ಅಲ್ಲಿರಲಿಲ್ಲ....!?

ಅವಳ ದೇಹ ಅಲ್ಲಿಂದ lift ಆಗಿ

liftನಲ್ಲಿ ಇಳಿದು ಹೋಗಲು ಅನುವಾಗಿತ್ತು...

ನಾನೂ liftನಲ್ಲಿ ಹೋಗ್ಲೋ-ಬ್ಯಾಡ್ವೋ

ಎಂದು ಯೋಚಿಸಿ...

ಹೆಜ್ಜೆ ಮುಂದೆ ಹಾಕುವಷ್ಟರಲ್ಲಿ

ಅದುವರೆಗೂ ಕಾದಿದ್ದ lift ಬಾಗಿಲು

ಮುಚ್ಚುತಲಿತ್ತು...

ಇನ್ನೊಂದು ಹೆಜ್ಜೆಯಿಡುವಷ್ಟರಲ್ಲಿ

ಬಾಗಿಲು ಪೂರಾ ಮುಚ್ಚಿತ್ತು...

ಮುಚ್ಚಿದ್ದು lift ಬಾಗಿಲೆ?

ಇಲ್ಲಾ

ಅವಳ ಹೃದಯದ ಬಾಗಿಲೆ?

ತಿಳಿಯದಾಗಿದೆ....!!!

      ಕಾದ ಹಂಚೆಂಬ ಜಗದಲಿ

     ಕೈಗೆಟುಕದೆ ಜಾರಿ ಬಿದ್ದ

    ಬೆಣ್ಣೆಯಂತೆ ಕಾಣದೆ ಕರಗಿ ಹೋಗಿರುವಳು...

Rating
No votes yet