ಅವಳ ಪ್ರೀತಿ......... ಅವಳದೇ ರೀತಿ......

ಅವಳ ಪ್ರೀತಿ......... ಅವಳದೇ ರೀತಿ......

ಆಗಿದ್ ಆಗೇ ಬಿಡ್ಲಿ ಅವಳಿಗೆ ಒಂದ್ ಸಲನಾದ್ರು ಹೇಳ್ ಬಿಡ್ಬೇಕು....."ಏಯ್ ಹುಡ್ಗಿ ನೀನ್ ನನ್ಗೆ ಜೀವ್ ಕಣೆ ಅಂಥಾ...." ಆದ್ರೆ ಏನ್ ಮಾಡ್ಲಿ ನನ್ನ ಮನದ್ ಪಿಸುಪಿಸು ಮಾತಿಗೂ ಹೂಂಗುಟ್ಟೋ ಹೂ ಮನಸಿ ಹುಡ್ಗಿನ್ ಬರೀ ನನ್ನ ಸ್ವಾರ್ಥಕ್ಕಾಗಿ ನೋಯಿಸೋದು ಅಂದ್ರೆ....... ಹೋಗ್ಲಿ ನೀನೆ ಯೋಚ್ಸು ’ನಿನ್ ಭಾವನೆಗಳಿಗೆ ಘಾಸಿ ಮಾಡೋದಾಗ್ಲಿ ಅಥ್ವಾ ನನ್ ಭಾವನೆಗಳಿಗೆ ಮೋಸ ಮಾಡ್ಕೋಳೋದಾಗ್ಲಿ ಎರಡೂ ತಪ್ಪೇ ಅಲ್ವಾ....’ ಇದನ್ನ ನಿಂಗೆ ಹೇಗ್ ಅರ್ಥ ಮಾಡಿಸ್ಲಿ ............... ಒಂದೊಂದ್ ಸಲ ಅನ್ಸುತ್ತೆ ನೀನ್ ನಂಗೆ ಯಾಕಾದ್ರೂ ಇಶ್ಟೋಂದ್ ಹತ್ರ ಆದೇ ಅಂಥ.... ಆವತ್ತಿನ ದಿನ ನನ್ಗೆ ಚೆನ್ನಾಗಿ ನೆನಪಿದೆ ೨೦೦೫ನೇ ಇಸ್ವಿ ಜುಲೈ ೧೯ ನೇ ತಾರೀಖು..... ಹಿಂದಿನ ಬೆಂಚಲ್ಲಿ ಕೂತು ಕವನ ಬರೀತ ಕೆಮಿಸ್ಟ್ರಿ ಲೆಕ್ಚರ್ ಗೆ ಸಿಕ್ ಬಿದ್ದು ಕ್ಲಾಸಿಂದ ಹೊರ್ಗ್ ಹಾಕಿಸ್ಕೊಂಡಿದ್ನಲ್ಲ ..... ಅವತ್ತೇ ನೀನ್ ನನ್ನ ಮಾತಾಡಿಸಿದ್ದು....

"ಹಲೋ...,, ಎನ್ರೀ ನೀವ್ ಕಥೆ ಕವನ ಬರೀತೀರಾ...ಲೆಕ್ಚರ್ ಬಯ್ದ್ರು ಅಂಥ ಬರಿಯೋದ್ ನಿಲ್ಲಿಸ್ ಬೇಡಿ....ನನ್ ಹೆಸ್ರು ಗ್ರೀಶ್ಮ ಅಂಥಾ...ನಿಮ್ ಕ್ಲಾಸೇ ಗೋತ್ತಿರ್ಬೇಕಲ್ಲಾ....."
ಹೀಗ್ ನೀನು ಪರಿಚಯ ಆಗೋಕ್ ಮುಂಚೇನೆ ನೀನ್ ನನ್ನ ಮನಸೊಳಗೆ ಸೇರ್ ಹೋಗಿದ್ದೆ......... ಈಗೀಗಂತೂ ನಾನು ನೀನು ಬೇರ್ ಬೇರೆಯಾಗಿ ಓಡಾಡಿದ್ದನ್ನ ಕಾಲೇಜ್ ನ ಯಾವ್ ಕಣ್ಣೂ ನೋಡಿಲ್ಲ ಅನ್ಸುತ್ತೆ......
"ಏಯ್ ಏನೋ ಇದು ನಿನ್ ಹೇರ್ ಸ್ಟೈಲು ..... ಸರಿಯಾಗಿ ಬಾಚ್ಕೋಂಡ್ ಬರೋಕ್ಕಾಗಲ್ವ ಇದು ಹುಡ್ಗೀರ್ ಇರೋ ಕಾಲೇಜ್ ಕಣೋ" ಅಂಥಾ ನನ್ನ ಹೇರ್ ಸ್ಟೈಲ್ ಸರಿಮಾಡೋವಾಗ್ಲೆಲ್ಲಾ ಹೊಟ್ಟೆ ಉರಿ ಪಡದ ಹುಡುಗ್ರೇ ಇಲ್ಲಾ ಕಣೇ ನಮ್ ಕಾಲೇಜ್ ನಲ್ಲಿ........
ನೀನಂತು ಒಂದ್ ಸಲ ಕಾಲೇಜ್ ಗಾರ್ಡನ್ ನಲ್ಲಿರೋ ಸ್ಯಾಫ್ರನ್ ರೋಸ್ ಬೇಕೂಂತ ಚಿಕ್ಕ ಮಗೂ ಥರ ಹಟ ಹಿಡಿದಿದ್ದೆ ನೆನಪಿದ್ಯಾ.. ......
"ಲೋ...ಪ್ಲೀಸ್ ಕಣೋ ಅದೇ ಸ್ಯಾಫ್ರನ್ ರೋಸೇ ಬೇಕು.... ನಿನ್ನಲ್ಲದ್ದೇ ಬೇರೆ ಯಾರ್ ಹತ್ರ ಕೇಳ್ಲಿ ನೀನೇ ಹೇಳು....ಪ್ಲೀಸ್ ನಂಗೋಸ್ಕರ ಪ್ಲೀಸ್... " ನಾನ್ ಹೇಗೋ ಆ ಮಾಲಿ ಕಣ್ ತಪ್ಸಿ ರೋಸ್ ಕದ್ದು ನಿನ್ಗೆ ಮುಡಿಸಿದ್ದೆ.......ಆವತ್ತು ನಿನ್ನ ನೋಡಿ ಅಸೂಯೆ ಪಡದ ಹುಡ್ಗೀರ್ ಇದ್ರೆ ನನ್ನಾಣೆ.........

ನಾಳೆ ನಿಂಗೆ ಎಲ್ಲಾ ಹೇಳ್ ಬಿಡ್ತೀನಿ........ನೀನ್ ಇಲ್ದೇ ನಾನ್ ಶೂನ್ಯ .....ನನ್ನ ಕೊನೆ ಉಸಿರಿನ ತನಕ ನಿನ್ನ ಪ್ರೀತಿಸ್ತೀನಿ ಅಂಥಾ....
ಅಕಸ್ಮಾತ್ ನೀನ್ ಒಪ್ಪಲ್ಲಿಲ್ಲ ಅಂದ್ರೆ ಏಪ್ರಿಲ್ ಪೂಲ್ ಕಣೇ.. ಅಂದ್ ಬಿಡೋದು ಮುಂದಕ್ಕೆ ಹೇಗೋ ಮ್ಯಾನೇಜ್ ಮಾಡ್ಕೋಂಡ್ರಾಯ್ತು...
ಒಂದಂತು ನಿಜ ಕಣೇ ....ನನಗೆ ನನ್ನ ಸ್ವಾರ್ಥದ ಪ್ರೀತಿಗಿಂತ ನಿನ್ನ ನಿಸ್ವಾರ್ಥ ಸ್ನೇಹನೇ ಮುಖ್ಯ ಅನ್ನೊ ನಿರ್ಧಾರಕ್ಕೆ ಬರುವ ಹೊತ್ತಿಗೆ ನಿದ್ದೆಯ ಮಂಪು....ಮಂಪು ....ಮಂಪರು......

"ಹಾಯ್.. ಗ್ರೀಶೂ.."

"ಹಾಯ್.....ಎನೋ ಬರ್ತ್ ಡೇ ಬಾಯ್ ಥರ ಮಿಂಚ್ತಾಯಿದ್ಯಾ....."

"ನೋಡು ಎಲ್ಲ ಟಯಿಮ್ ತಮಾಶೆ ಮಾಡ್ಬೇಡ ನಿನ್ನತ್ರ ಒಂದ್ ಮುಖ್ಯವಾದ ವಿಶ್ಯ ಹೇಳೋದಿದೆ..."

"ಮುಖ್ಯವಾದ ವಿಶ್ಯನಾ..... ನೀನ್ ಸಿರಿಯಸ್ಸಾಗಿ ಮಾತಾಡಿದ್ರೆ ಕೇಳೋಕೆ ತಮಾಶೆಯಾಗಿರುತ್ತೆ......ಹೇಳೋ ಬೇಗ...."

"........."

"ಏಯ್..... ನಿಂತ್ಕೋಳೋ... ಸ್ಸಾರಿನಪ್ಪ ....ಸರಿಯಾಗಿ ಕೇಳ್ತೀನಿ ಆಯ್ತಾ..."
"ಅದೂ.....ಅದೂ....ನೋಡೆ ನಾನ್ ನಿನ್ ತುಂಬಾ ಪ್ರೀತಿಸ್ತೀನಿ.... ಅದ್ಕೆ ನಿಂಗೆ ಹೇಳ್ ಬಿಡೋದು ವಾಸಿ ಅನ್ನಿಸ್ತು ...... ಜೋಕ್ ಅನ್ಕೋಬೇಡ......"

"ನಿಜವಾಗ್ಲೂ......"

"ಸುಳ್ಳಾದ್ರೆ ನೀನೇ ಗೊತ್ ಮಾಡ್ತಿತಾನೆ...."

"ಲೋ... ನೀನ್ ಬುದ್ದಿವಂತ ಅಂಥ ಇಡೀ ಕಾಲೇಜ್ ಗೆ ಗೊತ್ತು.. ... ಆದ್ರೆ ಈ ವಿಶ್ಯದಲ್ಲಿ ಇಶ್ಟೊಂದ್ ಬುದ್ದಿವಂತ ಆಗಿದೀಯಾ ಅಂಥ ಗೊತ್ತಿರ್ಲ್ಲಿಲ್ಲ ಕಣೋ.....ಏನ್ ಅಂತ ಪ್ಲಾನ್ ಮಾಡ್ಕೋಂಡ್ ಬಂದಿದ್ದೀಯಾ ಹುಡ್ಗಿ ಒಪ್ಪಿದ್ರೆ ಪಾರ್ಕ್...ಥೇಟರ್ ಅಂತ ಲವ್ ಮಾಡೋದು ಇಲ್ಲಾಂದ್ರೆ.... ಬೆಳಿಗ್ಗೆಯಿಂದ ಪುರುಸೋತ್ತಾಗಿದ್ದೆ ಯಾರ್ಗೂ ಪೂಲ್ ಮಾಡೋಕ್ ಆಗಿಲ್ಲ ಅದ್ಕೆ ನಿನ್ನ ಪೂಲ್ ಮಾಡ್ತಾಯಿದ್ದೀನಿ ಅಂತ ಹೇಳಿ ಜಾರ್ಕೋಂಡ್ ಬಿಡೋದು ಅಂತಾನಾ...."

"ಏಯ್ ಹಾಗೆಲ್ಲಾ ಏನೂ ಇಲ್ವೇ...."

"ಶ್.....ನೋಡೋ ನನ್ಗೆ ಈ ಟೈಮ್ ಪಾಸ್ ಪ್ರೀತಿಲೆಲ್ಲಾ ನಂಬ್ಕೆಯಿಲ್ಲಾ.... ಇಶ್ಟೇನಾ ನೀನ್ ನನ್ನ ಅರ್ಥಾ ಮಾಡ್ಕೋಂಡ್ ಇರೋದು.... ಇನ್ ಮುಂದೆ ನನ್ನ ಮಾತಾಡ್ಸೋ ಪ್ರಯತ್ನ ಮಾಡ್ಬೇಡ್... ನಾನ್ ಹೊರಡ್ತೀನಿ.... "

"......."

"..........."

ನಾನು ಇನ್ನೇನೋ ಅವಳ್ನ ಕೂಗಿ ಕರಿಯೋ ಹೊತ್ತಿಗೆ...... ಹೋದಶ್ಟೇ ವೇಗದಲ್ಲಿ ಹಿಂದಿರುಗಿ......

"ಹೇಯ್ ಯು ಪೂಲ್...... ಯೆಸ್ ಯು ರಿಯಲಿ ಪೂಲ್ಡ್ ಬಯ್ ಮಿ.....
ನನ್ಗೆ ಪೂಲ್ ಮಾಡೋಕೆ ಬರ್ತೀಯಾ.....ಅಶ್ಟು ಸುಲಭ ಅಂದ್ಕೋಂಡ್ಯಾ..... ನಡಿ...ನಡಿ....ಕ್ಯಾಂಟೀನ್ ಗೆ ಹೋಗೋಣ.... ಬೆಳಿಗ್ಗೆಯಿಂದ ತಿಂಡಿ ತಿಂದಿಲ್ವೋ....ಬಿಲ್ ನಾನೇ ಕೊಡ್ತೀನಿ ಮಾರಾಯ .... ನಡ್ಯೋ ಬೇಗ....
ಕ್ಲಾಸ್ ಗೆ ಬೇರೆ ಟೈಮ್ ಆಗ್ತಾಯಿದೆ.....
ನೋಡು... ನೋಡು.... ನಿಂಗೆ ತಲೆ ಬಾಚ್ಕೊಳೋ ಟ್ರೈನಿಂಗ್ ಇದ್ರೆ ಕೊಡಿಸ್ಬೇಕು... ಬೇಕು ಅಂಥಾನೆ ಹೀಗ್ ಮಾಡ್ತಿಯೇನೋ...."
ನನ್ನ ತಲೆಕೂದಲು ಸರಿಪಡಿಸಿ......ಕೈ-ಕೈ ಹಿಡಿದು ಕ್ಯಾಂಟೀನ್ ಗೆ ಧಾವಿಸುವಲ್ಲಿಗೆ.....

"ಯಾಕೋ ಎಶ್ಟು ನೆನಪು ಮಾಡಿಕೊಂಡ್ರು ಈ ಥರ ಪೂಲ್ ಆದ ದಿನ ನೆನಪಿಗೇ ಬರಲಿಲ್ಲ......."

" ನಿನ್ನೊಲವ ಧಾರೆಯಿಂದ ಪದ ಪಂಕ್ತಿ ಮಿಲನವಾಯ್ತು......"
ಇಂತಿ ನಿನ್ನವ
ಯಶು

Rating
No votes yet

Comments