ಅ ಕಪ್ ಓಫ್ ಕಾಫಿ ... ಸಿಪ್ - ೪೬

ಅ ಕಪ್ ಓಫ್ ಕಾಫಿ ... ಸಿಪ್ - ೪೬

 

 

ಹಿಂದಿನ ಸಿಪ್ 

 ಸಿಪ್ - 46

 

 

 


ರಾತ್ರಿ ಆಕೃತಿ ದೊಡ್ಡಪ್ಪನ ಜೊತೆಗೆ ನನ್ನನ್ನು ಬೀಳ್ಕೊಡಲು ಸಿ.ಎಂ.ಬಿ.ಟಿ ಗೆ ಬಂದಿದ್ದಳು. ದೊಡ್ಡಪ್ಪಾ ಕಾರ್ ಮನೆಯ ಗೇಟ್ ನಿಂದ ಹೊರ ಬರುತಿದಂತೆ ಸ್ಲೋ ಮಾಡಿ, "ವೈಭು ಹಿಂದೆ ಕುಳಿತು ಕೊಳ್ಳಲು ಮನಸ್ಸಾಗುತ್ತಿದೆ ಯಾದರೆ ಹಿಂದೆ ಕುಳಿತುಕೊಳ್ಳು, ನಲವತ್ತು ನಿಮಿಷದ ದೂರ ಅವಳಿಗೆ ಹತ್ತಿರವಾಗು" ಎಂದು ಬ್ರೇಕ್ ಹಾಕಿದರು.
ಮಾತು ಹೊರಡಲಿಲ್ಲ. ಕಾರಿನಿಂದ ಎದ್ದು ಹಿಂದಿನ ಸೀಟ್ ನಲ್ಲಿ ಕುಳಿತು ಕೊಂಡೆ.
ದೊಡ್ಡಪ್ಪ ಎದುರಿನ ಕನ್ನಡಿಯನ್ನು ನಾವಿಬ್ಬರು ಕಾಣುವಂತೆ ಸೆಟ್ ಮಾಡಿ ಕೊಂಡರು. ಕನ್ನಡಿಯಲ್ಲಿ ನಮ್ಮಿಬ್ಬರ ಜೋಡಿಯನ್ನು ನೋಡಿ.
"ಅಳಗಾಯ್ ಇರ್ಕೆ!!" ಎಂದು ಹೇಳಲು ಕನ್ನಡಿಯಲ್ಲಿನ ಬಿಂಬಗಳು ಮುಗುಳ್ನಕ್ಕವು.

ಅವಳನ್ನು ಮುದ್ದಿಸಲು ಮನಸ್ಸಾಗುತ್ತಿತ್ತು, ಆದರೆ ಓಪನ್ ಆಗಿ ಅದನ್ನು ಮಾಡಲು ಇನ್ನು ಮನೆಯವರ ಒಪ್ಪಿಗೆ ಇದ್ದಿರಲಿಲ್ಲ. ಮುಖದಿಂದ ಸಾದ್ಯವಿಲ್ಲದನ್ನು ತೊಡೆಯ ಮೇಲಿದ್ದ ಎರಡು ಕೈಗಳು ಜೋಡಿಯಾಗಿ ಮಾಡುತಿದ್ದವು. ಇವ್ವು ಎದುರಿನ ಕನ್ನಡಿಯಲ್ಲಿ ಕಾಣುತ್ತಿರಲಿಲ್ಲ ಎಂಬ ಸ್ವಾತಂತ್ರ ಇಬ್ಬರಿಗೂ ಇತ್ತು.

ಆ ನಲವತ್ತೈದು ನಿಮಿಷ ಮಂಗಳವಾರ ಆಫೀಸ್ ತಲುಪಿದಾಗ ಮೆಲುಕಾಗಿ ಕಾಡುತಿತ್ತು.
ಜೀವನ ಆಗಲೇ ಆಫೀಸ್ ಗೆ ಬಂದಾಗಿತ್ತು. ಅವಿನಾಶ್ ನನ್ನನ್ನು ನೋಡಿ "ಕಲ್ ಕಹಾನ್ ಗಯಾ ಥಾ ಬಾಯ್ ...?"
"ಬೋಲಾ ಥಾ ನಾ ಚೆನ್ನೈ ಕೆ ಇಂಟರ್ವ್ಯೂ ಕೆ ಬಾರೆ ಮೇ.. ಬಸ್ ಚೆನ್ನೈ ಗಯಾ ಥಾ.." ಎನ್ನುತ್ತಾ ನಕ್ಕೆ.
"ಬಹುತ್ ಕುಶ್ ಹೋ, ಕೊಇ ಕುಶ್ ಖಬ್ರಿ ಹೇ ಕ್ಯಾ ...?"
"ಬಹುತ್ ಕುಶ್ ಖಬ್ರಿ ಹೇ, ಜೀವನ ಬರಲಿ ಹೇಳ್ತೇನೆ...." ಎಂದು ತುಟಿಯನ್ನು ಇನ್ನು ಅಗಲಿಸಿದೆ.
"ಬಾಯ್ ಆಪಕೋ ಏಕ ಸರ್ಪ್ರೈಸ್ ಹೇ.. " ಅಂದ ಅವಿನಾಶ್.
"ಕ್ಯಾ ಬಾಯ್...?"
"ಜೀವನ ಆನೆ ದೋ, ಪತಾ ಚಲೇಗ" ಎನ್ನುತ್ತಾ ಟೈಮ್ಸ್ ಆಫ್ ಇಂಡಿಯಾ ಈ ಪೇಪರ್ ನ ಸ್ಪೋರ್ಟ್ಸ್ ಪೇಜ್ ಅನ್ನು ತಿರುಗಿಸಿದ.

ನನ್ನ ಸಿಸ್ಟಮ್ ಆನ್ ಆಗಿ, ಆಟೋಮೆಟಿಕ್ ಲಾಗಿನ್ ಮಾಡ್ ನಲ್ಲಿ ಇತ್ತ ಜಿ.ಟಾಕ್ ಲಾಗ್ ಇನ್ ಆಯಿತು.

ಐಟಿ ಕುಳಗಳ ಇನ್ನೊಂದು ವಿಚಿತ್ರ ಬಿಹೇವಿಯರ್ ಇದು ತನ್ನ ಬಗ್ಗೆ ಲೋಕಕ್ಕೆ ಕೊಚ್ಚಿಕೊಳ್ಳುವುದು, ಯಾರು ಕೇಳ್ತಾರೆ ಬಿಡ್ತಾರೆ ಎನ್ನುವುದು ಸೆಕೆಂಡರಿ !!! ಇದಕ್ಕೆ ಎಂದೇ ಟ್ವಿಟರ್, ಜಿ- ಟಾಕ್ ಸ್ಟೇಟಸ್ ಭಾರತೀಯ ಐಟಿ ಸಮೂಹವನ್ನು ತನ್ನಲ್ಲಿಗೆ ಎಳೆದಿತ್ತು.

ನನ್ನ ಸ್ಟೇಟಸ್ ಅನ್ನು ಫ್ರೆಂಡ್ಸ್ ಗಳ ಜೊತೆಗೆ ಹಂಚುವ ಮನಸ್ಸಾಗಿ ಜಿ-ಟಾಕ್ ಅನ್ನು ತೆರೆದೆ. ನಾನು ಹಾಕಬೇಕಿದ್ದ ಸ್ಟೇಟಸ್ ಅನ್ನು ಜೀವನ ಅದಾಗಲೇ ಹಾಕಿದ್ದ. ಅದನ್ನು ಓದಿ ದಂಗಾದೆ.
"ಟೈಮ್ ಟು ಮೂವ್ ಫಾರ್ವರ್ಡ್ "
ಪಕ್ಕದಲ್ಲಿ ಕುಳಿತ ಅವಿನಾಶ್ ನಲ್ಲಿ "ಜೀವನ್ ...?" ಎಂದು ಕೇಳಿದೆ.
ಅದಕ್ಕವನು "ಅದೇ ಸರ್ಪ್ರೈಸ್.. ನಿನ್ನೆ ಎಗ್ಸಿಟ್ ಬುಟನ್ ಒತ್ತಿ ಬಿಟ್ಟ, ಒಂದು ಪೀಡೆ ತೊಲಗಿತು" ಎಂದ.

ಅವನ ಮಾತು ಕೆಳುತಿದ್ದಂತೆ ನನಗು ಹಾಗೆ ಎನಿಸಿತು. ನಾನು ಸುಮ್ಮನಾದೆ. ನಿಜಕ್ಕೂ ನನ್ನ ಏಳಿಗೆಗೆ ಕಾರಣನಾದ, ನಂತರ ನನ್ನ ಏಳಿಗೆಗೆ ಮುಳ್ಳಾದ ತಡೆ ಬೆನ್ನು ಬಿಟ್ಟ ಎಂದು ಖುಷಿ ಪಟ್ಟೆ. ಶನಿವಾರದ ಎಂಎನ್ಸಿಯಲ್ಲಿ ಸೆಲೆಕ್ಟ್ ಆದಕ್ಕಿಂತ ಹೆಚ್ಚಿನ ರೀತಿಯಲ್ಲಿ ಖುಷಿ ಪಟ್ಟಿತು ಮನಸ್ಸು.
ಚೆನ್ನೈ ನ ಎಂಎನ್ಸಿ ಗೆ ಸೇರಬೇಕೇ..? ನಾನು ಎಗ್ಸಿಟ್ ಬಟನ್ ಒತ್ತಿ ಬಿಡಲೇ...? ಎಂದು ನನ್ನನ್ನೇ ಪ್ರಶ್ನೆ ಕೇಳಲು ಆರಂಬಿಸಿದೆ.
ಮೌನವೇ ಉತ್ತರ ಇತ್ತು ನನ್ನಲ್ಲಿ. ಮತ್ತೆ ಮೌನ ಮುಂದುವರಿಯಲಿಲ್ಲ.

"ಬೇಡ, ಎಗ್ಸಿಟ್ ಒತ್ತ ಬೇಡ, ಅವನಾಗಿಯೇ ದೂರ ಹೋಗುತಿದ್ದಾನೆ, ಈಗ ನಿನನಗೆ ನಿನ್ನನ್ನು ಡ್ರೀಮ್ ಟೆಕ್ ಎದುರು ಪ್ರೂವ್ ಮಾಡಲು ಸಮಯ ಒದಗಿ ಬಂದಿದೆ, ಪ್ರೀತಿ, ಹಣ ಸಂಪಾದನೆ ಎಂದು ನೀನು ಇವತ್ತು ಎಗ್ಸಿಟ್ ಒತ್ತಿದರೆ ನೀನು ಇಲ್ಲಿ ಮಾಡಿದ ಕೆಲಸ ಯಾರ ಗಮನಕ್ಕೂ ಬಾರದೆ ನಿನ್ನೊಂದಿಗೆ ಮರೆಯಾಗಬಹುದು, ಇಷ್ಟಕ್ಕೂ ಚೆನ್ನೈ ನಿನ್ನ ಡೆಸ್ಟಿನೇಶನ್ ಅಲ್ಲ, ಎರಡು ತಿಂಗಳು ನೀನು ಡ್ರೀಮ್ ಟೆಕ್ ನಲ್ಲಿ ಮುಂದುವರಿಸು, ಎರಡು ವರ್ಷ ಮಾಡಿದ ಕೆಲಸವನ್ನು ಆ ಎರಡು ತಿಂಗಳಲ್ಲಿ ಮಾಡಿ ಇಲ್ಲಿನ ಜನರಿಗೆ ನೀನು ನಿನ್ನನ್ನು ಸಾಬೀತು ಮಾಡು. ಮಾತಿನಲ್ಲಿ ನೀನು ಹೇಳಿದಾಗ ಇವನು ಬರಿ ಬಾಯಿ ಮಾತಿನ ಹುಲಿ, ಉಗುರಿಲ್ಲದ ಹುಲಿ ಎಂಬ  ಅಭಿಪ್ರಾಯಕ್ಕೆ ಬಂದ ಆ ಬಿಮಾರಿ ಎದುರಿಗೆ ನಿನ್ನನ್ನು ನೀನು ಸಾಬೀತು ಮಾಡು, ಎರಡು ತಿಂಗಳ ಬಳಿಕ ನೀನು ನಿನ್ನ ಹೊಸ ದಾರಿ ಹುಡುಕಲು ಶುರು ಮಾಡು, ನಿನಗಾಗಿ ಸುಂದರ ಅವಕಾಶ ಇಲ್ಲಿ ಕಾದಿದೆ. ಇನ್ನು ಈ ಪೂರ್ತಿ ಮೊಡ್ಯುಲ್ ನಿನ್ನ ಕೈಯಲ್ಲಿರುತ್ತದೆ, ನೀನು ಅಂದು ಕೊಂಡಂತೆ ನೀನು ಮೇಲಿನವರನ್ನು ಆಡಿಸಬಹುದು." ಎಂಬ ವಿಚಾರಗಳು ಮೌನದಲ್ಲಿ ಮೂಡಲು ಶುರುವಾದವು.

ಈ ವಿಚಾರಗಳು ಒಂದು ಹೊಸ ನಿರ್ಧಾರಕ್ಕೆ ಮುನ್ನುಡಿಯಾಯಿತು. ಬೆಳಗ್ಗಿನ ವರೆಗೆ ಎರಡು ತಿಂಗಳ ಬಳಿಕ ಚೆನ್ನೈ ನಲ್ಲಿ ಸೆಟಲ್ ಆಗುವ ಕನಸು ಕಾಣುತಿದ್ದ ವೈಭವ್ ಈಗ ಆ ಕನಸನ್ನು ಇನ್ನು ಮೂರು ನಾಲ್ಕು ತಿಂಗಳಕಾಲಕ್ಕೆ ಮುಂದೂಡುವ ಆಲೋಚನೆ ಮಾಡಲು ಶುರು ಮಾಡಿದ. ಮೇಲಿನ ಲೆವೆಲ್ ನವರೊಂದಿಗೆ ಕರೆಯಲ್ಲಿ ಇದ್ದ ಜೀವನ್ ಕ್ಯುಬಿಕಲ್ ಪ್ರವೇಶಿಸಿದ ಬಳಿಕ ಮಾಮೂಲಿನಂತೆ ತನ್ನ ಪ್ರಾಜೆಕ್ಟ್ ಓಪನ್ ಮಾಡಿದ.

ಪ್ರಾಜೆಕ್ಟ್ ನಲ್ಲಿ ಮುಳುಗಿದ್ದ ನನ್ನನ್ನು ಜೀವನ್ "ವೈಭು, ಇನ್ನು ಕೆಲವೇ ದಿನಗಳು, ಹೋಗ್ತಾ ಇದ್ದೇನೋ ನಿಮ್ಮೆಲ್ಲರನ್ನು ಬಿಟ್ಟು." ಅಂದ.
ಅವನಲ್ಲಿ "ಏನೋ ... ಎಲ್ಲಿಗೆ ಹೋಗ್ತಾ ಇದ್ದೀಯ ..?"

"ಸದ್ಯಕ್ಕೆ ಡ್ರೀಮ್ ಟೆಕ್ ನಿಂದ ಹೊರಕ್ಕೆ..!!!"

"ಎಗ್ಸಿಟ್ ಬಟನ್ ಒತ್ತುತ್ತೀಯೇನೋ ...?"

"ಹೌದು... 40 % ಜಾಸ್ತಿ ಸಿಕ್ಕುವಾಗ ಯಾರು ಒತ್ತದೆ ಇರ್ತಾರೆ !!!"

"ಎಲ್ಲಿ ಕ್ಲೈಂಟ್ ಆಫೀಸಾ ...?"

ನನ್ನಿಂದ ಈ ಮಾತು ಕೇಳಿ ಒಮ್ಮೆ ಅವಕ್ಕಾದ 'ಇವನಿಗೆ ಹೇಗೆ ಗೊತ್ತಾಯ್ತಪ್ಪಾ ನನ್ನ ಗುಪ್ತ ಸಂಭಾಷಣೆ' ಎನ್ನುತ್ತಾ, ಅವನು 

"ಕೈಂಟ್ ಆಫೀಸ್ ಗೆ ನಾನು ನಮ್ಮ ಕಂಪೆನಿ ಪಾಲಿಸಿ ಪ್ರಕಾರ ಹೋಗುವಂತಿಲ್ಲ"

"ಮತ್ತೆ ಎಲ್ಲಿ, ಯಾವುದಾದರು ಒಂಸೈಟ್ ಒಪೆರ್ಚ್ಯುನಿಟಿ ಸಿಕ್ತಾ ...?"

"ಯಾವ ಒಂಸೈಟು ಇಲ್ಲ ಸದ್ಯಕ್ಕೆ ಪುಣೆ ಬಿಟ್ಟು ಎಲ್ಲೂ ಹೋಗಲ್ಲ, ಒಂದು ಸ್ಟಾರ್ಟ್ ಅಪ್ ಕಂಪೆನಿಯಲ್ಲಿ ಆಯ್ತು ನನ್ನ ಹೊಟ್ಟೆಪಾಡು"

"ಅಲ್ಲ ಮಗ್ನೇ, ಇಷ್ಟು ಒಳ್ಳೆ ಕಂಪೆನಿ, ರೆಕೊಗ್ನಿಶನ್ ಬಿಟ್ಟು ಅದ್ಯಾವುದೋ ಸ್ಟಾರ್ಟ್ ಅಪ್ ಕಂಪೆನಿ ಅನ್ತಿಯಲ್ಲಾ.... ಬುದ್ದಿಯಿಲ್ಲ ಕಣೋ ನಿನಗೆ"

"ಇಲ್ಲಿ ನನಗೆ ಯಾರು ಆ ರೆಕೊಗ್ನಿಶನ್ ಧಾನ ಮಾಡಿದಲ್ಲ, ಅದನ್ನು ನಾನೇ ಸಂಪಾದಿಸಿದ್ದು, ಅಲ್ಲಿ ಹೋದರೂ ನಾನು ಅದನ್ನು ಸಂಪಾದಿಸುತ್ತೇನೆ ಎಂಬ ವಿಶ್ವಾಸ ನನ್ನಲ್ಲಿದೆ"

"ಆದ್ರೂ..."

"ಎಲ್ಲರು 40 % ಕೊಟ್ರೇ ಇವರು 60 % ವರೆಗೆ ಕೊಡ್ತಾರೆ, ಪ್ಲುಸ್ ನನ್ನ ಹೆಸರಲ್ಲಿ ವೀಸಾ ಇರುವುದರಿಂದ ಮೂರೇ ತಿಂಗಳಲ್ಲಿ ಒಂಸೈಟ್ ಕೂಡ ಕೊಡ್ತಾರಂತೆ. ಡ್ರೀಮ್ ಟೆಕ್ ಗೆ ನಂಬಿದ್ರೆ ದೇಶ ಬಿಡು, ಕ್ಯುಬಿಕಲ್ ಸಮೇತಾ ಬದಲಾಗಲ್ಲ ...!!" ಎಂದ.

"ಅಲ್ಲ ಮಗ ಸ್ಟಾರ್ಟ್ ಅಪ್ ಕಂಪೆನಿ ಅನ್ನುತ್ತೀಯ...? ಅಷ್ಟೆಲ್ಲ ಹೇಗೆ ಕೊಡ್ತಾರೆ...?"

"ಅದೇ ಸ್ಪೆಷಲ್ ಸ್ಕಿಲ್ ನ ಮಹಿಮೆ, ದೊಡ್ಡ ಕಂಪೆನಿಗಳಿಗೆ ಉಳಿದವರ ಹೊಟ್ಟೆ ತುಂಬಿಸ ಬೇಕಿರುತ್ತೆ, ಅದಕ್ಕೆ ನಾವು ಸಂಪಾದಿಸಿದ ಅಮೇರಿಕನ್ ಡಾಲರ್ ನಮ್ಮ ಕೈ ತಲುಪುವಾಗ ರುಪಾಯಿ ಯಾಗಿರುತ್ತದೆ, ಅದೇ ಸಣ್ಣ ಕಂಪೆನಿಯಲ್ಲಿ ಕೆಲಸ ಮಾಡದೆ ಸಂಬಳ ಉಣ್ಣುವವರ ಸಂಕೆ ತುಂಬಾ ಕಮ್ಮಿ ಇರುತ್ತದೆ ಅದಕ್ಕೆ ಕಂಪೆನಿ ನಮ್ಮ ಡಾಲರ್ ನಲ್ಲಿ ಸಣ್ಣ ಮೊತ್ತ ತನ್ನ ಉದ್ದಾರಕ್ಕೆ ಇಟ್ಟು ಉಳಿದ ಮೊತ್ತದಲ್ಲಿ ನಮ್ಮನ್ನು ಉದ್ದಾರ ಮಾಡ್ತಾರೆ..!!"

ಅವನ ಮಾತು ಹೌದೆನಿಸಿತು. ಗಂಟೆಗೆ 36 ಡಾಲರ್ ನಾವು ಸಂಪಾದಿಸಿದರೂ, ನಮಗೆ ಕೈಗೆ ಸಿಕ್ಕುವಾಗ ಅದರ ಬರೇ ನೂರರಲ್ಲಿ ಒಂದು ಅಂಶ ಮಾತ್ರ !! ಎನ್ನುವುದನ್ನು ಅಪ್ರೈಸಲ್ ನ ಮಾರನೆ ದಿನ ನಾನು ಮನವರಿಕೆ ಮಾಡಿದ್ದೆ. 

"ಯಾವಾಗ ಜೋಯಿನ್ ಆಗ್ತಿದ್ದಿಯಾ...?"

"ಮುಂದಿನ ಸೋಮವಾರದಿಂದ.. ಅವರಿಗೆ ಅರ್ಜೆಂಟ್ ರೆಕ್ವೈರ್ಮೆಂಟ್ ಇತ್ತು ಅದಕ್ಕಾಗಿಯೇ ನಾನು ಕೇಳಿದ ಎಲ್ಲಕ್ಕೆ ಒಪ್ಪಿದ್ದು ಅವರು !!"

"ಅಲ್ಲ ಮಗ್ನೇ ಕಂಪೆನಿ ಪಾಲಿಸಿ ಪ್ರಕಾರ ಎರಡು ತಿಂಗಳ ನೋಟಿಸ್ ಪಿರಡ್ ಇದೆಯಲ್ಲೋ.. ಅದಕ್ಕೆ ಏನು ಮಾಡ್ತೀಯ...?"

"ಹಣ ಬಿಸಾಡಿದರೆ ಆಯಿತು, ಅವರಾಗಿಯೇ ನನ್ನನು ಹೊರ ತಳ್ಳುತ್ತಾರೆ, ಇನ್ನೊಂದು ಹೊಸ ರಿಸೋರ್ಸ್ ಅನ್ನು ನನ್ನ ಜಾಗಕ್ಕೆ ಹಾಕಿಕೊಳ್ಳುತ್ತಾರೆ"ಎಂದು ಹೇಳಿದ.

"ನನಗೇನೋ ಅವರು ನಿನ್ನನ್ನು ಅಷ್ಟು ಬೇಗ ರಿಲೀಸ್ ಮಾಡುವುದು ಡೌಟ್ !!!"

"ನೋಡೋಣಾ ಏನಾಗ್ತದೆ ಎಂದು ಹೇಳಿ.... ಇನ್ನು ಮೂರು ವರ್ಕಿಂಗ್ ಡೆಯ್ಸ್ ಇದೆಯಲ್ಲಾ... ನಾನಂತೂ ಎಗ್ಸಿಟ್ ಒತ್ತಿ ಬಿಟ್ಟೆ !!!"

ಎನ್ನುತ್ತಾ ಅವಿನಾಶ್ ನನ್ನು ಊಟಕ್ಕೆ ಕರೆದ.

*******************

 

ಒಬ್ಬೊಬ್ಬರಾಗಿ 40 % ನ ಆಸೆಗಾಗಿ ಎಗ್ಸಿಟ್ ಬಟನ್ ಒತ್ತುತಿರುವುದು, ಪುಣೆ ಸೆಂಟರ್ ನಲ್ಲಿ ಶುರುವಾದ ಹೊಸ ಚಳುವಳಿಯಾಗಿತ್ತು ಅದರಲ್ಲಿ ಹೆಚ್ಚಿನವರು ನಮ್ಮ ಬಾಚ್ ನವರೇ ಎನ್ನುವುದು ಸಲ್ಪ ನೋವು ನಮ್ಮ ಬಾಚ್ ನವರಿಗೆ ಆದರೆ, ಪ್ರೊಮೋಷನ್ ಗಿಟ್ಟಿಸಿ ಎಗ್ಸಿಟ್ ಒತ್ತಿದರಲ್ಲ ಎಂದು ಮೇಲಿನ ಲೆವಲ್ ನವರು ಕೊರಗುತಿದ್ದರು. 

ಕಾಲೇಜ್ ಬಿಟ್ಟು ಹೇಗಿರುತ್ತೋ ವ್ಯವಹಾರಿಕ ಪ್ರಪಂಚ ಎಂಬ ಪ್ರಶ್ನೆಯಲ್ಲೇ ಕಾಲಿಟ್ಟ ಡ್ರೀಮ್ ಟೆಕ್ ನಮ್ಮೆಲ್ಲರಿಗೆ ಕಾಲೇಜ್ ದಿನಗಳನ್ನು ಮುಂದುವರೆಸಿದಂತೆ ಇತ್ತು, ಯಾವುದೋ ಕ್ಯಾಂಪ್ ಗೆ ಬಂದಂತೆ ಇಲ್ಲಿನ ವಾತಾವರಣ ಇತ್ತು. ಅದಕ್ಕಾಗಿ ಬಿಟ್ಟುಹೋಗುವ ಆ ಗೆಳೆಯರಿಗಾಗಿ ಮನ ಕೊರಗುತಿತ್ತು, ಅರೆ ಕ್ಷಣ ಭಾವುಕ ವಾಗುತಿತ್ತು; ನಂತರ ನನಗೇಕೆ ಬೇರೆ ಕಡೆ ಕೆಲಸ ಸಿಕ್ಕುತ್ತಿಲ್ಲ ಎಂಬ ಚಿಂತೆ ಕಾಡುತಿತ್ತು.

ಆದರೆ ಇವತ್ತು ಎರಡು ವರ್ಷದಿಂದ ನನ್ನ ಪ್ರೊಫೆಶನಲ್ ಲೈಫ್ ಅನ್ನು ನನ್ನ್ನಷ್ಟೇ ಹತ್ತಿರದಿಂದ ನೋಡಿದ, ನನ್ನ ಜೊತೆ ಬಾಲ್ಯ ಹಂಚಿದ ಗೆಳೆಯ ದೂರವಾಗುತ್ತಾನೆ ಎಂದು ತಿಳಿದಾಗ ಕೊರಗಲಿಲ್ಲ ಮರುಗ ಲಿಲ್ಲ ಬದಲಿಗೆ ಸಂಭ್ರಮಿಸಿತು. ಅದಕ್ಕೆ ಸಂಭ್ರಮಿಸಲು ಕಾರಣವೂ ಇತ್ತು, ಎರಡು ವರ್ಷದ ಮಟ್ಟಿಗೆ ನನ್ನ ಐಡೇನ್ಟಿಟಿ ಸ್ತಾಪಿಸಲು ಕಾರಣ ವಾಗಿದ್ದ ತಡೆ ಮರೆಯಾಗುತ್ತಾ ಇದೆ ಇನ್ನುವುದು ಆ ಕಾರಣ ವಾಗಿತ್ತು. ಹೌದು ಅವನು ಬೇಗ ಆದಷ್ಟು ಬೇಗ ಈ ಕಂಪೆನಿಯನ್ನು ಬಿಟ್ಟು ಹೋದರೆ ನನ್ನ ಏಳಿಗೆಯ ದಿನ ಹತ್ತಿರವಾಗುತ್ತದೆ ಎಂದು ಗೊತ್ತಿತ್ತು. ಇನ್ನು ನಾನೇ ಕೆಲಸ ಮಾಡ್ತೇನೆ, ನೂರು ಪ್ರತಿಶತ ವಾಗಿ ಪ್ರತಿಫಲ ನಾನೇ ಅನುಭವಿಸುತ್ತೇನೆ ಎಂಬ ವಿಶ್ವಾಸ ಅದಕ್ಕಿತ್ತು.

" ಹೋದ್ರೆ ಹೋಗಲಿ ಅವನು ಹೋಗುವುದರಿಂದ ನನಗೆ ಉಪಯೋಗವೇ... ಅವನಿದ್ದರೆ ನನಗೆ ತೊಂದರೆ ತಪ್ಪಿದಲ್ಲ" ಎಂದು ಮನಸ್ಸು ನನಗೆ ಹೇಳುತಿತ್ತು.

ಊಟ ಮುಗಿಸಿ ಬಂದ ಬಳಿಕ ರಿಪೋರ್ಟಿಂಗ್ ಮೇನೇಜರ್ ಕಿರಣ್ ಮೊದಲಿಗೆ ಅವನನ್ನು ಡ್ರೀಮ್ ಟೆಕ್ ಬಿಡಲು ಕಾರಣ ವಿಚಾರಿಸಿ ಮೀಟಿಂಗ್ ಗೆ ಕರಕೊಂಡು ಹೋದರು. ಮನ ಒಲಿಸಲು ಪ್ರಯತ್ನಿಸಿದರು. ಅವರ ಕೈಯಲ್ಲಿ ಇವನ ನಿರ್ಧಾರ ಬದಲಿಸಲಾಗಲಿಲ್ಲ. ನಂತರ ತಿವಾರಿ ಅವರೂ ತನ್ನ ಹತ್ತು ವರ್ಷದ ಅನುಭವ ಧಾರೆ ಎರೆದರೂ ಇವನ ನಿರ್ಧಾರ ಚೂರಾದರು ಬದಲಾಗಲಿಲ್ಲ.

ಅವರು ಕೊನೆಗೆ "ನೀನು ಬಿಟ್ಟರೆ ಡ್ರೀಮ್ ಟೆಕ್ ಗೆ ಹಣ ಕೊಡ ಬೇಕಾಗುತ್ತದೆ, ಕಂಪೆನಿ ಪಾಲಿಸಿ ಗೊತ್ತಿದೆ ತಾನೇ" ಎಂದು ಬಾಂಬ್ ಹಾಕಿದರು .

ಅವನು "ಹೌದು ಅದಕ್ಕೆ ಆ ಕಂಪೆನಿಯೇ ಹಣ ಬರಿಸುತ್ತದೆ, ನಾನು ಕಳ ಕೊಳ್ಳುವುದು ಏನು ಇಲ್ಲ, ಆದಷ್ಟು ಬೇಗ ಅವರನ್ನು ಜೋಯಿನ್ ಆಗ್ಬೇಕು" ಎಂದ.

ಅವರು ಈಗ ಆ ಅಸ್ತ್ರ ನಡೆಯದೆ ಎಮೋಷನಲ್ ಆಗಿ ಬ್ಲಾಕ್ಮೇಲ್ ಮಾಡಲು ಶುರುಮಾಡಿದರು. ಮೂರು ವರ್ಷದಲ್ಲಿ ಕೊಟ್ಟ ಎರಡು ಪ್ರೊಮೋಷನ್ ಗಳ ಬಗ್ಗೆ ಪರಿಪರಿಯಾಗಿ ಹೇಳ ತೊಡಗಿದರು; ಕಂಪೆನಿ ತನ್ನ ಖರ್ಚಿನಲ್ಲಿ ಭರಿಸಿದ ಅವನ ವೀಸಾದ ಕುರಿತು ವಿಚಾರ ಬಂತು. ತಿವಾರಿ ಎಲ್ಲ ತನ್ನಿಂದಲೇ ನಡೆದಂತೆ ಮಾತನಾದುತಿದ್ದದ್ದು ಗಾಜಿನ ಗ್ಲಾಸ್ ದಾಟಿ ಈ ಬದಿಗೆ ಕಾಣುತಿತ್ತು, ಕೇಳುತ್ತಿರಲಿಲ್ಲ.

 

ಅವರ ಜೊತೆ ಮಾತುಕತೆಯಾಗಿ ಹೊರ ಬಂದಾಗ ಅವಿನಾಶ್ ಕ್ಯುಬಿಕಲ್ ನಲ್ಲಿರಲಿಲ್ಲ, ಎಂದಿನಂತೆ ಅವನು ಟಿಟಿ ಆಡಲು ಹೋಗಿದ್ದ. ನನ್ನ ಬಳಿ ಬಂದು "ಸೋರಿ ವೈಭು ನಿನ್ನ ಪ್ರೊಮೋಷನ್ ನಾನು ತಿಂದೆ" ಎಂದ.

ಆ ತಿವಾರಿ ತನ್ನ ರಾಜಕೀಯ ಆಟವನ್ನು ಇಲ್ಲಿ ಇವನನ್ನು ತಡೆದು ನಿಲ್ಲಿಸಲು ಬೇಳೆಯಾಗಿ ಬಳಸಿದ್ದ. ಚೇರ್ ನಿಂದ ತಿರುಗಿ ಹಿಂದೆ ನೋಡಿದೆ. ಜೀವನ್ ಅಲ್ಲಿರಲಿಲ್ಲ, ಅವನಿಗೆ ಸತ್ಯ ಎದುರಿಸುವ ಹೆದರಿಕೆ ಇತ್ತು. ಅವನಿಂದ ತಪ್ಪು ಸಂಭವಿಸಿದೆ ಎಂದು ಗೊತ್ತಾದ ಬಳಿಕ ಕ್ಷಮೆ ಕೇಳದೆ ಇರಲು ಮನಸ್ಸು ಒಪ್ಪಲಿಲ್ಲ. ನನಗೆ ಈ ವಿಚಾರ ಮೊದಲಿನಿಂದ ಗೊತ್ತಿರುವುದರಿಂದ ಮನಸ್ಸಿನ ಮೇಲೆ ಯಾವುದೇ ಮಾರುತ ಬೀಸಲಿಲ್ಲ.

ಬಳಿಕ ಕ್ಯುಬಿಕಲ್ ನಲ್ಲಿ ಇದ್ದರೆ ನನ್ನ ದೃಷ್ಟಿ ಯುದ್ದಕ್ಕೆ ಒಳಗಾಗ ಬೇಕು ಎಂದು ತಿಳಿದು ಮನೆಯ ದಾರಿ ಹಿಡಿದ.

ಅವನು ಡ್ರೀಮ್ ಟೆಕ್ ಬಿಡುವುದು ರಾತ್ರಿಯ ಕ್ರಿಸ್ ನ ಕಾಲ್ ನಲ್ಲಿ ನನಗೆ ಹೊಸ ಹುರುಪನ್ನೇ ನೀಡಿತ್ತು. ಇನ್ನು ಮುಂದೆ ವಹಿಸಬೇಕಾದ ಜವಾಬ್ಧಾರಿ ಹೊಸತಾಗಿರಲಿಲ್ಲ, ಆದರೆ ಇನ್ನುಮುಂದೆ ಸಿಕ್ಕುವ ರೆಕೊಗ್ನಿಶನ್ ಹೊಸತಾಗಿರುತ್ತದೆ, ಜೀವನ್ ನ ಟೀಮ್ ಮೆಂಬರ್ ಎಂದು ಸಂಬ್ಹೊದಿಸುವುದನ್ನು ಬಿಟ್ಟು ಇನ್ನು ನಾನು ವೈಭವ್ ಆಗೇ ಪೂರ್ಣ ಅಸ್ತಿತ್ವ ತೋರಿಸಬಹುದು ಎಂದು ಮನ ಹಿಗ್ಗುತಿತ್ತು.

  

 

******************

 

ರೂಮಿಗೆ ತಲುಪಿದವನೇ ಇವತ್ತು ದೇವರಿಗೆ ಒಂದು ಸುತ್ತು ಹೆಚ್ಚಿನ ಆರತಿ ಬೆಳಗಿ ಊಟಕ್ಕೆ ಕುಳಿತೆ. ಎಂದಿನಂತೆ "ಮಿಸ್ ಯು ಡಂಬು" ಎನ್ನುವ ಮೆಸ್ಸೇಜ್ ಬಂತು.
"ಐ ಟೂ" ಎಂದು ರಿಪ್ಲೈ ಬರೆದೆ. ಡಬ್ಬದಲ್ಲಿರುವ ನಾಲ್ಕು ರೋಟಿಯನ್ನು ಎರಡೇ ನಿಮಿಷದಲ್ಲಿ ಮುಗಿಸಿ  ಹಾಸಿಗೆ ಸೇರಿದೆ.
ಝೀರೋ ಒಳ್ಟ್ ಬಲ್ಬ್ ಹದವಾಗಿ ರೂಮಿಗೆ ನೀಲಿ ಬೆಳಕನ್ನು ಚೆಲ್ಲುತ್ತಿತ್ತು. ಮೇಲ್ಚಾವಣಿಯಲ್ಲಿ ಅವಳ ನೆರಳಿನಾಕೃತಿ ಮೂಡುತಿದ್ದವು. ಆ ಆಕೃತಿ ಚೆನ್ನೈ ನಲ್ಲಿ ತನ್ನ ಕೋಣೆಯಲ್ಲಿ ಒಂಟಿಯಾಗಿ ಮಲಗಿರುವ ಆಕೃತಿಯ ಸಂಭಾಷಣೆಯನ್ನು ನನ್ನ ಕಣ್ಣೆದುರಿಗೆ ಬಿತ್ತರಿಸುತಿತ್ತು.
"ರಾಜಾ , ಒಂದು ನಿನಗೆ ಸಿಹಿ ಸುದ್ದಿ ಇದೆ" ಎಂದು ಟೈಪಿಸಿದೆ.
"??"
"ಗೆಸ್ ಮಾಡು"
"ಚೆನ್ನೈ ನ ಎಂಏನ್ಸಿ ಜೋಇನಿಂಗ್ ಲೆಟರ್ ಕಳುಹಿಸಿದ್ರಾ...?"
"ಅಲ್ಲ.. ಲಾಸ್ಟ್ ಟ್ರೈ ಮಾಡು"
"ನಿನ್ನ ಮನೆಯವರು ತಮಿಳ್ ಸೊಸೆಯನ್ನು ಒಪ್ಪಿದರು !!!" ಅನ್ನುವ ಮೆಸ್ಸೇಜ್ ಬಂತು.
"ಅವರು ಒಪ್ಪೇ ಒಪ್ತಾರೆ, ಆದ್ರೆ ಆ ಸಿಹಿ ಸುದ್ದಿ ಯಲ್ಲಾ"
"ಬೇರೆ ಏನೋ ...?"
"ಜೀವನ್ ಡ್ರೀಮ್ ಟೆಕ್ ಬಿಟ್ಟಾ, ನನ್ನ ಏಕ ಮೇವ ಶತ್ರು ಪೀಡೆ ನೀಗಿತು" ಎಂದು ಕಳುಹಿಸಿದೆ.
"ನೀನೆ ಕಂಪೆನಿ ಬಿಡುವಾಗ, ಅವ ಅಲ್ಲಿ ಇದ್ರೆ ಎಷ್ಟು ಬಿಟ್ರೆ ಎಷ್ಟು..." ಎನ್ನುವ ರಿಪ್ಲೈ ಬಂತು.
"ರಾಜಾ...ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ, ನಾನು ಡ್ರೀಮ್ ಟೆಕ್ ಸದ್ಯಕ್ಕೆ ಬಿಡ್ತಾ ಇಲ್ಲ, ನಾನು ಯಾವ ಸಂಧರ್ಭಕ್ಕೆ ಕಾಯ್ತಾ ಇದ್ದೆ ಆ ಸಂಧರ್ಭ ತಾನಾಗಿಯೇ ಒದಗಿ ಬಂದಿದೆ, ನಾನು ನನ್ನ ಕೆಲಸವನ್ನು ಪ್ರೂವ್ ಮಾಡ್ಬೇಕು, ಅದಾದ ಬಳಿಕ ನಾನು ಬೇರೆ ಕಂಪೆನಿ ಟ್ರೈ ಮಾಡ್ತೇನೆ"
"ಚೆನ್ನೈ...?"
"ಸದ್ಯಕ್ಕೆ ಆ ಆಲೋಚನೆ ಬಿಟ್ಟಿದ್ದೇನೆ, ಮೂರು ನಾಲ್ಕು ತಿಂಗಳ ನಂತರ ಆ ಬಗ್ಗೆ ಆಲೋಚಿಸಿದರಾಯಿತು"
"ನಿಜಕ್ಕೂ ನೀನು ನನ್ನನ್ನು ಪ್ರೀತಿಸ್ತಾ ಇದ್ದೀಯ...?" ಎನ್ನುವ ರಿಪ್ಲೈ ಬಂತು ಚೆನ್ನೈ ನಿಂದ.
"ಆಕೃತಿ.... ಯಾಕೆ ಈ ರೀತಿ ಕೇಳ್ತಾ ಇದ್ದೀಯ...?" ಅವಳ ಪ್ರಶ್ನೆಯಿಂದ ಮತ್ತೆ ಕೋಪ ಏರಿ ಅವಳನ್ನು ನಾನು ಹೆಸರಿಟ್ಟು ಕರೆದೆ.
"ಮತ್ತೆ ಇಲ್ಲಿ ದೊಡ್ಡಪ್ಪನ ಬಳಿ ನಿನ್ನ ಹೆತ್ತವರನ್ನು ಒಪ್ಪಿಸಿ ಬೇಗನೆ ನನ್ನನ್ನು ಕರಕೊಂಡು ಹೋಗುತ್ತೇನೆ ಎಂದು ಹೇಳಿದವ ಅಲ್ಲಿ ತಲುಪಿದ ತಕ್ಷಣ ನಿನ್ನ ನಿರ್ಧಾರ ಬದಲಿಸಿದ್ದಿಯಲ್ಲಾ..."

ಅವಳ ನೇರ ಮಾತಿನಿಂದ ಕೋಪ ಶಾಂತವಾಗಿ, ಅವಳನ್ನು ಸಮಾಧಾನಿಸಲು "ಇಲ್ಲ ರಾಜಾ, ನನ್ನ ಮನೆಯವರು ಒಪ್ಪೇ ಒಪ್ತಾರೆ, ಈಗ ಸದ್ಯಕ್ಕೆ ನನಗೆ ಸಿಕ್ಕ ಸಂಧರ್ಭವನ್ನು ನಾನು ಕೈಯಾರೆ ದೂರ ಮಾಡಲು ಮನಸಿಲ್ಲ, ಡ್ರೀಮ್ ಟೆಕ್ ನಲ್ಲಿ ನಾನು ನನ್ನನ್ನು ಪ್ರೂವ್ ಮಾಡ ಬೇಕಿದೆ" ಎಂದು ಮೆಸ್ಸೇಜ್ ಕಳುಹಿಸಿದೆ.
ಮೌನವೇ ಉತ್ತರ ವಿತ್ತು ಅಲ್ಲಿಂದ.

ಕಳುಹಿಸಿದ ಮೆಸ್ಸೇಜ್ ಡೆಲಿವರಿ ಆಗದೆ ಇರಬಹುದು ಹೇಳಿ ಕಳುಹಿಸಿದನ್ನೇ ಮತ್ತೆರಡು ಬಾರಿ ಕಳುಹಿಸಿದೆ. ಉತ್ತರ ವಿರಲಿಲ್ಲ. "ಯು ದೇರ್ ??" ಮೆಸ್ಸೇಜ್ ಅನ್ನು ಕಳುಹಿಸಿದೆ.
ಬ್ಲಾಂಕ್ ಮೆಸ್ಸೇಜ್ ಬಂತು. ಅವಳು ನನ್ನಲ್ಲಿ ಕೊಪಿಸಿದ್ದಾಳೆ. ಮೌನ ದಲ್ಲೇ ಉತ್ತರಿಸುತಿದ್ದಾಳೆ ಎಂಬುವುದರ ಅರಿವು ಹುಟ್ಟಿ, ಸ್ಪೀಡ್ ಡೈಲ್ ನ ಐದನೇ ನಂಬರ್ ಅನ್ನು ಜೋರಾಗಿ ಅದುಮಿದೆ.
ಕ್ಷಣಾರ್ಧದಲ್ಲೇ ಕರೆ ಕಟ್ ಮಾಡಿದಳು.
ನಾನು "ಐ ವಾಂಟ್ ಟು ಟಾಕ್ ಟು ಯು" ಎಂದು ಮತ್ತೆ ಮೆಸ್ಸೇಜ್ ಕಳುಹಿಸಿದೆ.
"ಐ ಡೋಂಟ್ ವಾಂಟ್ " ಎನ್ನುವ ರಿಪ್ಲೈ ಬಂತು.

ಅವಳನ್ನು ಸಮಾಧಾನಿಸುವು ಅನಿವಾರ್ಯತೆ ನನ್ನಲ್ಲಿ ಇತ್ತು.
"ಲವ್ ಯು ಕಣೇ... ಮನೆಯವರನ್ನು ಒಪ್ಪಿಸ್ತೇನೆ ನಿನ್ನನ್ನು ಅಲ್ಲಿಂದ ಕರಕ್ಕೊಂದು ಬರ್ತೇನೆ, ನನ್ನಾಣೆಗೂ" ಎಂದು ಮೆಸ್ಸೇಜ್ ಟೈಪಿಸಿದೆ. ಅವಳು ನನ್ನನ್ನು ತನಗಿಂತ ಹೆಚ್ಚಾಗಿ ಪ್ರೀತಿಸುತಿದ್ದಳು, ನನ್ನ ಮೇಲೆ ನಾನು ಮಾಡಿದ ಆಣೆಯಿಂದ ಅವಳ ಕೋಪ ಶಾಂತವಾಯಿತು.


"ಲವ್ ಯು ಡಂಬು" ಎನ್ನುವ ರಿಪ್ಲೈ ಬಂತು.
ಮತ್ತೆ ನಾನು "ಐ ವಾಂಟ್ ಟು ಟಾಕ್ ಟು ಯು" ಎನ್ನುವ ಮೆಸ್ಸೇಜ್ ಟೈಪಿಸಿದೆ.
"ಯಾವಾಗಲು ಮಾತಾಡ್ತೇವೆ ಅಲ್ಲಾ, ಇವತ್ತು ಇಬ್ಬರು ಚಾಟ್ ನಲ್ಲಿ ಪ್ರೀತಿಸುವ" ಎನ್ನುವ ರಿಪ್ಲೈ ಕಳುಹಿಸಿದಳು.
"ಓಕೆ ಬಾಬಾ .. ಯುವರ್ ವಿಶ್.." ಎಂದು ಟೈಪಿಸಿದೆ.
"ನೀನೇ ಹೇಳು" ಎನ್ನುವ ರಿಪ್ಲೈ ಬಂತು ಆ ಬದಿಯಿಂದ.
"ಏನಾದ್ರೂ ನೀನೇ" ಎಂದು ಟೈಪಿಸಿದೆ.

ಅವಳ ಮನಸಲ್ಲಿ ಹೊರಟು,ಅದನ್ನು ಕೈಯಿಂದ ಟೈಪಿಸಿ, ಮೊಬೈಲ್ ನಿಂದ ಟ್ರಾನ್ಸ್ಮಿಟ್ ಆಗಿ ನನ್ನ ಮೊಬೈಲ್ ಮೇಲೆ ಆ ಮೂರು ಶಬ್ದ ಗಳು ಇನ್ನೊಮ್ಮೆ ಅಚ್ಚೋತ್ತಿದವು. ನಾನು ಆ ಮೂರು ಶಬ್ದ ಗಳನ್ನು ಟೈಪಿಸಿದೆ.ಅದನ್ನು ಅವಳಿಗೆ ಕಳುಹಿಸಿದೆ.

ಮೊಬೈಲ್ ನಲ್ಲಿನ ಗೆಲಾರಿಯಲ್ಲಿ ನಿನ್ನೆ ಬೀಚ್ ನಲ್ಲಿ ನನ್ನ ಮಡಿಲಲ್ಲಿ ಅವಳು ಮಲಗಿರುವಾಗ ಸೆರೆಯಾದ ಅವಳ ನಗುವನ್ನು ತೆರೆದೆ. ಆ ತುಟಿಗಳಿಗೆ ನನ್ನದವುಗಳನ್ನು ತಾಗಿಸಿ ತಲೆಯ ಕೆಳಗಿನ ದಿಂಬನ್ನು ತಬ್ಬಿಕೊಂಡೆ. ಮೇಲ್ಛಾವಣಿಯಲ್ಲಿ ಅವಳ ಆ ನಗು ಮೂಡಿತ್ತು, ಅದರಲ್ಲಿ ನಾನು ಮುಳುಗಿ ಹೋದೆ.

ಎರಡು ನಿಮಿಷ ವಾದರೂ ಯಾವುದೇ ಮೆಸ್ಸೇಜ್ ಬರದನ್ನು ನೋಡಿ ಅವಳು "ಡಂಬು.. ಮಲಗಿದಿಯೇನೋ ..? ನನ್ನನ್ನು ಒಂಟಿಯಾಗಿ ಬಿಟ್ಟು" ಎನ್ನುವ ಮೆಸ್ಸೇಜ್ ಕಳುಹಿಸಿದಳು. ತೇಲುತಿದ್ದ ಹೃದಯ ಮೊಬೈಲ್ ನ ವೈಬ್ರೇಶನ್ ಗೆ ಎದ್ದಿತು. ಅದನ್ನು ಓದಿ."ಇಲ್ಲ, ಸಲ್ಪ ಬ್ಯುಸಿ ಆಗಿದ್ದೆ" ಎಂದು ರಿಪ್ಲೈ ಕಳುಹಿಸಿದೆ.
ಪೋಸ್ಸಿಸಿವ್ ಪಾರ್ಟಿ ಅವಳಿಂದ "ಯಾರ್ ಜೊತೆ ...?"
"ನಿನ್ನ ಸವತಿ ಜೊತೆ" ಎಂದು ರಿಪ್ಲೈ ಕಳುಹಿಸಿದೆ.
"ಕೃಪಾ :@" ಎನ್ನುವ ರಿಪ್ಲೈ ಕಳುಹಿಸಿತು ಆ ಪೋಸ್ಸಿಸಿವ್ ಮನಸ್ಸು.
"ಕೃಪಾ ನನ್ನ ಎಕ್ಸ್ .. ಅವಳು ನಿನ್ನ ಸವತಿ ಅಲ್ಲ" ಎಂದು ನಾನು ಟೈಪಿಸಿದೆ.
ಪೋಸ್ಸೇಸಿವ್ ಪಾರ್ಟಿ "ಪ್ರೀತಿ ...?"
"ಅಲ್ಲಾ ..."
"ವರ್ಷಾ ...?"
"ಅವಳೂ ಅಲ್ಲಾ..."
"ವೈಭು ಯಾರೋ ಆ ಹೊಸ ಸವತಿ ... ನನಗೆ ಗೊತಿಲ್ಲದವಳು ...?" ಎಂದು ಮೆಸ್ಸೇಜ್ ಬಂತು.
"ನಿನ್ನ ವಿರಹ ಕಾಡಿದಾಗ ನನ್ನ ಮುದ್ದಿಸುವವವಳು, ನನ್ನ ಕಣ್ಣೀರನ್ನು ಒರೆಸುವವಳು... ನೀನಿಲ್ಲದಾಗ ನನ್ನ ಜೊತೆಗೆ ಇರುವವಳು" ಎಂದು ಕಳುಹಿಸಿದೆ.
"ವೈಭು, ನೀನು ನನಗೆ ಕೋಪ ತರಿಸ್ತಿದ್ದಿಯಾ.. ಯಾರು ಹೇಳಿ ಹೇಳೋ ..."
"ಗೆಸ್ ಮಾಡು"
"ಸೋತೆ, ನೀನೆ ಹೇಳು"
"ನನ್ನ ದಿಂಬು, ನಿನ್ನ ಅನುಪಸ್ತಿತಿಯಲ್ಲಿ ನನ್ನ ಹೆಂಡತಿಯಾಗಿರುವ ನಿನ್ನ ಸವತಿ" ಎಂದು ರಿಪ್ಲೈ ಕಳುಹಿಸಿದೆ.
"ಯು ಆರ್ ಗೋಯಿಂಗ್ ಟೂ ರೋಮಾಂಟಿಕ್ ದೀಸ್ ಡೇಸ್"ಎಂದು ರಿಪ್ಲೈ ಬಂತು
"ಯು ಮೇಡ್ ಮಿ " ಎಂದು ಕಳುಹಿಸಿದೆ.

ಮತ್ತೆ ಛಾವಣಿ ಯಲ್ಲಿನ ಆಕೃತಿಯಲ್ಲಿ ಕಳೆದು ಹೋದೆ.
"ನಿನ್ನ ಗಡ್ಡ ಚುಚ್ಚಿಸುವ ಮನಸ್ಸಾಗಿದೆ, ನನ್ನನ್ನು ಮುದ್ದಿಸು" ಎನ್ನುವ ರಿಪ್ಲೈ ಬಂತು.
"ಚುಚುತ್ತೆ ಅನ್ನುತಿದ್ದಿ, ಏನು ಇವತ್ತು ಆ ನೋವು ಬೆಕನಿಸಿದ್ದು..?"
"ತುಂಬಾ ದಿನದ ಬಳಿಕ ನಿನ್ನನ್ನು ಮೊನ್ನೆ ನೋಡಿದಾಗ ಆ ಸುಖ ಬೆಕನಿಸಿತು, ಪ್ರತ್ಯಕ್ಷವಾಗಿ ಅದನ್ನು ಅನುಭವಿಸಲಾಗಲಿಲ್ಲ, ಅದಕ್ಕೆ ಈಗ ಪರೋಕ್ಷವಾಗಿ ಅನುಭವಿಸುವ ಮನಸ್ಸಾಗಿದೆ"
ಅವಳ ರಿಪ್ಲೈ ಓದುತ್ತಾ ಎದೆಯ ಮೇಲೆ ಮಲಗಿರುವ ನನ್ನ ಮೊದಲ ಹೆಂಡತಿಯನ್ನು ತಬ್ಬಿಕ್ಕೊಂಡೆ, ನಾಲ್ಕು ದಿನದ ಕುಡಿ ಗಡ್ಡ ವನ್ನು ಅದಕ್ಕೆ ಒರಸಿದೆ. ಆಕೃತಿ ಅನುಭವಕ್ಕೆ ಬರುತಿದ್ದಳು.
"ಸಾಕು ಸಾಕು ಕೆಂಪಾಯಿತು ಕೆನ್ನೆ, ಇನ್ನು ನಿಲ್ಲಿಸು" ಎನ್ನುವ ರಿಪ್ಲೈ ಬಂತು. ಇಲ್ಲಿ ನಾನು ಚುಚ್ಚಿಸಿದ್ದು ಅಲ್ಲಿ ಅವಳ ಅನುಭವಕ್ಕೆ ಬಂತು.
"ನಿಜದ ಅನುಭವ ಯಾವಾಗ ಮಾಡಿಸ್ತೀಯ ಡಂಬು ...?"
"ಇನ್ನು ಮೂರು ನಾಲ್ಕು ತಿಂಗಳಲ್ಲಿ"
"ಅಷ್ಟು ದಿನ ನಾನು ಕಾಯಬೇಕಾ...?"
"ಹೌದು ರಾಜಾ, ನಂತರ ನಾನು ಪ್ರತಿ ದಿನ ನಿನ್ನನ್ನು ಇದೆ ರೀತಿ ಮುದ್ದಿಸುತ್ತೇನೆ, ಆವಾಗ ಸವತಿ ನಿನಗೆ ಪೈಪೋಟಿ ಕೊಡಲು ಇರುವುದಿಲ್ಲ" ಎಂದು ಕಳುಹಿಸಿದೆ.
"ಪ್ರಾಮಿಸ್"
"ಪ್ರಾಮಿಸ್ ರಾಜಾ...ಏನು ಆಸೆ ಆಗ್ತಾ ಇದೆಯಾ ಆ ಸುಖವನ್ನು ಬೇಗ ಅನುಭವಿಸಲು...?"
"ನೀನು ಆಸೆ ಅಗ್ತದೆಯಾ , ಅಗ್ತದೆಯಾ ..? ಕೇಳ್ತಾ ನನ್ನ ಆಸೆ ಹೆಚ್ಚಿಸುತ್ತಾ ಇದ್ದೀಯ ..." ಎನ್ನುವ ರಿಪ್ಲೈ ಬಂತು.
ಅವಳ ಕಲ್ಪನೆಯಲ್ಲಿ ತೇಲಿ ಹೋದ ನಾನು "ನಿನ್ನ ತಬ್ಬಿ ಕೊಳ್ಳಲಾ...?"
"ನಾನು ಯಾವತ್ತಾದ್ರು ಬೇಡ ಎಂದಿದ್ದೆನಾ..? ನೀನೆ ಬೇಡ ಹೇಳಿ ದೊರ ಹೋಗ್ತಾ ಇರ್ತೀಯ.. ತಬ್ಕೋ ..." ಎಂದಳು.
ಎದೆಯ ಮೇಲಿದ್ದ ದಿಂಬನ್ನು ಗಟ್ಟಿಯಾಗಿ ತಬ್ಬಿಕ್ಕೊಂಡೆ.

ಮತ್ತೆ ಅವಳ ಕಲ್ಪನೆಯಲ್ಲಿ ಚೆನ್ನೈನ ಅವಳ ಗೆಸ್ಟ್ ರೂಂ ಸೇರಿದೆ.

"ಕುತ್ತಿಗೆಯಲ್ಲಿದ್ದ ನಿನ್ನ ಚೈನ್ ಎಲ್ಲಿ ಹೋಯ್ತು...?ನನಗೆ ಇವತ್ತು ಕಾಣ್ತಾ ಇಲ್ಲ" ಎಂದಳು ನನ್ನನ್ನು ವೆರ್ಚುವಲ್ ಆಗಿ ತಬ್ಬಿಕೊಂಡ ಅವಳು.
"ಅಲ್ಲೇ ಇದೆ ಅಲ್ಲ, ನಿನಗೆ ಆ ಎರಡು ಮಿಲ್ಲಿ ಮೀಟರ್ ಜಾಗ ಬಿಟ್ಟು ಕೆಳಗೆ ಜಾರಿರ ಬಹುದು" ಎಂದು ಟೈಪಿಸಿದೆ. ಕುತ್ತಿಗೆಯ ಎಡೆಗೆ ಸೇರಿದ ಚೈನ್ ಅನ್ನು ಎದೆ ಮೇಲೆ ಮಾಡುತ್ತಾ.
"ಟೂ ರೋಮಾಂಟಿಕ್ ಮಾತಾಡ್ತಾ ಇದ್ದೀಯ, ಈ ಡೈಲಾಗ್ ತುಂಬಾ ಇಷ್ಟ ಆಯಿತು" ಎನ್ನುವ ರಿಪ್ಲೈ ಬಂತು.
"ನಿನ್ನ ಪ್ರೀತಿ ನನ್ನನ್ನು ಇಷ್ಟು ರೋಮಾಂಟಿಕ್ ಮಾಡಿದ್ದು, ವಿರಹಿ ಕವಿಯಿಂದ ರೋಮಾಂಟಿಕ್ ನೋವೆಲಿಸ್ಟ್ ಆದೆ ನಾನು" ಎಂದು ಟೈಪಿಸಿದೆ.
"ನೀನು ಬರೆಯುವ ಮೊದಲ ನೊವೆಲ್ ನಲ್ಲಿ ಈ ಡೈಲಾಗ್ ಹಾಕಲೇ ಬೇಕು"
"ಬರದಾಗ ಅಲ್ಲ ಹಾಕ್ತೇನೆ ಬಿಡು" ಎಂದು ಉತ್ತರ ಕಳುಹಿಸಿದೆ.

"ಹೌದು ಒಂದು ಮಿಲ್ಲಿ ಮೀಟರ್ ಜಾಗವನ್ನು ನಾನು ಯಾರಿಗೆ ಆಕ್ರಮಿಸಲು ಬಿಡುವುದಿಲ್ಲ, ಅದು ನನ್ನ ಸ್ವಂತದ್ದು" ಎನ್ನುವ ಮೆಸ್ಸೇಜ್ ಬಂತು ಸಲ್ಪ ಸಮಯದಲ್ಲೇ.
"ಇಲ್ಲ ಕಣೇ ಯಾರಿಗೂ ಕೊಡಲ್ಲಾ, ಅದು ನಿನ್ನ ಸ್ವಂತದ್ದು"
"ಲವ್ ಯು ಡಂಬು, ನಿನ್ನ ಕಾಯ್ತಾ ಇರ್ತೇನೆ ಮೂರು ತಿಂಗಳು ಬಿಡು ನೂರು ಜನ್ಮ ಆದ್ರೂ ನಾನು ನಿನ್ನನ್ನು ಕಾಯ್ತಾ ಇರ್ತೇನೆ, ನಿನ್ನ ಎಲ್ಲ ಆಸೆ ನೆರವೇರಲಿ, ಡ್ರೀಮ್ ಟೆಕ್ ನಲ್ಲಿ ಅದೇನೋ ನೀನು ಸಾಧಿಸಬೇಕು ಅಂತಿದ್ದಿಯಲ್ಲ, ಅದನ್ನು ಮಾಡು, ನಂತರ ನನ್ನನ್ನು ಮುದ್ದಿಸುವಿಯಂತೆ" ಎನ್ನುವ ರಿಪ್ಲೈ ಬಂತು.
"ನೈನ್ ಟು ಸಿಕ್ಸ್ ಡ್ರೀಮ್ ಟೆಕ್ , ಸಂಜೆ ಸಿಕ್ಸ್ ಟು ಮಾರ್ನಿಂಗ್ ನೈನ್ ತನಕ ಬರಿ ಡ್ರೀಮ್-ಆಕೃತಿ; ಬರೇ ನಿನ್ನ ಡ್ರೀಮ್ಸ್" ಎಂದು ರಿಪ್ಲೈ ಕಳುಹಿಸಿದೆ.
"ಲವ್ ಯು ಡಂಬು.."
"ಐ ಟು ಕಣೇ"

ಇಬ್ಬರು ಕನಸಲ್ಲಿ ತೇಲಿಹೋದೆವು. ಅಲ್ಲಿ ಒಂದಾದೆವು. ಹಗಲಿನ ಹೊರಗಿನ ಕಿರಣ ಒಳಗೆ ಬರಲು ರೂಂ ನ ನೀಲಿ ಗೋಡೆಯ ಮೇಲೆ ಓಡುತಿದ್ದ ಚಲನಚಿತ್ರ ತನ್ನ ಷೋ ಮುಗಿಸಿ ಪೆಟ್ಟಿಗೆ ಸೇರಿತು.

 

 ಮುಂದಿನ ಸಿಪ್

 


Rating
No votes yet