ಅಶ್ವ-ಮೇಧ
ಅಯ್ಯೋ..!! ಗೊಡ್ಡು ಕತ್ತೆ..!
ಅಂದಿನಿಂದ ಇಂದಿನವರೆಗೆ
ಅದೇ ಗತಿ,ಅದೇ ಬಟ್ಟೆ.
ಆಹಾ! ಏನಿದು ಸೊಬಗು,
ಇದೆಲ್ಲಿಯ ಸುಂದರ ಅಶ್ವ..?
ಅದರ ಹೊಳಪೇನು,
ವೈಯಾರದ ನಡೆಯೇನು.
ಏರಲೇ..?ಕಟ್ಟಿಹಾಕಲೇ..?
ಸನಿಹದಿಂದ ಮನದುಂಬಿ ನೋಡಲೇ..?
ಇದೇನಿದು ಹಣೆಪಟ್ಟಿ..!
ಯಾವುದೋ...
ಸಾಮ್ರಾಜ್ಯದ್ದಂತೆ.
ಕಟ್ಟಿದರೆ ಕದನವು,
ಸೋತವರ ಅಡಿಯಾಳು.
ಈ ಕತ್ತೆಯೊಡನೆ ಏಗುವುದೇ..?
ಬಾಳೆಲ್ಲ ಗೋಳಿಡುವುದೇ..?
ಅಡಿಯಾಳದರೇನು..?
ಅಶ್ವವದುವೇ ಸೊಬಗು..,
ಸಾಮ್ರಾಜ್ಯದಿ ಇನ್ನೆಷ್ಟು ನಲಿವೋ..!
ಕಟ್ಟುವೆ...
ಕಾದಾಡುವೆ...
ಅಡಿಯಾಳಾಗುವೆ.
ಅಶ್ವವೆಲ್ಲಿ...??!! ಕಾಣದೇ.
ಜಯಂತಬಾಬು
** ಬಟ್ಟೆ = ವಸ್ತ್ರ, ದಾರಿ **
Rating