ಅ ಕಪ್ ಓಫ್ ಕಾಫಿ ...ಖಾಲಿ ಕಪ್ ಕೆಳಗಿಟ್ಟ ಬಳಿಕ

ಅ ಕಪ್ ಓಫ್ ಕಾಫಿ ...ಖಾಲಿ ಕಪ್ ಕೆಳಗಿಟ್ಟ ಬಳಿಕ

 

 ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

 

ಹಿಂದಿನ ಸಿಪ್  

 

 

 

ಖಾಲಿ ಕಪ್ ಕೆಳಗಿಟ್ಟ ಬಳಿಕ



"ಹಲ್ಲೋ ..."
"ವೈಭವ್ ... ವೈಭವ್ ಕುಮಾರ್...?"
"ಹೌದು, ಯಾರು...?"
"ನಾನ್ಲೆ ಮಂಗ್ಯಾ ....?"ಬೆಳಗಾವಿ ದನಿ ಯಾರಪ್ಪ ಇದು ಎಂದು ನನ್ನನ್ನು ಮಂಗ ಅಂತ ಕರೆಯುವವರು ಅಂದುಕೊಳ್ಳುತ್ತಾ "ತಾವು ಯಾರು ಅಂತ ಗೊತ್ತಾಗ್ಲಿಲ್ಲ..." ಅಂದೆ.
"ಯಾವನ್ ಬಗ್ಗೆ ಚಿತ್ರ ವಿಚಿತ್ರವಾಗಿ ಬರದು ನೀನು ಪ್ರಚಾರ ಪಡಕೊಳ್ಳುಕೆ ಆಲೋಚಿಸ್ತಿದ್ದಿಯಾ ಆ ವಯ್ಯನೇ ..."

ಬೆಳಗಾವಿಯ ಯಾರ ಬಗ್ಗೆ ನಾನು ಚಿತ್ರ ವಿಚಿತ್ರ ಬರೆದು ಪ್ರಚಾರ ಗಿಟ್ಟಿಸಿಕೊಂಡೆ, ಅಸಲಿಗೆ ನನಗೆ ಬೆಳಗಾವಿಯ ಏನೊಂದು ಗೊತ್ತಿಲ್ಲ.ವರ್ಷಾಳ ಮೆಡಿಕಲ್ ಕಾಲೇಜ್ ಬಿಟ್ಟರೆ.

"ಸೊರ್ರಿ , ತಿಳಿಲಿಲ್ಲ" ಅನ್ನುವಷ್ಟರಲ್ಲಿ ಒಮ್ಮೆಲೇ ಮನಸಲ್ಲಿ ಮರೆಯಾದ ಹೆಸರು ನೆನಪಾಯಿತು.
"ಬದಿಮನಿ....?"
"ಹೌದಲೇ ತಮ್ಮಾ.... ಎಲ್ಲಿದ್ದಿಯಾ...?"
"ಊರಲ್ಲಿ, ಮರಳಿಗೂಡಿಗೆ...ನಿಮಗೆ ಹೇಗೆ ನನ್ ನಂಬರ್ ಸಿಕ್ತು ...?"
"ನಿನ್ನ ಜಿ. ಮೇಲ್ ಐಡಿ ಸಿಕ್ತು ನಿನ್ನ ಕಥೆಯಲ್ಲಿ, ಆ ಈ ಮೇಲ್ ಐಡಿ ಹಿಡಿದು ನಿನ್ನನ್ನು ಫೆಸ್ಬುಕ್ ನಲ್ಲಿ ಹುಡುಕಿದೆ ಅಲ್ಲಿ ನಿನ್ನ ಈಗಿನ ನಂಬರ್ ಸಿಕ್ತು."
"ನನ್ನ ಕಥೆನಾ ...?"
"ಅ ಕಪ್ ಆಫ್ ಕಾಫಿ... ನೀನೆ ಬರ್ದದ್ದು ತಾನೇ.."
"ಹೌದು ಆರು ವರುಷದ ಹಿಂದೆ, ಆದರೆ ಅದನ್ನು ಪುಬ್ಲಿಶ್ ಮಾಡ್ಬೇಕು ಅಂತಿದ್ದೆ, ರಿವ್ಯೂ ಗೆ ಕಳಿಸಿದ್ದೆ ಪ್ರೆಸ್ ನಿಂದ ಉತ್ತರವೂ  ಇಲ್ಲ , ನನ್ನ ಕಾಪಿನೂ ಇಲ್ಲ... ಕಾಫಿನೂ ಇಲ್ಲ ... ಅಲ್ಲಿಗೆ ಆ ಕಾಫಿ ಕಥೆ ಮುಗ್ದು ಹೋಯ್ತು ಸುಮ್ನೆ 50 ಸಿಪ್ ಬರೆಯಲು 356 ಪೇಜನ್ನೂ, ನನ್ನ ನಾಲ್ಕು ತಿಂಗಳನ್ನು ಹಾಳು ಮಾಡಿದೆ; ಸುಮ್ನೆ ಪ್ಲಾಪ್ ಆದೆ, ಆದ್ರೆ ನಿಮಗೆ ಈಗ ಆ 'ಅ ಕಪ್ ಆಫ್ ಕಾಫಿ' ಎಲ್ಲಿ ಸಿಕ್ಕಿತ್ತು...?"

"ಈಗ ನಾನು ಬೆಂಗಳೂರಿನ ಫಾರ್ಚ್ಯೂನ್ ಕಾಲೇಜ್ ನಲ್ಲಿ, ಪ್ಲೇಸ್ಮೆಂಟ್ ಡಿಪಾರ್ಟ್ ಮೆಂಟ್ ನಲ್ಲಿ ಪ್ಲೇಸ್ಮೆಂಟ್ ಆಫೀಸರ್ ಆಗಿ ಸೇರಿದ್ದೇನೆ, ಮೊನ್ನೆ ಕಾಲೇಜ್ ಮಗಜಿನ್ ಪ್ರಿಂಟಿಂಗ್ ಗೆ ಕೊಡಲು ಪ್ರೆಸ್ ಗೆ ಹೋದಾಗ, ಡ್ರಾಫ್ಟ್ ರೂಂನಲ್ಲಿ ಬಿದ್ದ ಒಂದು ಫೈಲ್ ಕಣ್ಣಿಗೆ ಬಿತ್ತು, ಐದು ನಿಮಿಷದ ಸಮಯವಿತ್ತು, ಓದ ತೊಡಗಿದೆ, ಕಥೆ ಇಂಟರೆಸ್ಟಿಂಗ್ ಆಗೇ ಇದೆ...

ಹೋಗ್ತಾ ಹೋಗ್ತಾ 'ಡ್ರೀಮ್ ಟೆಕ್'ನ ಹೆಸರು ಕಣ್ಣಿಗೆ ಬಿತ್ತು,ಹಳೆಯ ನೆನಪು ಮರುಕಳಿಸಿತು, ಪೂರ್ತಿ ಓದಲು ಸಮಯವಿರಲಿಲ್ಲ ಅದಕ್ಕೆ ಆ ಡ್ರಾಫ್ಟ್ ಅನ್ನು ಹಿಡಿದು ಮನೆಗೆ ಬಂದುಓದಲು ಶುರು ಮಾಡಿದೆ"

"ಥಾಂಕ್ಸ್ ಸರ್..., ಏನನ್ಸಿತ್ತು..?"

"ವೈಭು, ಯಾವತ್ತು ನೊವೆಲ್ಗಳನ್ನು ಹೆಚ್ಚು ಓದದ ನಾನು ಅಚಾನಕ್ಕಾಗಿ ಸಿಕ್ಕಇನ್ನು ಬಿಡುಗಡೆಯಾಗದ 'ಅ ಕಪ್ ಆಫ್ ಕಾಫಿ' ಓದುವ ಪ್ರಯತ್ನ ಮಾಡಿದೆ, ಓದ್ತಾ ಇದ್ದವನಿಗೆ ಕಥೆಯಲ್ಲಿ ಮುಳುಗಿದ್ದೆ ತಿಳಿಯಲಿಲ್ಲ, ಬೆಳಗಿಂದ ಕೆಲಸ ಮಾಡಿ ಸುಸ್ತಾದ ನಾನು  ರಾತ್ರಿ ನಿದ್ದೆ ಕೆಟ್ಟು ಕೈಯಲ್ಲೊಂದು "ಕಪ್ ಕಾಫಿ" ಹಿಡಿದು, ಡ್ರಾಫ್ಟ್ ನಲ್ಲಿ ರುವ ನಿನ್ನ 'ಅ ಕಪ್ ಆಫ್ ಕಾಫಿ' ಓದ್ತಾ ಹೋದೆ', ನಿನ್ನ ಕಥೆ ನನಗೆ ನನ್ನ ಹಳೆಯ ದಿನಗಳನ್ನು ನೆನಪಿಸಿತು, ನನ್ನ ಕಾಲೇಜ್ ದಿನಗಳು, ನನ್ನ ಅಂದಿನ ಗೆಳೆಯರು, ನನ್ನ ಮೊದಲ ಪ್ರೀತಿ, ಡ್ರೀಮ್ ಟೆಕ್ ನ ದಿನಗಳು .. , ಎಲ್ಲ ಕಣ್ಣ ಮುಂದೆ ಬಂದು ಹೋದಂತೆ ಭಾಸವಾಯಿತು, ಮುಂದಿನೆರಡು ದಿನಗಳು ಹೀಗೆ ರಾತ್ರಿ ಒಂದು ಕಪ್ ಕಾಫಿ ಯೊಂದಿಗೆ ಓದು ಮುಂದುವರೆಸಿದೆ, ವೈಭವ್ ನನ್ನ ಆತ್ಮೀಯ ಗೆಳಯನೆಂಬ ಭಾವನೆ ಕೂಡ  ಮೂಡುತ್ತಿತ್ತು. ಕೊನೆಯ ಸಿಪ್ ಓದುವ ಕ್ಷಣದಲ್ಲಿ ನನಗೆ ಅರ್ಜೆಂಟ್ ಕೆಲಸವೊಂದು ಬಂದಿತ್ತು, ವೈಭವ್ ಏನೋ US ಗೆ ಹೋದ, "ಪ್ರೀತಿ", "ಜೀವನ್" ಕೂಡ ಅಲ್ಲಿದ್ದರು, ಅವರನ್ನ ನೀನು ಒಂದು ಮಾಡುವ ಬಗ್ಗೆ ನನಗೆ ಸಂಶಯ ಇರಲಿಲ್ಲ,ಆದ್ರೆ "ಆಕೃತಿ" ಏನಾದಳು, ಅವಳ  "ಪೆರಿಯಪ್ಪ" ನಿಧನದ ಬಳಿಕ ನಿಮ್ಮಿಬ್ಬರ ಪ್ರೀತಿ ಏನಾಯ್ತು ಎನ್ನೋ ಕುತೊಹಲ ನನ್ನನು ನಿನ್ನೆ ಮತ್ತೆ  ಡ್ರಾಫ್ಟ್ ನೆಡೆಗೆ ಎಳೆಯಿತು, ಕೆಲಸ ಮುಗಿಸಿದವನೆ ಊಟ ಬಿಟ್ಟು ಡ್ರಾಫ್ಟ್ ಹಿಡಿದು, ಕೊನೆಯ ಸಿಪ್ ಓದಲು ಕುಳಿತೆ.

ಅದು ನಾನಂದು ಕೊಂಡಂತೆ ಮುಂದುವರಿಯಿತು, ಆದ್ರೆ ಕೊನೆಯಲ್ಲಿ" ಮುಗಿಯಿತು " ಅನ್ನೋದನ್ನ ಓದಿದ ಕೊಡಲೇ ನಿನ್ನ ಮೇಲೆಸ್ ಸಿಟ್ಟೆರಿತು.ಇಷ್ಟೊಂದು ಕುತೂಹಲ ಹುಟ್ಟಿಸಿ ಕೊನೆಗೆ ಆಕೃತಿ ಏನಾದಳು ಅನ್ನೋ ಬಗ್ಗೆ ಸರಿಯಾದ ವಿವರಣೆ ನೀಡದ್ದು ನನ್ನ ಸಿಟ್ಟಿಗೆ ಕಾರಣವಾಗಿತ್ತು."

ಅವರ ರಿವ್ಯೂ ಕೇಳಿ ಮೌನದಲ್ಲಿದ್ದೆ ಆದರು ನಾನು ಸಂಭ್ರಮಿಸುತಿದ್ದೆ.

ಸಲ್ಪ ತಡೆದು ಅವರು ಹೇಳಿದರು"ಆರು ವರ್ಷ ಆದರು ಈ ಕಥೆ ಅಚ್ಚೋತ್ತದೆ ಇದದ್ದಕ್ಕೆ ಬೇಸರ ವಾಯಿತು. ಇದಕ್ಕೆ ಕಾರಣ ಏನಿರ ಬಹುದು ...?"

ನಾನು ಮೌನದಲ್ಲಿದ್ದೆ. ಅವರು ಮುಂದುವರಿಸಿದರು "ನಿನ್ನ ಕಥೆ ಅಚ್ಚೋತ್ತದೆ ಇರಲು ಕಾರಣ ಹೇಳ್ತೇನೆ ಕೇಳು, ಕಥೆಗೆ ಸ್ಯೂಟ್ ಆಗುವ ಟೈಟಲ್ ಹೆಕ್ಕುವಲ್ಲಿ ನೀನು ಗೆದ್ದಿದ್ದಿಯಾ, ಅದಕ್ಕೆ ತಕ್ಕುದಾದ ಸಬ್ ಟೈಟಲ್ ಕೂಡ ಹಾಕಿದ್ದಿಯ, ಕಥೆ ಕಪ್ ಆಫ್ ಕಾಫಿ ಇಂದ ಶುರುವಾಗಿ ಕೊನಗೆ ಖಾಲಿ ಕಪ್ ಆಗುವ ತನಕ ತೆಕೊಂಡು ಹೋಗಿರುವ ರೀತಿ ತುಂಬಾ ಹಿಡಿಸಿತು. ಕಾಲೇಜ್ ಲೈಫ್, ಪ್ರೋಫ್ಫೆಶನಲ್ ಲೈಫ್ ನೈಜ್ಯವಾಗಿ ಬಂದಿದೆ. 2004 ರಿಂದ 2008 ರ ನಡುವಿನ ಚಿತ್ರಣ ಒದಗಿಸುವಂತಿದೆ, ಯಾವುದನ್ನು ನೀನು ಬಿಟಿಲ್ಲ.ಎಲ್ಲವೂ ಸೂಪರ್  !!"
"ಥ್ಯಾಂಕ್ಸ್ ಸರ್ ಆದ್ರೆ ಸೋತದ್ದು ಎಲ್ಲಿ ..?" ನಾನು ಆರು ವರ್ಷದಿಂದ ಕಾಡುತಿದ್ದ ಪ್ರಶ್ನೆಯನ್ನು ಅವರ ಮುಂದೆ ಇಟ್ಟೆ.

"ಅಷ್ಟೊಂದು ದೊಡ್ಡ ಕಥೆ ಬರಿಲಿಕ್ಕೆ ನಿನಗ ಪುರಸೊತ್ತು ಇತ್ತು ಲಾಸ್ಟ್ ಸಿಪ್ ತಲುಪಿದಾಗ ನೀನು ಆರ್ಜೆಂಟ್ ನಲ್ಲಿ ಕಥೆ ಮುಗಿಸಿದಂತೆ ಭಾಸ ಆಯಿತು... ಇದೆ ನಿನ್ನ ಕಥೆಗೆ ಮುಳುವಾಗಿದೆ.."

"ಅರ್ಥ ಆಗ್ಲಿಲ್ಲ"
"ಕಥೇನಾ ಓದೋ ಜನ ಅದರ ಕ್ಲೈಮಾಕ್ಸ್ ಒಳ್ಳೆದಾಗಿರಲಿ ಎಂದು ಬಯಸುತ್ತಾರೆ... "

"ಸರಿಯಾದ ಕ್ಲೈಮಾಕ್ಸ್ ಕೊಟ್ಟಿದ್ದೆನಲ್ಲಾ..."

"ಯಾವುದು ಸರಿಯಾದ ಕ್ಲೈಮಾಕ್ಸ್ ... ನಿನ್ನ ಕಥೆಯಲ್ಲಿ ನಿನ್ನ ಕಥೆಗೆ ಕ್ಲೈಮಾಕ್ಸ್ ಎಲ್ಲಿದೆ...?"

"ಇದಕ್ಕೆ ನಾನು ಏನು ಮಾಡ್ಲಿಕ್ಕೆ ಆಗಲ್ಲ ಸರ್, ನೈಜ್ಯ ಕಥೆ ನೈಜ್ಯವಾಗಿರಲಿ ಎಂದು ಹಾಗೆ ಇಟ್ಟೆ, ಕಥೆಗೆ ತಿರುವು ಕೊಡಲು ಭಯವಾಯಿತು."
"ಅಂದ್ರೆ ಇದರಲ್ಲಿರುವ ಎಲ್ಲಾ ವಿಚಾರನು ನಿಜಾನ..?"
"ನಿಮ್ಮ ಪಾತ್ರ ಓದಿ ಅದರಲ್ಲಿ ನಿಮಗೆ ಯಾವುದಾದರು ಎಕ್ಷ್ಟ್ರಾ ಫಿಟ್ಟಿಂಗ್ ಕಂಡಿದ್ಯಾ...?"

"ಇಲ್ಲ ಪ್ರತಿಯೊಂದು ಸೇಮ್ ಟು ಸೇಮ್ ಇದೆ, ಇಷ್ಟು ಸೇಮ್ ಟು ಸೇಮ್ ಬರೆದವನು ನಿನ್ನ ಲವ್ ಸ್ಟೋರಿಗೆ ಪರ್ಫೆಕ್ಟ್ ಎಂಡ್ ಕೊಡಲಿಲ್ಲ ಯಾಕೆ...?
'ಮನೆಯವರ ಮನಸ್ಸಿಗೆ ನೋಯಿಸಲು ಮನಸ್ಸಿರಲಿಲ್ಲ' ಹೇಳಿ ನೀನು ಜಾಣಕುರುಡುತನ ತೋರಿಸಿದಿ, ಯಾರನ್ನು ಮದುವೆಯಾದಿ ಎಂದು ನಿನ್ನೊಂದಿಗೆ ಇದ್ದ ನನಗೆ ಗೊತ್ತಾಗಲಿಲ್ಲ ... ಇನ್ನು ಹೊರಗಿನ ಪ್ರಪಂಚಕ್ಕೆ ಹೇಗೋ ಗೊತ್ತಾಗುತ್ತೆ...?"

"ನನ್ನ ಮದುವೆಯ ಚಾಪ್ಟರ್ ಹಾಕುವ ಅಗತ್ಯ ನನಗೆ ಕಾಣಲಿಲ್ಲ, ಜೀವನ ಮತ್ತು ಪ್ರೀತಿಯ ಕುರಿತು ಬರೆದ ಅ ಕಪ್ ಆಫ್ ಕಾಫೀನಲ್ಲಿ... "
"ಅಂದ್ರೆ ಇದು ಬರೀ ಜೀವನ್ ಮತ್ತು ಪ್ರೀತಿಯ ಕಥೇನಾ...?"
“ಹೌದು ಜೀವನ್ ಅಂದಂತೆ ಇದು ಜೀವನ್ ಮತ್ತು ಮಂಗಳೂರಿನ ಪ್ರೀತಿಯ ಕಥೆ ಆಗಿರಬಹುದು .. ಅದೇ ಅದು ನನ್ನ ಜೀವನ ಮತ್ತು ನನ್ನ ಪ್ರೀತಿಯ/ ಪ್ರೇಮದ ಕಥೆ ಆಗಿರಬಹುದು. ಎಲ್ಲ ಅವರವರ ಭಾವಕ್ಕೆ ಬಿಟ್ಟಿದ್ದು.”
"ಹಾಗಾದ್ರೆ ನಿನ್ನ ಕಥೆಯನ್ನು ಸರಿಯಾಗಿ ಓದುವವರಿಗೆ ಅರ್ಥ ಮಾಡು"
"ಓಕೆ ಸರ್ ಹಾಕ್ತೇನೆ ನನ್ನ ಕಥೆ"

"ಅದಿರ್ಲಿ ಅಸಲಿಗೆ ನೀನು ಯಾರನ್ನು ಮದುವೆಯಾದದ್ದು..? ಆಕೃತಿಯನ್ನ...? ವರ್ಷಾಳನ್ನು...?"

"ನೀವು ಹೇಳಿ ನನ್ ಮದುವೆ ಯಾರನ್ನು ಅದೇ ಹೇಳಿ ..."
"ವರ್ಷಾಳನ್ನು; ಮೊದಲಿಗೆ ಪ್ರೀತಿಯ ಜೊತೆಗೆ ಆಟವಾಡಿ, ಆಕೃತಿಯನ್ನು ಪ್ರೀತಿಮಾಡಿ ನಂತರ ವರ್ಷಾಳನ್ನು ಮದುವೆ
ಆದಿ ಸರಿ ತಾನೇ" ಅಂದ ಬದಿಮನಿ.

"ಏನ್ ಸಾರ್ ಹಿಡಿ ಕಥೆ ಓದಿ ಈ ರೀತಿ ಪ್ರಶ್ನೆ ಕೀಳ್ತೀರಲ್ಲ.. ಆಕೃತಿಯನ್ನೇ ನಾನು ಮದುವೆ ಆದದ್ದು "
"ಮತ್ತೆ ವರ್ಷ ...?”

“ಅವಳು ನಮ್ಮಿಬ್ಬರ ಪ್ರೇಮ ಕಥೆಗೆ ಸೇತುವೆಯಾಗಿದ್ದಳು, ಮನೆಯವರನ್ನು ಒಪ್ಪಿಸುತ್ತೇನೆ ಎಂದು ಮಾತುಕೊಟ್ಟಿದ್ದಳು, ಆದರೆ ಅದರ ಅಗತ್ಯ ಬೀಳಲಿಲ್ಲ"
"ಅಂದ್ರೆ ...?"
"ದೊಡ್ಡಪ್ಪಾ ಸುನಿಲ್ ನಿಗೆ ಭೇಟಿಯಾಗಿ ಕುಶಲೋಪಚಾರ ಕೇಳುವ ಮೊದಲೇ ನಮ್ಮಿಬ್ಬರ ಬಗ್ಗೆ ಹೇಳಿದ್ದರು, ಅವರು ನಮ್ಮಿಬ್ಬರನ್ನು ಸೇರಿಸಲು ಬಯಸಿದ್ದರು. ಆದರೆ ದೇವರು ಅವರ ಈ ಕನಸು ನನಸಾಗುವ ಮುಂಚೆ ಅವರನ್ನು ಕರಕ್ಕೊಂಡು ಬಿಟ್ಟ.

ಆಕೃತಿ ಮನೆಯವರಿಗೆ ನನ್ನ ಬಗ್ಗೆ ಒಳ್ಳೆ ಅಭಿಪ್ರಾಯಾನೇ ಇತ್ತು. ಮಗಳನ್ನು ಕೇಳಿದಾಗ ಅವರಾಗಿಯೇ ಒಪ್ಪಿದರು, ನನ್ನ ಮನೆಯಲ್ಲೂ ಮಗನ ನಿರ್ಧಾರ ಸರಿದಿದೆ ಎಂದೇ ಸ್ವಾಗತಿಸಿದರು, ಎಲ್ಲರು ಸೇರಿ ವಾಲಗ ಊದಿಸಿದರು,ವರ್ಷ ನಗುನಗುತ್ತ ಆಡಿಕೊಂಡಿದ್ದಳು .

ಕನಸಲ್ಲಿ ಕನವರಿಸುವುದನ್ನು ನನಸಾಗಿಸಬೇಕು ಎನ್ನುವುದಕ್ಕಿಂತ ಅವಳಲ್ಲಿ ತನ್ನ ಪ್ರಿಯ ವ್ಯಕ್ತಿ ಯಾವತ್ತು ಸಂತೋಷ ವಾಗಿರಬೇಕು ಎಂಬುದನ್ನು ತಿಳಿದುಕೊಂಡಿದ್ದಳು.

ಇಷ್ಟೇ ನನ್ನ ಕಥೆ"

"ಮತ್ತೆ ಕೊನೆ ಸಿಪ್ ನಲ್ಲಿ ಆಕೃತಿ ಚೆನ್ನೈನಲ್ಲಿ ಇದ್ದಾಳೆ ಮಗುವಿನ ಹೆಸರು ಏನೋ ವಿಕ್ಯಾಥ್ ಎಂದೆಲ್ಲ ಹೇಳಿದೆ...?" ಅಂದರು ಬದಿಮನಿ.

"ಹೌದು; ಮದುವೆ ಆಗಿ ಒಂದು ವರ್ಷ ಅವಳು ನನ್ನ ಜೊತೆ ಅಮೆರಿಕದಲ್ಲಿದ್ದಳು, ನಂತರ ಬಾಳಂತನಕ್ಕೆ ಭಾರತ ಸೇರಿದಳು, ಅತ್ತೆ ಮಾವನ ಪ್ರೀತಿಯ ನಂತರ, ಅಮ್ಮ ಚಿಕ್ಕಮ್ಮ ದೊಡ್ಡಮ್ಮನ ಪ್ರೀತಿ ಚೆನ್ನೈನಲ್ಲಿ ಅವಳನ್ನು ಎಳೆಯುತ್ತಿತ್ತು. ಅಲ್ಲಿ ಸೇರಿದಳು. ಲಕ್ಷ್ಮಿ ಸರ್ ಅವಳಿಗೆ ವರ್ಕ್ ಫ್ರೊಂ ಹೋಂ ಕೊಟ್ರು. ಮಗುವಿನ ಆರೈಕೆ ಜೊತೆಗೆ ಪ್ರಿಯ ಲಕ್ಷ್ಮಿ ಸರ್ ನ ಏಳಿಗೆಯಲ್ಲೂ ಅವಳು ನೆರವಾದಳು"

ಕಥೆಯ ಹಿಂದಿನ ನನ್ನ ಕಥೆ ಕೇಳಿ "ನಿನ್ನನ್ನು ಅರ್ಥ ಮಾಡಲು ತುಂಬಾ ಕಷ್ಟ ಇದೆ ಕಣೋ..." ಅಂದ್ರು ಬದಿಮನಿ ಸರ್.
"ಎಲ್ಲರನ್ನು, ಎಲ್ಲವನ್ನು ಅರ್ಥ ಮಾಡಲು ಹೋಗ ಬೇಡಿ , ನಾವು ಅರ್ಥೈಸಿದಂತೆ ಯಾವುದು ಇರುವುದಿಲ್ಲ" ಅಂದೆ.

"ಇನ್ನೂ ನಿನಗೆ ಆ ಕಾಫಿ ಕಪ್ ನ ಅಮಲು ಇಳಿಲಿಲ್ಲ ಅನ್ಸುತ್ತೆ..ಎಲ್ಲ ಡೈಲಾಗ್ ಇನ್ನೂ ಜ್ಞಾಪಕದಲ್ಲಿದೆ" ಅಂದರು ಆ ಬದಿಯಲ್ಲಿ ಬದಿಮನಿ.
"ಹೇಗೆ ಇಳಿಯುತ್ತೆ ಸರ್ ನನ್ನ ಮೊದಲ ನೊವೆಲ್.. ಅದು, ಮರೆಯಲು ಹೇಗೆ ಸಾದ್ಯ.. ಡೈಲಾಗ್ಸ್ ..."
ಅವರು ನಕ್ಕರು.
"ಡೈಲಾಗ್ಸ್ .. ಅವಳಿಗೆ ಹೇಳಿದ್ದೆ ನಾನು ಇದನ್ನು ತನ್ನ ಮೊದಲ ಕಾದಂಬರಿಯಲ್ಲಿ ಹಾಕ್ತೇನೆ ಹೇಳಿ.. "ಎಂದು ಮೇಲ್ಛಾವಣಿಯಲ್ಲಿ ಮೂಡಿದ ಆಕೃತಿಯ ಆಕೃತಿಗೆ ಕೊಟ್ಟ ಮಾತನ್ನು ನೆನಪಿಸಿಕೊಂಡೆ.
"ಸೂಪರ್ ಮಗಾ !!! ಸೂಪರ್ ಹಿಟ್  ಲವ್ ಸ್ಟೋರಿ ನಿನ್ನದು .. ಸೂಪರ್ ಹಿಟ್ !!"

ಮೊದಲ ಹೊಗಳಿಕೆಯ ಮಾತು ಕೇಳಿ ನಾನು ಮೇಲೆರುತಿದ್ದೆ.
ಅವರು "ಇದು ಬೇಕಾಗಿದ್ದು ಕಥೆಗೆ... ಓದುವವರು ವೈಭು ನ ಪ್ರೇಮಕಥೆ ಯ ಎಂಡಿಂಗ್ ಬಯಸುತ್ತಾರೆ, ಜೀವನ್ ನ ಕಥೆ ಮುಗಿಸಿ ನೀನು ಸುಮ್ಮನಾದಿ ಅದಕ್ಕೆ ಕಥೆ ಡ್ರಾಫ್ಟ್ ನಲ್ಲೆ ಉಳಿತು" ಎಂದು ಹೇಳಿದರು.

ನನಗೆ ನನ್ನ ಕಥೆಯಲ್ಲಿನ ಲೋಪ ತಿಳಿಯಿತು. ಆರು ವರ್ಷದ ಪ್ರಶ್ನೆಗೆ ಉತ್ತರ ಸಿಕ್ಕಿತು.

ಬದಿಮನಿ ಮುಂದುವರಿಸಿದರು "ಈಗ ನೋಡು ಹೇಗೆ ಕಥೆ ಸೂಪರ್ ಹಿಟ್ ಆಗ್ತದೆ ಹೇಳಿ, ನಾನು ನಿನ್ನ ಕಥೆಯನ್ನು ಪುಬ್ಲಿಶ್ ಮಾಡ್ತೇನೆ... ನನ್ನ ಹೆಸರು ಬದ್ನಾಮ್ ಆದರೂ ಪರವಾಗಿಲ್ಲ, ನಿನ್ನ ಹೆಸರು ಮೇಲೆ ಬರಲಿ, ಆಗ ನನಗೆ ನಿನಗೆ ಸಹಾಯ ಮಾಡಲಾಗಲಿಲ್ಲ ಎಂಬ ಹಳೇ ಕೊರಗು ನೀಗುತ್ತದೆ"

"ಅಂದ್ರೆ ನಾನು ನಡುವಲ್ಲಿ ಎಕ್ಸ್ಟ್ರಾ ಸಿಪ್ ಹಾಕಬೇಕಾ...?"

"ಬೇಡ ವೈಭು, ಎಲ್ಲಾ ಆ 50 ಸಿಪ್ ಗಳಲ್ಲಿ ಯಾವುದೇ ನ್ಯೂನತೆ ಗಳಿಲ್ಲ. ಬೇರೆ ಸೇರಿಸ ಬೇಕಾಗಿಯೂ ಇಲ್ಲ. ಕಥೆ ಅದೇ ರೀತಿ ಇರಲಿ, ನಿನ್ನ ನನ್ನ ಸಂಬಾಷಣೆ ಯನ್ನು ಹಿನ್ನುಡಿಯಲ್ಲಿ ಹಾಕ್ತೇನೆ. ಕಥೆ ಮುಗಿತು ಎಂದು ನನ್ನಂತೆ ಹತಾಷೆಯಾದ ಓದುಗರಿಗೆ ಹಿನ್ನುಡಿ ಓದಿ ಖುಷಿ ಕೊಡಲಿ ಕಾದಂಬರಿ"

"ಥ್ಯಾಂಕ್ಸ್ ಸರ್..."

"ಮತ್ತೆ ಆಕೃತಿ ಹೇಗಿದ್ದಾಳೆ...?"
"ಅವಳಿಗೆ ಏನಂತೆ, ವಿಕ್ಯಾಥ್ ಗೆ ಕನ್ನಡ ಕಲಿಸ್ತಿದ್ದಾಳೆ..."
"ನೀನು ಅವಳಿಗೂ ಕನ್ನಡ ಕಲಿಸಿ ಬಿಟ್ಟಿಯೇನೋ... ಓ ಅಲೆಮಾರಿ ಕನ್ನಡಿಗ.."
"ಹುನ್ ಮತ್ತೆ !!!" ಆ ಬದಿಯಲ್ಲಿ ಅವರು ನಕ್ಕರು. ಇನ್ನು ಈ ಲೈನ್ ಯಾವತ್ತು ಎಂಗೇಜ್ ಆಗಿರುತ್ತೆ "ಆಲ್ ದಿ ಬೆಸ್ಟ್ ಡಂಬು" ಎಂದರು ಬದಿಮನಿ ಕೊನೆಯಲ್ಲಿ.

ಕರೆ ಮುಗಿದಿತ್ತು.

 

ಆಕೃತಿ ಒಳಗಿಂದ "ರೀ ಕಾಫಿ !!!"

"ಅ ಕಪ್ ಆಫ್ ಕಾಫಿ" ಹೇಳುತ್ತಾ ಡೈನಿಂಗ್ ರೂಂ ಗೆ ಹೋದೆ. ಅಮ್ಮ ಅಪ್ಪ ಕಾಫಿ ಕುಡಿಯುತಿದ್ದರು, ಮಗ ತನ್ನ ಸಿಪ್ ಮುಗಿಸಿ "ಅಜ್ಜಿ ಇದರಲ್ಲಿ ಸಲ್ಪ ಕಾಫಿ ಹಾಕಿ" ಅಂದ.
ಅಜ್ಜಿ "ಅಪ್ಪಯ್ನಂದ್ ಬುದ್ದಿಯೇ ಬಂದಿತ್ತ್ ಮಗನ್ಗೆ, ಕಾಫಿ ಕುಡೀತಾ ಇದ್ರೆ ಮತ್ಯೇನು ಬ್ಯಾಡಾ!!!" ಎಂದು ನಕ್ಕರು.

ವರ್ಷಾ ಮಡಿಲಲ್ಲಿ ಮಲಗಿರುವ 'ಕೃಪಾ' ಗೆ ಹಾಲುಣಿಸುತಿದ್ದಳು. ಅವಳ ಫಸ್ಟ್ ಲವರ್ ನ ಫಸ್ಟ್ ಲವ್ 'ಕೃಪಾ' ಳಿಗೆ ತನಗೆ ತನ್ನ ಫಸ್ಟ್ ಲವ್ ಗೆ  ಕೊಡಲಾಗದ ಪ್ರೀತಿಯನ್ನು ಧಾರೆ ಎರೆಯುತಿದ್ದಳು.

ಮನೆಯವರು ಅಂದುಕೊಂಡಂತೆ ವರ್ಷಾ ನಮ್ಮ ಮನೆಯ ಸೋಸೆಯಾಗಿದ್ದಳು. ವೈಭವ್ ನ ಲೈನ್ ಬೇರೆಯವರೊಂದಿಗೆ ಸೇರಿರುವಾಗ ಗೌರವ್ ನ ಲೈನ್ ಕ್ಲೀರ್ ಆಗಿತ್ತು.

 

ಆಕೃತಿಯಲ್ಲಿ ನಾನು "ಬೈ ಟು" ಅಂದೆ. ಇಬ್ಬರು ಬೈ ಟು ಕಾಫಿ ಯನ್ನು ಅರ್ಧ ಸವಿದು ಕಪ್ ವಿನಿಮಯ ಮಾಡಿಕೊಂಡೆವು. ಕಪ್ಪಲ್ಲಿ ಅದೇ ಸಿಹಿ ಮನೆಮಾಡಿತ್ತು.

 

ಪ್ರತಿದಿನ ಈ ನಾಟಕ ನೋಡುವ ಮನೆಯವರಿಗೆ ಇದರಲ್ಲಿ ಏನು ಹೊಸತನ ಕಾಣಲಿಲ್ಲ.

****(*)****(-)****(*)****(-)****(*)****(-)****(*)****(-)****(*)****(-)****(*)****(-)****(*)****

01/02/2012

ಕಾಮತ್_ ಕುಂಬ್ಳೆ

Rating
No votes yet

Comments