ಅ ಕಪ್ ಓಫ್ ಕಾಫಿ ... ಸಿಪ್ - ೨೦
ಸಿಪ್ - ೨೦
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
"ಅಬ್ಬಾ ಸದ್ಯಕ್ಕೆ ಇನ್ನು ಎರಡು ವಾರಗಳ ಮಟ್ಟಿಗೆ ರೆಸ್ಟ್ !" ಎಂದು ಸಮಧಾನಗೊಂಡೆ ಕ್ರಿಸ್ ನ ರಿಪ್ಲೈ ಓದುತ್ತಾ; ತಡ ರಾತ್ರಿ ಕಳುಹಿಸಿದ ಎರಡನೇ ಆವೃತ್ತಿಯನ್ನು ಕ್ಲೈಂಟ್ ಸೈಡಿನಲ್ಲಿ ಪೂರ್ಣ ಪ್ರಮಾಣದಲ್ಲಿ ಒಪ್ಪಿ ಪ್ರೊಡಕ್ಷನ್ ಸೈಟ್ ಗೆ ಕಳುಹಿಸಲಾಗಿತ್ತು. ಮೇಲ್ ನ ಸಿ.ಸಿ ಲಿಸ್ಟ್ ನಲ್ಲಿ ಡ್ರೀಮ್-ಟೆಕ್ ನ ದೊಡ್ಡ ದೊಡ್ಡ ಕುಳಗಳನ್ನು ಕ್ರಿಸ್ ಸೇರಿಸಿದ್ದ. ಒಂಬತ್ತು ಗಂಟೆಗೆ ಶುರುವಾಗುವ ಶಿಫ್ಟ್ ಅನ್ನು ಇವತ್ತು ನಾನು ಬೆಳಗ್ಗೆ ೮ ಕ್ಕೆ ಆಫೀಸ್ ಗೆ ಬಂದು ಮಾಡುತಿದ್ದೆ.
ಕ್ರಿಸ್ ಯಾವುದಾದರು ಸಹಾಯ ಅವನ ತಡ ರಾತ್ರಿಯಲ್ಲಿ ಬೇಕಾಗ ಬಹುದು ಎಂದಿದ್ದ ಆ ಕಾರಣ ದಿಂದಲೇ, ಇವತ್ತು ಬೇಗ ಬಂದಿದ್ದೆ. ಬಂದವನೇ ಸ್ಕೈಪ್ ನಲ್ಲಿ ಲಾಗಿನ್ ಆಗಿದ್ದ ನನ್ನ ನೋಡಿ ನನ್ನ ಸಮಯಕ್ಕೆ ಸರಿಯಗುವಂತೆ "ಗುಡ್ ಮಾರ್ನಿಂಗ್ ವೈಭವ್" ಎಂದು ಪಿಂಗ್ ಮಾಡಿದ.
ನಾನು ಅವನಿಗೆ ಮರುವಂದನೆ ಸಲ್ಲಿಸುತ್ತ ಅವನ ಅಪ್ರಿಸಿಯೇಶನ್ ಗೆ ಧನ್ಯವಾದಗಳನ್ನು ಸಲ್ಲಿಸಿದೆ. ಅದಕ್ಕೆಅವನು ಪೋಸ್ಸಿಟಿವ್ ಆಗೇ ರೆಸ್ಪೊಂಡ್ ಮಾಡಿದ. ಅವನಲ್ಲಿ ಹೆಚ್ಚಿನ ಮಾತಾಡಿರಲಿಲ್ಲ ಈ ವರೆಗೆ, ಅಸಲಿಗೆ ಜೀವನ್ ನನ್ನ ವಿಸಿಬಿಲಿಟಿ ಅವನಿಗೆ ತೋರಿಸಿ ಕೊಟ್ಟಿರಲಿಲ್ಲ; ಹೇಳಿ ಕೇಳಿ ಅವನು ಎಂ.ಬಿ ಎ ಕಂ ಐ.ಐ.ಟಿ ವಿದ್ಯಾರ್ಥಿ ಆಗಿದ್ದ ಅವನಲ್ಲಿ ಮನೆಜ್ಮೆಂಟ್ ನ ವೈರಸ್ ಆಗಲೇ ಸೇರಿ ಹೋಗಿತ್ತು.ಯಾಕಾದರೂ ಅವನು ನನಗೆ ಕ್ರೆಡಿಟ್ಸ್ ಕೊಡುವ..? ಜೀವನ ಈ ಒಂದು ವರ್ಷದಲ್ಲಿ ತನ್ನ ಕ್ಲೈಂಟ್ ಗಳಲ್ಲಿ ಒಳ್ಳೆಯ ಹೋಲ್ಡ್ ಸಂಪಾದಿಸಿದ್ದ; ತಾನು ಸಂಪಾದಿಸಿದ್ದ ಪದವಿಯನ್ನು ಇತರರೊಂದಿಗೆ ಹಂಚಿಕೊಳ್ಳುವವನಾಗಿರಲಿಲ್ಲ.
ಕ್ರಿಸ್ ನ ಮೇಲ್ ಅನ್ನು ಇನ್ನೊಮ್ಮೆ ಓದಿದೆ; ಹೌದು ಅವನು ಇಲ್ಲಿ ನಾನು ಮಾಡಿದ ಮನ್ಯುಲೈಫ್ ನ ಪ್ರಾಜೆಕ್ಟ್ ಅನ್ನು ಹೊಗಳಿ ಹೊಗಳಿ ಬರೆದಿದ್ದ; ಇದಲ್ಲದೇ ಹಿಂದಿನ ತಿಂಗಳು ಜೀವನ್ ಡೆಲಿವೆರಿ ಕೊಟ್ಟ ಹಳೆಯ ಯಾವುದೋ ಪ್ರಾಜೆಕ್ಟ್ ನ ಬುಗ್ ಸಾಲ್ವ್ ಮಾಡಿದ್ದನ್ನು ಸೇರಿಸಿದ್ದ, ಜೀವನನ ಗಿಂತ ನಾನು ಶ್ರೇಷ್ಠ ಎಂಬ ಭಾವನೆ ಮತ್ತೆ ಮತ್ತೆ ನನ್ನನ್ನು ಉಬ್ಬಿಸುತಿತ್ತು; ಆದರೆ ಎಲ್ಲಿ ವರೆಗೆ ಉಬ್ಬಿ ಕೊಳ್ಳಲಿ; ಮುಂದಿನವಾರ ಅದಿಪತಿ ಜೀವನ್ ಬಂದ ನಂತರ ನಾನು ಮತ್ತೆ ಎಲೆ ಮರೆಯ ಕಾಯಿ ಎಂದು ಸುಮ್ಮನಾದೆ.
ಹಂಗಾಮಿ ನಾಯಕ ಎಷ್ಟೆಂದರೂ ಹಂಗಾಮಿ ನಾಯಕನೇ, ಪೂರ್ಣಾವಧಿ ನಾಯಕ ಹರಾಮಿ ಆಗಿದ್ದರೂ ಅವನು ಎಂದೆಂದಿಗೂ ಪ್ರಭಾವಿ ನಾಯಕ !
ಕ್ರಿಸ್ ಗೆ ನಾನು ಕ್ರಿಸ್ಮಸ್ ಮತ್ತು ಹೊಸವರ್ಷದ ಶುಭಾಷಯ ತಿಳಿಸಿದೆ; ಅವನು ವಿನಿಮಯ ಮಾಡಿಕೊಂಡನು. ನನ್ನ ಫ್ರೆಂಡ್ ಲಿಸ್ಟ್ ನಲ್ಲಿ ಸೇರಿಸಿಕೊಂಡವರಲ್ಲಿ ಕ್ರಿಸ್ ಮೊದಲ ಭಾರತೀಯನೇತರ ವ್ಯಕ್ತಿ ಆಗಿದ್ದ.
ಮಾಡಲು ಕೆಲಸವಿಲ್ಲದೇ, ಆನ್ಲೈನ್ ಪೇಪರ್ ಓದುತ್ತ ಕುಳಿತವನಿಗೆ ಬರುತಿದ್ದ ಒಂದೊಂದು ಮೇಲ್ ಇನ್ನು ಮೇಲಮೇಲಕ್ಕೆ ಏರಿಸುತಿತ್ತು; ಕ್ರಿಸ್ ಸಿಸಿ ಯಲ್ಲಿ ಸೇರಿಸಿರುವ ಪ್ರತಿಯೊಬ್ಬ ದೊಡ್ಡ ಆಸಾಮಿಗಳು ನನಗೆ ಕಾಂಗ್ರಟ್ಸ್ ಹೇಳುತ್ತಾ ಅಭಿನಂದನೆಗಳನ್ನು ಕಳುಹಿಸುತಿದ್ದರು.
ಯಾವತ್ತು ಆಕೃತಿ ಯೊಂದಿಗೆ ಬರುತಿದ್ದ ನಾನು ಇವತ್ತು ಅವಳನ್ನು ಬಿಟ್ಟು ಬಂದಿದ್ದೆ; ಅವಳು ಆಫೀಸ್ ತಲುಪುತಿದ್ದಂತೆ ೧೦ ೩೦ ದಾಟಿತ್ತು; ಅಲ್ಲಿ ವರೆಗೆ ಸಮಯ ಕಳೆಯುವುದೇ ಕಷ್ಟವಾಗಿತ್ತು, ಅವಳು ಬಂದೊಡನೆ ನನ್ನ ಡೆಸ್ಕ್ಗೆ ಬಂದು ನಿನ್ನೆಯ ಕೆಲಸದ ಬಗ್ಗೆ ವಿಚಾರಿಸಿದಳು; ಅವಳಿಗೆ ಇಲ್ಲಿವರೆಗೆ ಹರಿದು ಬಂದ ಮೇಲಗಳನ್ನು ತೋರಿಸಿದಾಗ ಕೈಗೆ ಕೈ ಸೇರಿಸುತ್ತಾ "ಕಾಂಗ್ರಟ್ಸ್ ವೈಭು !! ಅಂತು ನೀನು ಸ್ಪೆಷಲ್ ಸ್ಕಿಲ್ ಆಯ್ಕೆ ಮಾಡಿದ್ದಕ್ಕೆ ಸಾರ್ಥಕ ವಾಯಿತು" ಅಂದಳು.
ಲಕ್ಷ್ಮಿ ಸರ್ ನನಗೆ ಈ ಪ್ರಾಜೆಕ್ಟ್ ಅನ್ನು ಅಸ್ಸೈನ್ ಮಾಡುವ ಮೊದಲು ಆಕೃತಿಗೆ ಇದರ ಪ್ರೊಪೋಸಲ್ ಇಟ್ಟಿದ್ದರು; ಆದರೆ ಇದು ಸ್ಪೆಷಲ್ ಸ್ಕಿಲ್ ಹೇಳಿ ಅವಳು ನಿರಾಕರಿಸಿದ್ದಳು; ನನ್ನನ್ನು ಮೊದಲಿಗೆ "ಯಾಕಾದರೂ ಆ ರೇರ್ ಲೈನ್ ಗೆ ಹೋಗುತ್ತೀಯ ..? ಇದು ಮೊದಲ ಪ್ರಾಜೆಕ್ಟ್ ನಿನ್ನ ಕ್ಯಾರಿಯರ್ ಮೇಲೆ ಪ್ರಭಾವ ಬೀಳುತ್ತೆ; ಅದರಕ್ಕಿಂತ ಬೇರೆಯಾವುದಾದರು ಕೋರ್ ಸಬ್ಜೆಕ್ಟ್ ರಿಲೇಟೆಡ್ ಪ್ರಾಜೆಕ್ಟ್ ಸೇರು " ಹೇಳಿ ಒತ್ತಾಯ ಮಾಡುತಿದ್ದಳು.
ನಾನು ಮೊದಲಿಗೆ ಒಲ್ಲೇ ಅಂದರೂ ನಂತರ ಜೀವನ್ ನ ಮಾತಿಗೆ ಮರುಳಾಗಿ ಈ ಪ್ರಾಜೆಕ್ಟ್ ಒಪ್ಪಿಕ್ಕೊಂಡಿದ್ದೆ. ಆದರೆ ಇಂದು ಬಂದ ಪ್ರಶಂಸೆಯ ಸುರಿಮಳೆಗೆ ನಾನು ಮಾಡಿದ ನಿರ್ದಾರಕ್ಕೆ ಸಾರ್ಥಕತೆ ಸಿಕ್ಕಂತಾಯಿತು.
ಅವಳಿಗೆ ಥ್ಯಾಂಕ್ಸ್ ಹೇಳುತ್ತಾ "ಚಲೋ, ಅ ಕಪ್ ಆಫ್ ಕಾಫಿ ..?"
"ಡಂಬು ಇಷ್ಟು ದೊಡ್ಡ ಸಾಧನೆ ಮಾಡಿದ್ದಿಯ ಈ ಸ್ಪೆಷಲ್ ಪರ್ಸನ್ಗೆ ಬರಿ ಅ ಕಪ್ ಆಫ್ ಕಾಫಿ ನಾ ..?"
"ಟ್ರಾನ್ಸ್ಲೆಟರ್ ಮತ್ತೇನು ಬೇಕು ನಿನಗೆ..?"
"ಸಂಥಿಂಗ್ ಸ್ಪೆಷಲ್ ಕೊಡ್ಬೇಕು.."
"ಅ ಕಪ್ ಆಫ್ ಕಾಫಿ ಅಟ್ ಕಾಫಿ ಡೇ ನಡೆಯುತ್ತಾ..?"
"ಸರಿ,ನಡೆಯುತ್ತೆ ..ಆದ್ರೆ ಯಾವಾಗ ..?"
"ಈಗಲೇ ... ಹೇಗೂ ಫ್ರೀ ಇದ್ದೇನೆ, ಟೈಮ್ ಕಳೆಯಲು ಒಂದು ದಾರಿಯಾಯಿತು"
"ಓಕೆ"
"ಸರಿ ನಡಿ ಮತ್ತೆ; ದಿನೇಶ್ ಬರುವ ಮೊದಲು ಕಳಚಿ ಕೊಳ್ಬೇಕು, ಇಲ್ಲಂತಾದ್ರೆ ಬೇಡದ ಕೆಲಸ ತಲೆ ಮೇಲೆ ಹೊರೆಸಿ ಬಿಡ್ತಾರೆ"
"ಬೈಕ್ ಪಯಣ ತಪ್ಪಿತ್ತು ಅನ್ಕೊಂಡಿದ್ದೆ; ಸದ್ಯಕ್ಕೆ ಸಿಕ್ತು .. ನಿನ್ನ ಬೈಕ್ ಸವಾರಿ ಮಿಸ್ ಮಾಡ್ಕೊಳ್ತಾ ಇದ್ದೆ ವೈಭು ಬೆಳಗಿಂದ"
"ಅರ್ರೆ, ಹೇಳುವುದು ಮರ್ತೆ; ಇವತ್ತು ಬೈಕ್ ಇಲ್ಲ; ಅದು ನಿನ್ನೆ ರಾತ್ರಿಯ ಚಳಿಗೆ ಮಲಗಿ ಕೊಂಡಿದೆ; ಇನ್ನೂ ಎದಿಲ್ಲ; ಇವತ್ತು ರಾತ್ರಿ ಅದಕ್ಕೆ ಏನು ರೋಗ ಹಿಡಿದಿದೆ ಎಂದು ನೋಡಬೇಕು..ನನ್ನ ಕೈಯಲ್ಲಿ ಸರಿ ಮಾದಲಾಗದಿದ್ರೆ ಡಾಕ್ಟರ್ ಬಳಿ ಹೊತ್ಕೊಂಡು ಹೋಗ್ಬೇಕು"
"ಅಂದ್ರೆ ಈಗ ನಡ್ಕೊಂಡೆ ಹೋಗಬೇಕಾ ..?"
"ಹಮ್ , ಬದಿಯಲ್ಲೇ ಇರುವ ಸಿಸಿಡಿ ಗೆ ಹೋಗಲು ಬೈಕ್ ಬೇರೆಯವರಲ್ಲಿ ಕೇಳಬೇಕೆ ..?"
"ಬೇಡ ಬಿಡು ಹಂಗೆ ಒಂದು ವಾಕ್ ಆದಂತೆ ಆಗ್ತದೆ; ನಡಿ"
ಇನ್ನೇನು ಹೊರ ಹೋಗ ಬೇಕು ಎನ್ನುವಷ್ಟರಲ್ಲಿ ಪ್ರೀತಿ ಎದುರು ಸಿಕ್ಕಿದಳು; ಅವಳನ್ನು ನೋಡುತ್ತಾ "ಏನಮ್ಮಾ ..? ಈ ಕಡೆ..? ಟ್ರೈನಿಂಗ್ ಗೆ ಚಕ್ಕರಾ ..?"
"ಹೋಗೋ ವೈಭು; ಬೇಕಂತ ಚಕ್ಕರ್ ಹಾಕಿದಲ್ಲ; ಆ ದಿನೇಶ್ ಇವತ್ತು ಕರ್ದಿದ್ರು ಫೈನಲ್ ಡೇ ನ ಬಗ್ಗೆ ಚರ್ಚಿಸಲು; ಸಾಫ್ಟ್ ಸ್ಕಿಲ್ ಟ್ರೈನಿಂಗ್ ಇರುವುದರಿಂದ ನಾನು ಬರಲು ಒಪ್ಪಿದೆ"
"ಎಷ್ಟೊತ್ತಿಗೆ ಕರ್ದಿದ್ದು ..?"
"ಹನ್ನೊಂದುವರೆಗೆ ಅವರು ಯಾವುದೋ ಕಾಲೇಜ್ ಗೆ ಪ್ಲೇಸ್ ಮೆಂಟ್ ಗೆ ಹೋಗ್ತಾರಂತೆ; ಬಳಿಕ ಡಿಸ್ಕುಸ್ ಮಾಡುವ ಅಂತಿದ್ರು."
"ಮತ್ತೇನು ಸವಾರಿ ಬೇಗ ಬಂದಿದ್ದು..?"
"ನಿನ್ನತ್ರ ಮಾತಾಡುವ ಹೇಳಿ; ರಾತ್ರಿ ನೀವು ನಿಮ್ಮ ಕೆಲಸದಲ್ಲಿ ಬ್ಯುಸಿ ಇರ್ತೀರಿ ; ಇಗಲಾದ್ರು ಸಮಯ ಸಿಗುತ್ತದೆ ಅನ್ಕೊಂಡೆ; ನೋಡಿದ್ರೆ ಈಗಲೂ ನೀವು ಬ್ಯುಸಿ"
"ಇಲ್ಲಮ್ಮ; ಬ್ಯುಸಿ ಇಲ್ಲ; ಇನ್ನೂ ಜನವರಿ ಮೊದಲವಾರದ ವರೆಗೆ ನಾನು ಫ್ರೀ ನೇ"
"ಪ್ರೋಫ್ಫೆಶನಲ್ ಲೈಫ್ ನ ಬ್ಯುಸಿ ಬಗ್ಗೆ ಅಲ್ಲ ಹೇಳಿದ್ದು; ನಿನ್ನ ಪೆರ್ಸನಲ್ ಲೈಫ್ ನ ಬ್ಯುಸಿಯ ಬಗ್ಗೆ ಹೇಳಿದ್ದು"
"ಈಗೀಗ ನಂದು ಪೆರ್ಸನಲ್; ಪ್ರೋಫ್ಫೆಶನಲ್ ಎರಡೂ ಒಂದೇ ಆಗಿದೆ; ಎರಡರಲ್ಲೂ ನಾನು ಫ್ರೀ ಇದ್ದೇನೆ ಮಾತಾಡಬಹುದು, ಬಾ ನಾವಿಬ್ರೂ ಕೆಫೆ ಕಾಫಿ ಡೇ ಕಡೆಗೆ ಹೋಗ್ತಿದ್ದೇವೆ; ನೀನೂ ಫ್ರೀ ಇದ್ದೀಯ; ಕಾಫಿ ಸಿಪ್ ಜೊತೆಯಲ್ಲಿದ್ದರೆ ಮಾತುಕತೆ ಇನ್ನೂ ಹಿತವೆನಿಸುತ್ತದೆ, ಬಾ" ಅಂದೆ.
ಅವಳನ್ನು ಕಾಫಿ ಗೆ ಕರೆದದ್ದು ಆಕೃತಿಗೆ ಇರಿಸುಮುರಿಸು ಉಂಟುಮಾಡಿತು.ನಾನೆಲ್ಲಿ ಅವಳಿಗೆ ವಾಲುತ್ತೇನೋ ಎಂಬ ಚಿಂತೆ ಇಂದಲೇ ನನ್ನ ಕೈಯನ್ನು ಹಿಡಿದು ನಡೆಯುತಿದ್ದಳು; ಪ್ರೀತಿ ಒನ್ ಫೂಟ್ ಡಿಸ್ಟೇನ್ಸ್ ಎಂಬ ಮಾಪನ ಹಿಡಿದು ನಮ್ಮಿಬ್ಬರ ಜೊತೆ ಜೊತೆಯಲ್ಲೇ ಹೆಜ್ಜೆ ಇಡುತಿದ್ದಳು.
*********
ಒಂದು ವರ್ಷದ ಹಿಂದೆ ಆರ್ಡರ್ ಮಾಡಿದ ಇಟೆಲಿಯನೋ ಹಾಟ್ ಕಾಫಿ ವಿಥ್ ಚಿಲ್ಲೆಡ್ ವೆನಿಲ್ಲಾ ಕ್ರೀಂ ಮತ್ತು ಮೇಡ್ ಫಾರ್ ಈಚ್ ಅಥರ್ ಪೆಸ್ತ್ರಿ ನಡುವಿನ ಟೇಬಲ್ ಮೇಲೆ ವಿರಾಜಮಾನವಾಗಿತ್ತು. ಸುತ್ತಲಿನ ಮೂರು ಟೇಬಲ್ ನಲ್ಲಿ ನಾವು ಮೂವರು ಕೂತಿದ್ದೆವು.
ಪ್ರೀತಿ "ಏನು ವೈಭು, ನಿಮ್ಮದು ಇಬ್ಬರದ್ದೂ ಸೆಟ್ಟ...?"
'ಒಬ್ಬ ವ್ಯಕ್ತಿ ಅವರ ಪ್ರೇಮದ ಕುರಿತು ನಿಮ್ಮಲ್ಲಿ ಹೇಳಿದಾಗ; ನಿಮ್ಮ ಪ್ರೇಮದ ಕಥೆ ನೀವು ಅಂದು ಕೊಳ್ಳದಿದ್ದರೂ ನಿಮ್ಮ ಬಾಯಿ ತಪ್ಪಿ ಹೊರ ಬರುತ್ತದೆ'
ಅವಳ ಪ್ರಶ್ನೆಗೆ ಉತ್ತರಿಸಲು ನನಗರಿವಿಲ್ಲದಂತೆ ನನ್ನ ಬಾಯಿ ತೆರೆದುಕ್ಕೊಂಡಿತು.ಇನ್ನೇನು ಹೌದು ಎನ್ನುವಷ್ಟರಲ್ಲಿ ಮಾತು ಹೌ ಗೆ ನಿಂತು ಬಿಟ್ಟಿತು. ಹೌದು ಹೌ ಗೆ ತಿರುಗಲು ಕಾರಣ ಟೇಬಲ್ ಕೆಳಗೆ ನಿಶ್ಚಿಂತೆಯಲ್ಲಿ ಕೂತ ಕಾಲಿಗೆ ಅಚಾನಕ್ಕಾಗಿ ಬಿದ್ದ ಶಾಕ್.
ಎರಡೂ ಅಕ್ಷರದ ಶಬ್ದ ಹೊರ ಬರುವಷ್ಟರಲ್ಲಿ ಎದುರು ಕುಳಿತಿದ್ದ ಆರುತಿ ಕಾಲನ್ನು ತನ್ನ ಹಾಯ್ಹಿಲ್ಡ್ನಿಂದ ತಿವಿದಿದ್ದಳು; ಕಾಲು ಉರಿಯುತಿದ್ದರೂ ಚೀರಲು ಆಗದ ಅಸಾಯಕತೆ; ಹೌದು ಹೌ ಆಗಿ ನೋವು ಹೊರ ಹಾಕಲು ಸಹಾಯ ಮಾಡಿತು.
ಆಕೃತಿ ನಮ್ಮ ಪ್ರೇಮ ಊರ ಜನರ ಎದುರು ಗುಲ್ಲಾಗಲು ಬಯಸದ ಹುಡುಗಿ; ಅದಕ್ಕಾಗಿಯೇ ನನಗೆ ನೋವಾದರೂ ಪರವಾಗಿಲ್ಲ ಹೇಳಿ ತಿವಿದದ್ದು !!
ತನ್ನ ಚಪ್ಪಲಿ ಕಳಚಿಟ್ಟು; ಆಕೃತಿ ನೋವಾದ ಜಾಗವನ್ನು ಸವರುತಿದ್ದಳು; ಇವತ್ತು ಒಂದು ವರ್ಷದಿಂದ ಭಂದಿಸುತಿದ್ದ ಅಡಿಡಾಸ್ ಶೂ ಕಳಚಿಟ್ಟಿದಕ್ಕೂ ಸಾರ್ಥಕವಾಯಿತು ಅಂದುಕ್ಕೊಂಡೆ; ಮನಸಲ್ಲೇ ನಿನ್ನೆ ರಾತ್ರಿಯಿಂದ ಚಳಿಗೆ ನಲುಗಿದ ಬೈಕ್ ಗೆ ಪ್ರಣಾಮ ಸಲ್ಲಿಸಿದೆ. ಇಲ್ಲಂತಾದ್ರೆ ಕಾಲ ಈ ಮೃದು ಸ್ಪರ್ಶ ಸಿಗುತ್ತಿರಲಿಲ್ಲ. ಕ್ಷಣಮಾತ್ರದಲ್ಲಿ ಹೈಹೀಲ್ಡ್ ನ ನಂಜು ಮಾಯವಾಯಿತು.
ಆ ಮೃದು ಪಾದಗಳೆರಡು ಒರಟಾದ ಎರಡು ಕಲ್ಲನ್ನು ಸ್ಪರ್ಶಿಸಿ ಪುಳಕ ಸೃಷ್ಟಿಸುತಿತ್ತು. ಆ ತೇಜ ಕಣ್ಣುಗಳು ಒಮ್ಮೆ ಕೆಳಗ್ಗೆ ಒಮ್ಮೆ ನನ್ನನ್ನು ಕೊಕ್ಕಿ ಕೊಕ್ಕಿ ನೋಡುತಿದ್ದವು.
ಸ್ಪರ್ಶ ಸುಖದಲ್ಲಿ ಮರೆಯಾದರೆ, ಪಕ್ಕದಲ್ಲಿ ಕುಳಿತ ಪ್ರೀತಿ ಗೆ ಕುರುಹು ಸಿಗುತ್ತದೆ ಎಂದು "ನಮ್ಮ ವಿಷಯ ಬಿಡು ಪ್ರೀತಿ, ನೀನೂ ಹೇಳು ಹೇಗಿದೆ ನಿನ್ನ ೨೦೦೨ ಅ ಲವ್ ಸ್ಟೋರಿ...?"
"ಅದು ಎಲ್ಲೆಲ್ಲೋ ಹೋಗ್ತಾ ಇದೆ, ಎಲ್ಲಿ ತಲುಪಿಸ್ತೋ ಗೊತ್ತಾಗ್ತಾ ಇಲ್ಲ.."
"ಏನು ಮಿಸ್ ಮಾಡ್ಕೋತಾ ಇದ್ದಿಯಾ...?"
ಪ್ರೀತಿ ಮೌನದಲ್ಲಿದ್ದಳು. ಆಕೃತಿ ಅವಳ ಕೈಯನ್ನು ತಟ್ಟಿ"ಡೋಂಟ್ ವರಿ" ಎಂದಳು.
ನಾನು "ಪ್ರೀತಿ ವಿವೇಕ್ ಇಲ್ಲಿ ಬಂದ್ರೆ ಹೇಗಿರುತ್ತೆ ..?"
ಪ್ರೀತಿ "ಅವ ಇಲ್ಲಿ ಬರ್ತಾನಾ..? ಹೇಗಿರುತ್ತೆ ಅಂದ್ರೆ ಕೇಳಲಿಕ್ಕೆ ತುಂಬಾ ಚೆನ್ನಾಗಿರುತ್ತೆ.. ಆದ್ರೆ ..." ಎಂದು ಮಾತನ್ನು ಅರ್ದಕ್ಕೆ ನಿಲ್ಲಿಸಿದಳು.
ನಾನು "ಆದ್ರೆ ಏನೂ ಆಗಲ್ಲ; ಚಿಲ್" ಎನ್ನುತ್ತಾ ಆ ಕಾಫಿ ಕಪ್ ಅನ್ನು ಅವಳ ಹತ್ತಿರ ತಳ್ಳಿದೆ.
ಸ್ಟ್ರೋ ಸೇರಿಸಿ ಕರಗುತಿದ್ದ ವೆನಿಲ್ಲಾ ಕ್ರೀಮ್ ಅನ್ನು ಅವಳು ಮೇಲೆತ್ತುತಿದ್ದಳು.
ಟೇಬಲ್ ಕೆಳಗೆ ನಾಲ್ಕು ಪಾದಗಳು ತಮ್ಮ ಆಟ ಆಡುತಿದ್ದವು; ಮೇಲೆ ಕಣ್ಣುಗಳು ತಮ್ಮ ಕೆಲಸ ಮಾಡುತಿದ್ದವು ತುಟಿ ಅಂಚಿನಲ್ಲಿದ್ದ ವೆನಿಲ್ಲಾ ಹೃದಯದಾಳಕ್ಕೆ ಇಳಿಯುತ್ತಿತ್ತು. ಮೇಡ್ ಫಾರ್ ಈಚ್ ಅದರ್ ಪೆಸ್ತ್ರಿ ಎಲ್ಲದಕ್ಕೂ ಸಾಕ್ಷಿ ಆಯಿತು.
ಮುಂದಿನ ಸಿಪ್
Comments
ಉ: ಅ ಕಪ್ ಓಫ್ ಕಾಫಿ ... ಸಿಪ್ - ೨೦
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೨೦ by makara
ಉ: ಅ ಕಪ್ ಓಫ್ ಕಾಫಿ ... ಸಿಪ್ - ೨೦
ಉ: ಅ ಕಪ್ ಓಫ್ ಕಾಫಿ ... ಸಿಪ್ - ೨೦
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೨೦ by manju787
ಉ: ಅ ಕಪ್ ಓಫ್ ಕಾಫಿ ... ಸಿಪ್ - ೨೦