ಅ ಕಪ್ ಓಫ್ ಕಾಫಿ ... ಸಿಪ್ - ೪೨
ಸಿಪ್ - ೪೨
ರಾಜಹಂಸ ಪುಣೆಗೆ ತಲುಪುವಾಗ ಮತ್ತೆ ಲೇಟಾಗಿತ್ತು, ಆದರೆ ಹಿಂದಿನ್ನಂತೆ ತಲೆಯಲ್ಲ್ಲಿ ಆಫೀಸ್ ಗೆ ಹೋಗಿ ಕ್ರಿಸ್ ನ ಕೆಲಸ, ಟುಲ್ಯಾಂ ಗೆ ಸಲಾಮು ಎಂಬೆಲ್ಲ ವಿಚಾರ ತಲೆಯಲ್ಲಿರಲಿಲ್ಲ, ಮೇಲಾಗಿ ಅಲ್ಲಿ ನನ್ನ ಮನಸ್ಸು ಮತ್ತು ದೇಹವನ್ನು ಎಳೆಯುವ ಆಕೃತಿ ಇರಲಿಲ್ಲ. ಆರಾಮ್ ಸೆ ಹೋಗುವುದು, ಆರಾಮ್ ಸೆ ಎಷ್ಟಾಗ್ತದೆಯೋ ಅಷ್ಟಕ್ಕೇ ನನ್ನ ಅಧಿಕಾರವನ್ನು ಸೀಮಿತ ಮಾಡಿದುವ ಪರಿಯನ್ನು ನಾನು ಶುರು ಮಾಡಿದ್ದೆ, ಫ್ಲೆಕ್ಸಿ ಟೈಮಿಂಗ್ ಎಂಬ ವರ್ಕ್ ಶೆಡ್ಯೂಲ್ ಕೂಡ ನನಗೆ ಇವತ್ತು ಬರೆಯ ನಾಲ್ಕು ಗಂಟೆಯ ಆಫೀಸ್ ನಲ್ಲಿ ಇದ್ದರೆ ಸಾಕು ನಾಳೆ,ನಾಡಿದ್ದು ಹೀಗೆ ಮಾಡುತ್ತಾ ತಿಂಗಳ ಎಂಡಿಂಗ್ ವರ್ಕ್ ಹೌರ ಅನ್ನು ಮುಗಿಸಿದರೆ ಸಾಕಾಗಿತ್ತು.
ಫ್ಲಾಟ್ ತಲುಪಿ ಆರಾಂಸೆ ಆಫೀಸ್ ತಲುಪಿದಾಗ ಕೈಯಲ್ಲಿನ ವಾಚ್ ನ ಸಣ್ಣ ಮುಳ್ಳು ಹನ್ನೊಂದು ಮತ್ತು ಹನ್ನೆರಡರ ನಡುವೆ ತಲುಪಿತ್ತು. ಕಾರ್ಡ್ ಸ್ವೈಪ್ ಮಾಡುವಾಗ ತಿವಾರಿ ನನ್ನನ್ನು ನೋಡಿದರೂ ಇವತ್ತು ಹಿಂದಿನಂತೆ "ಇಟ್ಸ್ ಟುವೆಲ್" ಎಂದು ಚೀರಾಡಲಿಲ್ಲ. ಆಫೀಸ್ ನಲ್ಲಿ ಮೇನೇಜ್ಮೆಂಟ್ ಲೆವೆಲ್ ನ ಎದುರಿಗೆ ನಾನು ಈಗ ಒಂಟಿ ಸಲಗ ನಾಗಿದ್ದೆ. ನಾನು ನಡೆದ ದಾರಿ ನನ್ನದಾಗಿತ್ತು. ನನ್ನ ವಿಷಯದಲ್ಲಿ ಯಾರು ತಲೆ ಹಾಕುತ್ತಿರಲಿಲ್ಲ.
ಜೀವನ್ ಬಂದಿರಲಿಲ್ಲ, ನೆನಪಿಸಿಕ್ಕೊಂಡೆ , ಹೌದು ಇವತ್ತು ಅವನು ಬೆಂಗಳೂರಿನಿಂದ ಬರುವುದಿತ್ತು. ಅವನು ಹನ್ನೆರಡು ವರೆಯ ಮುಂಚೆ ಇಂತಹ ದಿನದಲ್ಲಿ ಆಫೀಸ್ ಸೇರುತ್ತಿರಲಿಲ್ಲ, ಇದು ಅವನ ತಪ್ಪು ಅಲ್ಲ ಕಳೆದ ಮೂರು ರಾತ್ರಿಗಳಿಂದ ಇಲ್ಲದ ನಿದ್ದೆಯನ್ನು ಅವನು ಪೂರೈಸಬೇಕಿರುತ್ತದೆ ಅಲ್ಲವೇ ...!
ನನ್ನ ಸಿಸ್ಟಂ ಆನ್ ಮಾಡಿ ಎಂದಿನಂತೆ ಮೊದಲ ಕೆಲಸ 'ಉದಯವಾಣಿ' ಓದಲು ಶುರು ಮಾಡಿದೆ. ಈಗ ನಾನು ಹಿಂದಿನಂತೆ ಸ್ವೀಟ್ ಅಟ್ ಮೈ ಡೆಸ್ಕ್ ಮಾಡುವುದನ್ನು ನಿಲ್ಲಿಸಿದ್ದೆ, ಯಾವ ಖುಷಿಗೆ ಸ್ವೀಟ್ಸ್ ಹಂಚಲಿ, ಮನಸಲ್ಲಿ ಇರುವ ವಿಷ ಆ ಆ ಮತ್ತಿನಲ್ಲಿ ಏರಿತ್ತು.
ಅವಿನಾಶ್ "ಇಸ್ ಬಾರ್ ಕುಚ್ ಲಾಯ ನಹಿನ್ ಕ್ಯು...?" ಅಂದ ನಾನು ಖಾಲಿ ಕೈಯಲ್ಲಿ ಬಂದಿರುವುದನ್ನು ನೋಡಿ.
"ಲಾಯ ಹೇ ಭಾಯಿ... ಲೇಕಿನ್ ಇನ್ ಚೂತಿಯೊಂಕ್ ಕೋ ಕ್ಯುನ್ ದೆದುಂ...? ಆಪ್ ಕೋ ಲಾಯಾ ಹೇ ಶಾಮ್ ಮೇ ಘರ್ ಅವೋ ದೇ ದೇತಾ" ಅಂದೇ.
ಅವನು "ಐ ಲವ್ ಮಂಗಳೂರ್ ಸ್ವೀಟ್ಸ್ !!,ಮಂಗಳೂರ್ ಗರ್ಲ್ಸ್, ಮಂಗಳೂರ್ ಪೀಪಲ್ !!! ಲವ್ ಯೌ ಭಾಯಿ" ಎನ್ನುತ್ತಾ ವೀಕೆಂಡ್ ನಲ್ಲಿ ನಡೆದ ಯಿಪಿಎಲ್ ಅಪ್ದೆಟ್ಸ್ ನೋಡಲು ಶುರು ಮಾಡಿದ.
ಮೇಲ್ ಬಾಕ್ಸ್ ತೆರೆದು ಬಂದಿರಬಹುದಾದ ಹೊಸ ಕೆಲಸವನ್ನು ನೋಡಿದೆ. ಯಾವುದು ಇಲ್ಲ.
ಡಿಪೇನ್ಡೆನ್ಸಿ ಪ್ರಾಜೆಕ್ಟ್ ಆದುದರಿಂದ ಊರಿಗೆ ಹೋಗಿ ಬಂದ ಮೇಲೆ ಒಂದು ವಾರದ ಮಟ್ಟಿಗೆ ರೆಸ್ಟ್ ಇರುತ್ತದೆ. ಹೊಸ ರೆಕ್ವೈರ್ಮೆಂಟ್ ಬರುವ ವರೆಗೆ ಆರಾಮ್. ಒಂದು ವಾರದಿಂದ ಬಂದ ಹಳೆ ಮೇಲ್ ಅನ್ನು ಓದಿ ಬೇಡವಾದವುಗಳನ್ನು ಅಳಿಸಿ , ಪಕ್ಕದಲ್ಲಿದ್ದ ಅವಿನಾಶ್ನಲ್ಲಿ "ಅ ಕಪ್ ಆಫ್ ಕಾಫಿ ...?"
ಅವನು "ಕ್ಯಾ ಭಾಯಿ ಆಜ್ ಕಾಫಿ ಕಾ ಬಹುತ್ ಯಾದ್ ಆ ರಹಾ ಹೇ...
ಒಂದು ಚೆನ್ನೈ ನಲ್ಲಿ ಒಂದು ಬೆಂಗಳೂರಿನಲ್ಲಿ, ಇನ್ನೊಂದು ಅಬ್ಬೆಪಾರಿ ಯಾಗಿರುವಾಗ ಕಾಫಿ ಕುಡಿಯದ ಈ ಗೆಳೆಯನ ಕಂಪೆನಿ ಕೆಳ್ತಿದ್ದಿಯೇನೋ..? " ಅಂದ.
"ಹಾಗೇನು ಇಲ್ಲಾ, ನೀನು ಫ್ರೀ ಇದ್ರೆ ಹೋಗೋಣ ಬಾಲ್ಕನಿಗೆ.." ಅಂದೆ.
ಅವನು "ನೀನು ಜೀವನ್ ಗೆ ಬಿಟ್ಟು ಹೋದ ಆ ಪ್ರಾಜೆಕ್ಟ್ ಅಪ್ಡೇಟ್ಸ್ ಅನ್ನು ಅವನು ನನ್ನ ತಲೆಗೆ ಕಟ್ಟಿದ್ದಾನೆ ಆದರಿಂದ ಅದರಲ್ಲಿ ನಾನು ಸಿಕ್ಕಾಕಿ ಕೊಂಡಿದ್ದೇನೆ, ನೀನು ಹೋಗಪ್ಪಾ... ಯಾರಾದ್ರು ಹೊಸ ಹುಡುಗಿ ಸಿಕ್ಬಹುದು ಬಾಲ್ಕನಿಯಲ್ಲಿ .." ಎನುತ್ತ ನಕ್ಕ.
"ನಹಿ ಭಾಯಿ, ಯಾರು ಬೇಡ.. ಏಕಾಂತಕ್ಕೆ ಒಂದು ಕಪ್ ಕಾಫಿ ಸಾಕು, ಇನ್ನೊಂದು ಜೀವ ಬಂದು ಮೂರು ಆತ್ಮ ಸೇರಿರುವವ ಈ ಮನಸನ್ನು ಕದಡುವುದು ಬೇಡ" ಎನ್ನುತ್ತಾ ನಾನು ನನ್ನ ಸೀಟ್ ನಿಂದ ಎದ್ದೆ.
ಕಪ್ಪಿನಲ್ಲಿ ಕಾಫಿ ಇಳಿಸಿ, ಬಾಲ್ಕನಿ ಪೂರ್ತಿ ನೋಡಿದೆ, ಪರಿಚಯದ ಯಾವುದೇ ಮುಖವಿರಲಿಲ್ಲ, ಎಲ್ಲವೂ ಹೊಸದಾಗಿ ಸೇರಿರುವ ಹೊಸ ಮುಖಗಳು. ಅದರಲ್ಲೂ ಎಲ್ಲವು ಮೀಸೆ ಮೂಡದ, ಹುಟ್ಟುತಿರುವ ರೋಮವನ್ನು ವಾಕ್ಸಿಂಗ್ ಮಾಡಿಸಿಕೊಂಡಿರುವಂತಹ ನಗರದ ಹೈ ಹೀಲ್ಡ್ ಚಪ್ಪಲಿನ ಮೇಲೆ ಮೆರವಣಿಗೆ ಮಾಡುವ ಮುಖಗಳು. ಅವರೊಂದಿಗೆ ಕಣ್ಣಿಗೆ ಕಣ್ಣು ಬೆರೆಸಲು ಹೆದರಿಕೆ ಹುಟ್ಟಿ ನಾನು ಬಾಲ್ಕನಿ ಬಾಗಿಲನ್ನು ಒಳಗೆ ತಳ್ಳಿದೆ.
ಕೈಯಲ್ಲಿ ಕಾಫಿ ಕಪ್ ಹಿಡಿದು ಡೆಸ್ಕ್ನೆಡೆಗೆ ಹೋಗಲು ನಡುವಲ್ಲೇ ಇದ್ದ ಎರಡು ಜನರಲ್ ಪಿ.ಸಿ ನನ್ನನ್ನು ಅತ್ತ ಎಳೆಯಿತು. ಆಫೀಸ್ ನ ಇತರ ಸಿಸ್ಟಮ್ ಗಳಂತೆ ಇಲ್ಲಿ ಯಾವುದೇ ವೆಬ್ಸೆನ್ಸ್ ಹಾಕಿರದ ಮಷಿನ್ ಗಳಿವು. ಇವನ್ನು ಎಲ್ಲರು ತಮ್ಮ ಪರ್ಸನಲ್ ಮೈಲ್ಸ್, ಸೋಶಿಯಲ್ ನೆಟ್ವೊರ್ಕಿಂಗ್ ಗಾಗಿ ಬಳಸುತಿದ್ದರು. ಬೆಳಗ್ಗಿನ ಸಮಯವಾದುದರಿಂದ ಆ ಎರಡು ಸಿಸ್ಟಮ್ ಗಳು ಖಾಲಿಯಾಗಿ ಕುಳಿತಿದ್ದವು. ನಾನು ಕಪ್ ಅನ್ನು ಆ ಡೆಸ್ಕ್ ಮೇಲೆ ಇಟ್ಟು ನನ್ನ ಕ್ರೆಡೆನ್ಶಿಯಲ್ ಬಳಸಿ ಅದರಲ್ಲಿ ಲಾಗಿನ್ ಆದೆ.
ಒಂದು ಟ್ಯಾಬ್ ನಲ್ಲಿ, ಆರ್ಕುಟ್, ಇನ್ನೊಂದರಲ್ಲಿ ನನ್ನ ಪೆರ್ಸನಲ್ ಮೈಲ್ ಅನ್ನು ತೆರೆದುಕೊಂಡೆ. ಮೊದಲಿಗೆ ಆರ್ಕುಟ್ ನ ಅಪ್ದೆಟ್ಸ್ ಗಳನ್ನೂ ನೋಡಲು ಮತ್ತೆ ಆರ್ಕುಟ್ ಗೆ ಟ್ಯಾಬ್ ಬದಲಾಯಿಸಿದೆ. ಆಕೃತಿ ಕಳಿಸಿರುವ ಟೆಸ್ಟಿಮೊನಿಯಲ್ ಅನ್ನು ಇವತ್ತು ೧೧೧ ನೆ ಬಾರಿಗೆ ಓದಿ ನಂತರ ನಾನು ಟ್ಯಾಬ್ ಅನ್ನು ನನ್ನ ಮೈಲ್ ಬಾಕ್ಸ್ ಗೆ ತಿರುಗಿಸಿದೆ.
ದೇಶದ ಪ್ರತಿಷ್ಟಿತ ಎಂಎನ್ಸಿ ಕಾಮೆಪ್ನಿಯೊಂದರಿಂಗ ಇಂಟರ್ವ್ಯೂ ಮೈಲ್ ಬಂದಿತ್ತು. ತುಂಬು ಉತ್ಸಾಹದಲ್ಲೇ ಆ ಮೈಲ್ ಅನ್ನು ತೆರೆದು ಓದಿದೆ. ನನ್ನ ಸ್ಪೆಷಲ್ ಸ್ಕಿಲ್ ಗೆ ಹೊಂದುವಂತಹ ವೇಕೆನ್ಸಿ ನೋಡಿ ಖುಷಿಯಾಯಿತು. ಇಂಟರ್ವ್ಯೂ ವೆನ್ಯೂ ಓದಲು ಇನ್ನು ಸಂತೋಷ ಗೊಂಡೆ. ಕಾರಣ ಆ ಕಂಪೆನಿಗೆ ಒಪೆನಿಂಗ್ಸ್ ಇದ್ದಿದ್ದು ಚೆನ್ನೈ ನಲ್ಲಿ. ಮನ ಖುಷಿಯಲ್ಲಿ ಕುಣಿಯಲು ಆರಂಬಿಸಿತು. ಆ ತಾರಿಕನ್ನು ನಾನು ನೋಟ್ ಮಾಡಿಕೊಂಡೆ. ಸೆಪ್ಟೆಂಬರ್ ೦೧, ೨೦೦೭. ಸೆಪ್ಟೆಂಬರ್ ೨ ಆಕೃತಿಯ ಬರ್ತ್ ಡೇ. ಇದಕ್ಕಿಂತ ಸಂತೋಷದ ವಿಚಾರ ಬೇರೆ ಇರಲಿಲ್ಲ. ಆರ್ಕುಟ್ ಅನ್ನು ಲಾಗೌಟ್ ಮಾಡುವಷ್ಟು ಸಂಯಮ ಇರಲಿಲ್ಲ. ಆ ಜನರಲ್ ಸಿಸ್ಟಮ್ ಅನ್ನು ನಾನು ಲಾಗೌಟ್ ಮಾಡಿ ನನ್ನ ಡೆಸ್ಕ್ ಗೆ ಬಂದೆ.
ಆಕೃತಿಗೆ ವಿಷಯದ ಬಗ್ಗೆ ಹೇಳೋಣ ಅಂದುಕ್ಕೊಂಡೆ, ಬೇಡ. ಅವಳಿಗೆ ಸುರ್ಪ್ರೈಸ್ ಕೊಟ್ಟರಾಯಿತು ಎಂದು ಸುಮ್ಮನಾದೆ.
ನನ್ನ ಆಫೀಶಿಯಲ್ ಮೈಲ್ ಐ ಡಿ ಗೆ ನಾನು ಆ ಸಿಸ್ಟಮ್ ನಿಂದ ಕಳುಹಿಸಿದ ಆ ಎಂಎನ್ಸಿ ಯ ಇಂಟರ್ವ್ಯೂ ಮೈಲ್ ಅನ್ನು ಮತ್ತೆ ಮೆಲಿನಿಂದ ಕೆಳಗೆ ಓದಿದೆ. ಗೊತ್ತಿರುವ ಕೊಂಪಿಟೆನ್ಸಿಯ ಬಗ್ಗೆ ಅಲ್ಲಿ ವಿಚಾರಿಸಿದ್ದರು, ಆದರೂ ನಾನು ಚೆನ್ನೈಗೆ ಹೋಗಿ ಅಲ್ಲಿ ಸೆಟ್ಟಲ್ ಆಗಲು ನನ್ನ ಲೆವೆಲ್ ಅನ್ನು ಇನ್ನೂ ಏರಿಸ ಬೇಕಿತ್ತು. ಆದ ಕಾರಣ ನಾನು ನಡುವಿನ ದಿನಗಳನ್ನು ಆ ತಯಾರಿಗೆ ಮೀಸಲಿಡಲು ಬಯಸಿದೆ.
ಅವಿನಾಶ್ ನಲ್ಲಿ ಆ ಮೇಲ್ ಕುರಿತು ಹೇಳಿದಾಗ ಅವನು "ಜಾವೋ ಭಾಯಿ, ತೆರಿ ಮನ್ಜಿಲ್ ವಹಾನ್ ಹೇ... ಗೋ ಅಹೆಡ್ ... ಆಲ್ ದಿ ಬೆಸ್ಟ್" ಎಂದ.
ಒಂದು ಗಂಟೆಯಯಷ್ಟಿಗೆ ಜೀವನ್ ಬಾಗ್ ನೊಂದಿಗೆ ಪ್ರತ್ಯಕ್ಷನಾದ. ಅವಿನಾಶ್ ಅವನಲ್ಲಿ "ಬೆಂಗಳೂರ್ ಹೇಗಿತ್ತೋ...?" ಅನ್ದಪಕ್ಕ ಬೆಂಗಳೂರು ಧಾಟಿಯಲ್ಲಿ.
ಅವನು "ಟೀಕ್ ಟಾಕ್ ಥಾ... ಫುಲ್ ಇನ್ವೊಲ್ವೇಮೆಂಟ್ ಕೊಡಲಿಕ್ಕೆ ಆಗ್ಲಿಲ್ಲ." ಅಂದ ನಿರಾಶೆಯಲ್ಲಿ. ಕೆಲವೊಂದು ಸೋಮವಾರ ಅವನು ಫುಲ್ ಜೋಶ ನಲ್ಲಿ ಇರುತಿದ್ದ, ಅದೇ ಕೆಲವೊಂದು ಸೋಮವಾರ ಈ ರೀತಿ ನಿರಾಶೆಯ ಮಾತು ನಮಗೆ ಹೊಸತಾಗಿರಲಿಲ್ಲ. ನಾಲ್ಕು ತಿಂಗಳಿಂದ ನಡೆಯುತಿದ್ದ ಅವರ ಸಲ್ಲಾಪದಲ್ಲಿ ಬರುವ ಕೆಲವೊಂದು ವಿರಸ ಸಲ್ಲಾಪವು ಅವನ ಸೋಮವಾರದ ದಿನಚರಿಯಲ್ಲಿ ಕ್ಯುಬಿಕಲ್ ಮೆಟ್ ಆದ ನಮ್ಮಿಬ್ಬರಿಗೆ ತೋರುತಿತ್ತು.
ಅವಿನಾಶ್ "ನಿನ್ನೆ ಪುನಃ ಜಗಳ ಆಡಿದ್ಯೇನೋ... ಉದ್ಧಾರ ಆಗಲ್ಲ ಕಣೋ ನೀನು" ಅಂದ.
ಜೀವನ್ ನಮ್ಮಿಬ್ಬರನ್ನು ಹತ್ತಿರ ಕರೆದು "ವೈಸಾ ನಹಿನ್ ಭಾಯ್, ಇವತ್ತು ಇಲ್ಲಿ ನನ್ನದೊಂದು ಇಂಟರ್ವ್ಯೂ ಇತ್ತು"
"ಪ್ರೊಮೋಷನ್ ತೆಕ್ಕೊಂಡು, ಬ್ಯಾಂಡ್ ಕಸಿದು ಆದರೂ ನಿನ್ನ ಹಣದ ಚಟ ಬಿಡ್ಲಿಲ್ವಾ..." ಅಂದ ಅವಿನಾಶ್.
"ಮೂರು ವರ್ಷ ಆಯಿತು ಈಗ ಸ್ವಿಚ್ ಮಾಡದೆ, ಇನ್ಯಾವಾಗ ಸ್ವಿಚ್ ಮಾಡ್ಲಿ... ಈ ಕಂಪೆನಿಗೆ ಕನಿಕರ ತೋರಿಸುತ್ತಾ ಕೂತ್ಕೊಂಡ್ರೆ, ಇಲ್ಲೇ ಕೊಳಿಬೇಕು..." ಎಂದು ಅವನ ಬಾಯಿ ಮುಚ್ಚಿಸಿದ.
"ಇವತಲ್ಲ ಇಂಟರ್ವ್ಯೂ ಇದಿದ್ದು, ನಿನ್ನೆ ಮೊನ್ನೆ ನಿನಗೆ ನಿನ್ನ ಬೆಂಗಳೂರು ಕೆಲಸ ಮುಗಿಸಲು ಏನಾಗಿತ್ತು ದಾಡಿ..." ಅಂದ ಅವಿನಾಶ್.
ಜೀವನ್ "ಇಂಟರ್ವ್ಯೂ ಗೆ ತಯಾರಿ ಮಾಡದೆ ಹೇಗೆ ಅಟೆಂಡ್ ಮಾಡುವುದು..?".
"ಡ್ರೀಮ್ ಟೆಕ್ ನಲ್ಲಿ ಝೀರೋ ದಿಂದ ಹೀರೋ ಆದ ನಿನಗೆ ಅದೆಂತ ಪ್ರೆಪರೆಶನ್ ಮಗಾ... ?" ಅಂದ ಅವಿನಾಶ್.
ಅವನ ಮಾತನ್ನು ತಡೆದು ನಾನು" ಅದು ಬಿಡು ಹೇಗಾಯ್ತು ನಿನ್ನ ಇಂಟರ್ವ್ಯೂ...?"
"ಜಸ್ಟ್ ಒಂದು ರೌಂಡ್ ಆಯಿತು, ಮುಂದಿನ ಸೆಲೆಕ್ಷನ್ ಪ್ರೋಸೆಸ್ಸ್ ಬಗ್ಗೆ ಮೈಲ್ ನಲ್ಲಿ ಇನ್ಫೋರ್ಮ್ ಮಾಡುತ್ತಾರೆ ಅಂತ ಹೇಳಿದ್ದಾರೆ"
"ನೀನು ಬಿಡು ಕ್ಲಿಯರ್ ಮಾಡ್ಕೊಳ್ತೀಯ..." ಅಂದ ಅವಿನಾಶ್.
ಅವನು ನಗುತ್ತಾ " ಪ್ರೀತಿ ಏರಿರುವ ಅಮಲಿಗೆ ಪ್ರಾಮಿಸ್, ಪ್ರಮಾಣಗಳು ನಾಲಿಗೆ ತುದಿಯಲ್ಲಿರುತ್ತದೆ, ಆದರೆ ಅದನ್ನು ನಿಭಾಯಿಸುವಾಗ ಅದರ ಜವಾಬ್ಧಾರಿಯ ಅರಿವಾಗುತ್ತದೆ. ಆ ಸಮಯಕ್ಕೆ ಈ ಲವ್ವು ಬೇಡ ಲವ್ವರು ಬೇಡ ಎಂದನಿಸುತ್ತೆ." ಎಂದ ನಿನ್ನೆ ತನ್ನ ಪ್ರಾಮಿಸ್ ಉಳಿಸಲು ಬೆಂಗಳೂರಿಗೆ ಓಡಿ ಹೋಗಿ ಅಲ್ಲಿ ಪ್ರಿಯೆಯ ಸೇವೆ ಮಾಡಲಾಗದೆ, ತನ್ನ ಭವಿಷ್ಯದ ಪ್ರಯತ್ನದಲ್ಲಿ ರಾತ್ರಿ ದೂಡಿದ ಈ ಮಹಾನುಭಾವ.
ಅವಿನಾಶ್ "ಅದಕ್ಕೆ ನಾನು ಇನ್ನೂ ಸಿಂಗಲ್ ಆಗಿದ್ದೇನೆ, ಯಾರು ಬಂದ್ರೂ ಆ ಗಳಿಗೆಗೆ ಅವರಿಗೆ ಎಂಗೇಜ್ ಆಗಿರ್ತೇನೆ, ಅವರು ಹೋದ ಹಾಗೆ ಮತ್ತೆ ನಾನು ಸಿಂಗಲ್, ನೋ ಪ್ರಾಮಿಸ್ , ನೋ ಡೆಡಿಕೇಶನ್, ನೋ ಕಂಪ್ಲಿಕೆಶನ್ !!" ಎಂದು ಎದುರಿದ್ದ ನಮ್ಮಿಬ್ಬರಿಗೆ ತೋಂಟ್ ಕೊಟ್ಟ.
ನಾನು "ನಿಜದ ಪ್ರೀತಿ ಮಾಡಿ ನೋಡು, ಆವಾಗ ಗೊತ್ತಾಗುತ್ತೆ ನಿಜ ಪ್ರೀತಿಯ ವೇಧನೆ ಎಷ್ಟು ಚೆನ್ನಾಗಿರುತ್ತೆ ಹೇಳಿ" ಅಂದೆ.
ಅದಕ್ಕೆ ಜೀವನ್ " ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ" ಅಂದ.
"ಕ್ಯಾ ಕತ್ತೆ ವತ್ತೆ ... ಮುಜೆ ಕನ್ನಡ ಆತಾ ನಹಿ ಬೋಲ್ಕೆ ಆಪಸ್ ಮೇ ಮುಜೇ ಗಾಳಿ ದೇ ರಹೇ ಹೇ ನಾ ..?" ಅಂದ ನೋರ್ತಿ ಅವಿನಾಶ್.
*************
ಎರಡುವಾರದಲ್ಲಿ ಮುಂದಿನ ಇಂಟರ್ವ್ಯೂ ಗೆ ಎಲ್ಲ ಅಸ್ತ್ರವನ್ನು ನಾನು ತಯಾರಿ ಮಾಡಿಕೊಂಡಿದ್ದೆ. ಪ್ರತಿದಿನ ನಡೆಯುವ ಆಕೃತಿಯೊಂದಿಗಿನ ಹೊದಿಕೆಯೋಳಗಿನ ಕೊಂಫಾರೆನ್ಸ್ ನಲ್ಲಿ ಅವಳಿಗೆ ಇದರ ಬಗ್ಗೆ ಒಂದು ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಅಪ್ಪರ್ ಬರ್ತ್ ನಲ್ಲಿ ಮಲಗಿ ನಾಳೆ ಚೆನ್ನೈ ತಲುಪುವ ಕನಸು ಕಾಣುತಿದ್ದೆ. ಅಲ್ಲಿ ಸೆಲೆಕ್ಟ್ ಆಗುವ ಪೂರ್ಣ ವಿಶ್ವಾಸ ನನ್ನಲ್ಲಿತ್ತು.
ಕಾಲಿಗೆ ಸಾಫ್ಟ್ವೇರ್ ಇಂಜಿನಿಯರಿಂಗ್ ಟೆಕ್ಸ್ಟ್ ಬುಕ್ ವಾಲಿಸಿ, ಡ್ರೀಮ್ ಟೆಕ್ ನ ನನ್ನ ಲುಗ್ಗೆಜ್ ಬ್ಯಾಗ್ ಅನ್ನು ತಲೆಯ ಕೆಳಗೆ ದಿಂಬು ಮಾಡಿ ಓದುವುದರಲ್ಲಿ ತೊಡಗಿದ್ದೆ. ಇಂಜಿನಿಯರಿಂಗ್ ನ ನಾಲ್ಕನೇ ಸೆಂ ನ ಸಾಫ್ಟ್ವೇರ್ ಇಂಜಿನಿಯರಿಂಗ್ ಸಬ್ಜೆಕ್ಟ್ ಅನ್ನು ಇಂಜಿನಿಯರ್ ಆದ ಎರಡೂವರೆ ವರ್ಷ ಬಳಿಕ ಓದುವಾಗ ಸಾಫ್ಟ್ವೇರ್ ಇಂಜಿನಿಯರ್ ಆಗಲು ಇವೆಲ್ಲ ಮುಕ್ಯನಾ ಎಂಬ ಪ್ರಶ್ನೆ ಕಾಡಲು ಶುರುವಾಯಿತು. ಆದರೆ ನಾಳೆ ಆ ಎಂಎನ್ಸಿ ಕೇಳುವ ಪ್ರಶ್ನೆಗೆ ಉತ್ತರ ಕೊಡಲು ನಾನು ಇದನ್ನು ಓದುವುದು ಅವಶ್ಯಕ ವಾಗಿತ್ತು.
ಎದೆಯ ಮೇಲಿದ್ದ ಮೊಬೈಲ್ ನಡುಗಿತು. ಮೆಸ್ಸೇಜ್ ಬಂದಿತ್ತು. "ಡಂಬು ಮಿಸ್ ಯು" ಎಂದು ಆಕೃತಿ ಕಳುಹಿಸಿದ್ದಳು. ಇದು ದಿನಕ್ಕೆ ಇಪ್ಪತ್ತರಿಂದ ಮೂವತ್ತು ಬಾರಿ ನನ್ನ ಮೊಬೈಲ್ ಗೆ ಬರುವುದು ವಾಡಿಕೆಯಾಗಿತ್ತು.
ನಾನು "ಮಿಸ್ ಯು ಟೂ" ಎಂದು ಕಳುಹಿಸಿದೆ.
ಅವಳು "ಇವತ್ತಿನ ದಿನದ ವಿಶೇಷತೆ ಏನು ಹೇಳು.." ಅಂದಳು.
ನಾನು "ಅದೇ ಬೋರಿಂಗ್ ಲೈಫ್, ಒಂಟಿ ಹಕ್ಕಿಯ, ಒಂಟಿ ಹಾಡು..." ಎಂದು ಟೈಪಿಸಿದೆ.
ಅವಳು "ಇದೆ ಏನೋ ಸ್ಪೆಷಲ್ ಇದೆ, ನೀನಾಗಿಯೇ ಅದನ್ನು ಹೇಳಲಿ ಎಂದು ಇಲ್ಲಿ ವರೆಗೆ ಹೇಳಿರಲಿಲ್ಲ, ಇನ್ನೂ ನಿನಗೆ ಅದರ ನೆನಪು ಬರಲಿಲ್ಲ ಅದಕ್ಕಾಗಿ ನಾನೇ ನಿನಗೆ ನೆನಪಿಸುತ್ತಾ ಇದ್ದೇನೆ, ಹೇಳು ನೋಡೋಣ .." ಎಂಬ ಮೆಸ್ಸೇಜ್ ಕಳುಹಿಸಿದಳು.
"ನಾನು ನಿನ್ನ ಪೆಟ್ ನೆಮ್ ಅಂತೆ ಡಂಬು ಕಣೇ, ಗೊತ್ತಾಗಲಿಲ್ಲ..ನೀನೇ ಹೇಳು, ಈ ದಿನದ ಸ್ಪೆಷಾಲಿಟಿ ಬಗ್ಗೆ"ಅಂದೆ.
ಅವಳು "ನಿನ್ನ ಬರ್ತ್ ಡೇ ನೆನಪಿದೆಯಾ ನಿನಗೆ..?"
"ಹೌದು, ಅದಕ್ಕೂ ಇವತ್ತಿಗೂ ಏನು ಸಂಭಂದ" ಎಂದು ಕಳುಹಿಸಿದೆ.
ಮರು ಕ್ಷಣವೇ ನಾಡಿದ್ದಿನ ಅವಳ ಜನ್ಮ ದಿನದ ನೆನಪಾಗಿ "ಸೆಪ್ಟೆಂಬರ್ ೨ ಕ್ಕೆ ನಿನ್ನ ಬರ್ತ್ ಡೇ , ನೆನಪಿದೆ ನನಗೆ, ಇನ್ನೂ ಒಂದು ದಿನ ಇದೆ" ಅಂದೆ.
ಅಲ್ಲಿಂದ "ಅದು ನನಗೂ ಗೊತ್ತು, ಅದಲ್ಲ, ಡಿಸೆಂಬರ್ ೨೩ ಕ್ಕೂ ಅಗುಸ್ಟ್ ೩೧ ಕ್ಕೂ ಇರುವ ಸಂಭಂದ ನಿನಗೆ ಇನ್ನೂ ಗೊತ್ತಗಲಿಲ್ವೆ..." ಎಂದು ಮೆಸ್ಸೇಜ್ ಕಳುಹಿಸಿದಳು.
ಎರಡು ತಾರೀಕಿನ ನಡುವೆ ಓಡುವ ಲಿಮಿಟ್ ಗೆ ನಾನು ಮನಸಲ್ಲೇ ಲೆಕ್ಕ ಹಾಕಿದೆ. ೨೫೦ ದಿನಗಳು !!!
" ಸೋರಿ ಕಣೇ, ೨೫೦ ಡೇಸ್ !!! ನಮ್ಮಿಬ್ಬರ ವಿರಹದ ೨೫೦ ದಿನ !!" ಎಂದು ಮೆಸ್ಸೇಜ್ ಟೈಪಿಸಿದೆ.
ಅವಳನ್ನು ಚೆನ್ನೈ ನಲ್ಲಿ ಬಿಟ್ಟು ಬಂದು ಇವತ್ತಿಗೆ ೨೫೦ ದಿನ ಮುಗಿದಿತ್ತು.೨೨೦ ರ ವರೆಗೆ ಅವಳು ದಿನಾಲು ನನಗೆ ಕೌಂಟ್ ಕೊಡುತ್ತ ಇದ್ದಳು ನಂತರ ಅವಳಾಗಿಯೇ ಈ ಕೌಂಟರ್ ಅನ್ನು ನಡುವಲ್ಲಿ ನಿಲ್ಲಿಸಿದ್ದಳು. ಇವತ್ತು ಅದು ೨೫೦ ರ ಕೃಪಾಂಕಕ್ಕೆ ಏರಿತ್ತು.
"೨೫೦ ದಿನ ಕಳೆಯುವಾಗಲೇ ನನಗೆ ಒಂದು ಯುಗ ಹೋದ ಹಾಗೆ ಆಯಿತು, ಇನ್ನು ನೀನು ಯಾವಾಗ ಸೆಟಲ್ ಆಗ್ತೀಯ, ನನ್ನನು ಯಾವಾಗ ವರೆಸಿಕೊಳ್ತೀಯಾ...?" ಎಂಬ ಮೆಸ್ಸೇಜ್ ಬಂತು.
ಮನಸಲ್ಲಿದ್ದ ಆಶೆಯನ್ನು ಅವಳಿಗೆ ಹೇಳೋಣ ಎಂದು ತೊಂಬತ್ತೊಂಬತ್ತು ಬಾರಿ ಅನಿಸಿದರೂ ಒಮ್ಮೆಗೆ ಅವಳಿಗೆ ಇವತ್ತು ಹೇಳುವುದು ಬೇಡ, ನಾಳೆ ಚೆನ್ನೈ ನಲ್ಲಿ ಇಂಟರ್ವ್ಯೂ ರಿಸಲ್ಟ್ ಮುಗಿದ ಬಳಿಕ ಹೇಳಿದರಾಯಿತು ಎಂದು ಸುಮ್ಮನಾದೆ.
"ಬರುತ್ತೆ,ಬೇಗನೆ ಬರುತ್ತೆ." ಎಂದು ಮೆಸ್ಸ್ಸೇಜ್ ಕಳುಹಿಸಿದೆ.
ಅಲ್ಲಿಂದ ಅವಳ ಒಂದು ಸ್ಮಿಲಿ ಉತ್ತರವಾಗಿ ತೇಲಿ ಬಂತು.
ನಾನು "ಕರೆ ಮಾಡಲಾ...?" ಎಂದು ಮೆಸ್ಸೇಜ್ ಕಳುಹಿಸಿದೆ.
ಅವಳು "ಪ್ರುಕೃತಿ, ಆದರ್ಶ್ ರೂಂ ನಲ್ಲಿದ್ದೇನೆ, ಇಬ್ಬರಿಗೂ ಇನ್ನೂ ನಿದ್ದೆ ಹತ್ತಿಲ್ಲ. ಮತ್ತೆ ಮಾತಾಡೋಣಾ..."
"ನಿನ್ನ ರೂಂ ಗೆ ಏನಾಯ್ತು...?"
"ನೆಂಟರು ಬಂದಿದ್ದಾರೆ"
"ಅವರಿಗೆ ಗೆಸ್ಟ್ ರೂಂ ಇತ್ತಲ್ಲಾ ..?"
"ಹೌದು, ಅವರು ಐದು ಜನ ಬಂದಿದ್ದಾರೆ, ಅದಕ್ಕಾಗಿ ನನ್ನ ರೂಮು ಇವತ್ತು ಗೆಸ್ಟ್ ರೂಂ ಆಯಿತು"
"ಯಾರಪ್ಪಾ, ನಿಮ್ ಮನೆಗೆ ಬರುವಾ ಆ ರೀತಿಯ ಗೆಸ್ಟ್...?"
"ನೀನು ಬರಲು ತಡ ಮಾಡಿದರೆ ಹಾರಿಸಿಕ್ಕೊಂಡು ಹೋಗಲು ಬಂದವರು.."
"ಅಂದ್ರೆ .. ಸುನಿಲ್ ನ ಮನೆಯವರಾ...?"
"ಹೌದು"
ಅವಳ ಈ ಮೆಸ್ಸೇಜ್ ಓದಿ, ಇಲ್ಲಿ ವರೆಗೆ ನಾಳೆ ಚೆನ್ನೈನ ಎಂಎನ್ಸಿ ಯಲ್ಲಿ ಕೆಲಸ ಗಿಟ್ಟಿಸಿ ಅವಳನ್ನು ವರೆಸಿಕೊಳ್ಳುವ ಆಶಾಗೋಪುರ ಕುಸಿದ ಅನುಭವವಾಯಿತು. ಸುಧಾರಿಸಿಕ್ಕೊಂಡೆ.
"ಎನಿವತ್ತು ಅವರು ಬಂದಿದ್ದು..?"
"ಸೊಸೆಯನ್ನು ನೋಡಲು" ಎಂಬ ಉತ್ತರ ಬಂತು ಆ ಮೂಲೆ ಇಂದ.
ಇಲ್ಲಿ ವರೆಗೆ ಆಕೃತಿ ನನ್ನ ಬಗ್ಗೆ ಪೋಸ್ಸಿಸ್ಸಿವ್ ಆಗಿದ್ದಳು, ಈಗ ನಾನು ಅವಳ ಬಗ್ಗೆ ಪೋಸ್ಸಿಸ್ಸಿವ್ ಆಗಿದ್ದೆ.
"ಸೊಸೆ ನಾ ...? ಅದು ಸಾದ್ಯ ಇಲ್ಲದ ಮಾತು, ಅವರಿಗೆ ನಿನನ್ನು ಬಿಟ್ಟು ಕೊಡಲು ನನಗೆ ಮನಸಿಲ್ಲಾ.. " ಅಂದೆ.
ಆಕೃತಿಗೂ ಅವರ ಸೊಸೆ ಎಂದು ಕರೆಸಿಕೊಳ್ಳಲು ಮನಸ್ಸಿರಲಿಲ್ಲ.
ಅವಳು "ಅವರಿಗೆ ನಾನು ಸೊಸೆ ಅಂತೆ, ಆದ್ರೆ ನನಗೂ ಅವರ ಸೊಸೆ ಆಗಲು ಮನಸ್ಸಿಲ್ಲ, ನಾನು ಮಂಗಳೂರು ಸೊಸೆ ಆಗ್ಬೇಕು, ಅಮೇರಿಕಾ ಸೋಸೆಯಾಗಳು ಮನಸಿಲ್ಲ" ಮೆಸ್ಸೇಜ್ ಕಳುಹಿಸಿದಳು.
ಮನಸ್ಸಿಗೆ ಹಿತ ವೆನಿಸಿತು.
"ಲವ್ ಯು ಡ, ಐ ನೀಡ್ ಯು" ಎಂದು ಮೆಸ್ಸೇಜ್ ಟೈಪಿಸಿದೆ.
"ಬೇಗ ಲೈಫ್ ನಲ್ಲಿ ಸೆಟಲ್ ಆಗು, ನನ್ನನ್ನು ಕರ್ಕೊಂಡು ಹೋಗು, ಇಲ್ಲನ್ತಾದ್ರೆ ಮನೆಯವರು ಹುಡುಕುವ ಈ ಕೃತಕ ಅತ್ತೆಯನ್ದಿರಿಗೆ ನಾನು ದೂರ ದೂಡಲು ಕಾರಣ ಹುಡುಕ ಬೇಕಾಗುತ್ತದೆ"
"ಸಲ್ಪ ವೇ ಸಲ್ಪ ದಿನ.." ಎಂದು ಮೆಸ್ಸೇಜ್ ಕಳುಹಿಸಿದೆ.
ಅವಳು "ನಿನ್ನ ಎದೆ ಮೇಲೆ ಮಲಕೊಳ್ಲಾ...? "
"ನಿನ್ನ ದೇಶದಲ್ಲಿ ನಿನಗೆ ಲ್ಯಾಂಡ್ ಆಗಲು ಯಾವುದೇ ಪಾಸ್ಪೋರ್ಟ್ ನ ಅವಶ್ಯಕತೆ ಇಲ್ಲಾ, ಆರಾಮಾಗಿ ಮಲಗಿಕೋ.."
"ಮಲಗಿದೆ ಏನೋ ಹಿತ ಅನ್ಸುತ್ತೆ"
"ನನಗೂ ತುಂಬಾ ಖುಷಿ ಆಗ್ತಿದೆ, ನೀನೇ ಇಲ್ಲಿ ಇದ್ದ ಹಾಗೆ ಅನುಭವಕ್ಕೆ ಬರ್ತಿದೆ" ಎಂದು ಟೈಪಿಸಿದೆ ಕೈಯಲ್ಲಿದ್ದ ನಾಲ್ಕುನೂರು ಪುಟದ ಸಾಫ್ಟ್ವೇರ್ ಇಂಜಿನಿಯರಿಂಗ್ ಬುಕ್ ಅನ್ನು ತಬ್ಬಿಕೊಳ್ಳುತ್ತಾ.
"ರಿಯಲ್ ಆಗಿ ಯಾವಾಗ ಈ ಸುಖ ಸಿಕ್ಕುತ್ತೂ.." ಎಂಬ ಮೆಸ್ಸೇಜ್ ಬಂತು ಬುಕ್ ನ ಆಡಿಯಲ್ಲಿ ಇದ್ದ ನನ್ನ ಮೊಬೈಲ್ ಸ್ಕ್ರೀನ್ ನಲ್ಲಿ.
ಬುಕ್ ಭಾರ ವೆನಿಸಿತು ಮಡಚಿ ಬ್ಯಾಗ್ ನಲ್ಲಿ ತುರುಕಿಸಿ, ಅದರ ಒಳಗಿದ್ದ ಕಂಬಳಿಯನ್ನು ಹೊರ ತೆಗೆದು ಅದನ್ನು ರೋಲ್ ಮಾಡಿ ಅದನ್ನು ತಬ್ಬಿಕ್ಕೊಂಡೆ. ಮೊಬೈಲ್ ಕೈಗೆತ್ತಿ "ಮುಂಬೆ ವಾ" ಹಾಕಿದೆ. ಮನ ಅವಳ ಆಗಮನವನ್ನು ಬಯಸುತಿತ್ತು.
ಕಣ್ಣೆದುರು ಅವಳಿರಲಿಲ್ಲ ಮೊಬೈಲ್ ನಲ್ಲಿ ಅವಳ ಹಲವು ಪೋರ್ಟ್ರೈಟ್ ಗಳಿದವ್ವು. ಒಂದಾದ ಬಳಿಕ ಒಂದ ರಂತೆ ಎರಡೂವರೆ ವರ್ಷದಿಂದ ಕೂಡಿಟ್ಟ ನೆನಪನ್ನು ಒಂದೊಂದಾಗಿ ತೆರೆಯುತ್ತಾ ಹೋದೆ.
ರೈಲ್ ಮುಂದೆ ಮುಂದೆ ಸಾಗುತಿತ್ತು,ಮೊಬೈಲ್ ನೋನ್ ಕಾವೆರೆಜ್ ಏರಿಯ ದಲ್ಲಿ ಚಲಿಸುತ್ತಿತ್ತು. ಎಷ್ಟು ಪ್ರಯತ್ನಿಸಿದರೂ ಮೊಬೈಲ್ ಗೆ ಕವೆರೆಜ್ ಸಿಗಲಿಲ್ಲ. ಮತ್ತೆ ಹಾಡನ್ನು ಮೊದಲಿನಿಂದ ಕೇಳಿದೆ. ಮೂರು ನಾಲ್ಕು ಬಾರಿ ಕೇಳಿದೆ. ಶೋಲಾಪುರ್ ತಲುಪಿದಾಗ ಮತ್ತೆ ಕನೆಕ್ಷನ್ ಸಿಕ್ಕಿತು.ನಡುವಿನ ಇಪ್ಪತ್ತು ನಿಮಿಷದಲ್ಲಿ ಅವಳು ಕಳುಹಿಸಿದ ೧೯ ಮೆಸ್ಸೇಜ್ ಗಳು ಒಂದೇ ಸಮನೆ ಬಂದವು.
"ಯು ದೇರ್" ಎಂದು ಕಳುಹಿಸಿದೆ.
" ಗುಡ್ ನೈಟ್ " ಮೆಸ್ಸೇಜ್ ಕೂಡ ಬಂತು.
ಅವಳು ಮಲಗಿರುವುದು ಖಾತ್ರಿಯಾಯಿತು.
ಶೋಲಾಪುರ್ ನಲ್ಲಿ ಇಂಜಿನ್ ಬದಲಿಸಿ ಟ್ರೈನ್ ಚೆನ್ನೈ ಕಡೆಗೆ ಮುಂದುವರೆಯಿತು. ಒಂದು ಬದಿಯಲ್ಲಿ ಸುನಿಲ್ ನ ಶಾಕ್, ಇನ್ನೊಂದು ಬದಿಯಲ್ಲಿ ನಾಳಿನ ಇಂಟರ್ವ್ಯೂ ಬಗೆಗಿನ ಭಯ, ಮತ್ತೊಂದು ಬದಿಯಲ್ಲಿ ನಿರಂತರ ಏರುವ ಅವಳಲ್ಲಿನ ಪ್ರೀತಿ ಇವತ್ತು ಕಣ್ಣಿಗೆ ನಿದ್ದೆ ಹತ್ತಿಸಲಿಲ್ಲ.
ಕಿವಿಯಲ್ಲಿ ಮತ್ತೆ ಮತ್ತೆ "ಮುಂಬೆ ವಾ ಎನ್ ಅನ್ವೇ ವಾ.. " ಹಾಡು ಮುಂದುವರಿದಿತ್ತು. ನಾಳಿನ ಕನಸುಗಳು ಪೂರ್ವದಲ್ಲಿ ಮೇಲಾನೆ ಬಣ್ಣ ಬಳಿಯಲು ಶುರುವಾದವು.