ಅಸಹಾಯಕ
ನನ್ನ ನಿನ್ನ ಮಧ್ಯೆ ಎಲ್ಲಾ ಮುಗಿದಿರುವ ಈ ಹೊತ್ತಿನಲ್ಲಿ
ಹೋಗಿರುವೆ ನೀನು ತುಂಬಾ ದೂರ
ನಾನೂ ಹೋಗಿದ್ದೇನೆ, ಬಾಳ ದಾರಿಯಲ್ಲಿ ಪಯಣಿಗರಾಗಿ
ಒಂಟಿಯಾಗಿರುವ ನಿನ್ನ ನೋವು ಅರ್ಥವಾಗುತ್ತಿದೆ ಈಗ, ಆದರೆ ನಾನು ಅಸಹಾಯಕ
ನೀನು ಒಬ್ಬಳೇ ಆ ನೋವು ತಿನ್ನಲು ಅರ್ಹಳಲ್ಲ
ನಿನ್ನ ದೋಷಿ ನಾನು,ನಿನ್ನ ನೋವಿನ ಹೊಣೆ ನಾನು
ಎಲ್ಲವನ್ನೂ ತ್ಯಜಿಸಿ ಮರಳಿ ಬರಬೇಕೆನಿಸಿದೆ
ಮತ್ತೆ ನಿನ್ನ ತುಟಿಗಳಲಿ ನಗು ಬರೆಯಲು, ಆದರೆ ನಾನು ಅಸಹಾಯಕ
'ನೀನು ನನಗಾಗಿ', ಎಂದು ಬರೆದವ ಯಾವತ್ತೂ ಬರೆಯಲಿಲ್ಲ.
ನನಗೆ, ಸಿಕ್ಕರೆ ನಿನಗೆ, ಇದು ನಾನು ಮಾಡುವ ಸಮಾಧಾನ
ಅದಕ್ಕೆಂದೇ ನಿನ್ನ ಹುಡುಕುತಿರುವೆ, ಗೊತ್ತಿದ್ದೂ
ನಿನ್ನ ಎಂದಿಗೂ ಕಾಣಲಾರೆ ಎಂದು , ಅದಕ್ಕೇ ನಾನು ಅಸಹಾಯಕ
ನನ್ನಿಂದ ಮಾತ್ರವಲ್ಲ, ನೀ ದೂರವಾಗಿದ್ದು ಬದುಕಿನಿಂದ
ಬದುಕಿಗೆ ಬೆನ್ನು ತಿರುಗಿಸಿರುವ ನನ್ನ ಹುಡುಗಿ
ಒಮ್ಮೆ ಮರಳಿ ಬಂದು ನೋಡು, ಬದುಕು ಸುಂದರ
ಅದನ್ನು ಇನ್ನೂ ಸುಂದರವಾಗಿಸೋಣ, ಆಗ ನಾನಲ್ಲ ಅಸಹಾಯಕ
Rating
Comments
ಉ: ಅಸಹಾಯಕ
In reply to ಉ: ಅಸಹಾಯಕ by malathi shimoga
ಉ: ಅಸಹಾಯಕ
ಉ: ಅಸಹಾಯಕ
In reply to ಉ: ಅಸಹಾಯಕ by ksraghavendranavada
ಉ: ಅಸಹಾಯಕ
ಉ: ಅಸಹಾಯಕ