ಅ ಕಪ್ ಓಫ್ ಕಾಫಿ ... ಸಿಪ್ - ೧
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಸಿಪ್ - ೧
"Happy B'day !!! All your dreams come true..."
ಕ್ಯುಬಿಕಲ್ C - 11 ನ 3 ನೇ ಮೂಲೆಯಲ್ಲಿ ಒಂದು ಗ್ರೀಟಿಂಗ್ ಕಾರ್ಡ್ ಇಟ್ಟಿದ್ದರು. ಬ್ಲಾಕ್ ಬ್ಯೂಟಿಯನ್ನು ಡೆಸ್ಕ್ ಮೇಲೆ ಇಟ್ಟು ಆ ಗ್ರೀಟಿಂಗ್ ಕಾರ್ಡ್ ಅನ್ನು ಕೈಗೆತ್ತಿಕೊಂಡೆ. ಲಾಸ್ ಎನ್ಜಿಲಾಸ್ ನ ಹೆಡ್ ಆಫೀಸ್ನಿಂದ ಬಂದ ಪತ್ರ ವಾಗಿತ್ತು. ನನ್ನನ್ನು ಯುಎಸ್ಸ್ ಗೆ ಕರೆದ ಕ್ರಿಸ್ ಅದನ್ನು ಕಳಿಸಿದ್ದ.
ಅಲೆಮಾರಿ ಗುಬ್ಬಿಗೆ ಹಾರಲು ಹುರುಪು ಕೊಟ್ಟವನು ಕ್ರಿಸ್...
ಕ್ರಿಸ್ ಇಟಲಿ ಪ್ರವಾಸದಲ್ಲಿದ್ದ, ಹಾಗೆ ಅವನಿಗೆ ಧನ್ಯವಾದ ಪೂರ್ವಕವಾಗಿ ಒಂದು ಮೇಲ್ ಡ್ರಾಫ್ಟ್ ಮಾಡುತ್ತಿರುವಂತೆ ಪ್ರೀತಿ ಹಿಂದಿನಿಂದ
"ಟ್ರೀಟ್ ಎಲ್ಲೋ ...? ನಿಂದು ಬರಿ ನಾಟಕನೇ.. ಇವತ್ತು ನಿನ್ನ 100$ ಖರ್ಚು ಮಾಡುವುದೇ .. ಎಲ್ಲಿ ಹೋಗೋಣ ಹೇಳು ..."
ಪ್ರೀತಿ ನಮ್ಮ ಮಂಗಳೂರು ಹುಡುಗಿ.ಇಂಜಿನಿಯರಿಂಗ್ ನ ಅಡ್ಮಿಶನ್ ನಿಂದ ಹಿಡಿದು ಇವತ್ತಿನ ವರೆಗೆ ನನ್ನನ್ನು ಬೆನ್ನು ಬಿಡದ ಭೂತ.
ಅವಳಲ್ಲಿ ಈಚೆಗೆ ಸಲಿಗೆ ಹೆಚ್ಚಾಗಿದೆ, ಅವಳೂ ಮೊದಲಿನಿಂದಲೂ ಚೆಲ್ಲು ಹುಡುಗಿ.
ಅಷ್ಟರಲ್ಲೇ ನನ್ನ ಮೋಡ್ಯೂಲ್ ನ ಉಳಿದ ೧೧ ಮಂದಿ ಕ್ಯುಬಿಕಲ್ ಗೆ ಲಗ್ಗೆ ಇಟ್ಟರು.ಅವರ ಹಿಂದೆ ಪ್ರಸಾದ್ ಒಂದು ಚಾಕೊಲೆಟ್ ಕೇಕ್ ನೊಂದಿಗೆ ಪ್ರತ್ಯಕ್ಷನಾದ.
ಪ್ರಸಾದ್ ನಾಯ್ಡು, ಬಂಗಾಳಿ ಬ್ರಾಹ್ಮಣ ೪೦ ಸಮೀಪಿಸಿದರೂ ೨೦ ರ ವರ್ಚಸ್ಸು, ಕಳೆದ ೧೦ ವರುಷದಿಂದ ಯುಎಸ್ಸ್ ಅನ್ನೇ ತವರು ಮಾಡಿಕೊಂಡ ಜನ. ಸದ್ಯಕ್ಕೆ ಮಾರಿಯಾ ಎಂಬ ತನಗಿಂತ ೫ ವರ್ಷ ಹಿರಿಯ ಬಿಳಿ ಹೆಣ್ಣಿನೊಂದಿಗೆ ಲೀವಿಂಗ್ ಟುಗೆದರ್ ಮಾಡಿ ಕೊಂಡಿದ್ದಾನೆ.Gen-Next Solutions ನ ಸ್ಯಾನ್ ಪ್ರನ್ಸಿಸ್ಕೋ ಶಾಖೆಯಲ್ಲಿ ಕಾನೂನು ಸಲಹೆಗಾರ. ನನ್ನಲ್ಲಿ ಭಾರತೀಯನೆಂಬ ಅಕ್ಕರೆ. Gen-Next Solutions ನಲ್ಲಿರುವ ಉಳಿದ ೫ ಭಾರತೀಯರಲ್ಲಿ ವಿಶೇಷ ಕಾಳಜಿ.ಯುಎಸ್ಸ್ ಗೆ ಬಂದ ಮೊದಲಲ್ಲಿ ಎಲ್ಲ ವಿಚಾರದಲ್ಲಿ ಸಹಾಯ ಮಾಡಿ ನನಗೆ ಹತ್ತಿರವಾದವನು.
"Happy B'day to Vaibhav" ಎಂದು ಎಲ್ಲರೂ ಹಾಡಲು ಶುರು ಮಾಡಿದರು. ಒಮ್ಮೆ ಆರಿಸಿದರೆ ಆರದಂತ ೨ ಮತ್ತು ೭ ಅಂಕೆಯ ಎರಡು ಮೊಂಬತ್ತಿಗಳನ್ನು ೨ ಪೌಂಡ್ ಚಾಕೋಲೆಟ್ ಕೇಕ್ ಮೇಲೆ ಬೆಳಗಿಸಿ ಯಾಗಿತ್ತು.ಪ್ರಯಾಸ ಪಟ್ಟು ೪ ಪ್ರಯತ್ನದ ಬಳಿಕ ೫ ನೇ ಬಾರಿಗೆ ಎರಡನ್ನೂ ಆರಿಸಿದೆ.
ನನ್ನ ಪ್ರತಿ ಪ್ರಯತ್ನಕ್ಕೆ ಪ್ರಸಾದ್ ಹಿಂದೆ ಒಂದೊಂದು ಬಂಪ್ಸ್ ಕೊಡುತಿದ್ದ. ಒಂದೊಂದು ಬಮ್ಸ್ ಕಾಲೇಜ್ ದಿನದಲ್ಲಿ ಹಾಸ್ಟೆಲ್ನಲ್ಲಿ ತಿಂದ ಒದೆತ ನೆನಪಿಸುವಂತಿತ್ತು.
******
ಡಿಸೆಂಬರ್ ೨೩ - ೨೦೦೪
"Mr. Vaibhav , will you ready to come to Chennai..?? "
"Sure ...!!!"
"Any questions for Dream-Tech ...??"
"No ...!!! Thanks a lot !!!!"
"You welcome..."
HR ರೌಂಡ್ ಮುಗಿಸಿ ಹೊರ ಬಂದಿದ್ದೆ. ಹಿಂದಿನ ರಾತ್ರಿ ನನಗೆ ತಯಾರಿ ಮಾಡಲು ಬಿಟ್ಟಿರಲಿಲ್ಲ ನನ್ನ ರೂಂಮೇಟ್ಸ್ ಗಳ ಮೇಲಿನ ಕೋಪದಿಂದಲೇ ಇವತ್ತು ಇಂಟರ್ವ್ಯೂ ಗೆ ಬಂದಿದ್ದೆ, ಎಲ್ಲ ಇಷ್ಟು ಸಲೀಸಾಗಿ ನಡೆಯುತ್ತೆ ಅಂತ ಅಂದು ಕೊಂಡಿರಲಿಲ್ಲ. ತುಂಬಾನೆ ಖುಷಿಯಾಯಿತು. ನಾನು ಬಾಗಿಲಲ್ಲಿ ಹೊರ ಬರಲು ಪ್ರೀತಿ ಬಾಗಿಲಲ್ಲೇ ನಿಂತಿದ್ದಳು.
"ಏನಾಯ್ತು ...?"
"Thank God !!! ನಾಳೆಯಿಂದ ಪ್ರಿಪರೆಶನ್ ಮಾಡ್ಬೇಕು ಅಂತ ಇಲ್ಲ. ಇನ್ನು ಬರುವ ಕಂಪೆನಿಗೆಲ್ಲ ನಮ್ಮ ಕಾಲೇಜ್ ಲೋಗೋ ಇರುವ ಬಾಡ್ಜ್ ಹಾಕಿ ಒಲೆನ್ಟಿಯರ್ ಆಗಿ ತಿರುಗಿದ್ರೆ ಆಯಿತು..."
"Really .... Congrats !!! " ಅಂದಳು ಗಡಿಬಿಡಿಯಲ್ಲೇ.
"ಆಲ್ ದಿ ಬೆಸ್ಟ್, ನೀನು ಸೆಲೆಕ್ಟ್ ಆಗ್ತೀಯ .." ಅಂದೆ.
ಅವಳು ಮುಗಳ್ ನಗುತ್ತಾ ಮುಂದಿನ ಬಾಗಿಲು ದೂಡಿದಳು.
Dream-Tech !!! ನನ್ನ (ಮನೆಯವರ) ಕನಸು ನಿಜವಾದಂತಾಯಿತು. ಹೆತ್ತವರಿಗೆ ಮಕ್ಕಳು ಎಂದರೆ ಶೋ ಕೇಸ್ ನಲ್ಲಿರುವ ಗೊಂಬೆಯಂತೆ ಎಲ್ಲರ ಎದುರು ಪ್ರದರ್ಶನದ ವಸ್ತು. ಬಾಲವಾಡಿಯಿಂದ ಹಿಡಿದು ಕ್ಯಾಂಪಸ್ ಸೆಲೆಕ್ಷನ್ ವರೆಗೂ ಎಲ್ಲರಿಗಿತ ಮುಂದೆ ಇರಬೇಕು ಎನ್ನುವ ವಾಂಛೆ. ನಾನು ಇದರಿಂದ ಹೊರಗಾಗಿರಲಿಲ್ಲ. ನಾನು ಮೊದಲ ೭ ಕಂಪೆನಿ ಯಲ್ಲಿ ಸೆಲೆಕ್ಟ್ ಆಗದೆ ಇರುವುದು ಅವರಿಗೆ ನನ್ನಗಿಂತ ಹೆಚ್ಚೇ ಬೇಜಾರು ಮಾಡಿಸಿತ್ತು.
ಈಗ ಕನಸು ನನಸಾದ ವಾರ್ತೆ ಪ್ರಸರಿಸುವ ಸಮಯ... ಮೊಬೈಲ್ ಕೈಗೆತ್ತಿಕ್ಕೊಂಡು ಸ್ಪೀಡ್ ಡಯಲ್ ನಲ್ಲಿ ಅಸೈನ್ ಮಾಡಿ ಇಟ್ಟ ೩ ನೇ ನಂಬರ್ ಅನ್ನು ಅದುಮಿದೆ.
"ಅಮ್ಮ ಕೊನೆಗೂ ಸೆಲೆಕ್ಟ್ ಆದೆ , ಆದರೆ ಚೆನ್ನೈ"
"congrats ... ಪರವಾಗಿಲ್ಲ ..."
ಫೋನ್ ಕೈಯಲ್ಲಿರುವಾಗ್ಲೇ ಅಮ್ಮ ಮನೆ ಕೆಲಸದವಳಲ್ಲಿ " ಲಕ್ಷ್ಮೀ ವೈಭು ಗೆ ಚೆನ್ನೈ ಕಂಪನಿಯಲ್ಲಿ ಕೆಲಸ ಸಿಕ್ತೆ .... " ಹೇಳಿದ್ದು ನನಗೆ ಈ ಬದಿಯಲ್ಲಿ ಕೇಳುತಿತ್ತು.
ನಾನು "ಅಮ್ಮಾ ಮತ್ತೆ ಫೋನ್ ಮಾಡ್ತೇನೆ ... ಇನ್ನು ಎಲ್ಲ ಮುಗ್ದಿಲ್ಲ... ಅಲ್ಲಿ ಜೋಯ್ನ್ ಅದಮೇಲೆ ಸಂಭ್ರಮಿಸುವಿಯಂತೆ .." ಅಂದೆ.
ಅಮ್ಮ " ಸೆಲೆಕ್ಟ್ ಆದಿ ಯಲ್ಲ ಇನ್ನು ಅವರು ಕರೆದೇ ಕರೆಯುತ್ತಾರೆ ... ಅಪಶಕುನ ಮಾತಾದ ಬೇಡ..."
"ಸರಿ ಅಮ್ಮಾ, ಕಂಪೆನಿ ಫಾರ್ಮಾಲಿಟೀಸ್ ಮುಗಿಸೋದಿದೆ ಮತ್ತೆ ಕಾಲ್ ಮಾಡ್ತೇನೆ .."
ಮೊಬೈಲ್ ಕಿಸೆಗೆ ಜಾರಿಸಿ ಅಡ್ಮಿನ್ ಡಿಪಾರ್ಟ್ಮೆಂಟ್ ಕಡೆಗೆ ನಡೆದೆ, ಎಲ್ಲ ರೆಕಾರ್ಡ್ಸ್ ಸಬ್ಮಿಟ್ ಮಾಡಿ ಹೊರಬರಲು ಪ್ರೀತಿ ಸಿಕ್ಕಳು.
"Give me a high-five !!!.... ನಾನೂ ಚೆನ್ನೈ ...!!!" ಅಂದಳು.
"congrats !!!"ಅಂದೆ. ಮತ್ತೆ ಮುಗುಳ್ ನಗೆ.
"ಬಾ Dream-Tech ಫಾರ್ಮಾಲಿಟೀಸ್ ಮುಗಿಸಿ, ಪ್ಲೇಸ್ ಮೆಂಟ್ ಮಂ ಗೆ ಸಲಾಂ ಹೊಡೆದು ಬರುವಾ..."
"ಸರಿ .. ಎರಡು ನಿಮಿಷ ನಿಲ್ಲು :)"
ಅವಳ ಫಾರ್ಮಾಲಿಟಿ ಮುಗಿದ ಬಳಿಕ ಇಬ್ಬರೂ ಪ್ಲೇಸ್ ಮೆಂಟ್ ಡಿಪಾರ್ಟ್ಮೆಂಟ್ ಗೆ ನಡೆದೆವು.
ನಡುವಲ್ಲಿ ಸಿಕ್ಕ ರೋಹಿತ್ ಗೆ "I'm going to Chennai... " ಅಂದಳು. ಅವಳಿಗೆ ಕಾಲೇಜ್ ನ ಪ್ರತಿ ವಿಧ್ಯಾರ್ಥಿಯ ಪರಿಚಯವಿತ್ತು.ಎಲ್ಲರಲ್ಲೂ ಬೆರೆಯುವ ಹುಡುಗಿ. ನಾನೇ ಈ ವರೆಗೆ ಅವಳಲ್ಲಿ ಮಾತಾಡಿರಲಿಲ್ಲ. ಕಾಲೇಜ್ ಅಡ್ಮಿಶನ್ ದಿನದ ಬಳಿಕ ಅವಳಲ್ಲಿ ಇವತ್ತೇ ಮಾತಾಡಿದ್ದು.
"May I get in??"
"Yes, Vaibhav .. come in "
ಇಬ್ಬರೂ ರಶ್ಮಿ ಮೇಡಂ ನ ಎದುರಿಟ್ಟ ಎರಡು ಚೇರ್ ಮೇಲೆ ಕುಳಿತುಕೊಂಡೆವು.
ರಶ್ಮಿ ನಮ್ಮಿಬ್ಬರಲ್ಲಿ "ಫೈನಲ್ HR ರೌಂಡ್ ಹೇಗಾಯ್ತು..?"
ನಾನು ಬಾಯ್ತೆರೆಯುವಷ್ಟರಲ್ಲಿ ಪ್ರೀತಿ "ನಾವಿಬ್ರು ಸೆಲೆಕ್ಟ್ ಆದ್ವಿ.."
ರಶ್ಮಿ "ರಾಹುಲ್ ...?"
ಪ್ರೀತಿ "ಇಲ್ಲ ... ಹೋದ ... ನನ್ನ ಕಾಲೇಜ್ ಇಂದ ನಾವಿಬ್ಬರೇ.."
ರಶ್ಮಿ "congrats ..!!!"
ಇಬ್ಬರೂ ಸೇರಿ "Thanks" ಅಂದು ಸೀಟ್ ನಿಂದ ಎದ್ದೆವು.
ರಶ್ಮಿ ನನ್ನಲ್ಲಿ "Happy B'day ವೈಭವ್"
ಇನ್ನೊಮ್ಮೆ ಧನ್ಯವಾದ ಹೇಳಿ ಹೊರ ಬಂದೆವು.
ಪ್ರೀತಿ ನನ್ನಲ್ಲಿ "b'day ಬಾಯ್ ಸ್ಪೆಷಲ್ ಗಿಫ್ಟ್ ಒನ್ ಸ್ಪೆಷಲ್ ಡೇ ..!!!"
ಹೇಗೆ ಪ್ರತಿಕ್ರಿಯಿಸುವುದೋ ತಿಳಿಯಲಿಲ್ಲ..
ಅವಳು "ಮತ್ತೆ ಪಾರ್ಟಿ ...?"
"ನಿಂಗೂ ಗಿಫ್ಟ್ ಸಿಕ್ಕಿಲ್ವಾ ...? ನಿನ್ನ ಪಾರ್ಟಿ ಬರಲಿ ಮೊದಲು..."
ಅವಳು "ನಿಂದು ಎರಡೆರಡು ಸ್ಪೆಷಲ್ ನ್ಯೂಸ್ ಇದೆ ಹಾಗೆ ನೀನು"
"ಲೇಡಿಸ್ ಫಸ್ಟ್"
ಅವಳು "ಸರಿ ಬಿಡು ಇವತ್ತು ನಾನೇ ಕೊಡ್ತೇನೆ... ನೀನು ನಾಳೆ ದೊಡ್ಡ ಪಾರ್ಟಿ ಕೊಡುವಿಯಂತೆ..."
"ಏನು ಅಮ್ಮಾವ್ರು ನಾಳೆ ನನ್ನ ಲೂಟಿ ಮಾಡುವ ಅಂದಾಜಲ್ಲಿ ಇದ್ದ ಹಾಗೆ ಇದೆ"
"ಹುಂ, ಮತ್ತೆ ಹುಡುಗೀರು ಇರುವುದೇ ಹುಡುಗರನ್ನು ದೋಚಲು ಆಲ್ವಾ ... !!!"
"ಓಕೆ, ಬಿಡಮ್ಮ ಸೋತೆ ... ಹೇಳು ಎಲ್ಲಿ ಇವತ್ತು ನಿನ್ನ ಪಾರ್ಟಿ ...?"
"ಪಾರ್ಟಿ ಗೀರ್ಟಿ ಏನಿಲ್ಲ A cup of coffee !!! ಅಷ್ಟೇ !!!!"
"ಅಬ್ಬಬ್ಬಾ .... ಕೊಂಜೂಸ್ ಪಾರ್ಟಿ .. ಇವಳಿಂದ ನಾನು ಪಾರ್ಟಿ ಕೇಳ್ತಾ ಇದ್ದೆನಲ್ಲಾ ... ಇರಲಿ ಕಾಫಿ ಗಾದ್ರು ಕರೀತಾ ಇದ್ದೀಯಲ್ಲ ನನ್ನ ಪುಣ್ಯ..."
"ಸರಿ ನಡಿ, ಎಲ್ಲಿಟ್ಟಿದ್ದಿಯಾ ನಿನ್ ಬೈಕ್ ..?"
"ಬೈಕ್ ಯಾಕಮ್ಮ ಕ್ಯಾಂಟೀನ್ ನ ೩ ರುಪಾಯಿಯ ಕಾಫಿಗೆ..?"
"ಓ ಮಹರಾಯ !! ಅಷ್ಟೊಂದು ಕಂಜೂಸ್ ಅಲ್ಲ ಕಣೋ ... ಕ್ಯಾಂಟೀನ್ ನಲ್ಲಿ ಅಲ್ಲ Cafe Coffee Day ಗೆ ಹೋಗೋಣ "
"A cup of coffee !!! @ CCD ಹಾಂ !!!"
ಪಾರ್ಕಿಂಗ್ ಏರಿಯ ದಲ್ಲಿ ನಿಲ್ಲಿಸಿದ್ದ ಬೈಕ್ ಬಳಿಗೆ ಇಬ್ಬರೂ ನಡೆಯಲು. ಫೈನಲ್ ರೌಂಡ್ ನಲ್ಲಿ ಸೋತ ರಾಹುಲ್ Bye ಅಂದ .
Comments
ಉ: ಅ ಕಪ್ ಓಫ್ ಕಾಫಿ ... ಸಿಪ್ - ೧
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೧ by Chikku123
ಉ: ಅ ಕಪ್ ಓಫ್ ಕಾಫಿ ... ಸಿಪ್ - ೧
ಉ: ಅ ಕಪ್ ಓಫ್ ಕಾಫಿ ... ಸಿಪ್ - ೧
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೧ by santhosh_87
ಉ: ಅ ಕಪ್ ಓಫ್ ಕಾಫಿ ... ಸಿಪ್ - ೧