ಆಕೆಯ ನಗುವೆಂಬ ಭಾಷೆ
ಆತನ ಪರಿಚಯ ಹೊಸತು. ಉನ್ನತ ಹುದ್ದೆ,ಉನ್ನತ ವಿಚಾರಧಾರೆ,ಆತನ ಜ್ಞಾನ,ನಡೆ,ನುಡಿ,ಧ್ವನಿ,ವ್ಯಕ್ತಿತ್ವ,ನಡವಳಿಕೆ ಎಲ್ಲವೂ ಆಕೆಯನ್ನು ಆಕರ್ಷಿಸಿದ್ದವು.
ಆಕೆ ಮೌನಿ,ಮಾತು ಕಡಿಮೆ.
ಆಕೆಯ ಬಗ್ಗೆ ಆತ ಹೇಳಿದ್ದು...........
ನನ್ನನ್ನು ಆಕರ್ಷಿಸಿದ್ದು ಆಕೆಯ ನಗು.ಆಕೆಯ ಮುಗುಳ್ನಗು ಪ್ರೇಮ,ಪ್ರೀತಿಯ ಸಂಕೇತ.ಯಾರನ್ನೇ ಆಗಲಿ ಹಿಡಿದು ನಿಲ್ಲಿಸಬಹುದಾದ ಗುರುತ್ವಾಕರ್ಷಣೆ ಆ ಮುಗುಳ್ನಗುವಿನಲ್ಲಿ.ಆಕೆಯ ಕಿಲ ಕಿಲ ನಗುವಿನ ಏರಿಳಿತ ಮಧುರ£ಗಾನದಂತಿದ್ದು ಆಕೆಯ ಮನೋಭಾವನೆಗಳನ್ನು ನನ್ನೆಡೆಗೆ ತಲುಪಿಸುತ್ತಿದ್ದುದಂತೂ ಸತ್ಯ.ಆಕೆಯೊಡನೆ ಮತನಾಡುವಾಗ ,ಫೋನಿನಲ್ಲಿ ಸಂಬಾಷಿಸುವಾಗ ನಿನ್ನ ನಗೆಗೆ ನಾ ಮನಸೋತೆ,ನಿನ್ನ ನಗು ನನ್ನ ಮೋಡಿಮಾಡಿತು ಎಂದು ನೇರವಾಗಿ ತಿಳಿಸಿದ್ದೆ.ಆಕೆಯ ನಗುವಿನ ಭಾಷೆ ನನಗರ್ಥವಾಗಿತ್ತು.ನಿನ್ನ ಕಂಡರೆ ನನಗಿಷ್ಟ ಎಂದಿದ್ದೆ.ಕಿಲ ಕಿಲ ನಕ್ಕಳಾಕೆ.ನಿನಗೆ? ನೀನು ನನ್ನ ಇಷ್ಟಪಡುವೆಯಾ?ಎಂದಾಗ ಮಾತಿಲ್ಲ.ಬದಲಾದ ಧ್ವನಿತರಂಗಗಳಿಂದ ಕೂಡಿದ ನಗೆಯೇ ಅದಕ್ಕುತ್ತರ.ಆ ನಗುವು ತನ್ನ ಸಮ್ಮತಿಯನ್ನು ಎಷ್ಟುಚೆನ್ನಾಗಿ ನನಗೆ ತಿಳಿಸುತ್ತಿತ್ತು.ಯಾವುದೇ ವಿಚಾರಧಾರೆಗಳ ನಡುವೆ ಕೆಲ ಸಂಗತಿಗಳನ್ನು ಒಪ್ಫ್ಪಿದಾಗ ಆಕೆಯ ನಗು ಲೋಕಾಭಿರಾಮವಾಗಿ ,ಶಬ್ದತಾರಕಕ್ಕೇರಿ,ನನ್ನ ನಗುವಿನೊಡನೆ ಲಯಬದ್ದವಾಗಿ ಬೆರೆಯುತ್ತಿತ್ತು.
ಆಕೆಯ ಬಗೆಗೆ ಮೆಚ್ಚುಗೆಯ ಮಾತನ್ನಾಡಿದಾಗ,ಆಕೆಯನ್ನು ಸ್ವಲ್ಪ ಕಾಡಿದಾಗ ಕೆನ್ನೆ ರಂಗೇರಿ ,ಸಂತೋಷದಿಂದ ಆಕೆ ನಗತೊಡಗಿದಾಗ ಆ ಸುಂದರ ದಂತಪಂಕ್ತಿಗಳು, ಕೆಂಪನೆಯ ಸುಂದರ ತುಟಿಗಳು,ಆಹಾ !!!
ಸ್ವಲ್ಪ ಆಳವಾದ,ಗಾಢವಾದ ಪ್ರಶ್ನೆಗೆ ಉತ್ತರವಾಗಿ ಯಾವುದೇ ನುಡಿಗಳಿಲ್ಲದೆ ತಗ್ಗು ಸ್ವರದಲ್ಲಿ ಮಾದಕತೆಯನ್ನು ಬೆರೆಸಿದ ನಗುವು ಸಮ್ಮತಿಯನ್ನು ಸೂಚಿಸುತ್ತಾ ನನ್ನ ಎದೆಯನ್ನು ಹೊಕ್ಕ ಬಾಣದಂತಿರುತ್ತಿದ್ದವು.
ಆಕೆಗೆ ನಾ ಮನಸೋತೆ.ಆಕೆ ನಗುವಿನಲ್ಲೇ ತಾನು ನನಗೆ ಮನಸೋತದ್ದನ್ನು ತಿಳಿಸಿದ್ದು, ಆಕೆಯ ಒಡನಾಟ,ಮಾತು,ನಗು,ಪ್ರೀತಿ,ಸನಿಹಕ್ಕಾಗಿ ಮನಸ್ಸು,ದೇಹ ತಪಿಸುತ್ತದೆ.
ಈಗ್ ಆಕೆ ನನ್ನ ಗೆಳತಿ.ಮಾತಿನ ಮಲ್ಲಿ.
Rating
Comments
ಉ: ಆಕೆಯ ನಗುವೆಂಬ ಭಾಷೆ