ಆಕಿ ನನ್ನಾಕಿ...
ತಾನು ತಂಗಳು ತಿಂದು
ಬಿಸಿ ಅನ್ನ ತಿನ್ನಿಸಿದಾಕಿ,
ಆಕಿ ನನ್ನಾಕಿ;
ಬಿಸಿ ಅನ್ನ ತಿನ್ನಿಸಿದಾಕಿ,
ಆಕಿ ನನ್ನಾಕಿ;
ತನ್ನ ಬದುಕ ನಮಗಾಗಿ ಮೀಸಲಿಟ್ಟು
ಪ್ರೀತಿಯ ಧಾರೆಯೆರೆದಾಕಿ
ಆಕಿ ನನ್ನಾಕಿ;
ತನಗೆ ಚಳಿಯಾದರೆ
ನನಗೆ ಚಾದರ ಹೊದಿಸಿದಾಕಿ
ಆಕಿ ನನ್ನಾಕಿ;
ಸಕಲ ವಿಕೋಪಗಳ
ಧರೆಯ ಹಾಗೆ
ಸಹಿಸಿಕೊಂಡಾಕಿ
ಕ್ಷಮೆಯಾ ಧರಿತ್ರಿ
ಆಕಿ ನನ್ನಾಕಿ;
ಕೈಯ ಹಿಡಿದು
ಅಕ್ಷರ ತಿದ್ದಿ
ತಲೆಯಲಿ ಬುದ್ಧಿ ಮೂಡಿಸಿದಾಕಿ
ಆಕಿ ನನ್ನಾಕಿ;
ನಿಸ್ವಾರ್ಥ ಒಲುಮೆಯ
ಜಗತ್ತಿಗೇ ತೋರಿಸಿದಾಕಿ
ಆಕಿ ನನ್ನಾಕಿ
ನನ್ನ ಹಡೆದಾಕಿ;
---ಅಮರ್
Rating