ಅ ಕಪ್ ಓಫ್ ಕಾಫಿ ... ಸಿಪ್ - ೨೩

ಅ ಕಪ್ ಓಫ್ ಕಾಫಿ ... ಸಿಪ್ - ೨೩

ಸಿಪ್ - ೨೩
 
 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಹಿಂದಿನ ಸಿಪ್ 

 



ಮತ್ತೆ ಅದೇ ತಡ ರಾತ್ರಿಯ ಕಾಲ್ಗಳು ಶುರುವಾಗಿದ್ದವು, ರಮಾ ಅತ್ತೆಯ ಆರೋಗ್ಯ ತೀರಾ ಹದಗೆಟ್ಟಿತ್ತು, ಅವರನ್ನು ತುರ್ತು ನಿಗಾ ಘಟಕದಿಂದ ವಾರ್ಡ್ ಗೆ ಶಿಫ್ಟ್ ಮಾಡಿ ಇವತ್ತಿಗೆ ಒಂದು ವಾರ ಕಳೆದಿದ್ದರೂ ಆವರು ಜೀವನ್ ನ ಸಂಘ್ಯ ಬೇಡುತಿದ್ದರು, ರಮಾ ಅತ್ತೆಯವರ ಆರೋಗ್ಯ ವಿಚಾರಿಸಿ ಅವನನ್ನು ಅಲ್ಲೇ ಉಳಿಸಿಕೊಳ್ಳಲು ತಿಳಿಸಿದೆ. ಈಗ ಕೆಲಸದ ಒತ್ತಡ ಅತಿ ಆದಾಗ ಇನ್ನೊಬ್ಬನಿಗೆ ಹತ್ತಿರವಾದದ್ದು ನನಗೆ ಎಷ್ಟು ಭಾರವಾಗಿ ಪರಿಣಮಿಸಿತು ಎಂಬ ಅನುಭವವಾಯಿತು.

ಕಾಫಿಯ ಸಿಪ್ ಆಕೃತಿ ಇಲ್ಲದಿದ್ದರೂ ನಿರಂತರವಾಗಿ ಇಳಿಯುತ್ತಿತ್ತು. ಪ್ರೀತಿ ಪ್ರೀತಿಯೊಂದಿಗೆ ನನಗೆ ಸಿಪ್ ಅನ್ನು ಸರ್ವ್ ಮಾಡುತಿದ್ದಳು. ಈಗ ನನ್ನ ವಿಚಾರಣೆ ಕಡಿಮೆ ಆಗಿತ್ತು, ಮನೆಯವರ ಕಣ್ಣು ತಪ್ಪಿಸಿ ಕರೆ ಮಾಡುವುದು ಕೂಡುಕುಟುಂಬದಲ್ಲಿ ವಾಸಿಸುತಿದ್ದ ಆಕೃತಿಗೆ ಕಷ್ಟ ಸಾಧ್ಯವಾಗಿತ್ತು, ಇದನ್ನೇ ಬಂಡವಾಳ ವಾಗಿಟ್ಟುಕ್ಕೊಂಡು ಪ್ರೀತಿ ಪ್ರತಿ ಎರಡು ಗಂಟೆಗೆ ಅ ಕಪ್ ಆಫ್ ಕಾಫಿ ಗೆ ಪಿಂಗ್ ಮಾಡುತಿದ್ದಳು, ಮೊದಲಿಗೆ ಕೆಲಸವಿದೆ ಎಂದು ತಪ್ಪಿಸಿಕೊಳ್ಳುತಿದ್ದೆ ನಾದರು ಆಕೃತಿ ಪುಣೆ ಬಿಟ್ಟ ಮೂರು ದಿನದಲ್ಲಿ ಅವಳ ಪಿಂಗ್ ಗೆ ಕಾಯಲು ಶುರು ಮಾಡಿದೆ.

ಸಂಜೆಯಿಂದ ತೊಡಗಿ ತಡ ರಾತ್ರಿಯವರೆಗೆ ನಡೆಯುತಿದ್ದ ಚೀನೀ ಮತ್ತು ಕ್ರಿಸ್ ಜೊತೆಗಿನ ಹರಟೆಗೆ ಪ್ರೀತಿ ಕಾವಲು ಕಾಯುತ್ತಿದ್ದಳು, ಅವಿನಾಶ್ ತನ್ನ ಕೆಲಸ ಮುಗಿಸಿ ಮನೆಗೆ ಹೋದಬಳಿಕ ಕ್ಯುಬಿಕಲ್ ನಲ್ಲಿ ಪ್ರತಿಷ್ಟಾಪಿತ ಪ್ರಸನ್ನ ಮೂರ್ತಿ ಕರೆ ಕಟ್ ಮಾಡುವ ವರೆಗೆ ತದೇಕ ಚಿತ್ತದಲ್ಲಿ ನಾನು ಕೊಡುತಿದ್ದ ವಿವರಣೆ ಕೇಳುತಿತ್ತು. ಅವರ ಹಿಡಿಸದ ಸಂಭಾಷಣೆ ಗಿಂತ ಇವಳ ಮೌನ ಸಂಭಾಷಣೆ ಮನಸ್ಸಿಗೆ ನಾಟುತಿತ್ತು.

'ಆಕೃತಿ ನನ್ನ ಟ್ರೂ ಲವ್ !! ಆದ್ರೆ ಏನಾಯ್ತು ಪ್ರೀತಿ ನನ್ನ ಫಸ್ಟ್ ಲವ್ 'ಎಂದು ಆ ಮಿರುಗುವ ಕಣ್ಣಲ್ಲಿ ಓಡುತಿರುವ ನ್ಯೂಸ್ಲೈನ್ ಏನೋ ಒಂದು ಬಗೆಯ ಸಾಂತ್ವನ ನೀಡುತ್ತಿತ್ತು. ಕರೆ ಕಟ್ ಮಾಡಿದ ತಕ್ಷಣ "ಅಯಬ್ಬಾ!! ಇನ್ನು ವೈಭು ನನ್ನವನು ಎಂದು" ಉದ್ಗರಿಸುತಿದ್ದಳು.

ಹನ್ನಂದರ ಬಳಿಕ ಆಕೃತಿ ಎಲ್ಲ ಮಲಗಿದ ಮೇಲೆ ಎಸ್ಸೆಮ್ಮೆಸ್ಸ್ ಮಾಡುತಿದ್ದಳು, ಅಲ್ಲಿವರೆಗೆ ನನಗೆ ಪುರುಸೊತ್ತು ಸಿಕ್ಕುತಿರಲಿಲ್ಲ ಅವಳಿಗೆ ಸ್ವಾತಂತ್ರ್ಯ.

ಹನ್ನೊಂದುವರೆ ಯಾದರೂ ನಾನು ಯಾವುದೋ ಇಶ್ಯೂ ನೊಂದಿಗೆ ಸಿಲುಕಿ ಇದ್ದೆ, ಡ್ರಾವರ್ನಲ್ಲಿ ಸೈಲೆಂಟ್ ಮೋಡ್ ನಲ್ಲಿದ್ದ ಮೊಬೈಲ್ಗೆ ಎಸ್ಸೆಮ್ಮೆಸ್ಸ್ ಬಂದದ್ದೆ ಗೊತ್ತಾಗಲಿಲ್ಲ, ಸಮಯ ಮೀರಿ ಹೋಗಿತ್ತು, ಮೊದಲಿಗೆ ಎಸ್ಸೆಮ್ಮೆಸ್ಸು ಮಾಡಿ ಸುಸ್ತಾದ ಆಕೃತಿ ೩ ಬಾರಿ ಕರೆ ಮಾಡಿದ್ದಳು, ನನ್ನ ರಿಪ್ಲೈ ಇರಲಿಲ್ಲ, ಕೆಲಸದ ನಡುವಲ್ಲಿ ಪ್ರೀತಿಗೆ ಉತ್ತರ ಕೊಡುವಲ್ಲಿ ಮನಸ್ಸುಇತ್ತೇ ವಿನಃ ಡ್ರಾವರ್ ನಲ್ಲಿದ್ದ ಮೊಬೈಲ್ ನ ಕುರಿತು ಮರೆತೇ ಹೋಗಿತ್ತು.

ಕೆಲಸ ಮುಗಿದ ಬಳಿಕ ಬೈಕ್ ಏರಿ ಸಾಗಿತ್ತು ಪಯಣ, ಹಿಂದಿನ ಸೀಟ್ ನಲ್ಲಿ ಪ್ರೀತಿ ಕುಳಿತಿದ್ದಳು, ಜೇಬಲ್ಲಿ ಆಕೃತಿ ಅಳುತಿದ್ದಳು. ಹಿಂದಿನ ಮೌನ ದನಿ ಗೆ ಹೃದಯ ವಾಲುತಿತ್ತು,ಹೃದಯಕ್ಕೆ ಹೃದಯದ ಬಳಿಯಲ್ಲಿನ ಆಕೃತಿಯ ಮೌನ ದನಿ ಕೇಳಲಿಲ್ಲ !!

"ವೈಭು ಒನ್ ಮೋರ್ ರೌಂಡ್" ಎಂದು ಪ್ರೀತಿ ಇನ್ನೊಮ್ಮೆ ಕಿವಿಯಲ್ಲಿ ಹೇಳಿದಳು, ಒಂದು ಕಿ.ಮಿ ಪ್ರಯಾಣಿಸ ಬೇಕಿದ್ದ ನಾವು ಅದ್ದಾಗಲೇ ಇಪ್ಪತ್ತು ಕಿ.ಮಿ, ಮುಂದೆ ಹೋಗಿ , ಇಪ್ಪತ್ತು ಕಿ.ಮಿ ಹಿಂದೆ ಬಂದಿದ್ದೆವು, ಆದರೂ ಇನ್ನೂ ಪ್ರಯಾಣ ಅಪೂರ್ಣವಾಗಿತ್ತು.

ಬೈಕ್ ಅನ್ನು ಅವಳ ಹಾಸ್ಟೆಲ್ ಕಡೆಗೆ ತಿರುಗಿಸುತ್ತಾ "ಗೂಬೆ ಇಟ್ಸ್ ಟೂ ಲೆಟ್ ! ನಾಳೆ ಫ್ರೈಡೆ!! ನಾಳೆ ಲಾಂಗ್ ರೈಡ್ !!!" ಎಂದು ಅವಳನ್ನು ಸಮಾಧಾನಿಸಿದೆ.
"ಓಕೆ, ಶೂರ್, ಅ ಹಾಟ್ ನೈಟ್ ಇನ್ ಚಿಲ್ಲೇಡ್ ವಿಂಟರ್ " ಅಂದಳು.
"ವಾಟ್ ಡು ಯು ಮೀನ್...?"
"ಅ ಹಾಟ್ ನೈಟ್ !!"
"...."
"ಏನೆಲ್ಲಾ ಆಲೋಚಿಸ್ಬೇಡ, ಅ ನೈಟ್ ವಿಥ್ ಹಾಟ್ ಡ್ರಿಂಕ್ಸ್ ಇನ್ ಅ ವಿಂಟರ್ ಇವಿನಿಂಗ್ ಅಂದೇ ಅಷ್ಟೇ, ನೀನೇನು ಆಲೋಚಿಸ್ತಿದ್ದಿಯಾ ...?"
"ಏನಿಲ್ಲ ಬಿಡು"
"ಯು , ಮೀನ್ ಥಟ್ ಆರ್ ವಾಟ್ ..?"
"ನೋ, ನೋ , ಹಾಗೆ ಏನು ಇಲ್ಲ, ಶೂರ್ ಹಾಟ್ ಡ್ರಿಂಕ್ !!" ಅಂದೆ.
"ನೀನೂ...? ಹೋಟಾ...? ಐ ಕಾಂಟ್ ಬಿಲೀವ್ !!"
"ಹಾನ್ಹ್ ಮತ್ತೆ !!"
"ಓಕೆ ದೆನ್ ನಾಳೆ ಫುಲ್ ನೈಟ್ ಔಟ್ !!!" ಎನ್ನುತ್ತಾ ಕೆಳಗಿಳಿದಳು ಪ್ರೀತಿ,ಬೈಕ್ ಅವಳ ಹಾಸ್ಟೆಲ್ ಗೆಟ್ ನಲ್ಲಿತ್ತು.

ಕತ್ತಲಲ್ಲಿ ಬೈಕ್ ಮತ್ತೆ ಹಿಂದೆ ಬರುತಿತ್ತು, ಮನಸಲ್ಲಿ "ರಿಯಲಿ ಐ ಮೀಂಟ್ ವಾಟ್ ...?" ಎನ್ನುತ್ತಾ ಮನಸ್ಸು ಮನಸ್ಸಿನೊಂದಿಗೆ ಪ್ರಶ್ನೆ ಇಡುತಿತ್ತು.ಉತ್ತರವಾಗಿ "ಇಲ್ಲಾ, ಅದಲ್ಲಾ, ಐ ಮೀಂಟ್ ಹಾಟ್ ! ಅ ಹಾಟ್ ಕಪ್ ಆಫ್ ಕಾಫಿ !!" ಎಂದು ವ್ಯಾಪಿಸುತಿದ್ದ ಬೇಡದ ಆಲೋಚನೆ ಇಂದ ಹೊರ ಬರಲು ಪ್ರಯತ್ನಿಸಿದೆ.

ರೂಮಿಗೆ ಬಂದು, 1X3 ರ ಕನ್ನಡಿ ಎದುರು ಮತ್ತೆ ನಿಂತಾಗ ಅದೇ ಪ್ರಶ್ನೆ... 'ರಿಯಲಿ ಐ ಮೀಂಟ್ ವ್ಹಾಟ್ ...?', ಮೌನ ವಿವರಣೆ ಬಿಟ್ಟು ಬೇರೆ ಏನು ತೋಚಲಿಲ್ಲ. ಎದುರಿದ್ದ ವ್ಯಕ್ತಿ ಪ್ರೀತಿಗೆ ಮರುಳಾಗುತಿದ್ದದ್ದು ಕಾಣುತಿತ್ತು, ನಾಲ್ಕೇ ದಿನದಲ್ಲಿ ಅವಳು ಮಾಡಿದ ಮೋಡಿಗೆ ಎರಡು ವರ್ಷದ ಹಿಂದೆ ಮಾಡಿದ ಪ್ರಯತ್ನ ವ್ಯರ್ತ ಆಗಲಿಲ್ಲ ಎಂಬ ಸಾರ್ಥಕತೆಯಲ್ಲಿ ಆ ಮುಖ ಹಿಗ್ಗುತಿತ್ತು, ಜಾರಿರುವ ಮುಂಗುರುಳನ್ನು ಮತ್ತೆ ಬಾಚಿ ಹಿಂದೆ ಮಾಡಿತು.'ಇಲ್ಲ ಇದು ಹಳ್ಳಿ ಲುಕ್, ಚೆನ್ನಾಗಿಲ್ಲ, ಯೋ ಇರ್ಬೇಕು' ಎನ್ನುತಿತ್ತು. ವರ್ಷದ ಹಿಂದೆ ಖರೀದಿಸಿದ ಜೆಲ್ ಹುಡುಕಿ ತೆಗೆದು ಅದನ್ನು ಜಾರಿದ್ದ ಮುಂಗುರುಳು ಗಳಿಗೆ ಸಾರಿಸಿ ಅವನ್ನು ಮೇಲಕ್ಕೆ ಬಾಚಿದವು.

 

'ಇನ್ನೂ ಸರಿ ಯಾಗಿಲ್ಲ! ನಾಳೆ ಕಟ್ಟಿಂಗ್ ಮಾಡಿಸಬೇಕು, ಒಂದೇ ಹದ ದಲ್ಲಿರುವ ಕೂದಲನ್ನು ಕತ್ತರಿಸಿ ಎದುರಿಗೆ ಒಂದು ಹದ, ನಡುವಲ್ಲಿ ಒಂದು ಹದ, ಹಿಂಬದಿಯಲ್ಲಿ ಇನ್ನೊಂದು ಹದ ಮಾಡಿಕ್ಕೊಳ್ಳಬೇಕು, ಮೋಡರ್ನ್ ಲುಕ್ ಕೊಟ್ರೆ ಇನ್ನೂ ಚೆನ್ನಾಗಿರುತ್ತೆ' ಎನ್ನುವ ವಿಶ್ಲೇಷಣೆ ಬಾಚುತ್ತಾ.

 

ಡ್ರೆಸ್ಸಿಂಗ್ ಟೇಬಲ್ ಮೇಲಿಟ್ಟ ಮೊಬೈಲ್ ಹೊಳೆಯಲು ಆರಂಬಿಸಿತು. ಆಕೃತಿ.

 

ಎಸ್ಸೆಮ್ಮೆಸ್ಸಿಗೆ ಉತ್ತರಿಸದಿದ್ದರೆ ಮೊದಲು ಕಳುಹಿಸಿದ ಮೆಸ್ಸೇಜ್ ಅನ್ನು ಮತ್ತೆ ಮತ್ತೆ ಕಳುಹಿಸುತ್ತಾಳೆ, ಇನ್ನೂ ರಿಪ್ಲೈ ಬಾರಾ ದಿದ್ದರೆ ಮಿಸ್ ಕಾಲ್ ಮಾಡುತ್ತಾಳೆ, ಅದು ನಡೆಯದಿದ್ದಾಗ ಕಾಲ್ ಅನ್ನು ಉದ್ದಕ್ಕೆ ಮಾಡುತ್ತಾಳೆ. ಆಗ ನಾನು ಕಾಲ್ ಕಟ್ ಮಾಡಬೇಕು, ಕಾಲ್ ಎತ್ತಿದರೂ ಅಲ್ಲಿ ಬರೇ ನಿಶಬ್ಧದ ದನಿ, ಅವಳು ಮಾತನಾಡುವುದಿಲ್ಲ.

 

ಸೈಲೆಂಟ್ ನಲ್ಲಿ ಕೂಗುತಿದ್ದ ಆಕೃತಿಯ ಕೂಗನ್ನು ನಿಲ್ಲಿಸಿ "ಜಸ್ಟ್ ಈಗ ಮನೆಗೆ ತಲುಪಿದೆ, ಫುಲ್ ಕೆಲಸ ಇತ್ತು ಆಫೀಸ್ ನಲ್ಲಿ, ಸುಸ್ತಾಯ್ತು." ಎಂದು ಮೆಸ್ಸೇಜ್ ಕಳುಹಿಸಿ ಪ್ರೀತಿಗಾಗಿ ಕೂದಲನ್ನು ಇನ್ನೊಂದು ದಿಕ್ಕಿಗೆ ಬಾಚುತ್ತ ನಿಂತೆ.

 

ಒಂದೇ ನಿಮಿಷದಲ್ಲಿ "ವೈಭು, ಹೇಗಿದ್ದಿಯೋ, ೨ ಮೋರ್ ಡೇಸ್" ಎನ್ನುವ ಮೆಸ್ಸೇಜ್ ಬಂತು.

 

"ಓನ್ಲಿ ೨ ಡೇಸ್ ಅಲ್ಲ ಹೀಗೆ ನೋಡಿ ಹಾಗೆ ಮಾಡುವಾಗ ಹೋಗಿರುತ್ತೆ" ಎಂದು ಮೆಸ್ಸೇಜ್ ಟೈಪಿಸಿದೆ.

 

ಆ ಮೆಸ್ಸೇಜ್ ಅಲ್ಲಿ ಡೆಲಿವೆರಿ ಆಗುವ ಮುಂಚೆ 'ಇನ್ನೆರಡೇ ದಿನ' ಎಂದು ಕನ್ನಡಿಯೊಳಗಿನ ಬಿಂಬ ಕುಸಿಯಲು ಶುರು ಮಾಡಿತು.

 

"ಆ ಎರಡು ದಿನದಲ್ಲಿ ಏನಾಗುತ್ತದೆ ಎಂದು ಹೆದರಿಕೆ ಆಗಿದೆ" ಎನ್ನುವ ರಿಪ್ಲೈ ಬಂತು ಚೆನ್ನೈ ನಿಂದ.

 

"???"

 

ಕನ್ನಡಿಯೊಳಗಿನ ಬಿಂಬ ಇನ್ನೂ ತನ್ನ ಸ್ಪೈಕ್ ಅನ್ನು ಬಾಚುತಿತ್ತು. ಎರಡು ನಿಮಿಷ ಕಳೆದವು,ಇನ್ನೂ ರಿಪ್ಲೈ ಬರಲಿಲ್ಲ, ಹೊರಗಿನ  ಜೀವ ಬಾಚುವುದನ್ನು ನಿಲ್ಲಿಸಿದರೂ ಒಳಗಿನ ಜೀವ ಕೂದಲನ್ನು ಇನ್ನೂ ಸೇರಿಸುವಲ್ಲಿ ನಿರತವಾಗಿತ್ತು.

 

ಟೇಬಲ್ ಮೇಲೆ ಮತ್ತೆ ಧೀರ್ಘ ರಿಂಗ್ಸ್ ಶುರುವಾಯಿತು. ಕರೆ ಕಟ್ ಮಾಡಿದೆ.

 

ಇನ್ನೊಮ್ಮೆ ಅದೇ ದೀರ್ಘ ವೈಬ್ರಶನ್!! ಕಟ್ ಮಾಡಿದೆ.

 

"ಐ ವಾಂಟ್ ಟು ಟಾಕ್ ಟು ಯು" ಎನ್ನುವ ರಿಪ್ಲೈ ಬಂತು.

 

ತಿರುಗಿ ಕರೆ ಮಾಡಿದೆ "ಹಲೋ..."

 

"ಹಲೋ, ಡಂಬು"  ಎಂದು ಮೆಲ್ಲನೆ ಪಿಸುಗುಟ್ಟಿದಳು ಆಕೃತಿ.

 

"ಏನಾಯ್ತು...?"

 

"ಸದ್ಯಕ್ಕೆ ಏನೂ ಇಲ್ಲ, ಶನಿವಾರ ಏನಾದ್ರೂ ಆಗುತ್ತೆ"

 

"??"

 

"ನಾನು ಮದುವೆ ಮಾಡ್ಕೊಳ್ಬೇಕಂತೆ, ಅಮ್ಮನ ದೂರದ ಸಂಭಂದಿ ಒಬ್ಬರು ಒಪ್ಪಿದ್ದಾರೆ, ನನ್ನ ಒಪ್ಪಿಗೆಗೆ ಕಾದಿದ್ದರು, ಈಗ ಇಲ್ಲಿ ನನಗೆ ಮದುವೆಯ ವಿಚಾರ ನಡೆಯುತ್ತಿದೆ, ಶನಿವಾರ ಅವರು ಹೆಣ್ಣು ನೋಡುವ ಶಾಸ್ತ್ರ ಮಾಡಿ ಹೋಗುವರಂತೆ, ಮೇ ಜೂನ್ ನಲ್ಲಿ ಮದುವೆ... ಹೀಗೆಲ್ಲ ನಡೆಯುತ್ತಿದೆ ಮಾತು.."

 

"ಹೇ ಸುಮ್ನೆ ನೀನೂ ಒಪ್ಪಿ ಬಿಟ್ಟಿಯಾ ...?"

 

"ಇಲ್ಲ ಕಣೋ, ಮನೆಯವರು ಅವನ ರೂಪ, ಕೆಲಸ, ವಿದೇಶಕ್ಕೆ ಮಾರುಹೋಗಿದ್ದಾರೆ, ಮಿಗಿಲಾಗಿ ಪರಿಚಯದ ಹುಡುಗ ಎಂದು ನನ್ನ ಅಭಿಪ್ರಾಯ ಕೇಳದೆ ಒಪ್ಪಿ ಬಿಟ್ಟಿದ್ದಾರೆ"

 

"ಹೇ, ನಿನಗೆ ಓಕೆ ನಾ...?"

 

"ವೈಭು ನಿನ್ನಿಂದ ಈ ಪ್ರಶ್ನೆ ಎಕ್ಸ್ಪೆಕ್ಟ್ ಮಾಡಿರಲಿಲ್ಲ... ನಾನು ಮದುವೆ ಅಗ್ಬೇಕಂದ್ರೆ ನಿನ್ನನ್ನೇ .. ಇಲ್ಲನ್ತಾದ್ರೆ ಬೇಡ ಮದುವೆ"

 

"ಮನೆಯವರಿಗೆ ಹೇಳು"

 

"ನಾನು ಏನೋ ಹೇಳ್ ಲಿಕ್ಕೆ ತಯಾರಿದ್ದೇನೆ ನೀನೂ ತಯಾರಿದ್ದಿಯ ...?"

 

"ಇದ್ದೇನೆ, ಆದ್ರೆ ..."

 

"ಏನೋ ಆದ್ರೆ...?"

 

"ನಾನಿನ್ನು ಲೈಫ್ ನಲ್ಲಿ ಸೆಟಲ್ ಆಗ್ಲಿಲ್ಲ, ಮಿನಿಮುಂ ೨-೩ ವರುಷ ಬೇಕು, ಆಗ ಹೇಳಬಹುದು, ಈಗ ಹೇಳಿದ್ರೆ ಹುಡುಗಾಟಿಕೆ ಅನ್ನುವರು"

 

"ನೋಡು ನೀನೂ ಮಾತು ಬದಲಾಯಿಸುತ್ತ ಇದ್ದೀಯ"

 

"ಇಲ್ಲ ರಾಜಾ... ನಂಗೂ ನೀನೂ ಬೇಕು, ನಿನ್ನ ಅನೆಯವರು ಒತ್ತಾಯ ಮಾಡಿದರೆ ಹೇಳಿ ಬಿಡು, ೨-೩ ವರ್ಷದ ನಂತರ ನಾವು ಆ ಬಗ್ಗೆ ಆಲೋಚನೆ ಮಾಡುವ ಹೇಳಿ"

 

"ಇಲ್ಲ, ಅವರು ಒಪ್ಪಲ್ಲ, ಅವರು ಈಗಲೇ ಅವರಿಗೆ ಒಪ್ಪಿಗೆ ಕೊಟ್ಟಾಗಿದೆ, ಬೇರೆ ಏನಾದ್ರೂ ಮಾರ್ಗ..?"

 

"ಹುಡುಗನ ಹತ್ತಿರ ಹೇಳಿ ನೋಡು ನಮ್ಮ ಪ್ರೀತಿಯ ಕುರಿತು"

 

ಅವಳಲ್ಲಿ ಹೊಸ ಆಶಾಕಿರಣ ಮೂಡಿತು. "ಆದ್ರೆ.."

 

"ಏನು ಆದ್ರೆ ...?"

 

"ಹುಡುಗ ಬರಲ್ಲ, ಶನಿವಾರ, ಅವನ ಹೆತ್ತವರು ನನ್ನ ನೋಡಿ ಒಪ್ಪಿದರಾಯಿತು"

 

"ಹುಡುಗನ ಒಪ್ಪಿಗೆ...?"

 

"ಇದನ್ನೇ ನಾನು ಕೇಳಿದೆ, ಅದಕ್ಕೆ ಪಪ್ಪಾ ಹೇಳಿದರು ಈಗ ಆರ್ಕುಟ್, ವೀಡಿಯೊ ಚಾಟಿಂಗ್ ಏನೆಲ್ಲಾ ಇದೆ ಅಲ್ಲ ಅಲ್ಲೇ ನೀನೂ ಅವನ ಜೊತೆ ಮಾತಾಡು ಎಂದು ಇಂಟರ್ನೆಟ್ ಯುಗದ ಜಾಣತನ ತೋರಿಸಿದರು, ಏನೋ ಮಾಡೋದು ವೈಭು"

 

"ಏನೂ ಆಗಲ್ಲ, ಮತ್ತೆ ಅವನ ಯಿಮೆಲ್  ಐಡಿ ಸಿಕ್ಕಿತಾ ...?"

 

"ಇಲ್ಲ, ಶನಿವಾರ ಮನೆಯವರಿಗೆ ಒಪ್ಪಿಗೆ ಆದರೆ ಕೊಡ್ತಾರೆ ಅಂತೆ, ಇನ್ನೂ ವರೆಗೆ ಆ ಹುಡುಗನಿಗೆ ಈ ವಿಷಯಾನೇ ಗೊತ್ತಿಲ್ಲ!! ಎಲ್ಲ ಫೈನಲ್ ಆದ್ರೆ ಶನಿವಾರ ಹೇಳ್ತಾರೆ ಅಂತೆ!!"



ಗಂಡು ಹೆಣ್ಣಿನ ಅನುಪಸ್ತಿತಿಯಲ್ಲೇ ಮದುವೆ ನಿಷ್ಟಿತಾರ್ಥ ಮುಗಿದಿರುತ್ತದೆ, ಆನ್ಲೈನ್ ನಲ್ಲಿ ಗಂಡು ಹೆಣ್ಣು ಒಪ್ಪಿ ಗ್ರೀನ್ ಸಿಗ್ನಲ್ ಕೊಟ್ರೆ ಕೂಡಿರುವ ಹೆತ್ತವರು ಹಾಲ್ ಬುಕ್ ಮಾಡ್ತಾರೆ.

"ಸರಿ ಬಿಡು ನೀನೂ ಶನಿವಾರ ಹೇಗಾದ್ರು ಮಾಡಿ ಅದನ್ನು ಎದುರಿಸು, ನಂತರ ಆ ಹುಡುಗನ ವಿಷಯ ನಂಗೆ ಬಿಡು ಅವನಲ್ಲಿ ನಾನು ಮಾತಾಡ್ತೇನೆ"

 

"ಥಾಂಕ್ ಯು ವೈಭು, ಲವ್ ಯು !!"

 

"ಲವ್ ಯು ಟೂ, ಮತ್ತೆ ಹೀಗೆ ನೀನೂ ಮಾತಾಡಿದ್ರೆ ಗೊತ್ತಾಗಲ್ವಾ ಮನೆಯವರಿಗೆ...?ಮಲಗು, ನಾಳೆ ಮಾತನಾಡುವ..."

 

"ಇಲ್ಲ, ಗೊತ್ತಾಗಲ್ಲ, ನಿನಗೆ ಮಾತಾಡಲು ಇಷ್ಟ ಇಲ್ವಾ ೫ ದಿನ ಆಯಿತು ನಿನ್ನ ಹತ್ರ ಮಾತನಾಡದೆ..."

 

"ಹೌದು,ಆದ್ರೆ ಬೇಡ ಈಗ, ಮಲಗು.."

 

"ಹೇ ಡಂಬು ಏನಾದ್ರೂ ಹೇಳೋ "

 

"ನೀನಿಲ್ದೆ ಬೋರ್ ಕಣೇ..."

 

"ನಂಗೂ" ಎನ್ನುವಷ್ಟರಲ್ಲಿ ಬಾಗಿಲನ್ನು ಯಾರೋ ಬಡಿದದ್ದು ಕೇಳಿಸಿತು.

 

ಅವಳು "ಬೈ ವೈಭು ... ಒಹ್ ಸೋರಿ  ಸೀ ಯು ... ... ದೊಡ್ಡಮ್ಮ  ಎದ್ರು..." ಇನ್ನೂ ಮೆದು ವಾಗಿ ಹೇಳಿದಳು.

 

ಮಾತು ನಿಲ್ಲಿಸಿ "ಪೆರಿಯಮ್ಮಾ " ಎನ್ನುತ್ತಾ ಪ್ಲುಶ್ ಮಾಡಿದಳು.ಎಲ್ಲರ ಕಣ್ಣು ತಪ್ಪಿಸಿ ಅವಳು ಬಾತ್ ರೂಮಿನಿಂದ ಕರೆ ಮಾಡಿದ್ದಳು ಎನ್ನುವುದನ್ನು ನೀರಿನ ಸದ್ದು ತಿಳಿ ಹೇಳಿತು.

 

ಅವಳು ಕರೆ ಕಟ್ ಮಾಡುವ ವರೆಗೆ ಲೈನ್ ನಲ್ಲಿದ್ದೆ. ನೋಕಿಯಾ ನಿಶ್ಯಬ್ದಕ್ಕೆ ತೆರಳಿತು. ಕನ್ನಡಿ ಒಳಗೆ ಹೊರಗಿದ್ದ ಡಂಬು ನೆ ಇದ್ದ, ಸ್ಪೈಕ್ ಮಾಡಿದ ಯೋ ಗೈ ಮಾಯವಾಗಿದ್ದ. ಕೆಳಗೆ ಸೆಟ್ ವೆಟ್ ಜೆಲ್ ನ ಟ್ಯೂಬ್ ಹಿಂಡಿ ಹಿಂಡಿ ಸಪ್ಪೆಯಾಗಿ ಬಿದ್ದಿತ್ತು.

 

ಮುಂದಿನ ಸಿಪ್

Rating
No votes yet