ಅಹಲ್ಯ
ಮೇಲೆ ಮುಗಿಲು
ಕೆಳಗೆ ಭುವಿಯು
ಅಲ್ಲೇ ನಿಂತಿಹೆನು
ರಸ್ತೆ ಬದಿಯ ಕಲ್ಲಾಗಿ
ದಾರಿ ಹೋಕರ ದಿವ್ಯ
ನಿರ್ಲಕ್ಷ್ಯಕೆ ಗುರಿಯಾಗಿ - - -
ಯಾರದೋ ದಾಳಕೆ
ಮತ್ಯಾರದೋ ಶಾಪಕೆ
ತನ್ನದಲ್ಲದ ಪಾಪಕ್ಕೆ
ಬಲಿಯಾದ ಸಂತಾಪಕೆ
ನಿಂತಿಹೆನು ಕಲ್ಲಾಗಿ
ಅಸ್ತಿತ್ವವಿಲ್ಲದ ಬದುಕಿನ
ಸಾಕ್ಷಿಯಾಗಿ - - -
ಕಾದಿರುವೆನು ರಾಮ
ನಿನ್ನ ಬರುವಿಗೆ
ನಿನ್ನ ಪಾದಸ್ಪರ್ಶವಾದ
ಕ್ಷಣವೇ ನನ್ನ ಜೀವದುತ್ಕರ್ಷವು - - -
ಕಮಲಬೆಲಗೂರ್
Rating
Comments
ಉ: ಅಹಲ್ಯ
ಮೇಡಮ್ ವಂದನೆಗಳು
ಅಹಲ್ಯ ಕುರಿತು ಸ್ವಗತದಲ್ಲಿ ಬಿಚ್ಚ್ಚಿಕೊಳ್ಳುವ ಕವನ ಸೊಗಸಾಗಿ ಮೂಡಿ ಬಂದಿದೆ. ಚಿಕ್ಕ ಜೊತೆಗೆ ಚೊಕ್ಕವಾದ ಕವನ ನಮ್ಮನ್ನು ಚಿಂತನೆಗೆ ಹಚ್ಚುವಂತಹುದು, ಉತ್ತಮವಾದ ಕವನ ಬರೆದಿದ್ದೀರಿ ಧನ್ಯವಾದಗಳು.
In reply to ಉ: ಅಹಲ್ಯ by H A Patil
ಉ: ಅಹಲ್ಯ
ಧನ್ಯವಾದಗಳು ಸರ್