ಆಚೆಯ ದಡ

ಆಚೆಯ ದಡ

ಈ ವೈತರಣೀ ನದಿಯಾಚೆಗೆ
ಏನಿದೆಯೋ ಕಾಣೆ,
ಸಿಕ್ಕಿಲ್ಲ ನನಗೆ ಇನ್ನು
ಅಲ್ಲಿಗೆ ಹೋಗುವ ಛಾನ್ಸು.

ನನ್ನಜ್ಜನ ಪ್ರಕಾರ
ಆ ಕಡೆ ಇರಬಹುದು
ನಾಕ - ನರಕ

ನನ್ನಜ್ಜಿಯೂ ಹೇಳುತ್ತಿದ್ದಳು
ನದಿಯಾಚೆ
ನಾಕ ಬಲಕ್ಕೆ
ನರಕ ಎಡಕ್ಕೆ

ಅಂದ ಹಾಗೆ
ಒಂದೇ ದೇಹದ ಈ ಎರಡು
ಕೈಗಳಲ್ಲಿ
ಎಡಗೈ ಅಸ್ಪೃಷ್ಯವಾದುದೇಕೋ?

ನನ್ನಂತೆ ಇರಬಹುದು
ಕೆಲವರಿಗಾದರೂ ಕುತೂಹಲ
ತಣಿಸಲು ಒಮ್ಮೆಯಾದರೂ
ಹೋಗಿ ಬರಬೇಕೆಂದುಕೊಂಡಿದ್ದೇನೆ
ನದಿಯಾಚೆಗೆ

ಹೋದವರಾರೂ ತಿರುಗಿ ಬಂದಿಲ್ಲ
ಎನ್ನುವ ಮಾತೂ ಇದೆ
ಆದರೆ ಇದೆಲ್ಲ ಇವರಿಗೆ ತಿಳಿದುದಾರೂ ಹೇಗೋ?!

Rating
No votes yet

Comments