ಅ ಕಪ್ ಓಫ್ ಕಾಫಿ ... ಸಿಪ್ - ೨

ಅ ಕಪ್ ಓಫ್ ಕಾಫಿ ... ಸಿಪ್ - ೨

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

 

ಹಿಂದಿನ ಸಿಪ್

 

ಸಿಪ್ - 



ಕಣ್ಣು ಹಾಯಿಸಿದಷ್ಟು ದೂರ ಹಾಸಿ ಕೊಂಡಿರುವ ಬಯಲುಹಸಿರು ಒಣಗಿ ಬಂಗಾರದ ಬಣ್ಣಕ್ಕೆ ತಿರುಗುತ್ತಿರುವ ಮುಳಿಹುಲ್ಲಿನ ನಡುವೆ ಕರಿ ಹಾವಿನಂತೆ ಸಾಗುವ ರಸ್ತೆಕಳೆದತಿಂಗಳಷ್ಟೇ ರಾಷ್ಟ್ರಾಧ್ಯಕ್ಷರು ಕಾಲೇಜ್ ಗೆ ಸೆಮಿನಾರ್ ಕೊಡಲು ಬಂದಿದ್ದಾಗ ಹಾಕಿದ್ದ ಟಾರು ಇನ್ನೂ ಏಳದೆ ವಿಮಾನ ನಿಲ್ದಾಣದ ವರೆಗೆ ಮುಂದುವರಿದಿತ್ತು. TVS victor 65 ವೇಗದಲ್ಲೇ ನಯವಾಗಿ ಹೋಗುತಲಿತ್ತು.



ವಿಕ್ಟರ್ ಹೊಸ ಹುರುಪಿನಲ್ಲೇ ದೂರ ಕ್ರುಮಿಸುತಿತ್ತುಮೊದಲ ಬಾರಿಗೆ ಒಂದು ಹೆಣ್ಣನ್ನು ಹೊತ್ತು ಸಾಗುವ ಸಂಭ್ರಮ ಅದಕ್ಕೆನನಗೋ ಯಾರಾದ್ರು ನೋಡಿದ್ರೆ ಏನೇನು ಕೇಳಬೇಕಾದೀತು ಎಂಬ ಗೊಂದಲ



ನನ್ನ ಪುಣ್ಯಕ್ಕೆ ಪ್ರೀತಿ ಒಂದೇ ಮುಖ ಮಾಡಿ ಕೂತಿದ್ದಳುಅವಳು ಬೈಕಲ್ಲಿ ಎದುರು ಮುಖ ಹಾಕಿ ಕೂತು ಭುಜದ ಮೇಲೆ ಕೈ ಹಾಕಿದ್ದರೆ ನೋಡುವ ಕಣ್ಣುಗಳು ರೆಕ್ಕೆ ಪುಕ್ಕ ಸೇರಿಸಿಹೊಸ ಕಾದಂಬರಿಯನ್ನೇ ಬರೆಯುತಿದ್ದವುನನ್ನಲ್ಲಿನ ಮಡಿವಂತಿಗೆಯನ್ನು ಅರಿತೆ ಅವಳು ಹೀಗೆ ಕೂತಿರಬಹುದು.



ದಾರಿಯುದ್ದಕ್ಕೂ ಆಗೊಮ್ಮೆ ಈಗೊಮ್ಮೆ ನುಸುಳುವ ಬಸ್ಉಳಿದಂತೆ ಖಾಲಿ ರಸ್ತೆಇಕ್ಕೆಲ್ಲವು ಖಾಲಿ ಖಾಲಿ- ನಿಮಿಷದ ಅವದಿಯಲ್ಲಿ ನಡ ನಡುವೆ ಬರುವ ಚಿಕ್ಕ-ಚಿಕ್ಕಗ್ರಾಮಗಳು.ಕಟ್ಟೆಯಲ್ಲಿ ಕೂತು ನಮ್ಮನ್ನೇ ಕುಕ್ಕಿ ಕುಕ್ಕಿ ನೋಡುತ್ತಿರುವ ಮುದಿ ಕಣ್ಣುಗಳು.



ಸಲ್ಪದರೆಲ್ಲೇ ಅನೀರೀಕ್ಷಿತ ಎಂಬಂತೆ ಮಳೆಯ ಸಿಂಚನಮನಸಲ್ಲೇ ಪ್ರೆಮದಂಕುರ ಮೂಡಲು ಬೇರೆ ಮುಹೂರ್ತ ಬೇಕಿರಲಿಲ್ಲವರುಣರಾಯ ಹದವಾಗಿಯೇ ಪ್ರೆಮರಸವನ್ನು ನನ್ನ ಮೇಲೆ ಸಿಂಪಡಿಸುತಿದ್ದವಿಕ್ಟರ್ ಏರಿಳಿತದ ಗುಡ್ಡದ ನಡುವೆ ಸಾಗುತಿತ್ತು



ಬಲ ಭುಜದಮೇಲೆ ಅವಳು ಸ್ಪರ್ಶಿಸಿದಂತಾಯಿತುತೊಟ್ಟ ಫಾರ್ಮಲ್ ಶರ್ಟ್ ಮಳೆಯಲ್ಲಿ ನೆನೆದು ಇನ್ನು ತೆಳುವಾಗಿತ್ತುಅವಳ ಸ್ಪರ್ಶದ ಪ್ರತಿ ಕಣ ಕಣವು ನನ್ನನ್ನುಪುಳಕಿಸುತಿತ್ತುಕನಸಿನ ಲೋಕಕ್ಕೆ ಜಾರುತಿದ್ದೆ ಅಷ್ಟರಲ್ಲೇ ಭುಜದ ಮೇಲಿದ್ದ ನಾಲ್ಕೂ ಬೆರಳ ಹಿಡಿತವು ಗಟ್ಟಿಯಾಯಿತು.



"
ವೈಭವ್ ಇಲ್ ಲೆಫ್ಟ್ ಗೆ ಗಾಡಿ ತೇಗಿ " ಅಂದಳು.

"
ಏನಿದೆ ಅಲ್ಲಿ ...?" 

"
ಇಲ್ಲಿ ಒಂದು ಸುಂದರ ದೇವಸ್ಥಾನವಿದೆ"

"
ಏನಮ್ಮಾ ಲಂಚಾನಾ?? ದೇವರಿಗೆ ..??"

"
ನಿನಗೆ ಗೊತ್ತಿಲ್ಲ ಅನ್ಸುತ್ತೆಇಲ್ಲಿ ಒಂದು ಸುಂದರ ದೇವಸ್ಥಾನವಿದೆನೀನು ನೋಡುವಿಯಂತೆ"

ನಾನು ಸರಿ ಎಂದು ಅವಳು ಹೇಳಿದಂತೆ ಗಾಡಿಯನ್ನು ಎಡಗಡೆಗೆ ತಿರುಗಿಸಿದೆ.



೨೦೦ - ೩೦೦ ಮೀಟರ್ ದೂರದಲ್ಲಿ  ಕವಲುದಾರಿಯ ಡೆಡ್ ಎಂಡ್ ತಲುಪಿದೆವುಮಳೆಯೂ ನಿಂತಿತುಗಾಡಿಯನ್ನು ನ್ಯೂಟ್ರಲ್ ಗೆ ತಂದು

"
ಏನೇ ಕಿವಿಯಲ್ಲಿ ಹೂ ಇಡಲು ನಾನೇ ಸಿಕ್ಕಿದ್ನೆ ನಿನಗೆ ???"

"
ಹಮ್ !!! ಹೂ ಹುಡುಕಿ ಬರ್ತೇನೆ...!!!!" ಅನ್ನುತ್ತ ಅವಳು ಬೈಕ್ನಿದ ಕೆಳಗೆ ಜಿಗಿದಳು.



ನಾನು ಸ್ಟಾಂಡ್ ಹಾಕಿ ಅವಳನ್ನೇ ಹಿಂಬಾಲಿಸಿದೆ.ಅವಳು ಮುಂದೆ ಮುಂದೆ ಸಾಗುತಿದ್ದಳು.



ಪಾರೆ ಕಲ್ಲಿನ ಗುಡ್ಡಇಬ್ಬರು ಒಂದು ಚಡಾವಿನ ಮೇಲಿದ್ದೆವು.ಕೆಳಗೆ ನೋಡಲು ಸುಂದರ ಪರಿಸರಹಸಿರೇ ಹಸಿರು  ದಿಕ್ಕಿನಲ್ಲಿ  ಕೆಂಪಾಗಿರುವ ಆಗಸ ದೂರ ಪಶ್ಚಿಮದಲ್ಲಿ ಭೂಮಿಯ ಪರಿಧಿಯಂತೆ ಕಾಣುತ್ತಿದ್ದ  ಅರಬ್ಬಿಸಮುದ್ರ.ನಡುವೆ ಮಾಯವಾಗುತ್ತಿರುವ ಕಾಮನ ಬಿಲ್ಲು.  ಅವನ್ನೇ ನೋಡುತ್ತಾ ತನ್ಮಯನಾಗಿ ನಿಂತ ನನ್ನಲ್ಲಿ



"
ಹೇಗಿದೆ surprise ??"

"amazing !!!! 
ಅದು ಸರಿ ದೇವಸ್ಥಾನ ಎಲ್ಲಿ ??"

"
ಅಲ್ಲಿ ..." ಎಂದು ಬಲಗೈ ಇಂದ ಸೂಚಿಸುತಿದ್ದಳು.

"
ಅಲ್ಲಿ ಎಲ್ಲಿ ...?" ಅಂದೆ

ಎದುರುಚಾಚಿದ್ದ ಕೈಯನ್ನು ನನ್ನ ಪ್ರಶ್ನಾತೀತ ನೋಟಕ್ಕೆ ಬಳಿತಂದು ನನ್ನ ಕೈ ಹಿಡಿದಳು ಮತ್ತೆ 

"
ಈಗ ನೋಡು ಬೆರಳಿಗೆ ಸರಿಯಾಗಿ "



ನನ್ನ ಬೆರಳನ್ನು (ಕೈಯನ್ನುಅವಳು ಹಿಡಿದ್ದಿದ್ದಳುಫುಲ್ ಬ್ಲಾಂಕ್ ಆದೆ ಇನ್ನು ಕಾಣಿಸಲಿಲ್ಲನನ್ನನ್ನು ನಾ ಕಳಕ್ಕೊಂಡೆ.

"
ಓಯ್ ... ಏನಾಯ್ತೋ ..ಎಲ್ಲಿ ಹೋದಿ?.. ಅಲ್ಲಿ ಒಂದು ಕೆರೆ ಕಾಣ್ತಿದೆಯ ಅದರ ಪಕ್ಕದಲ್ಲೇ ಒಂದು ಎರಡು ಮಹಡಿಯ ದೇವಸ್ತಾನ ಕಾಣುದಿಲ್ವೇ ನಿನಗೆ ..??"

ವಾಸ್ತವಕ್ಕೆ ಮರಳಿದ ನಾನು "ಹಾಂ ಕೆರೆ ಅದರ ಪಕ್ಕದಲ್ಲೇ  ಮನೆ .. ಕಾಣ್ತಾ ಇದೆ ಕಾಣ್ತಾ ಇದೆ ..."



"
ಸರಿ ಹೋಗೋಣವ ಅಲ್ಲಿಗೆ ??"

"
ಸರಿ ಹೋಗೋಣ..."



ಇಬ್ಬರು ಇಳಿಜಾರು ಇಳಿದೆವು.ಈಗ ಪರಿಸರವೇ ಬದಲಾಗಿತ್ತುಅಲ್ಲಿ  ಭಂಗಾರದ ಮುಳಿಹುಲ್ಲು ಇಲ್ಲಿ ಹಚ್ಚ ಹಸುರಿನ ನೋಟಎದುರಲ್ಲಿ ತೆಂಗು ಕಂಗಿನ ತೋಟನಡುವಲ್ಲಿಭತ್ತದ ಗದ್ದೆ.ಸುತ್ತಲೂ ಭತ್ತದ ಗದ್ದೆಯ ನಡುವೆ  ದೇವಸ್ತಾನ.



ಮುಂದಿನ ೨೦ ನಿಮಿಷದಲ್ಲಿ ತೋಟ ಗದ್ದೆ ದಾಟಿ ದೇವಸ್ಥಾನದ ಜಗಲಿಗೆ ತಲುಪಿದ್ದೆವು.



ಅವಳಲ್ಲಿ ನಾನು "ಎಷ್ಟು ಪ್ರಶಾಂತ ವಾತಾವರಣ.. ಇಲ್ಲಿನ ಪರಿಚಯ ಹೇಗೆ ನಿನಗೆ ..?"



"
ಇದು ಗದ್ದೆ ಮಠ ಅಂತ ... ಸುತ್ತಲೂ ಇರುವ ಗದ್ದೆಗೆ ಕಾವಲುಗಾರ ಇಲ್ಲಿನ ದೇವರುಇದು ನಮ್ಮ ಮುತ್ತಾತನ ಕಾಲದ ಜಮೀನುಈಗ ಎಲ್ಲ ಹರಿದು ಹಂಚಿ ಹೋಗಿದೆ.ವರ್ಷಕ್ಕೊಮ್ಮೆ ಶ್ರಾವಣದಲ್ಲಿ ನಾವು ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸುತ್ತೇವೆಜಗತ್ತಲ್ಲಿ ನನಗೆ ಇಷ್ಟವಾದ ಪ್ರದೇಶ"



"
ಅಷ್ಟೊಂದು ಮಹತ್ವ ಇದೆಯಾ  ಗದ್ದೆ ಮಠಕ್ಕೆ ನಿನ್ನಲ್ಲಿ ..? "

"
ಹುಂ ಮತ್ತೆ , ಏನ್ ಅನ್ಕೊಂಡಿದ್ದಿಯಾ...?  ಮಠ ನನ್ನ ಮುತ್ತಾತನ ಮನೆನನ್ನ ತಂದೆ ಹುಟ್ಟಿದ ಮನೆಈಗ ಮಠ ಆಗಿದೆ ಅಷ್ಟೇ..."

"
ಹೋ ಹಾಗಾ ಸಮಾಚಾರಾ ... ಮತ್ತೆ ಈಗ ಇಲ್ಲಿ ಯಾರು ಇಲ್ಲವಲ್ಲ... ಖಾಲಿ ಖಾಲಿ ಇದೆ ಹಿಡಿ ವಠಾರ...?"

"ಹುಂ ಒಬ್ಬರು ಭಟ್ರು ಇದ್ದಾರೆ, ಅವರೇ ಈ ದೇವಸ್ಥಾನದ ಆಗು ಹೋಗುಗಳನ್ನು ನೋಡುತ್ತಾರೆ. ಅವರು ಈಗ ಹೊರ ಹೋಗಿರಬಹುದು
"

"ತುಂಬಾನೆ ಚೆನ್ನಾಗಿದೆ, ತುಂಬಾನೆ ಇಷ್ಟವಾಯ್ತು .. Thanks !!!"





"ಏ ಮಂಗಾ... Thanks ಯಾಕೋ ...?"

"ಮಂಗ ..ಹೆಸರು  ಚೆನ್ನಾಗಿದೆ..."

"ಹೌದಾ .. ಹಂಗಾದ್ರೆ ಇನ್ನುಮುಂದೆ ಹಂಗೆ ನಿನ್ನ ಕರೆಯುತ್ತೇನೆ .."

"ಓಯ್  ಗೂಬೆ ... ನಾನು ಮಂಗಾ ಆದ್ರೆ ನೀನು ಗೂಬೆ ... ಡೀಲ್ ...??"

"ಓಕೆ ಡೀಲ್ "



"ಮಂಗಾ ಏನು ಮುಂದೆ ...?"

"CCD !!!"

"ಈಗಲೇ ೬ ಆಯ್ತೋ ... ಇನ್ನು ಸಿಸಿಡಿ ಗೀಸಿಡಿ ಅಂದ್ರೆ ಮನೆ ತಲಪುವಾಗ ೮ ಆಗಬಹುದು ..."

"ಓಯ್ ಗೂಬೆ ... ಪಾರ್ಟಿಯನ್ನು ಈ ತರಹ ಜಾರಿಸಿ ಕೊಳ್ತಿ ಅಂತ ಅನ್ಕೊಂಡಿರಲಿಲ್ಲ... ಅಮ್ಮಣ್ಣಿ ಮಾತಲ್ಲೇ ಎಲ್ಲ ಮಾಡಿ ಬಿಟ್ಟೆ ... "

"ವೈಭು... ಇಲ್ಲ ಶೂರ್ ಕೊಡ್ತೀನೋ ..."



ವೈಭು - ಅವಳ ಸಂಬ್ಹೊದಿಸುವ ಪ್ರತಿಯೊಂದು ಹೆಸರು ಪ್ರಿಯವಾಗಿತ್ತು ಕೇಳಲು, ಈ ಹೆಸರಿಂದ ಎಲ್ಲರೂ ಕರಿಯುತಿದ್ದರು ಆದರೆ ಅದು ಇವತ್ತು ಮೊದಲಬಾರಿಗೆ ಹಿತವೆನಿಸಿತು.

ನಾನು "ಏನಂದೆ ..??"

"ವೈಭು... ಯಾಕೆ ಕರೀ ಬಾರದ ಹಾಗೆ ..?? ಮಂಗನಿಗೆ ಮಂಗಾ ಅಂತ ಕರದ್ರೆ ಸಮಾಧಾನ ಅನ್ಸುತ್ತೆ !!!"

"ಅಲ್ಲ ಅಲ್ಲ .. ಏನೋ ಹಿತ ಅನ್ಸಿತಿತ್ತು  ..."

"ಅಂದ್ರೆ ..??"

"ಏನೂ ಇಲ್ಲ ... ಬಿಡು ..."



ಇಬ್ಬರು ಅರೆ ಕ್ಷಣ ಮೌನಕ್ಕೆ ಜಾರಿದೆವು.

"ವೈಭು ..."

"ಏನು ...? ಹೋಗೋಣವೆ ಇಲ್ಲಿಂದ ..?"

"ಓಕೆ ... "

"ನಾನು ನಿನ್ನ ಮನೆವರೆಗೂ ಬಿಟ್ಟು ಹೋಗ್ತೇನೆ ..."

"ಸರಿ"





ಇಬ್ಬರು ಗುಡಿಗೆ ಹೋಗಿ ಪ್ರದಕ್ಷಿಣೆ ಹಾಕಿ ನಿಶ್ಯಬ್ದ ವಾತಾವರಣದಲ್ಲಿ ಘಂಟೆಗೊಂದು ಗುದ್ದು ಕೊಟ್ಟು ಹೊರಬಂದೆವು. ಗುಡಿಯೊಳಗೆ ಇನ್ನು ಆ ದನಿ ಪ್ರತಿ ಧ್ವನಿಸುತಿತ್ತು. ನನ್ನೆದೆಯಲ್ಲಿ ಅವಳ ಮಾತು ಗುಂಯ್ ಗುಡುತ್ತಿತ್ತು .



ಮತ್ತೆ ಅದೇ ಗದ್ದೆಯ ಅಂಚಲ್ಲಿ ನಡೆಯುತಿದ್ದೆವು ಅವಳು ಮುಂದಕ್ಕೆ ನಾನು ಹಿಂದಕ್ಕೆ.. ಬಳಕುವ ಅವಳನ್ನು ನೋಡ ನೋಡುತ್ತಾ ಸಾಗುತ್ತಿದ್ದ ನನಗೆ ಕಾಲಡಿಯ ಕಾಲಡಿ ಪುಣಿಯ ಪರಿವಿರಲಿಲ್ಲ, ಪುಣಿ ಬಿಟ್ಟು ಬಲಗಾಲು ಕೆಳಗೆ ಜಾರಿತು. ಅವಳು ತಿರುಗಿದಳು. ಒಂದು ಬದಿ ಪೂರ್ತಿ ಕೆಸರಲ್ಲಿ ಮುಳುಗಿದ್ದೆ.



ನನ್ನಲ್ಲಿ ಕೈ ಕೊಟ್ಟು "ಹುಂ ಬಾ ಅಂದಳು"

"ಥ್ಯಾಂಕ್ಸ್ .." ಎನ್ನುತ್ತಾ ನನ್ನನ್ನು ನಾನು ಸುದಾರಿಸಿಕೊಂಡೆ.



"ಮಂಗಾ ಮೇಲೆ ಬಂದಾಯ್ತಲ್ಲ .. ಬಿಡು ಕೈ "

"ಯಾಕೆ ನಾನು ಕೈ ಬಿಡಬೇಕು ..!!!" 

"ಹುಚ್ಚು ಹುಡುಗ .. ಸಾಕ್ ಸಾಕು " ಅನ್ನುತ್ತ ಮೆಲ್ಲನೆ ಅವಳ ಕೈಯನ್ನು ನನ್ನ ಹಿಡಿತದಿಂದ ಎಳೆದುಕೊಂಡಳು.



ಬೈಕ್ ಏರಿ ಅದನ್ನು ತಿರುಗಿಸಿ ಅವಳನ್ನು ಕುಳಿತುಕೊಳ್ಳುವಂತೆ ಹೇಳಿದೆ. 

ಅವಳೂ ಈಗ ನನ್ನಲ್ಲಿನ ಮಡಿವಂತಿಗೆಯ ಮಟ್ಟ ಅರಿತು ಎರಡೂ ಬದಿಯಲ್ಲಿ ಕಾಲ ಹಾಕಿ ಕೂತಳು.

ಎರಡೂ ಭುಜದ ಮೇಲೆ ಕೈ ಇಟ್ಟು

"ಹೋಗಲಿ ಸವಾರಿ ...." ಅಂದಳು.



ಒಂದು ಎರಡೂ ಮೂರು ಎನ್ನುತ್ತಾ ಒಂದೇ ಬಾರಿ ನಾಲ್ಕನೇ ಗೇರ್ ನಲ್ಲಿ ಓಡಿಸುತಿದ್ದೆ, ತಂಪಾದ ಗಾಳಿ ಝುಮ್ಮೆಂದು ನಮ್ಮನ್ನು ತೋರಿ ಹಿಂದೆ ಸರಿಯುತ್ತಿತ್ತು. ಅವಳೂ ನನ್ನನ್ನು ಸಂಪೂರ್ಣ ಬಳಸಿ ಕುಳಿತಿದ್ದಳು.

೮೫ ರ ವರೆಗೆ ವೇಗ ಹೆಚ್ಚಿಸಿಕೊಂಡೆ. 



ಒಮ್ಮೆಲೇ ಇಷ್ಟು ಸ್ಪೀಡ್ ಆಗಿ ಹೋದರೆ ಅವಳನ್ನು ಬೇಗ ಬೀಳ್ಕೊಡ ಬೇಕಾದೀತು ಎಂಬ ಅರಿವು ಹುಟ್ಟಿ ವಿಕ್ಟರ್ ಅನ್ನು ಸ್ಲೋ ಮಾಡಿಸಿದೆ. ಅವಳಿಗೂ ನನ್ನ ಒಳಮನಸ್ಸು ತಿಳಿಯಿತು ಅಂತ ಕಾಣ್ತದೆ,

ನನ್ನಲ್ಲಿ 

"ಮಂಗಾ .. ೬:೩೦ ಆಯಿತು ೭:೩೦ ಒಳಗೆ ನಿನಗೆ ಕಾಲೇಜ್ ಗೇಟ್ ಒಳಗೆ ಇರ್ಬೇಕು .. ಇಲ್ಲನ್ತಾದ್ರೆ ನಿಮ್ಮ ವಾರ್ಡನ್ ಏನಾದ್ರೂ ತಗಾದೆ ಮಾಡುವನು ... ಗಾಡಿ ಸರಿಯಾಗಿ ಓಡ್ಸು ಮಂಗಾ .. " ಅಂದ್ಳು



ಅಬ್ಬಾ ಹುಡುಗೀರು ಎಷ್ಟು ಹುಶಾರಿರ್ತಾರೆ ... ಎಲ್ಲಾ ಗೊತ್ಹಾದ್ರು ಏನು ಗೊತಿಲ್ಲದ ತಾರಾ ನಾಟಕವಾಡ್ತಾರೆ. ಇನ್ನೇನೋ ಉಕ್ಕಿ ಬರುವ ಹಾಲಿನ ಬಟ್ಟಲಿನ ಬೆಂಕಿ ಆರಿಸಿದಂತೆ ಕ್ಷಣದಲ್ಲಿ ಮೇಲೆ ಉಕ್ಕಿಸಿ ಮರುಕ್ಷಣನೆ ಆರಿಸಿ ಬಿಡ್ತಾರೆ ..

 

ಗೇರ್ ಹೆಚ್ಚಿಸಿಕೊಂಡೆ ಮುಂದಿನ ೨೦ ನಿಮಿಷದಲ್ಲೇ ಮಂಗಳೂರಿನ ಟ್ರಾಫಿಕ್ ದಾಟಿ ಅವಳ ಮನೆಯ ಗಲ್ಲಿ ತಲುಪಿ ಆಯ್ತು. ಅವಳು ಹಿಂದೆ ಕೂತು ನನಗೆ ಮನೆಯ ಅಡ್ರೆಸ್ಸ್ ಹೇಳುತಿದ್ದಳು.

 

"ವೈಭು .. ಇದೇ ನನ್ನ ಅರಮನೆ .."

"ಮಹಾರಾಣಿಯವರ ಅಪ್ಪಣೆಯಾದರೆ ಈ ದಾಸ ಮರಳುತ್ತಾನೆ ತನ್ನಕಾರ್ಯಕ್ಕೆ .. ಅಪ್ಪಣೆಯಾಗಲಿ .."

"ನಮ್ಮ ಸಮ್ಮತಿ ಇದೆ. ತಮ್ಮ ಕಾರ್ಯಕ್ಕೆ ತೆರಳಿ "

 

ನಾನು ಇನ್ನೂ ಎಡಕಾಲನ್ನು ಬದಿಯಲ್ಲೇ ಇದ್ದ ಫೂಟ್ಪಾಥ್ ಗೆ ಕೊಟ್ಟು ನಿಂತಿದ್ದೆ.

ಅವಳು "ಯಜಮಾನ್ರೇ ಹೋಗಿ ... ವಾರ್ಡನ್ !!!!"

"ಸರಿ ...  next ..??"

"Some Other day a cup of Coffee @ CCD" ಅನ್ನುತ್ತ ಮನೆ ಗೇಟ್ ತೆರೆದಳು.

 

"A Cup Of Coffee !!! "ಅದೇ ಗುಂಗಿನಲ್ಲಿ ನಾನು ಬೈಕನ ಸ್ಪೀಡ್ ಹೆಚ್ಚಿಸಿಕ್ಕೊಂಡೆ.. ನಗರದ ಬೀದಿದೀಪಗಳ ನಡುವಲ್ಲಿ ಮರೆಯಾದೆ.

 

 

 

 

ಸಿಪ್ - 3

Rating
No votes yet

Comments