ಅ ಕಪ್ ಓಫ್ ಕಾಫಿ ... ಸಿಪ್ - ೨೪
ಸಿಪ್ - ೨೪
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
"ವೈಭು, ಒನ್ ಗುಡ್ ನ್ಯೂಸ್ ಫಾರ್ ಯು" ಕರೆ ಎತ್ತಿದಂತೆ ಉತ್ಸಾಹದಲ್ಲಿ ಆಕೃತಿ ಹೇಳುತಿದ್ದಳು. ಚೆನ್ನೈ ತಲುಪಿದ ನಂತರ ಬರೇ ಮೆಸ್ಸೇಜ್ ಗೆ ನಿಂತ ನಮ್ಮ ಸಂಬಾಷಣೆ ಶನಿವಾರದ ರವಿ ಇನ್ನು ಮಾಯವಾಗುವ ಮುನ್ನ ಅವಳು ಕರೆ ಮಾಡಿದ್ದಳು. ಮನೆಯವರ ಎದುರಿಗೆ ಮೆಸ್ಸೇಜ್ ಮಾಡಲು ಹೆದರುತಿದ್ದ ಆಕೃತಿ ಅಚಾನಕ್ಕಾಗಿ ಈ ಹೊತ್ತಿನಲ್ಲಿ ಕರೆ ಮಾಡಿದ್ದು ಆಶ್ಚರ್ಯ ಮೂಡಿಸಿತು.
"ಹೇ ಟ್ರಾನ್ಸ್ಲೆಟರ್ , ಏನೋ ರಾಜ , ಅಷ್ಟೊಂದು ಖುಷಿಯಲ್ಲಿದ್ದಿಯಾ ...?"
"ಹಮ್ ಮತ್ತೆ ಖುಷಿ ಪಡದೇ, ಸುನಿಲ್ ಇಷ್ಟು ಬೇಗ ಮದುವೆ ಬೇಡ ಅಂದನಂತೆ !!!"
"ಕಂಗ್ರಾಟ್ಸ್ ರಾಜ !! ಆರ್ ಯು ಹ್ಯಾಪಿ ನೌ ...?"
"ತುಂಬಾ ತುಂಬಾ .... " ಎನ್ನುತ್ತಾ ಕುಣಿಯುತಿದ್ದಳು. ಕ್ಷಣದಲ್ಲೇ ತನ್ನ ದನಿಯನ್ನು ತಗ್ಗಿಸಿ "ಐ ಲವ್ ಯು ಕಣೋ ..." ಅಂದಳು.
"ಓಯ್ ಎಲ್ಲಿದ್ದಿಯಾ..?"
"ಮನೆಯಲ್ಲೇ, ಅದೇ ಬಾಲ್ಕನಿಯಲ್ಲಿ , ಇಷ್ಟು ದಿನ ನಿನ್ನ ವಿರಹ ಕಾಡುತಿದ್ದಾಗ ಸಾಥಿಯಾದ ಬಿದಿರಿನ ಜೋಕಾಲಿಯಲ್ಲಿ..."
"ಮತ್ತೆ ...? ಯಾರಾದ್ರು ಕೇಳಿದರೆ...? ತೊಂದರೆ ಆಗಲ್ವಾ...?"
"ತೊಂದರೆ ಅದ್ರೂ ಪರವಾಗಿಲ್ಲ,ಇವತಲ್ಲ ನಾಳೆ ಅವರಿಗೆ ತಿಳಿಯುವುದೇ, ಇವತ್ತೇ ತಿಳಿಯಲಿ ಬಿಡು!!"
"ಹೇ ಹೇ , ಹಾಗೋ, ಹಾಗಾದ್ರೆ ಈಗಲೇ ನಿನ್ ಲ್ಯಾಂಡ್ ಲೈನ್ ಗೆ ಕರೆ ಮಾಡಿ ಹೇಳಿ ಬಿಡ್ಲಾ..?"
"ನೀನು ಅಷ್ಟು ಧೈರ್ಯಶಾಲಿ ಆಗುವ ಅವಶ್ಯಕತೆ ಬಂದಿಲ್ಲಪ್ಪಾ ಇನ್ನೂ, ಹೇಳ ಬೇಕಾದ ಸಮಯಕ್ಕೆ ನಾನೇ ಹೇಳ್ತೇನೆ..."
"ಮತ್ತೆ, ಕಾಲ್ ಇಡ್ಲಾ... ನಿಂಗೆ ತೊಂದರೆ ಆಗಬಹುದು ಮನೆಯವರ ಕಣ್ಣು ತಪ್ಪಿಸಿ ಮಾತಾಡಲು.."
"ಇಲ್ಲ ಡಮ್ಬೂ ಕೊಯಂಬತ್ತೂರಿನಿಂದ ಅವರ ಮನೆಯವರ ಕರೆ ಬಂದಿತ್ತು, ಅವರು ಅಮ್ಮ ದೊಡ್ಡಮ್ಮ ನ ಹತ್ತಿರ ಮಾತಾಡಿ ನನ್ನಲ್ಲಿ ಮಾತಾಡ ಬೇಕು ಹೇಳಿದರು, ಮನೆಯವರು ನಾನು ಅವರ ಹತ್ತಿರ ಮಾತನಾಡುತ್ತಿದ್ದೇನೆ ಅಂದು ಕೊಳ್ಳುತ್ತಾರೆ, ಮೇಲಾಗಿ ಮೇಲ್ ಮಹಡಿಯ ಬಾಲ್ಕನಿಗೆ ಯಾರು ಬರುವುದಿಲ್ಲ, ಪರವಾಗಿಲ್ಲ ಮಾತಾಡು"
"ನೀನೆ ಏನಾದ್ರೂ ಹೇಳು .." ಯಾವಾಗಿನಂತೆ ಮತ್ತೆ ಅದೇ ರೆಕೊರ್ಡ್ ಅನ್ನು ಶುರು ಮಾಡಿದೆ.
"ಏನಾದ್ರೂ ಹೇಳುವುದನ್ನು ಆಗ್ಲೇ ಮೆಟ್ಟಲು ಹತ್ತುತ್ತಾ ಹೇಳಿದೆನಲ್ಲ..." ನನ್ನ ರೆಕಾರ್ಡ್ ಗೆ ಯಾವಾಗಲು ಅವಳು ಕೊಡುತಿದ್ದ ಉತ್ತರ ಆಗಲೇ ನೀಡಿ ಆಗಿತ್ತು ಎನ್ನುವುದು ಅವಳ ಮಾತಿನ ಅರ್ಥ ವಾಗಿತ್ತು.
ನಾನು "ಅದು ಏನಾದ್ರೂ ಅಲ್ಲ, ಬೇರೆ ಏನಾದ್ರೂ... ಆ ಸುನಿಲ್ ಬಗ್ಗೆನೇ ಹೇಳು.. ಮಾತಾಡಿದ್ಯ ಅವನ ಹತ್ರ ...?"
"ಇಲ್ಲ, ನಿನ್ನೆ ರಾತ್ರಿ ಅವನ ಇಮೇಲ್ ಐಡಿ ಮನೆಯವರು ಕೊಟ್ರು, ಆರ್ಕುಟ್ ನಲ್ಲಿ ಅವನನ್ನು ಹುಡುಕಿ ತೆಗೆದೆ, ಪರವಾಗಿಲ್ಲ ಎನ್ನುವಂತಹ ಚೆಲುವು, ಹೊರಗಿನ ವಾತಾವರಣದಲ್ಲಿ ಬೆಳೆದ ಚರ್ಮ ಅವನು ದಕ್ಷಿಣ ಭಾರತೀಯ ಎಂಬುದನ್ನು ಮರೆ ಮಾಚುತ್ತದೆ."
"ಅಂದ್ರೆ ಅಮ್ಮಾವ್ರು ನಿನ್ನೆ ಅವನ ದ್ಯಾನದಲ್ಲಿ ಮುಳುಗಿದರು ಅಂತ ಆಯಿತು"
"ಓಯ್ , ಬರೇ ನೋಡಿದ್ದು ಅಷ್ಟೇ. ನೀನೆಲ್ಲಿ ಅವನೆಲ್ಲಿ.."
"ಹೋ ಹಾಗೋ ..ಮತ್ತ್ಯಾಕೆ ನಿನ್ನೆ ಈ ವಿಚಾರ ನನ್ನಲ್ಲಿ ಹೇಳಲಿಲ್ಲ..?" ನಾನು ಆಕೃತಿ ಕುರಿತು ಪೋಸ್ಸಿಸ್ಸಿವ್ ಅಗ್ತಿದ್ದದ್ದು ನನ್ನ ಗಮನಕ್ಕೆ ಬಂತು.
"ನಂಗೆ ಪೋಸ್ಸೇಸ್ಸಿವ್ ಪಾರ್ಟಿ ಅಂತೀಯ, ಈಗ ನೀನು ನೋಡು ... ಇದಕ್ಕೆ ಹೇಳುವುದು ಕಣ್ಣಿಗೆ ಕಾಣದ ಪ್ರೀತಿ ಅಂತ"
"ಸೊರ್ರಿ ರಾಜ, ಮತ್ತೆ ಯಾಕೆ ಹೇಳ್ ಲಿಲ್ಲ, ನಿನ್ನ ಮೆಸ್ಸೇಜ್ ಗಳಿಗೆ ಕಾಯುತ್ತ ಕಾಯುತ್ತ ನಾನು ನಿದ್ದೆಗೆ ಹೋದೆ"
"ಸೊರ್ರಿ ವೈಭು, ಈ ರೋಮಿಂಗ್ ನಿಂದ ಹಾಕಿದ್ದ ಹಣ ಎಲ್ಲ ಖಾಲಿ ಆಯಿತು, ಹಾಗೆ ನಿಂಗೆ ವಿಷಯ ತಿಲಿಸಲಾಗ್ಲಿಲ್ಲ, ಬೆಳಗ್ಗೆ ತಿಳಿಸುವ ಎಂದರೆ ಮನೆಯವರು ಇವತ್ತಿನ ಶಾಸ್ತ್ರ ಬಗ್ಗೆ ಮಾತನಾಡುತಿದ್ದರು,ಅತ್ತಿಗೆ ನನಗೆ ಹಿಡಿಸದ ಫೇಶಿಯಲ್ ಮಾಡಿಸಲು ಪಾರ್ಲರ್ ಗೆ ಕರೆದುಕ್ಕೊಂದು ಹೋಗಿದ್ದಳು, ಫೋಟೋದಲ್ಲಿ ಕಂಡು ಒಪ್ಪಿದ ಮುಖಕ್ಕೆ ಇನ್ನೂ ಮೇಕಪ್ ಹಚ್ಚಿ ಬೊಂಬೆ ಮಾಡಿ ಸಂಜೆ ರೆಡಿ ಮಾಡುವ ಹುಮನಸ್ಸು ಅವಳದ್ದಾಗಿತ್ತು, ಆಗಲೆನಾನು ಟೋಪಪ್ ಹಾಕಿಸಿಕ್ಕೊಂಡೆ. ಮನೆಗೆ ಬರುವಷ್ಟರಲ್ಲಿ ಅವರು ಸದ್ಯಕ್ಕೆ ಶಾಸ್ತ್ರ ಮಾಡುವುದು ಬೇಡ ಎಂದು ತಿಳಿಸಿದ್ದರು.ವಿಷಯ ತಿಳಿದು ನಾನು ಖುಷಿ ಪಟ್ಟೆ, ಅತ್ತಿಗೆ ಮಾಡಿದ ಶ್ರಮ ವ್ಯರ್ಥ ಆಯಿತಲ್ಲ ಎಂದು ವ್ಯಥೆ ಪಟ್ಟಳು."
"ಹೋ, ಹಾಗಾ.. ಏನಂತೆ ಕಾರಣ..?"
"ಮನೆಯವರು ಮಗ ಒಪ್ಪಿಯಾನು ಎಂದು ಮಾತುಕತೆ ಮುಗಿಸಿದ್ದರು, ಸಂಭದದಲ್ಲಿನ ಸಂಭಂದ ಆದುದರಿಂದ ನಮ್ಮ ಮನೆಯವರೂ ಹುಡುಗ-ಹುಡುಗಿಯ ಒಪ್ಪಿಗೆ ಹೊರತೆ ತಮ್ಮ ಕೆಲಸ ಮುಗಿಸಿದ್ದರು, ಬೆಳಗ್ಗೆ ಸುನಿಲ್ ನಿಗೆ ವಿಷಯ ತಿಳಿಸಿದಾಗ ಅವನು ಇನ್ನೂ ಒಂದರಿಂದ ಎರಡು ವರುಷ ಮದುವೆ ಬೇಡ, ಎಮ್ಮೆಸ್ಸ್ ಮುಗಿಸಿ ಇಂಟರ್ನ್ಶಿಪ್ ನಲ್ಲಿರುವ ಅವನು ಭಾರತಕ್ಕೆ ಬಂದ ಮೇಲೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದನಂತೆ, ಸದ್ಯಕ್ಕೆ ಎರಡು ವರ್ಷದ ಮಟ್ಟಿಗೆ ಅಲ್ಪ ವಿರಾಮ" ಎಂದು ಉಸಿರು ಬಿಟ್ಟಳು ಆಕೃತಿ.
"ಅಂದ್ರೆ ಎರಡು ವರ್ಷದ ನಂತರ...?"
"ಅಷ್ಟರಲ್ಲಿ ನಾನು ಮನೆಯವರಿಗೆ ನಿನ್ನ ವಿಷಯ ಹೇಳ್ತೇನೆ, ಅಷ್ಟರಲ್ಲಿ ನೀನು ಸೆಟಲ್ ಅಗ್ತಿಯಲ್ಲ... ಏನು ಪ್ರಾಬ್ಲಮ್ ಆಗಲ್ಲ.." ಅಂದಳು ನಿರಾಳವಾಗಿ.
"ಮತ್ತ್ಯಾಕೆ ಅವರು ಈಗ ನಿಂಗೆ ಕರೆ ಮಾಡಿದ್ದು..?"
"ಈಗಲಿಂದಲೇ ಆಗುವ ಸೊಸೆ ಮೇಲೆ ಅತ್ತೆಯ ಪ್ರೀತಿ ಸುರಿಸುವ ಪ್ರಯತ್ನ ಅಷ್ಟೇ.." ಅಂದಳು ಕೋಪದಿಂದ.
"ಭಾವಿ ಅತ್ತೆಯ ಹತ್ರ ಮಾತಾಡ ಬಹುದಿತ್ತಲ್ಲ" ಛೇಡಿಸಿದೆ.
ಅವಳು ಕೊಪದಲ್ಲೇ "ನೀನು ಹೀಗೆ ಮಾತಾಡಿದ್ರೆ ಆ ಭಾವಿ ಅತ್ತೆಯನ್ನೇ ಅತ್ತೆ ಮಾಡಿ ಬಿಡ್ತೇನೆ, ನೋಡು"
"ಬೇಡಮ್ಮ , ಆ ರಿಸ್ಕ್ ತಕೊಲ್ಬೇಡ"
"ಹಾಗ್ ಬಾ ದಾರಿಗೆ"
"ಮತ್ತೆ ...?"
"ಇನ್ನೂ ಒಂದು ದಿನ, ನಾಳೆ ಇಷ್ಟು ಹೊತ್ತಲ್ಲಿ ಟ್ರೈನ್ ನಲ್ಲಿ ಇರ್ತೇನೆ, ನಾಡಿದ್ದು ನಿನ್ ಜೊತೆ"
"ಹಮ್ ಮಿಸ್ ಮಾಡ್ಕೋತಾ ಇದ್ದೇನೆ, ಬಂದು ಬಿಡು ಬೇಗ"
"ಹಮ್ , ಬರ್ತೇನೆ , ಇಲ್ಲನ್ತಾದ್ರೆ ನಿನ್ನನ್ನು ಬೇರೆಯವರು ಹಾರಿಸಿ ಹೋದ್ರೆ..."
"ಯಾರಿಗೆ ಗೊತ್ತು ..? ನೀನು ಬರುವಷ್ಟರಲ್ಲಿ ಹಾರ್ಸಿ ಹೋದರು ಹೋಗ ಬಹುದು" ಎಂದು ಇನ್ನೊಮ್ಮೆ ಛೇಡಿಸಿದೆ.
"ಯಾರಿಗೆ ಆ ಧೈರ್ಯ ಇದೆ ನಾನು ನೋಡ್ತೇನೆ"
"ಅದು ಯಾರಿಗೂ ಇಲ್ಲ ಬಿಡು, ನೀನು ಎದುರಿದ್ರೆ ಆ ಹದ್ದು ಮರೆಯಲ್ಲೇ ಹೊಂಚು ಹಾಕುತ್ತೆ..." ಎನ್ನುತ್ತಾ ಮಾತನ್ನು ಅರ್ದಕ್ಕೆ ನಿಲ್ಲಿಸಿದೆ.
ಅವಳು" ನಂಗೂ ಗೊತ್ತು ವೈಭು, ಆ ಹದ್ದಿಗೆ ಏನೂ ಮಾಡ್ಲಿಕ್ಕೆ ಆಗಲ್ಲ..."
ಮೌನದಲ್ಲಿದ್ದೆ , ಅವಳು "ಬೈಕ್ ನಲ್ಲಿದ್ದಿಯೇನೋ...?"
"ಹೌದು, ರೂಮ್ನಲ್ಲಿ ಕೂತು ಕೂತು ಬೇಜಾರಾಯಿತು, ಹಾಗೆ ಹೊರ ಬಂದೆ, ರೋಮಾಂಟಿಕ್ ಹಾಡನ್ನು ಹಾಕಿ ಕ್ಯಾಡ್-ಬಿ ಔಟ್ಲೆಟ್ ಕಡೆಗೆ ಹೋಗುತಿದ್ದೆ, ನಿನ್ನ ನೆನಪಲ್ಲೇ ತೇಲುತಿದ್ದಾಗ ಹಾಡು ನಿಂತಿತು ನೀನು ಮಾತಾಡಿದೆ" ಅಂದೆ.
ಅವಳು "ಯು ಆರ್ ಟೂ ರೋಮಾಂಟಿಕ್ ದೀಸ್ ಡೇಸ್"ಅನ್ನುತ್ತಾ ದನಿಯನ್ನು ಇನ್ನೂ ಮೆದು ಮಾಡಿ ಮೊಬೈಲ್ ಗೆ ಮುತ್ತಿಟ್ಟಳು. ಕಿವಿ ತಂಪಾಯಿತು.
ಮತ್ತಲ್ಲಿ ತೇಲುತಿದ್ದ ನನಗೆ ಅವಳು "ಸರಿ ಸರಿ ರೋಡ್ ನೋಡ್ಕೊಂಡು ಓಡ್ಸು, ರಾತ್ರಿ ಮೆಸ್ಸೇಜ್ ಮಾಡೋಣ, ಹನ್ನೊಂದರ ಬಳಿಕ!! ಸೀ ಯು ದೆನ್ " ಎನ್ನುತ್ತಾ ಕರೆ ಕಟ್ ಮಾಡಿದಳು.
ಹೇಳ ಬೇಕೆನಿಸಿದ ಆ ಮೂರು ಶಬ್ದ ತುಟಿಯಿಂದ ರಿಸಿವರ್ ತಲುಪುವಷ್ಟರಲ್ಲಿ ಕರೆ ಕಟ್ ಆಗಿತ್ತು. ಯಿಯರ್ ಫೋನ್ ನಲ್ಲಿ 'ಓ ಹುಂ ದಂ ಸೋನಿಯೋರೆ ...' ಜೋರಾಯಿತು. ಬೈಕ್ ಎಡ ಬಲ ತಿರುಗುತ್ತಾ ಸರಸ್ವತಿ ಹಾಸ್ಟೆಲ್ ಗೇಟ್ ನಲ್ಲಿತ್ತು.
ಮ್ಯೂಸಿಕ್ ಪ್ಲೇಯರ್ ಎಗ್ಸಿಟ್ ಮಾಡಿ ಪ್ರೀತಿಯ ನಂಬರ್ ಗೆ ಕರೆ ಮಾಡಿದೆ.
"ಹೌದು, ನಿನ್ನೆ ಇಂದ ಈ ಕೆಲಸ ಬಿಟ್ಟು ಬೇರೇನೂ ಕೆಲಸ ಇರಲಿಲ್ಲ ಅಲ್ಲ, ಹಾಗೆ ಆನ್ ಟೈಮ್"
ಮುಗುಳ ನಕ್ಕಳು, ಹಿಂದಿನ ಸೀಟ್ ಏರಿ ಕುಳಿತಳು. ಜಾರಿ ಬಿಟ್ಟ ಕೂದಲು ಹಾರುತಿದ್ದವು. ಕೈಗಳು ಬಿಗಿಯಾಗಿ ನನ್ನನ್ನು ಅಪ್ಪಿ ಹಿಡಿದಿದ್ದವು. ಕಿವಿಯ ಬಳಿ ಬಂದು ಏನೋ ಹೇಳಲು ಹವಣಿಸಿ ಮತ್ತೆ ಹಿಂದೆ ಹೋದಳು.
ಮತ್ತೆ ಅದೇ ಹವಣಿಕೆ ಈಗ ಹಿಂದೆ ಹೋಗಲಿಲ್ಲ " ಏನೋ ಪ್ಲಾನ್ ..?"
"ಕ್ಯಾಡ್- ಬಿ "
"ಇಷ್ಟು ಬೇಗಾನ ..?"
"ಅಂದ್ರೆ...?"
"ಕ್ಯಾಡ್ -ಬಿ ಅಂದ್ರೆ ಹಾಟ್ ಆಲ್ವಾ ..!!"
"ಸಧಾಶಿವನಿಗೆ ಅದೇ ಧ್ಯಾನ... ಅಲ್ಲ ಕಣೆ ಅದು ಕೋಲ್ಡ್ ಡ್ರಿಂಕ್ , ಒಂದು ಔಟ್ಲೆಟ್ "
"ಯಾರೋ ಹಾಟ್ ಡ್ರಿಂಕ್ಸ್ ಕುಡಿಸುವ ಪ್ರಾಮಿಸ್ ಮಾಡಿದ್ರು,ಈಗ ಕೋಲ್ಡ್ ಡ್ರಿಂಕ್ಸಾ ...?"
"ಹೇ ಗೂಬೆ , ನಂಗೆ ಅದರ ಅಭ್ಯಾಸ ಇಲ್ಲ, ಬೇಡ ಅನ್ಸುತ್ತೆ."
"ಕ್ಯಾಡ್- ಬಿ ಗೆ ಬರ್ಬೇಕಂತಾದ್ರೆ ನೀನು ನನ್ನ ರಾತ್ರಿ ಪುಬ್ ಗೆ ತೆಕ್ಕೊಂಡು ಹೋಗ್ಬೇಕು"
"ನಂಗೆ ಒಳ್ಳೆ ಗ್ರಹಚಾರ ಬಂತಲ್ಲ, ಸರಿ ನೋಡೋಣ ಈಗ ಸದ್ಯಕ್ಕೆ ಕ್ಯಾಡ್ - ಬಿ ಗೆ ಹೋಗೋಣ" ಎನ್ನುತ್ತಾ ಬೈಕ್ ಅನ್ನು ಎಸ್ಸ್.ಪಿ ರೋಡ್ ನೆಡೆಗೆ ಓಡಿಸಿದೆ.
ಮತ್ತದೇ ಕ್ಯೂ , ಕ್ಯಾಡ್- ಬಿ ಮತ್ತು ಕ್ಯಾಡ್- ಎಂ ತೆಕ್ಕೊಂಡು ಹೊರಗಿದ್ದ ಚೇರ್ ನಲ್ಲಿ ಇಬ್ಬರು ಗುಟುಕಿಸುತಿದ್ದೆವು,ನನಗೆ ಕ್ಯಾಡ್- ಎಂ ಕ್ಯಾಡ್- ಬಿ ಗಿಂತ ಹಿತವೆನಿಸಿತು ಅವಳಿಗೆ ಕ್ಯಾಡ್- ಬಿ , ಕಾರಣ ಅವಳು ಮೊದಲಿಗೆ ಕ್ಯಾಡ್-ಎಂ ಸವಿದಿದ್ದಳು, ನಾನು ಕ್ಯಾಡ್ - ಬಿ ನಂತರ ಏಕ್ಚಂಜ್ ಮಾಡಿಕ್ಕೊಂಡಿದ್ದೆವು.ನಡುವಲ್ಲಿ ಒಂದು ಗಂಟೆ ಜಾರಿದ್ದೆ ಗೊತ್ತಾಗಲಿಲ್ಲ.
ತುಟಿ ಒರೆಸುತ್ತಾ "ವಾಟ್ ನೆಕ್ಷ್ಟ್ ...?"
"ಮೂವಿ ..?"
"ನೋ,ಐ ವಾಂಟ್ ಪುಬ್,ಐ ವಾಂಟ್ ಟು ಹಾವ್ ಓಡ್ಕಾ, ಪ್ಲೀಸ್ ವೈಭು , ಡಿಸ್ಕೋ ಎಲ್ಲ ಮಾಡಿ ಹೋಗೋಣ, ಡಿ-ಫ್ಯಾಕ್ಟರ್ ಹೇಳಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಲಿಲ್ಲ, ಪ್ಲೀಸ್ , ಪ್ಲೀಸ್ ..." ಅಂದಳು.
ಬದಿಯಲ್ಲೇ ಕುಳಿತಿದ್ದ ಒಬ್ಬ ಯೋ ಗೈ ನ ಹತ್ತಿರ ಪುಣೆಯಲ್ಲಿನ ಪುಬ್ ನ ಬಗ್ಗೆ ಮಾಹಿತಿ ಪಡೆದು ಅದರ ದಾರಿ ಹಿಡಿದೆವು.
ಮೊದಲಿಗೆ ಒಂದು ರಿಸೆಪ್ಶನ್ , ಅಲ್ಲಿ ಇಬ್ಬರ ಹೆಸರಲ್ಲಿ ಡಿಸ್ಕೋ, ಡ್ರಿಂಕ್ಸ್, ಡಿನ್ನರ್ ಸೇರಿ ತ್ರೀಡಿ ಆಫರ್ ತೆಗೆದುಕ್ಕೊಂಡೆವು. ಕಪಲ್ ಎಂಟ್ರಿ ಪುಬ್. ಆದುದರಿಂದ ಅದು ಸಭ್ಯವಾಗಿಯೇ ಕಾಣುತಿತ್ತು. ರಿಸೆಪ್ಶನ್ ನಲ್ಲಿ ಸಾವಿರ ರುಪಾಯಿಯ ಅಸ್ಸುರಿಟಿ ಇಟ್ಟ ಬಳಿಕ ಒಬ್ಬ ಕಟ್ಟುಬಸ್ತಾದ ದೇಹದ ವ್ಯಕ್ತಿ ಬಂದು ನಮ್ಮಿಬ್ಬರನ್ನು ಮೇನ್ ದಿಸ್ಕೊಫ್ಲೂರ್ ಗೆ ಕರಕ್ಕೊಂಡು ಹೋದ.
ಕೋಣೆ ಎಲ್ಲ ಅರೆಗತ್ತಲು, ಮಿಂಚುವ ದೀಪಗಳು, ಕಿವಿಗೆ ರಾಚುವಂತಹ ಡಿ.ಜೆ ಮ್ಯೂಸಿಕ್ ಯಾರನ್ನು ಜಿಗಿದು ಕುಣಿಯುವಂತೆ ಮಾಡುತಿದ್ದ ಸ್ಪೀಕರ್ಗಳು.ಶನಿವಾರ ಅದ್ದರಿಂದ ಆಗಲೇ ಅಲ್ಲಿಸೆರಿದ್ದ ಇಪ್ಪತ್ತಕ್ಕೂ ಮಿಕ್ಕಿ ಜೋಡಿಗಳು , ಬಾರಿಸುತಿದ್ದ ಬೀಟ್ಸ್ ಗೆ ಹೆಜ್ಜೆ ಹಾಕುತಿದ್ದರು.ಇಬ್ಬರೂ ಇವನ್ನು ನೋಡುತ್ತಾ ದಂಗಾಗಿ ನಿಂತೆವು.
ನಾನು ಪ್ರೀತಿಯಲ್ಲಿ "ಹೇಗಿದೆ ...? ಹೊಸ ಲೋಕ ..?"
"ಸೊ ಕಯಿಂಡ್ ಆಫ್ ಯು, ಐ ಲೈಕೆಡ್ ಇಟ್ ಲೋಟ್ !! ಮಂಗಳೂರಿನಲ್ಲಿ ಇಂಥದ್ದು ಯಾವುದು ಇಲ್ಲ, ಇರುವಲ್ಲಿಯೂ ಹೋಗಲಾರದ ಪರಿಸ್ತಿತಿ, ಇಲ್ಲಿ ನಮ್ಮದೇ ರಾಜ್ಯ.." ಎನ್ನುತ್ತಾ ಕೈ ಹಿಡಿದು ಹಾಲ್ ನ ಮದ್ಯಕ್ಕೆ ನನ್ನನ್ನೆಳೆದುಕ್ಕೊಂಡು ಹೋದಳು.
"ಮಂಗಳೂರಿನಲ್ಲಿಯೂ ಹೋಗಿದ್ದಿಯಾ ..? ಇಂಥಹವುಕ್ಕೆಲ್ಲ..?"
"ಒಮ್ಮೆ, ಬರಿ ಒಮ್ಮೆಗೆ ಸಾಕಾಯಿತು, ಅದು ಓಪನ್ ಟು ಆಲ್, ಗಂಡು ಸಾಮ್ರಾಜ್ಯ, ಮತ್ತೆ ಹೋಗಲಿಲ್ಲ"
"ಏನಾದ್ರೂ ...?"
"ಇಲ್ಲ,ಅಂತದ್ದೇನು ಆಗಿಲ್ಲ, ವಿವೆಕಿದ್ದ ಅಲ್ಲ ಜೊತೆಗೆ ಅವ ನೋಡ್ಕೊಂಡ"
"ಅಂದ್ರೆ ..?"
"ಅದ್ಯಾಕೆ ಈಗ ... ಹಳೆ ಟಾಪಿಕ್ ಬಿಟ್ಟು ಬಿಡು, ಏನ್ ತೆಕೊಳ್ತೀಯ..?"
"ಸದ್ಯಕ್ಕೆ ಸ್ಪ್ರೈಟ್ ಸಾಕು, ನಿಂಗೆ ಏನು ಬೇಕು ತಕೋ .."
"ಓಡ್ಕಾ, ವಿಥ್ ಸ್ಪ್ರೈಟ್ "
"ಸರಿ ನಾನು ತೆಕ್ಕೊಂಡು ಬರ್ತೇನೆ"
"ಅವನಿಗೆ ಚೆರ್ರಿ ಹಾಕಬೇಡ ಅಂತ ಹೇಳು,ಇಲ್ಲನ್ತಾದ್ರೆ ನಿಶೆ ಇಳಿದು ಬಿಡ್ತದೆ"
ಬದಿಯಲ್ಲಿದ್ದ ಕೌಂಟರ್ ನಲ್ಲಿ ಎರಡು ಗ್ಲಾಸ್ ನಲ್ಲಿ ಸ್ಪ್ರೈಟ್ ತುಂಬಿಸಿದ, ಒವ್ನ್ಸ್ ನಲ್ಲಿ ಓಡ್ಕಾ.
ಚೆರ್ರಿ ಹಾಕ ಬೇಡ ಎಂದೇ. ಟ್ರೇ ಹಿಡಿದು ಅವಳ ಬಳಿಗೆ ಬಂದೆ.
ಒವ್ನ್ಸ್ ಅನ್ನು ಸೀದಾ ತುಟಿ ಯಲ್ಲಿಟ್ಟ ಅವಳು " ಚೀರ್ಸ್" ಅಂದಳು.ಒಂದಿಂಚು ಆ ಶೀಷೆಗೆ ನನ್ನ ಐದೂವರೆ ಇಂಚಿನ ಗ್ಲಾಸನ್ನು ತಾಗಿಸಿದೆ."ಚೀರ್ಸ್" ಅಂದೆ.
ಕಣ್ಣು ಮುಚ್ಚಿ ಅವಳು ಒಂದು ಸಿಪ್ ಇಳಿಸಿ ಕಣ್ಣು ತೆರೆದಳು "ರೌ ನೇ ಕುಡ್ದಿಯಾ, ಏನೂ ಆಗಲ್ವಾ..?"
"ಮಂಗ ವೋಡ್ಕಾ ಹಾಟ್ ಅಲ್ಲ,ಏನು ಆಗಲ್ಲ, ಸ್ಪ್ರೈಟ್ ನಂತೆ ಇರುತ್ತೆ, ಟೇಸ್ಟ್ ಮಾಡು." ಎಂದು ನನ್ನ ತುಟಿ ಗಿಟ್ಟಳು. ತುಟಿಗಳನ್ನು ಮುಚ್ಚಿದೆ. ಬೇಡೆಂದು ನಾನು ಸಜ್ನೆ ಮಾಡಿದೆ. ಅವಳು ಒವ್ನ್ಸ್ ಕೆಳಗಿಟ್ಟಳು ನಂತರ ಸ್ಪ್ರೈಟ್ ಇದ್ದ ಗ್ಲಾಸ್ ಕೈಗೆತ್ತಿ ಗುಟುಕಿಸಿದಳು.
ಏಳಾಗುತ್ತಿದ್ದಂತೆ ಒಳಗೆ ಜನ ಸಂಚಾರ ಹೆಚ್ಚಾಯಿತು, ಅವಳು ಎರಡು ಒವ್ನ್ಸ್ ವೋಡ್ಕಾ ಮತ್ತು ೨ ವೈನ್ ಮುಗಿಸಿದ್ದಳು, ಅವಳ ಟೇಸ್ಟ್ ಅಂತೆ ಗ್ರಿಲ್ಲೆಡ್ ಚಿಕನ್ ಅವಳಿಗೆ ವೈನ್ ಜೊತೆಗೆ ಜೊತೆ ನೀಡುತಿದ್ದವು, ಸ್ಪ್ರೈಟ್ ಹೀರುತ್ತಾ ನಾನು ತುಂಡು ಸ್ವೀಕರಿಸಿದೆ. ನಡ ನಡುವೆ ಬೀಟ್ಸ್ ಏರಿದಾಗ ಇಬ್ಬರೂ ಹೆಜ್ಜೆ ಹಾಕುತಿದ್ದೆವು, ಸುಸ್ತಾದಾಗ ಮತ್ತೆ ಸಿಪ್ ಹೀರಿ ಮಾತಾಡುತಿದ್ದೆವು.
'ಒರು ಮಾಲೈ' ರಿನ್ಗಿಣಿಸಿತು. ಮತ್ತೆ ಅದೇ ಕರ್ನಾಟಕದ ನಂಬರ್ ವಿವೇಕ್ !
ಪ್ರೀತಿ ಜೋಥೆಯಲ್ಲಿದ್ದಾಳೆ, ಅಮಲಲ್ಲಿ ಇದ್ದಳು, ಮೊಬೈಲ್ ಅನ್ನು ಸೈಲೆಂಟ್ ಗೆ ತಳ್ಳಿ "ಪ್ರೀತಿ ಇಲ್ಲೇ ಕೂತಿರು, ಕಾಲ್ ಇದೆ, ಐದೇ ನಿಮಿಷದಲ್ಲಿ ಬಂದೆ" ಎಂದು ಟೇಬಲ್ ನಿಂದ ಮೇಲೆದ್ದು ಹೊರನಡೆದೆ.
"ಹೇಳೋ, ವಿವೇಕ್, ಸುದ್ದಿನೇ ಇಲ್ಲ"
"ಹಾನ್ಹ್ , ಹೇಗಿದ್ದೀಯ ವೈಭು...?"
"ನಾನು ಆರಾಮ್, ನಿನ್ನ ಪ್ರೀತೀನೂ ಆರಾಮ್"
"ಆ ನಾಯಿಯ ಹೆಸರು ಯಾಕೆ ತೆಗಿತಿದ್ದಿಯಾ... ಆ ಹೆಸರಿನ ಯಾರು ನಂಗೆ ಗೊತ್ತೇ ಇಲ್ಲ"
"ವಿವೇಕ್, ಏನಾಯ್ತೋ, ಪ್ರೀತಿ ... ನಿನ್ನ .. ನಿನ್ನ"
"ಮನುಷ್ಯ ಕುಡ್ದಾಗ ನಿಜ ಅಂತಾನೆ ಅಂತ ಹೇಳ್ತಾರೆ,ಈಗ ನಾನು ಕುಡ್ಡಿದ್ದೇನೆ, ಹೇಳ್ತಿರೋದು ನಿಜಾನೆ, ಅವಳು ಯಾರು ಅಂತ ನಂಗೆ ಗೊತ್ತಿಲ್ಲ"
"ನೀನು ಕುದ್ದಿದ್ದಿಯಾ, ಬೇರೆ ಯಾವಾಗಲಾದರು ಮಾತಾಡೋಣ ವಿವೇಕ್" ಅಂದೆ.
"ನಿನ್ನತ್ರ ಮಾತಾಡ್ಬೇಕು ಹೇಳಿಯೇ ಇವತ್ತು ಕುಡ್ದದ್ದು, ಇಲ್ಲನ್ತಾದ್ರೆ ನನ್ನಲ್ಲಿ ಧೈರ್ಯ ಬರಲ್ಲ, ನಾನು ಮಾತಾಡಲೇ ಬೇಕು, ನೀನು ಕೇಳಲೇ ಬೇಕು, ನಾನು ಹೇಳಿದನ್ನು ನೀನು ಅವಳಿಗೆ ಹೇಳಲೇ ಬೇಕು" ಅಂದನು ಆ ಬದಿಯಲ್ಲಿ ವಿವೇಕ್
ನಾನು ಏನು ಮಾತಾಡಲು ತೋಚದೆ ಸುಮ್ಮನಿದ್ದೆ, ಬಾಟಲಿಯಿಂದ ಅವನ ಗಂಟಲಿನಲ್ಲಿ ಇಳಿಯುತಿದ್ದ ಸ್ವರ ಕೇಳುತಿತ್ತು, ಒಂದೇ ದಮ್ಮಿಗೆ ನಾಲ್ಕೈದು ಗುಟುಕು ಗುಟುಕಿ ವಿವೇಕ್ "ಕೇಳೋ, ನಾನು ಅವಳನ್ನು ಕಳೆದ ಎರಡು ವರ್ಷದಿಂದ ಪ್ರೀತಿಸ್ತಾ ಇದ್ದೇನೋ, ಮೊದಲಿಗೆ ಅವಳೊಂದಿಗೆ ಗೆಳೆತನ ಇತ್ತೇ ವಿನಃ ಪ್ರೀತಿ ಮೂಡಿರಲಿಲ್ಲ, ಅವಳು ನಿವೆದಿಸುವಾಗ ನನಗೂ ಪ್ರೀತಿ ಇದೆ ಎಂದು ಸುಳ್ಳು ಹೇಳಿದ್ದೆ, ಬರ ಬರುತ್ತಾ ಆ ಸುಳ್ಳು ನಿಜವಾಯ್ತು, ಪ್ರೀತಿ ಅತಿಯಾಯಿತು. ಅದೇ ಸಮಯಕ್ಕೆ ಕ್ಯಾಂಪಸ್ ಎಲ್ಲಾ ನಡೆದು ಹೋಯ್ತು, ಅವಳಿಗೆ ಒಳ್ಳೆ ಕಂಪೆನಿಯಲ್ಲಿ ಕೆಲ್ಸ ಸಿಕ್ತು ನಾನು ಡಿಪ್ರೆಸ್ ಅಗ್ತಾ ಹೋದೆ, ಅವಳು ನನ್ನನ್ನು 'ಇವತಲ್ಲ ನಾಳೆ ಒಳ್ಳೆ ಕೆಲಸ ಸಿಕ್ಕೆ ಸಿಕ್ಕುತ್ತೆ' ಎಂದು ಸಮಾಧಾನಿಸುತಿದ್ದಳು.ಇದು ನನಗೆ ಅವಳಲ್ಲಿ ಇನ್ನೂ ಪ್ರೀತಿ ಹೆಚ್ಚಲು ಕಾರಣ ವಾಯಿತು.
ಯಾವಾಗ ಡ್ರೀಮ್ ಟೆಕ್ ನಿಂದ ರೆಜೆಕ್ಶನ್ ಲೆಟರ್ ಬಂತೋ ಅವಳು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಳು, ಅವಳಿಗೆ ಆಸರೆಯ ಒಡಲಾಗಿ ನಾನು ನಿಂತೇ, ನನಗೆ ಸಿಕ್ಕ ಕಾಲ್ ಸೆಂಟರ್ ಆಫರ್ ಅನ್ನು ನಾನು ಅವಳಿಗೆ ಕೊಟ್ಟೆ, ಅವಳಲ್ಲಿ ನಾನು ಎಂ. ಟೆಕ್ ಮಾಡುವುದಾಗಿ ಸುಳ್ಳು ಹೇಳಿದೆ.ಅವಳು ಕೆಲಸಕ್ಕೆ ಸೇರಿದಳು. ಕೊನೆ ಕ್ಷಣದ ತಯಾರಿ ನನಗೆ ಎಂ.ಟೆಕ್ ಸೀಟ್ ಸಿಗದಂತೆ ಮಾಡಿತು. ಕೆಲಸವೂ ಇಲ್ಲ, ಭವಿಷ್ಯವೂ ಇಲ್ಲದಂತೆ ನಾನು ಡೋಲಾಯಮಾನನಾದೆ.
ರಾತ್ರಿ ಕೆಲಸದಲ್ಲಿರುವ ಅವಳು ಹಗಲಾಗುತಿದ್ದಂತೆ ನನ್ನ ಮಾತಿಗೆ ತಿರುಗಿ ಬೀಳಲು ಶುರು ಮಾಡಿದಳು, ನನ್ನ ಇಷ್ಟಗಳು ಅವಳ ಕಷ್ಟ ಗಳಾಗ ತೊಡಗಿತು, ದಿನಕ್ಕೆ ಇಪ್ಪತ್ತಿದ್ದ ಕರೆ ಬರ ಬರುತ್ತಾ ಎರಡಾಯಿತು, ಒಂದಾಯಿತು, ಕೊನೆಗೆ ನಿಂತು ಹೋಯಿತು, ಅವಳು ಬೆಂಗಳೂರು ಬಿಟ್ಟ ಬಳಿಕ ಸಂಪೂರ್ಣವಾಗಿ ನಿಂತೇ ಹೋಯಿತು. ಪ್ರೀತಿ ಇದ್ದರೆ ಅವಳು ನನಗೆ ಮಹಾರಾಷ್ಟ್ರ ನಂಬರ್ ಕೊಡುತ್ತಾಳೆ ಅಂದುಕ್ಕೊಂಡಿದ್ದೆ, ಎರಡು ತಿಂಗಳಾಯಿತು, ಇಲ್ಲ, ಕೊಟ್ಟೆ ಇಲ್ಲ.
ಅವಳ ಸ್ಟೇಟಸ್ ಬದಲಾಗಿದೆ, ನಾನ್ಯಾಕೆ ಈಗ, ಐದಂಕೆಯ ಸಂಬಳ ಬರುವಾಗ, ಬೇಡ, ಬೇಡ ಅವಳು ಬೇಡಾ ಅವಳ ನೆನಪು ಬೇಡ...
ನಿನ್ನಿಂದ ಒಂದು ಹೆಲ್ಪ್ ಬೇಕು, ಮಾಡ್ತೀಯ ...??"
"ಹೇಳೋ "
"ನಿಮ್ ಆಫೀಸ್ ಅಡ್ರೆಸ್ ಕೊಡ್ತಿಯೇನೋ, ಅವಳ ನೆನಪನ್ನು ಅಲ್ಲಿ ಕಳುಹಿಸಿ ಕೊಡ್ತೇನೆ, ಅದನ್ನು ಅವಳ ಮುಖಕ್ಕೆ ಎಸೆದು ನನ್ನ ಬಗೆಯಿಂದ ಗುಡ್ ಬೈ ಹೇಳಿ ಬಿಡು, ಆ ನಿಯತ್ತಿಲ್ಲದ ನಾಯಿಗೆ" ಎನುತ್ತ ಒಂದೇ ಉಸಿರಿಂದ ಬೊಟಲೆತ್ತಿ ಶುರುಮಾಡಿದ.
"ವಿವೇಕ್, ಹೇ ಹಾಗೇನು ಮಾಡಬೇಡ, ಅವಳು ಸಿಕ್ತಾಳೋ... "
"ಅವಳು ಸಿಕ್ರೂ ಯಾವನಿಗೆ ಬೇಕೋ, ಸಾಕು ಈ ಲವ್ವು ಗಿವ್ವು, ಎಲ್ಲಾ ಅವರವರು ಸಂಧರ್ಭಕ್ಕೆ ಕೊಟ್ಟ ಹೆಸರಷ್ಟೇ, ಲವ್ವು ಅಂತೆ ಲವ್ವು.
ಹೆತ್ತವರು , ಫ್ರೆಂಡ್ಸ್ ಇದ್ದಾರೆ ನಂಗೆ ಪ್ರೀತಿ ಕೊಡಲು, ಪ್ರೀತಿ ಪಡೆಯಲು, ಆ ಪ್ರೀತಿಯ ಪ್ರೀತಿ ಬೇಡ , ಗುಡ್ ಬೈ ಅವಳಿಗೆ, ಅವಳ ಪ್ರೀತಿಗೆ"
ನಾನು ಮೌನ ದಲ್ಲಿದ್ದೆ.ಅವನು "ಹೇ ವೈಭು ಅಡ್ರೆಸ್ ಮೆಸ್ಸೇಜ್ ಮಾಡು,ನಾನು ನಿಂಗೆ ಡಿಸ್ಟರ್ಬ್ ಮಾಡಿದ್ರೆ ಸಾರೀ ಕಣೋ, ಇನ್ನ್ಯಾವತ್ತು ಡಿಸ್ಟರ್ಬ್ ಮಾಡಲ್ಲ..." ಎನ್ನುತ್ತಾ ಕರೆ ಕಟ್ ಮಾಡಿದ.
ಆಫೀಸ್ ಅಡ್ರೆಸ್ ಟೈಪಿಸುತ್ತಾ ನಡು ಹಾಲ್ ಗೆ ಬಂದೆ. ಪ್ರೀತಿ ಎಲುಬನ್ನು ಚೀಪುತಿದ್ದಳು. ಎದುರಿಗೆ ಖಾಲಿಯಾದ ಒವ್ನ್ಸ್ ಬಿದ್ದಿದ್ದವು.
"ಪ್ರೀತಿ, ಯಾವುದಕ್ಕೆ ಹೆಚ್ಚುಕಿಕ್ಕಿರುತ್ತೆ ..?"
"ವಿಸ್ಕಿ, ರಂ ಎಲ್ಲಾ ರೌ ಸೇವಿಸಿದರೆ ಅಷ್ಟೇ ಕಥೆ !!!"
"ಕಂಪನಿ ಕೊಡ್ತೀಯ...?"
"ಏನೋ ವೈಭು, ಹೀಗೆ ಕೆಳ್ತಿದ್ದಿಯಾ...? ಏನಾಯ್ತು ...?"
"ಏನೋ ಹೇಳ್ತಾರಲ್ಲ ಕುಡ್ದಾಗ ಸತ್ಯ ಕಕ್ತಾರೆ ಅಂತ ಸತ್ಯ ಹೇಳುವ , ಸತ್ಯ ಎದುರಿಸುವ ಮನಸ್ಸಾಗಿದೆ"
"ಏನೂ ಇಲ್ಲ, ಎಲ್ಲಾ ಕುಡ್ದಾಗ ಹೇಳುವ ಮಾತು ಅದು, ಮನಸ್ಸಿನ ಹಿಡಿತ ಮಾತಿನ ನಡತೆ" ಅಂದಳು.ಮೌನದಲ್ಲಿದ್ದೆ, ಅವಳು ಎಲ್ಲಾ ಎಲುಬನ್ನು ಚೀಪಿ ಮುಗಿಸಿದಳು.
"ಲಾಸ್ಟ್ ಸಿಪ್ ..?" ಅಂದೆ
"ವೋಡ್ಕನೆ ತಾ"
ಸರಿ ಎಂದು ಟೇಬಲ್ ನಿಂದ ಮೇಲೆದ್ದೆ, ಕೌಂಟರ್ ನಿಂದ ಮರಳಲು ಟ್ರೇನಲ್ಲಿ ಒಂದು ಒವ್ನ್ಸ್ ವೋಡ್ಕಾ, ಒಂದು ಒವ್ನ್ಸ್ ರಂ ಇತ್ತು, ಸ್ಪ್ರೈಟ್ ಮಾಯವಾಗಿತ್ತು.