ಆಂಧ್ರದಲ್ಲಿ, "ಬೀರು" ಕುಡಿದು "ಚಿಕನ್ ಕಬಾಬ್" ತಿನ್ನೋ ಜೋಡೆತ್ತುಗಳು!

ಆಂಧ್ರದಲ್ಲಿ, "ಬೀರು" ಕುಡಿದು "ಚಿಕನ್ ಕಬಾಬ್" ತಿನ್ನೋ ಜೋಡೆತ್ತುಗಳು!

ಆಂಧ್ರಪ್ರದೇಶದ ಒಂದು ಹಳ್ಳಿಯಲ್ಲಿ ಸರಕು ಸಾಗಣೆಯ ಗಾಡಿಯನ್ನು ಎಳೆಯುವ ಎತ್ತುಗಳಿಗೆ "ಬೀರು" ಕುಡಿಸಿ "ಚಿಕನ್ ಕಬಾಬ್" ತಿನ್ನಿಸುವ ಪರಿಪಾಠ ಇಟ್ಟುಕೊಂಡಿರುವ ಸುದ್ದಿ ನಿನ್ನೆ ಟಿವಿ೯ ವಾಹಿನಿಯಲ್ಲಿ ಬಿತ್ತರಗೊಂಡಿದೆ. ಆ ಜೋಡೆತ್ತುಗಳು ಹಸಿರು ಹುಲ್ಲು, ಹಿಂಡಿ, ಇತ್ಯಾದಿಗಳನ್ನು ಸೇವಿಸುವುದೇ ಇಲ್ಲವಂತೆ. "ಬೀರು" ಕುಡಿದು ಅವುಗಳ ದೇಹದ ಉಷ್ಣ ಜಾಸ್ತಿಯಾದರೆ, ಭರ್ಜರಿ ಎಳನೀರು ಸೇವನೆ ಮಾಡಿಸುತ್ತಾರಂತೆ.

ಸಸ್ಯಾಹಾರಿ ಗೋವನ್ನು ಮಾಂಸಾಹಾರಿಯಾಗಿಸಿದರು ಎಂದು ಡಾ. ನಾ. ಸೋಮೇಶ್ವರರು  ಈಗಷ್ಟೇ ಇನ್ನೊಂದು ಬರಹದ ಪ್ರತಿಕ್ರಿಯೆಯಲ್ಲಿ ಬರೆದಿರುವುದನ್ನು ಓದಿದಾಗ, ಇದರ ನೆನಪಾಯ್ತು.

 

- ಆತ್ರಾಡಿ ಸುರೇಶ ಹೆಗ್ಡೆ

 

Rating
No votes yet

Comments