ಅವ್ವ - ಲಕ್ಷ್ಮೀಕಾಂತ ಇಟ್ನಾಳ
ಅವ್ವ
- ಲಕ್ಷ್ಮೀಕಾಂತ ಇಟ್ನಾಳ
ಸೂರ್ಯ, ಅದೇಕೆ ಮೂಢಣದಲ್ಲೇ, ಒಕ್ಕರಿಸಿಹನೋ
ತಮ್ಮ ಮನೆಗೂ ಕೆಲ ದಿನ ಬರಬಾರದೇ,
ಒಟ್ಟಿಗೆ ಕರೆಯುವವು, ತೆಂಕಣ, ಬಡಗಣ, ಪಡುವಣ
ಹಾಗಾದರೆ ಅದೆಷ್ಟು ಚೆನ್ನ, ತಮ್ಮಲ್ಲೂ ನೆಲೆಸಿ ನಿಂದರೆ,
ಕುಪ್ಪಳಿಸುವವು ಕುನ್ನಿ, ಕೂಸುಗಳು ತೋರಿ, ಹರ್ಷ ನೂರ್ಮಡಿಲು,
ಸಮಪಾಲು, ಸಮಬಾಳು, ಪುಟಿವ ಝರಿ, ಎದೆ ಎದೆಗಳಲ್ಲೂ
ಸೂರ್ಯನ ತೊಡೆಯ ಮೇಲೆ, ಪಡ್ಡೆಗಳಿಗೆ, ಕಥೆ ಕೇಳುವ ಅವಕಾಶ
ಹೋಂ ವರ್ಕ ತೋರಿಸಿ, ತಾವೆಷ್ಟು ಜಾಣರೆಂಬ, ಬೀಗುವ ಆವೇಶ
ಸುತ್ತಲೂ ಅರಳು, ಪರಿಮಳ, ಒಗರು, ಚಿಗುರು, ಹಸಿರು ಹೊನ್ನು
ಸಿಗುವುವೆಲ್ಲ ಕೂಸುಗಳಿಗೂ, ಕುಲಾಯಿ, ಕುಂಚಿಗೆಗಳು
ಹಾಗಾದರೆ ಮಳೆ ಇಳೆಯತ್ತ ಬರುವುದಾವ ರೀತಿ!
ಸಹಾರಾ, ಅಂಟಾರ್ಟಿಕಾಗಳಲ್ಲೂ ಕಾಡಿನ ಭೀತಿ,
ಮೂಢಣದಲಿ ಸೂರ್ಯನ ಮುಳುಗು, ಕಂಡರಿಯದ ರೀತಿ!
ಚಂದ್ರನ ದಾರಿಯಲ್ಲಿ, ಸಿಕ್ಕಾನು ಸೂರ್ಯ, ದಿನಕ್ಕೊಂದು ರೀತಿ
ಆದರೆ ಸೂರ್ಯ ಕೇಳುವದೇ ಇಲ್ಲ, ಅವನಿಗೆ ಅವನದೇ ರೀತಿ
ಮೂಢಣದ ಮೇಲೆ ಎಲ್ಲಿಲ್ಲದ ಪ್ರೀತಿ,
ಅವ್ವನಿಗೆ, ಬಡ ಮಗನ ರೀತಿ!
Comments
ಉ: ಅವ್ವ - ಲಕ್ಷ್ಮೀಕಾಂತ ಇಟ್ನಾಳ
ಇದಕ್ಕೆ ಕಾರಣ 'ಅವನೇ' ಬಲ್ಲ!