ಅ….ನ್ಯಾಯ - ಲಕ್ಷ್ಮೀಕಾಂತ ಇಟ್ನಾಳ

ಅ….ನ್ಯಾಯ - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಅ…ನ್ಯಾಯ          - ಲಕ್ಷ್ಮೀಕಾಂತ ಇಟ್ನಾಳ

ಮೈ ತುಂಬ ಹಸಿರು, ಹೂ ಹಣ್ಣು

ಪರಿಮಳವೆ ಮರಗಳ ತುಂಬ,

ಬೇರಿಗೇಕಿಲ್ಲ ಹೂ ಹಣ್ಣು, ಕೇವಲ ಮಣ್ಣು!

 

ಹೊಟ್ಟೆ ಅರಗಲಾರದಷ್ಟು ತಿಂದು

ಬಂದಿರುವುದು ಬೊಜ್ಜು ಹೊಟ್ಟೆಗೆ,

ತಿಂದಿರುವುದೇನು ಅದರ ಅಂಗಿ!

 

ಸಿಟ್ಟಿನಾವೇಶದಲಿ ಇನ್ನೊಬ್ಬನನ್ನು ಕೊಂದವ

ಕಾರಾಗೃಹದಲ್ಲಿ ಇರನು ಉಪವಾಸ,

ಹೆಂಡತಿ ಮಕ್ಕಳಿಗೇಕೆ ವನವಾಸ

 

ಪುಣ್ಯಕೋಟಿಯ ಸತ್ಯಕೆ, ಕರುವನಗಲಿಸದೆ

ತಾನೇ ಸತ್ತಿತು ಹುಲಿರಾಯ ಹಾರಿ,

ಮಾಡಿತ್ತೇನು ಆ ಹುಲಿಯ ಮರಿ!

ಚಿತ್ರ ಕೃಪೆ : ಅಂತರ್ಜಾಲ

 

Rating
No votes yet

Comments

Submitted by H A Patil Tue, 12/17/2013 - 20:55

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
' ಅ ‍‍‍‍ನ್ಯಾಯ ' ನಮ್ಮ ನ್ಯಾಯ ವ್ಯವಸ್ಥೆಯನ್ನು ವಿಡಂಬಿಸುವ ಅರ್ಥಪೂರ್ಣ ಕವನ, ತ್ರಿಪದಿಯಲ್ಲಿಯೆ ಜೀವನದ ಗಹನತೆಯನ್ನು ಬಿಂಬಿಸುವ ಕವನ, ಧನ್ಯವಾದಗಳು.

Submitted by nageshamysore Fri, 12/20/2013 - 04:44

ಇಟ್ನಾಳ್ ಜಿ, ಪ್ರತಿ ಸತ್ಕಾರ್ಯದ ಬೆನ್ನಲೆ ಅಡಕವಾದ ಕ್ರೌರ್ಯದ ಮತ್ತೊಂದ ಮುಖವನ್ನು ಸರಳವಾಗಿ ತೆರೆದಿಟ್ಟ ಬಗೆ ಸೊಗಸಾಗಿ ಮೂಡಿಬಂದಿದೆ ಕವನದಲ್ಲಿ. ಧನ್ಯವಾದಗಳು!