ಅ ಕಪ್ ಓಫ್ ಕಾಫಿ ... ಸಿಪ್ - ೩
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಸಿಪ್ - ೩
ಮೊದಲ ದಿನ ಕೆಂದಾವರೆ ಬಣ್ಣದ ಸಲ್ವಾರ್ ನಲ್ಲಿ ಚೆನ್ನಾಗಿ ಕಾಣುತಿದ್ದಳು.ಮುಂದಿನಿಂದ ಮೂರನೇ ಬೆಂಚ್ ನ ೨ ನೇ ಜಾಗದಲ್ಲಿ ಅವಳು ಕುಳಿತಿದ್ದಳು. ಹಿಂದಿನಿಂದ ಮೂರನೇ ಅಂದರೆ ಅವಳ ಹಿಂದಿನ ಸಾಲಿನಲ್ಲಿ ನಾನು ಕುಳಿತಿದ್ದೆ.ನಡುವಲ್ಲಿರುವ ಪೆಸ್ಸೇಜ್ ಮಾತ್ರ ನಮಿಬ್ಬರನ್ನು ಒಂದುವರೆ ಅಡಿ ದೂರ ಇರುವಂತೆ ಮಾಡಿತ್ತು. ಸಲ್ಪದರಲ್ಲೇ ಬಂದ ಸೀಮಾ ಮಾಮ್
"ಪ್ಲೇಸ್ದ್ ಸ್ಟುಡೆಂಟ್ ಲಿಸ್ಟ್ ನಲ್ಲಿ ಹೊಸ ಎಂಟ್ರಿ ..? "
ಅವಳು ಒಂದು ಕ್ಷಣಕ್ಕೆ ಬಲಬದಿಗೆ ತಿರುಗಿದಳು. ತಲೆ ಮೇಲೆ ಇಳಿ ಬಿಟ್ಟಿರುವ ಕೂದಲು, ಬೋಟ್ಟಿರದ ಖಾಲಿ ಹಣೆ. ಕಿವಿಯಲ್ಲಿ ಸಣ್ಣದೊಂದು ಓಲೆ ಮತ್ತು ಅದರ ಮೇಲೊಂದು ಸಣ್ಣ ವಜ್ರದ ಗುಂಡು. ಬಿದ್ದ ಮುಂಗುರಳನ್ನು ಅವಳು ತ್ಹೊರುಬೇರಳಲ್ಲಿ ಸುತ್ತಿಸಿ ಹಾಗೆ ತನ್ನ ಬಲ ಕಿವಿಯ ಎಡೆಯಲ್ಲಿ ಇಳಿಸಿ ಬಿಟ್ಟಳು.
ಕಣ್ಣಲ್ಲಿ ಕಣ್ಣಿಟ್ಟು ನೋಡಲಾರದೇ ಕಣ್ಣ ಬುಡ್ದೆ ಗಳೆರಡನ್ನೂ ಡೆಸ್ಕ್ ನೆಡೆಗೆ ತಿರುಗಿಸಿದೆ.ಪಕ್ಕದಲ್ಲೇ ಕುಳಿತಿದ್ದ ದೇವು "ವೈಭು..."
"ಎಸ್ ಮಾಮ್ ... "ಎನ್ನುತ್ತಾ ನಾನು ಎದ್ದು ನಿಂತೆ.
ಅವಳು ನನ್ನನ್ನು ಅನುಸರಿಸಿದಳು.
ಇಬ್ಬರಿಗೂ ವಿಷಸ್ ಹೇಳಿ ಸೀಮಾ ಮಾಮ್ ತಮ್ಮ ಅದೇ ಬೋರಿಂಗ್ ಮನೆಜ್ಮೆಂಟ್ ವಿಷಯವನ್ನು ಮುಂದುವರಿಸಿದರು.
ಇನ್ನೂ ನನ್ನ ನೋಟ ಅವಳೆಡೆಗೆ ಮುಂದುವರಿದಿತ್ತು. ೧೧ ದಾಟಿ ೧೨ , ೧ , ಸಂಜೆ ನಾಲ್ಕರ ವರೆಗೆ ಇದೇ ಕಥೆ ಮುಂದುವರಿಯಿತು. ಪ್ರತಿಯೊಂದು ತರಗತಿಯ ಶುರುವಿಗೆ ನಾವಿಬ್ಬರು ನಿಂತು ಕೊಳ್ಳುವುದು ಲೆಕ್ಚರರ್ ಕೈಯಲ್ಲಿ ಹೊಗಳಿಸಿಕೊಳ್ಳುವುದು. ಒಬ್ಬರನೊಬ್ಬರು ನೋಡುತ್ತಾ ಮತ್ತೆ ಪುನಃ ಕನಸನ್ನು ನೆಯ್ಯಲು ಶುರುಮಾಡಿಕೊಳ್ಳುವುದು.
ಹಿಡಿ ದಿನ ಆ ಕೆಂದಾವರೆಯನ್ನೇ ಆಶ್ರಯಿಸಿದ ಭ್ರಮರದಂತಾದೆ ನಾನು. ಕ್ಲಾಸಸ್ ಬಿಟ್ಟ ಬಳಿಕ ಅವಳು ತನ್ನ ಗೆಳತಿಯರೊಡನೆ ಕಾಲೇಜ್ ಬಸ್ ಹತ್ತಿದಳು. ಒಂದೂ ಮಾತಿಲ್ಲ ಹಿಡಿ ದಿನ.ಬಾಡಿದ ಮುಖ ಹೊತ್ತುಕ್ಕೊಂಡೆ ಹಾಸ್ಟೆಲ್ ಕಡೆಗೆ ನಡೆದೆ.
ಕೈಯಲಿದ್ದ ಕೈಗಡಿಯಾರ ನೋಡಿಕ್ಕೊಂಡೆ ೪:೪೦. ೪:೫೦ ಕ್ಕೆ ಕಾಲೇಜ್ ಬಸ್ ಹೊರಡುವ ಸಮಯ, ಇನ್ನೂ ಹತ್ತು ನಿಮಿಷ ಇದೆ ಇಲ್ಲೇ ಕಾಯುತ್ತೇನೆ ಕೊನೆ ಕ್ಷಣದ ಪ್ರಯತ್ನ ನೋಡಿ ಬಿಡೋಣ ಎನ್ನುತ್ತಾ ಕಾಲೇಜ್ ಕ್ಯಾಮ್ಪುಸ್ ನಲ್ಲಿರುವ ಕೆನರಾ ಬ್ಯಾಂಕ್ ಏಟಿಎಂ ಬಳಿಗೆ ಬಂದು ನಿಂತೆ.
ಅಡ್ಮಿನಿಷ್ಟ್ರೆಶನ್ ಬ್ಲಾಕ್ ನಿಂದ ಬಸ್ ಹೊರಟಿದ್ದು ಕಂಡ ತಕ್ಷಣ ಕಿಸೆಯಲಿದ್ದ ಬಾಚಣಿಕೆ ತೆಗೆದು ಕೂದಲನ್ನು ಬಾಚಿಕ್ಕೊಂಡೆ. ಪ್ರತಿಫಲಕ ಏಟಿಎಂ ಗಾಜಿನಲ್ಲಿ ನನ್ನನ್ನು ಇನ್ನೊಮ್ಮೆ ಸಿದ್ದ ಮಾಡಿಕ್ಕೊಂಡೆ. ರೋಡಿನ ಬಲಬಾಗದಲ್ಲಿ ಏಟಿಎಂ ಆದರೆ ಅವಳು ಕುಳಿತು ಕೊಂಡಿದ್ದು ಬಸ್ ನ ಎಡಬದಿಯಲ್ಲಿ. ಅವಳನ್ನು ನೋಡ ಬೇಕಾದರೆ ನಾನು ರೋಡ್ ದಾಟಬೇಕು. ಕಾಲೇಜ್ ನ ಎಲ್ಲ ಬಸ್ ತಮ್ಮ ತಮ್ಮ ನಂಬರ್ ಗೆ ಅನುಗುಣವಾಗಿ ಕಾಲೇಜ್ ಗೇಟ್ ಕಡೆಗೆ ಬರುತಿತ್ತು. ಬಸ್ ನಂಬರ್ ೧ ನನ್ನನ್ನು ದಾಟಿ ಮುಂದೆ ಹೋಯಿತು. ಅವಸರವಸರದಲ್ಲೇ ರೋಡನ್ನು ದಾಟಿದೆ.
ಹಿಂದಿನ ೨ ನಂಬರ್ ಬಸ್ ಡ್ರೈವರ್ ಕೈಯಲ್ಲಿ ರೋಡ್ ದಾಟ ಬೇಕಾದರೆ ಸುಮ್ಮನೆ ಬೈಗುಳನೂ ಕೇಳಿಸಿ ಕೊಂಡೆ.
೨, ೩, ೪ ಹೀಗೆ ಒಂದೊಂದೇ ಬಸ್ ಮುಂದೆ ಸಾಗುತಿತ್ತು, ೭ ನೇ ಬಸ್ ನ ೩ ನೇ ಸೀಟ್ ನ ನೋಟಕ್ಕಾಗಿ ನಾನು ಕಾಯುತಿದ್ದೆ,ನನ್ನ ಒಳಗಿನ ಹೃದಯ ಅವಳ ಕಣ್ಣ ನೋಟದ ಕೊಳದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಹಪಹಪಿಸುತಿತ್ತು.
೬ ನೇ ಬಸ್ ದಾಟುತಿದ್ದಂತೆ ಕಲ್ಲಾದ ಶರೀರದಲ್ಲಿ ಧಮನಿ ಅಪಧಮನಿಗಳಿಬ್ಬರೇ ನಿತ್ಯದ ಕೆಲಸದ ಮಿತಿಗಿಂತ ಎರಡುಪಟ್ಟು ಹೆಚ್ಚಿನ ಶ್ರಮಪಡುತಿದ್ದ ಅನುಭವ ಮಿಟುಕದ ಕಣ್ಣಿಗಾಗುತಿತ್ತು.
೭ ನಂಬರ್ ಬಸ್ ನನ್ನನ್ನು ಸಮೀಪಿಸಿತು. ಕಣ್ಣು ಇನ್ನೂ ಅಲ್ಲೇ ನೆಟ್ಟಿತ್ತು. ೩ ನೇ ಸೀಟ್ ನನ್ನನ್ನು ದಾಟಿ ಮುಂದೆ ಸಾಗಿತು.ಅಲ್ಲಿ ಕುಳಿತಿರುವವಳು ಅವಳೇ ಎಂದು ಕಿಟಿಕಿಯಿಂದ ಹೊರ ಹಾರುತಿದ್ದ ಕೆಂದಾವರೆ ದುಪಟ್ಟ ಹೇಳುತಿತ್ತು. ಆದರೆ ಮುಖ ನೋಡಲು ಕಾಯುತಿದ್ದ ನನ್ನ ಕಣ್ಣುಗಳಿಗೆ ಅಪಾರ ನಿರಾಶೆಯಾಯಿತು. ಕಳೆದ ೩೩ ಸೆಕೆಂಡು ಗಳಿಂದ ಊರಗಲ ಚಾಚಿದ್ದ ರೆಪ್ಪೆಗಳ ಅಂಚಲ್ಲಿ ತೇವ ಇಳಿಯ ತೊಡಗಿತು.ಕಲ್ಲಾದ ಶರೀರ ಮೇಲಾನೆ ಸಡಿಲ ಗೊಂಡಿತು. ೮ ನೇ ಬಸ್ ನ ಹೊರ್ನ್ ಮತ್ತೆ ನನ್ನನ್ನು ಎಚ್ಚರಿಸಿತು.
ಒಂದ ದಾರಿಗೆ ಸುಂಕವಿಲ್ಲ ಎನ್ನುತ್ತಾ ಮುಂದೆ ಹೆಜ್ಜೆ ಹಾಕಲು ೭ ನೇ ಬಸ್ ನಿಂದ "ವೈಭು ..... ಮಂಗಾ.... ಬಾಯ್ ...." ಅಂದ ಹಾಗಾಯಿತು.
ತಿರುಗಿ ನೋಡಿದೆ .ಎರಡನೇ ಕಿಟಕಿಯಿಂದ ತಲೆ ಹೊರಹಾಕಿ ನನಗೆ ಬಾಯ್ ಹೇಳಲು ನನ್ನ ಕೆಂದಾವರೆ ಕಷ್ಟ ಪಡುತಿತ್ತು, ರಾತ್ರಿ ಯಿಂದ ನಿರೀಕ್ಷಿಸುತಿದ್ದ ಭ್ರಮರಕ್ಕೆ ಕೆಂದಾವರೆ ಅರಳಿದಂತಾಯಿತು. ಮಂಕಾದ ತುಟಿಗಳು ಮತ್ತೆ ಅರಳಿದವು. ಹೃದಯವು ಕೈಗಳಿಗೆ "ಅವಳಿಗೆ ಬಾಯ್ ಮಾಡು ಮಂಗಾ...!!" ಎಂಬ ಸಂದೇಶ ಕಳಿಸಿತ್ತು. ಅದನ್ನು ಅನುಸರಿಸಿ ಅವು ಅವಳೆಡೆಗೆ ಬಲ-ಎಡಕ್ಕೆ ಬೀಸುತಿದ್ದವು ನನ್ನ ಬಾಯಿ "ಬಾಯ್ ಗೂಬೆ ... " ಎಂದು ಬೊಬ್ಬೆ ಹಾಕಿತು.
೭ ದಿನಗಳು ... ಅಯ್ಯಬ್ಬಾ... ಅದರಲ್ಲಿ ನಡುವಿನ ೨ ದಿನಗಳು ಕಾಲೇಜ್ ಗೆ ರಜೆ, ಪ್ರತಿ ಕ್ಷಣಕ್ಕೂ ಅವಳದ್ದೇ ಕನವರಿಕೆ.ಅವಳಾಗಿಯೇ ನನ್ನಲ್ಲಿ ಮಾತಾನಾಡುವ ತನಕ ನಾನು ಅವಳನ್ನು ಮಾತನಾಡಿಸುವುದಿಲ್ಲ ಎಂದು ನಿಶ್ಚಯಿಸಿದ್ದೆ.
ಎದುರಲ್ಲಿ ಮಾತನಾಡಲು ಮನಸಿರದ ನನಗೆ, ಆಗತಾನೆ ಹದಿಹರೆಯದ ಗೆಳೆಯರ ಹೃದಯಕ್ಕೆ ಲಗ್ಗೆ ಇತ್ತ ಓರ್ಕುಟ್ ಅವಳ ಬಗ್ಗೆ ಅರಿಯಲು ಒಂದು ಒಳ್ಳೆಯ ವೇದಿಕೆಯನ್ನೇ ನೀಡಿತು. ಮಾರನೆ ದಿನ ೨೫ ನೇ ಡಿಸೆಂಬರ್ ಶನಿವಾರ ಬಂದದ್ದು ನನ್ನ ವಿರಹದ ದಿನದ ಲೆಕ್ಕವನ್ನು ಎರಡೇ ದಿನಕ್ಕೆ ಮೀಸಲಿಡಲು ಅನುವು ಮಾಡಿತು.
ಶನಿವಾರದಂದು ಅವಳ ಪ್ರೊಫೈಲ್ ಗೆ ಭೇಟಿ ನೀಡಿ ಅವಳ ಆಗು ಹೋಗುಗಳನ್ನು ತಿಳಿದುಕ್ಕೊಂಡೆ. ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ಅಂದುಕ್ಕೊಂಡೆ, ಮರು ಕ್ಷಣವೇ ಬೇಡ ಎಂದು ಸುಮ್ಮನಾದೆ. ೨ ದಿನದಲ್ಲಿ ೧೦ ರಿಂದ ೧೨ ಬಾರಿ ಅವಳ ಪ್ರೊಫೈಲ್ ಗೆ ಭೇಟಿ ಇಟ್ಟೆ.
ಮುಂದಿನ ನಾಲ್ಕು ದಿನ ಅವಳನ್ನು ಏಟಿಎಂ ಕೌಂಟರ್ ಬಳಿ ಬಾಯ್ ಮಾಡಿ ಬರುವ ಕೆಲಸ ನನ್ನ ದಿನಚರಿಯಲ್ಲಿ ಸೇರಿತು.ಹಾಯ್ ಬಾಯ್ ಬಿಟ್ಟರೆ ಮೂರನೇ ಶಬ್ದ ನಾವಾಡಿರಲಿಲ್ಲ ಕಳೆದ ೬ ದಿನಗಳಲ್ಲಿ. ಕಣ್ಣ ಸನ್ನೆ ಯಲ್ಲಿಯೇ ಮಾತಿನ ವ್ಯವಹಾರ ನಡೆಸುತಿದ್ದೆವು.
ಶುಕ್ರವಾರ ಮದ್ಯಾನ್ಹ ಲ್ಯಾಬ್ ಅನ್ನು ಯಾವುದೋ ಕಾರಣಕ್ಕೆ ಕ್ಯಾನ್ಸಲ್ ಮಾಡಿದ್ದರು, ೧೨ ಗಂಟೆಗೆ ೩ ನೇ ಪಿರೇಡ್ ಮುಗಿದ ಬಳಿಕ ಯಾವುದೇ ಕ್ಲಾಸ್ ಇರಲಿಲ್ಲ. ಹಾಸ್ಟೆಲ್ ಗೆಳೆಯರೆಲ್ಲ ರಾತ್ರಿಯ ಹೊಸವರ್ಷದ ಆಚರಣೆಯ ಬಗ್ಗೆ ಚರ್ಚಿಸುತಿದ್ದರು.ಹುಡುಗಿಯರ ಮುಂದೆ ಸಾಚ್ಚ ಆಗಿರುವ ಹುಡುಗರಿಗೆ ರಾತ್ರಿಯ ಎಣ್ಣೆ ಪಾರ್ಟಿ ಬಗ್ಗೆ ಚರ್ಚಿಸಲು ತಡೆ ಉಂಟಾಗಿ ಡಿಂಗ್ ಪಾರ್ಟಿ ಗಳೆಲ್ಲ ಹಾಸ್ಟೆಲ್ ಕಡೆ ನಡೆದರು.ಲ್ಯಾಬ್ ಒಬ್ಸರ್ವೇಶನ್ ಅನ್ನು ರೆಕಾರ್ಡ್ ಬುಕ್ ನಲ್ಲಿ ಭಟ್ಟಿ ಇಳಿಸುವುದರಲ್ಲಿ ನಿರತ ನಾಗಿದ್ದ ನಾನು ೭- ೮ ಹುಡುಗಿಯರ ನಡುವೆ ಒಬ್ಬನೇ ಇದ್ದುದ್ದು ನನ್ನ ಕೆಲಸ ಮುಗಿಸಿದಾಗ ಗಮನಕ್ಕೆ ಬಂತು.
ಬ್ಯಾಗ್ ಅನ್ನು ಬೆನ್ನಿಗೀರಿಸಿ ಹಾಸ್ಟೆಲ್ ಗೆ ಹೋಗಬೇಕೆನ್ನುವಷ್ಟರಲ್ಲಿ ಪ್ರೀತಿ "ವೈಭು ... ಫ್ರೀ ಇದ್ದಿಯೇನೋ ...? ಇವತ್ತು ..??"
"ಹಮ್ ... ಯಾಕೆ ...?"
"ಕ್ಲಾಸಸ್ ಇಲ್ಲ ಅಲ್ಲ .. ಹಿಂದಿನ ಒಪ್ಪಂದದ ನೆನಪಾಯಿತು .. A cup Of Coffee ..."
"ಈಗಲೇ "
"ಓಕೆ , ಒಂದು ನಿಮಿಷ ತಡಿ , ನನ್ನ ಬೈಕ್ ದೇವು ತಕ್ಕೊಂಡು ಹೋಗಿದ್ದಾನೆ, ಬೈಕ್ ತೆಕ್ಕೊಂಡು ಬರ್ತೇನೆ .. ಗೇಟ್ ಬಳಿ ಇರು ೫ ನಿಮಿಷದಲ್ಲಿ .."
"ಓಕೆ ಓಕೆ .. ಬಾ ಅಲ್ಲೇ ಸಿಗ್ತೇನೆ ..."
ಹಾರಲು ಹೊಸ ಆಗಸ ಸಿಕ್ಕಂತಾಗಿತ್ತು. ಒಂದೇ ಓಟದಲ್ಲಿ ಹಾಸ್ಟೆಲ್ ಗೆ ಧಾವಿಸಿದೆ, ಅವನ ಕೈಯಿಂದ ಬೈಕ್ ಕೀ ಇಸ್ಕೊಂಡು ನನ್ನ ರೂಂ ಗೆ ಹೋದೆ. ಕಪಾಟಿನಲ್ಲಿ ಅಳವಡಿಸಿರುವ ಕನ್ನಡಿಯಲ್ಲಿ ನನ್ನನ್ನು ಒಮ್ಮೆ ನಾ ನೋಡಿಕ್ಕೊಂಡೆ. ಅಸ್ಸಯ್ಯ ವೆನಿಸುವಂತ ಅಲ್ಲಲ್ಲಿ ಚದುರಿರಿರುವ ಕುರುಚಲು ಗಡ್ಡ, ಹಣೆಯಲ್ಲಿ ಇಳಿಯುತ್ತಿರುವ ಬೆವರು. ಬಿಳಿ ಪಾರಿವಾಳದಂತಿರುವ ಪ್ರೀತಿ ಎದುರಿಗೆ ಪ್ರೇಮ ನಿವೇದನೆ ಮಾಡಲು ಯಾವುದೇ ಕೋನದಲ್ಲಿ ಸೂಟ್ ಆಗದಂತಹ ಚಹರೆ.
೮ ದಿನದಲ್ಲಿ ಬೆಳೆದ ತಂತಿಯಂತೆ ಇರುವ ಗಡ್ಡವನ್ನು ತೆಗೆದು ೨ ಟೋನ್ ಬೆಳ್ಳಗೆ ಕಾಣಿಸಿಕೊಳ್ಳಲು ೨ ಬಾಲ್ಡಿ ನೀರು ಮತ್ತು ಸಂತೂರ್ ಸಾಬೂನು ನೆರವು ನೀಡಿತು.೧೫ ನಿಮಿಷದಲ್ಲಿ ಶುಬ್ರವಾಗಿ ಮತ್ತೆ ಅದೇ ಕನ್ನಡಿ ಎದುರು ನಿಂತು ಕೊಳ್ಳಲು ಈಗ ಪರವಾಗಿಲ್ಲ ಎಂಬ ಭಾವನೆ. ಬರ್ತ್ ಡೇ ದಿನ ಗೆಳೆಯರು ಸೇರಿ ಕೊಟ್ಟ ಅಡಿಡಾಸ್ ಶೂ ಮೊದಲ ಬಾರಿಗೆ ನನ್ನ ಕಾಲನ್ನು ಭಂದಿಸಿತ್ತು. ಒಳಗೆ ೧ ವಾರದ ಹಿಂದೆ ಇಂಟರ್ವ್ಯೂ ದಿನ ಹಾಕಿದ್ದ ಸೋಕ್ಕ್ಸ್ ಘಮ್ಮೆಂದು ದುರ್ನಾಥ ಬಿಡುತಿತ್ತು.
ರೂಮ್ಮೇಟ್ ನ ಡೀವ್ ೨ ರೌಂಡ್ ಹೊಡೆಸಿಕ್ಕೊಂಡು ಕೀ ಎತ್ತುಕ್ಕೊಂಡು ಕೆಳಗಿಳಿದೆ.
ಬೈಕ್ ಏರಿ ಸೀದಾ ಗೇಟ್ ಬಳಿ ತಲುಪಿದಾಗ ಬ್ರೇಕ್ ಹಾಕಿದೆ.
"೧೪ ಮಿನಿಟ್ ೪೫ ಸೆಕೆಂಡ್ಸ್ ಲೇಟ್ !!! "
"ಸಾರೀ, ಬಿಳಿ ಪಾರಿವಾಳಕ್ಕೆ ಕಂಪನಿ ಕೊಡಲು ಕಾಗೆ ಇಂದ ಪಾರಿವಾಳವಾಗಲು ಇಷ್ಟು ಸಮಯ ಬೇಕಾಯಿತು."
"ಹೋ .. ಹಾಗಾ...!!!!"
"ಹುಮ್ಮ್ .." ಎನ್ನುತ್ತಾ ನಾನು ಅವಳನ್ನು ಬೈಕ್ ಏರುವಂತೆ ಸನ್ನೆ ಮಾಡಿದೆ.
ಮರುಕ್ಷಣವೇ ಅವಳು ನನ್ನ ಹಿಂದೆ ಕುಳಿತುಕ್ಕೊಂಡಳು.
೨ ಮಿನಿಷದಲ್ಲಿ ವಿಕ್ಟರ್ ೮೫ ರ ವೇಗ ಹಿಡಿದು ಸಾಗುತಿತ್ತು.
ಬಲ ಕೈಯನ್ನು ನನ್ನ ಹೆಗಲ ಮೇಲೆ ಹಾಕಿ ಹಿಂದಿನಂತೆ ಅವಳು ಕುಳಿತಿದ್ದಳು.
ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ.
ನಾನು ಸಲ್ಪ ತಡೆದು "ನಿನ್ನಷ್ಟು ಅಲ್ಲ " ಅಂದೆ.
ಅವಳು "ಸಾಕು ಸಾಕು ರೈಲು ಹತ್ತಿಸಿದ್ದು," ಅಂದು ಮುಗುಳ ನಕ್ಕಳು.
ಬಲಬದಿಯ ಸೈಡ್ ಮಿರರ್ ನಲ್ಲಿ ಅವಳ ಮುಗುಳ್ನಗೆ ಎದ್ದು ಕಾಣುತಿತ್ತು. ಅವಳೂ ಆ ಕನ್ನಡಿಯಲ್ಲಿ ನನ್ನನ್ನೇ ನೋಡುತಿದ್ದಳು.
ಕ್ಷಣದಲ್ಲೇ ತನ್ನ ಹುಬ್ಬಿನಿಂದ ನನ್ನನ್ನು ರೋಡ್ ನೋಡಿ ಗಾಡಿ ಓಡಿಸು ಎಂದು ಸನ್ನೆ ಮಾಡಿದಳು.
ಕಣ್ಣನ್ನು ಮೆಲ್ಲನೆ ಕನ್ನಡಿಯಿಂದ ರಸ್ತೆಗೆ ಜಾರಿಸಿದೆ. ಒಳಮನಸ್ಸು ಮತ್ತೆ ಮತ್ತೆ ಹಿಂದೆ ಕುಳಿತಿರುವ ಬಿಳಿ ಪಾರಿವಾಳವನ್ನು ಆಸ್ವಾದಿಸು ಎನ್ನುತಿತ್ತು.
ಮತ್ತೆ ಕಣ್ಣನ್ನು ಬಲಗಡೆಗೆ ತಿರುಗಿಸಿದೆ. ಇನ್ನೂ ಆ ಎರಡು ಕಣ್ಣುಗಳು ಇಲ್ಲೇ ನೋಡುತಿದ್ದವು, ನನ್ನ ಕಣ್ಣಿನ ಗೊಂದಲವನ್ನು ನೋಡಿ ಅವ್ವು ಮತ್ತೆ ಮುಗುಳ್ನಕ್ಕವು.
ತನ್ನ ಬಲ ಕೈಯನ್ನು ಭುಜದ ಮೇಲಿನಿಂದ ತೆಗೆದು ನನ್ನ ತಲೆಗೆ ಒಂದು ಬಾರಿ ಬಡಿದು "ಮುಂದೆ ನೋಡಿ ಓಡಿಸು .. ಇಲ್ಲನ್ತಾದ್ರೆ ಇಬ್ಬರೂ ಹೋಸ್ಪಿಟಲ್ ನಲ್ಲಿರಬೇಕಾಗುತ್ತದೆ " ಅಂದಳು.
"ಪರವಾಗಿಲ್ಲ ಇಬ್ಬರೂ ಒಟ್ಟಿಗೆ ಇರ್ತೀವಲ್ಲಾ ...!!!" ಅಂದೆ.
ಅವ್ಳು ಎತ್ತಿದ ಕೈಯಿಂದ ಇನ್ನೊಂದು ಮೆದುವಾದ ಹೊಡೆತ ಹೊಡೆದಳು.
ಕನ್ನಡಿಯಲ್ಲಿ ಅವಳನ್ನೇ ನೋಡುತಿದ್ದೆ, ಅವಳು ನಾಚಿ ನೀರಾಗಿ ಹೋಗುತಿದ್ದಳು.
ಮತ್ತೆ ನಾನು ಅವಳನ್ನು ನೋಡುತ್ತಾ ಇದ್ದೇನೋ ಎಂದು ಖಾತ್ರಿ ಪಡಿಸಲು ಕಣ್ಣು ತೆರೆದಳು. ನನ್ನ ಅಲ್ಲೇ ನೋಡಿ ಮತ್ತೆ ಮುಗುಳ ನಕ್ಕಳು.
ಅವಳಲ್ಲಿ, ಆ ಕಣ್ಣುಗಳಲ್ಲಿ ನಾನು ಕರಗಿ ಹೋಗುತಿದ್ದೆ.
"I like you..." ಎಂಬ ಮಾತು ನಾ ನಾಡದೇ ಹೊರಟು ಬಿಟ್ಟಿತು.
ಅವಳು "ವಾಟ್ ...??"
೨೦ ನಿಮಿಷದಲ್ಲಿ Cafe Coffee Day ಇರುವ ಮಾಲ್ ತಲುಪಿದೆವು.
ಮುಂದಿನ ಸಿಪ್
Comments
ಉ: ಅ ಕಪ್ ಓಫ್ ಕಾಫಿ ... ಸಿಪ್ - ೩
ಉ: ಅ ಕಪ್ ಓಫ್ ಕಾಫಿ ... ಸಿಪ್ - ೩
ಉ: ಅ ಕಪ್ ಓಫ್ ಕಾಫಿ ... ಸಿಪ್ - ೩