ಆಂಡ್ರಾಯ್ಡ್ ನಲ್ಲಿ ಕನ್ನಡ.. ಸಂಪದದಲ್ಲಿನ ತೊಂದರೆ ಬಗೆಹರಿಸಿ.

ಆಂಡ್ರಾಯ್ಡ್ ನಲ್ಲಿ ಕನ್ನಡ.. ಸಂಪದದಲ್ಲಿನ ತೊಂದರೆ ಬಗೆಹರಿಸಿ.

ಕೆಲ ತಿಂಗಳ ಹಿಂದೆ ಒಂದು ಆಂಡ್ರಾಯ್ಡ್ ಮೊಬೈಲ್ ತಗೊಂಡೆ. ತಗೊಂಡ ಮೊದಲ ದಿನವೇ ನನಗೆ ಕೆಲವು ಆಶ್ಚರ್ಯಗಳು ಕಾದಿದ್ವು! ಅವುಗಳಲ್ಲಿ ಒಂದು ಕನ್ನಡವನ್ನು ನನ್ನ ( ಅರ್ಥಾತ್ ಆಂಡ್ರಾಯ್ಡ್) ಮೊಬೈಲ್ನಲ್ಲಿ ಓದಕ್ಕೇ ಆಗಲಿ ಅತ್ವ ಬರಿಯಕ್ಕೇ ಆಗಲಿ ಆಗಲ್ಲ ಅನ್ನುವುದು. 


ಅಂದಿನಿಂದ ಕನ್ನಡವನ್ನು ಆಂಡ್ರಾಯ್ಡ್ ನಲ್ಲಿ ನೋಡಕ್ಕೆ ಅತ್ವ ಬರಿಯಕ್ಕೇ ಯಾಕೆ ಆಗ್ತಾ ಇಲ್ಲ, ಮತ್ತು ಕನ್ನಡವನ್ನು ಆಂಡ್ರಾಯ್ಡ್ ನಲ್ಲಿ ತರುವ ಯಾವ್ಯಾವ್ ಪ್ರಯತ್ನಗಳು ನಡಿತಾ ಇದವೆ ಅನ್ನೋ ಬಗ್ಗೆ ದಿನವೂ ಒಂದು ಕಣ್ಣಿಟ್ಟಿರುತ್ತಿದ್ದೆ. ಕೆಲ ವಾರಗಳ ಹಿಂದೆ  ಒಂದು ಅಪ್ಲಿಕೇಶನ್ ಕಣ್ಣಿಗೆ ಬಿತ್ತು ಮತ್ತು ಅವತ್ತಿಂದ ನಾನು ಕನ್ನಡವನ್ನು ನನ್ನ ಮೊಬೈಲ್ನಲ್ಲಿ ಓದ್ತಾ ಇದೀನಿ ಜೊತೆಗೆ ಕನ್ನಡದಲ್ಲೇ ಕಾಮೆಣ್ಟ್ ಹಾಕ್ತಾ ಇದೀನಿ.


ಮೊನ್ನೆ ನನ್ನ ಸೇಹಿತನ ಜೊತೆ ಮಾತಡ್ತಾ ಇದ್ದಾಗ, ಕನ್ನಡವನ್ನು ತಮ್ಮ ಮೊಬೈಲ್ನಲ್ಲಿ ಓದಲು, ಬರೆಯಲು ಆಸಕ್ತಿ ಇರೋವ್ರು ಬಹಳ ಜನ ಇದಾರೆ ಮತ್ತು ಅವರಿಗೆ ಹೇಗೆ ಕನ್ನಡ ತಮ್ಮ ಮೊಬೈಲ್ನಲ್ಲಿ ಕಾಣುವಂತೆ ಮಾಡುವುದು ಅಂತ ತಿಳಿಯದು ಅನ್ನಿಸಿ ... ಕೆಲವರಿಗಾದ್ರೂ ವಿಶಯ ಮುಟ್ಟಿಸೋಣ ಅಂತ ಒಂದು ಬ್ಲಾಗ್ ಬರೆದೆ. ..ನನ್ ಮೊಬೈಲ್ನಲ್ಲೇ!!. ಮತ್ತು ನಾನು ಆ ಬ್ಲಾಗ್ ಬರೆದಿದ್ದು ಸಂಪದಕ್ಕಾಗಿಯೇ!


ಸರಿ ನಾನೇನೋ ಟೈಪ್ ಮಾಡಿದೆ ಆದ್ರೆ ಅದನ್ನ ಪೋಸ್ತ್ ಮಾಡ್ಬೇಕಲ್ವಾ.. ಆಗ ಗೊತ್ತಾಯ್ತು ತೊಂದ್ರೆ ಏನು ಅಂತ. ಸಂಪದ ದಲ್ಲಿನ ಬರಹ ಸೇರಿಸುವ ಭಾಗ (body) ಯಾವುದೇ ಆಂಡ್ರಾಯ್ಡ್ ನ ಬ್ರೊಸೆರ್ ಅನ್ನು ಸಪ್ಪೋರ್ಟ್ ಮಾಡಲ್ಲ ಅಂತ.


ಆಂಡ್ರಾಯ್ಡ್ ನ ಡಿಫಾಲ್ಟ್ ಬ್ರೊಸೆರ್ ನಲ್ಲಿ ಯೇ ಆಗಲಿ ಅತ್ವ ಡಾಲ್ಫಿನ್ ನಲ್ಲೇ ಆಗಲಿ ಬೇರೆ ಕಡೆ ಕನ್ನಡ ಟೈಪು ಮಾಡಿದ್ದನ್ನು ಪೇಸ್ಟ್ ಮಾಡಕ್ಕೆ ಆಗಲ್ಲ. ನೇರವಾಗಿ ಟೈಪು ಮಾಡುವ ಸೌಲಭ್ಯವೂ ಎನೇಬಲ್ ಆಗಲ್ಲ. ಇವೆರಡೂ ಯುನಿಕೋಡ್ ಸಪೋರ್ಟ್ ಮಾಡ್ತವೆ.
ಒಪೆರ ಮಿನಿ ಬ್ರೌಸರ್ನಲ್ಲಂತೂ ಯುನಿಕೋಡ್ ಸಪೋರ್ಟ್ ಇಲ್ವೇ ಇಲ್ಲ. ಹಾಗಾಗಿ ಮೊಬೈಲ್ ನಲ್ಲಿ ಯುನಿಕೋಡ್ ಫಾಂಟ್ಸ್ ಇದ್ರೂ ಎಲ್ಲವೂ ಅಲ್ಲಿ ಚೌಕಗಳೇ. ಬರಿ ಚೌಕ ಟೈಪು  ಮಾಡಬೇಕು ಅಷ್ಟೆ!!


ಹಾಗಾಗಿ ಸಧ್ಯಕ್ಕಂತೂ ಸಮ್ಪದದಲ್ಲಿ ಮೊಬೈಲ್ ಬ್ಲಾಗಿಂಗ್ ಅಸಾಧ್ಯ. ಇದು ನನ್ನ ಅನುಭವ.   


ಆದರೆ ಮೊಬೈಲ್ನಿಂದ ಬ್ಲಾಗ್ನ ಟೈಟ್ಲು ಬರಿಯಕ್ಕೆ ಅತ್ವ ಬೇರೆ ಬರಹಗಳಿಗೆ ಕಾಮೆಂಟ್ಸ್ ಹಾಕಕ್ಕೆ ಯಾವುದೇ ತೊಂದರೆ ಇಲ್ಲ. ಹೊಸ ಬರಹ ಸೇರಿಸುವುದೇ ತೊಂದರೆ.


ಅಂದ ಹಾಗ ನಿಮ್ಮತ್ರ  flip fants ಸೌಲಭ್ಯ ಇರೋ  ಆಂಡ್ರಾಯ್ಡ್ ಇದ್ರೆ ನಿಮ್ಮ ಮೊಬೈಲ್ನಲ್ಲಿ ಕನ್ನಡ ಓದಲು ಅತ್ವ ಬರೆಯಲು ಇಇ ಕೆಳಗಿನ ಕೊಂಡಿ ಓದಿ.


http://savithru.wordpress.com/2011/10/06/%e0%b2%ae%e0%b3%8a%e0%b2%ac%e0%b3%88%e0%b2%b2%e0%b3%8d%e0%b2%a8%e0%b2%bf%e0%b2%82%e0%b2%a6-%e0%b2%ac%e0%b2%b0%e0%b3%86%e0%b2%a6-%e0%b2%ae%e0%b3%8a%e0%b2%a6%e0%b2%b2-%e0%b2%ac%e0%b3%8d%e0%b2%b2/


ಇದು ಸಂಪದಕ್ಕೆಂದೇ ಮೂಲತ ಬರೆದಿದ್ರೂ ಇಲ್ಲಿ ಪೋಸ್ಟ್ ಮಾಡಲು ಆಗದ ಕಾರಣ ನನ್ನ ಸ್ವಂತ ಬ್ಲಾಗ್ನಲ್ಲಿ ಹಾಕಿದ್ದೇ.

Rating
No votes yet

Comments