ಆಗುಂಬೆ/ಶ್ರಂಗೇರಿ/ಹನುಮನ ಗುಂಡಿ ಪ್ರವಾಸ

ಆಗುಂಬೆ/ಶ್ರಂಗೇರಿ/ಹನುಮನ ಗುಂಡಿ ಪ್ರವಾಸ

ಮಲ್ಲಿಕಾ ಮಂದಿರದಲ್ಲಿ ತಿಂಡಿ, ಕೇವಲ ಇಡ್ಲಿಯ ಬಣ್ಣ ಹೋಟೆಲಿನ ಹೆಸರಿಗೆ ಹೋಲುತ್ತಿತ್ತು. ಹೋಟೆಲ್ ಮಾಣಿಗೆ ಕುದುರೆಮುಖಕ್ಕೆ ಹೋಗುವ ದಾರಿ ಕೇಳಿದೆ,
"ಸೀದಾ, ಲೆಫ್ಟ್, ರೈಟ್, ಸೀದಾ". ಅಂದ.
ಹತ್ತು-ಹದಿನೈದು ಕಿಲೋಮೀಟರ್ ಹೋಗುತ್ತಲೇ ಮತ್ತೆ ಪೋಲೀಸರ ಕಾಟ ಶುರುವಾಯಿತು.
ಪೋಲೀಸಪ್ಪ -
ಎಲ್ಲಿಗೆ?
ನನಗೆ ಹಿಂದಿನ ದಿನ ಇವರಿಂದ ಸೂರ್ಯಾಸ್ತ ಮಿಸ್ಸ್ ಆಗಿದ್ದರಿಂದಲೋ ಏನೋ,
ನಾವೇನು ನಕ್ಸಲೈಟ್ಸ್ ತರಾ ಕಾಣ್ತಿವೇನ್ರಿ? ಎಂದು ಕೇಳಬೇಕೆಂದು ಸಿಟ್ಟಿನಿಂದ ಸ್ವಲ್ಪ ಎದ್ದು ಬಾಯಿ ತೆರೆದೆ, ಪೋಲೀಸಪ್ಪ ನನ್ನ ಬೈಕಿನ ಬಳಿ ಬಂದರು, ಭಯವಾಗಿ ಸೀಟಿನ ಮೇಲೆ ಕುಳಿತೆ ಬಾಯಿ ತಂತಾನೆ ಮುಚ್ಚಿತು.
"ನೀವು ಕುದುರೆಮುಖಕ್ಕೆ ಹೋಗುವುದಾದರೆ ಚೀಟಿ ಏನು ಬ್ಯಾಡ, ವಾಪಸ್ ಹೋಗುವಾಗ ತಿಳಿಸಿ ಹೋಗಿ".

ಸರಿ ಎಂದು ಗಾಡಿ ಬಿಟ್ಟೆ.

ಬೇಗಾರು ಕ್ರಾಸ್ ತಲುಪಿತ್ತಿದಂತೆಯೆ ನನ್ನ ಗೆಳೆಯ ಚೆಂಗನೆ ನೆಗೆದು ರೋಡ್ ಸೈಡ್ನಲ್ಲಿ ಇದ್ದ ಬೆಂಚಿನ ಮೇಲೆ ಹತ್ತಿ ಫೋಟೊ ತೆಗೆಯಹತ್ತಿದ. ನಾನು ಸಿಗರೇಟ್ ಹುಡುಕುತ್ತಾ ಹೊರಟೆ.
ಅಲ್ಲಿಂದ ಮುಂದೆ ರಸ್ತೆ ಅಷ್ಟೊಂದು ಚೆನ್ನಾಗಿದ್ದರೂ, ಬೈಕು ಇಪ್ಪತ್ತರ ಮೇಲೆ ದಾಟಲಿಲ್ಲ, ಅಂತಹ ಸುಂದರ ಬೆಟ್ಟದಸಾಲನ್ನು ಸವಿಯುತ್ತಾ ಅಲ್ಲಿ ಇಲ್ಲಿ ಎಲ್ಲೆಲ್ಲೂ ಫೋಟೊ ತೆಗೆಯುತ್ತಾ (ಮತ್ತೆ ನೆಕ್ಸ್ಟ್ ಟೈಂ ಇದೆಲ್ಲ ಸಿಗಲಿಲ್ಲಾಂದ್ರೆ!?) ರಸ್ತೆ ಬದಿಯ ಬೋರ್ಡುಗಳನ್ನೊಮ್ಮೆ ರಸ್ತೆ ಮೇಲೆ ಹಾವು ಕಾಣಿಸುತ್ತಾವೇನೊ ಎಂಬ ಆಸೆಯಿಂದ ರಸ್ತೆಯನ್ನೊಮ್ಮೆ ನೊಡುತ್ತಾ ಕುದುರೆಮುಖ ತಲುಪಿದೆವು.

ಕುದುರೆಮುಖ ಕಂಪೆನಿಯ ಗೇಟಿನ ಎದುರೇ "ರವೀ ಹೋಟೆಲ್"ನಲ್ಲಿ ಪರೋಟ ತಿನ್ನುತ್ತಾ ಕೇಳಿದೆವು,

"ಇಲ್ಲಿ ಏನೇನು ನೋಡಬಹುದು ಸಾರ್?"

"ಇಲ್ಲೇನಿದೆ ರೀ ನೋಡಕ್ಕೆ, ಎಲ್ಲಾ ಮುಗಿದೋಯ್ತು"
"ಬೇಕಾದ್ರೆ ಆ ಪಾರ್ಕೊಂದು, ಡ್ಯಾಮೊಂದು ನೋಡ್ಕೊಂಡ್ ಹೋಗಿ ಅಂದರು"

ಪಾರ್ಕಿನ ದಿಕ್ಕಿನಡೆಗೆ ಗಾಡಿ ಓಡಿಸಿದೆ.
ಅಷ್ಟು ದೊಡ್ಡ ಪಾರ್ಕಿನಲ್ಲಿ ಮನುಶ್ಯರು (?) ಅಂತಾ ಇದ್ದದ್ದು ನಾವಿಬ್ಬರೆ. ಅವತ್ತು ಶನಿವಾರ ಬೇರೆ, (ಬೆಂಗಳೂರಿನ ಫೋರಮ್ಮನ್ನು ಅಪ್ಪಿತಪ್ಪಿಯೂ ನೆನಪಿಸಿ ಕೊಳ್ಳಲಿಲ್ಲ)

ಮುಂದುವರೆಸುತ್ತೇನೆ..

Rating
No votes yet