ಆತ್ಮಚಿಂತನೆ..
೧/೧/೨೦೧೦
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ಶ್ರಿ ಹರಿಃ ಓಂ ಶ್ರಿ ಗುರುಭ್ಯೊನಮಃ ಶ್ರಿ ರಾಮ್ ಜೈ ರಾಮ್ ಜೈ ಜೈ ರಾಮ್.
ಮನುಜ ಕುಲದ ಲಾಭ ಆವುದು? ಭವಹರಣ.
ನಾವೆಲ್ಲರು ಮಾನವ ಜನುಮಕ್ಕೆ ಬಂದುದು ನಮ್ಮ ಜೀವನದ ಸರ್ಥಕತೆಯನ್ನು ಫದೆಯುವದೇ ಆಗಿದೆ. ನಾವು ವೇದ, ಉಪನಿಶದ್, ಭಗವದ್ಗೀತಾ, ಶಾಸ್ತ್ರಗಳ ಸಹಾಯದಿಂದ, ಸದ್ಗುರುಗಳ ಉಪದೇಶದಿಂದ ಸತ್ಕರ್ಯಗಳನ್ನು, ಪರೊಪಕರ್ಯಗಳನ್ನು ಮಾಡುತ್ತ ಪ್ರಪಂಚವನ್ನು ಮಾಡಿ ಮನಸ್ಸಿನಲ್ಲಿನ ಅಹಂಕಾರವನ್ನು ಬಿಟ್ಟು ವ್ಯವಹಾರವನ್ನು ಮಾಡಿದರೆ ನಮಗೆ ಯಾವ ಪಾಪವು ತಟ್ಟುವುದಿಲ್ಲ. ನಂತರಾ ನಿಜವಾದ ನಾನು ಯಾರಿದ್ದೇನೆ ಯೆಂದು ತಿಳಿಯಲು ಸದ್ಗುರುವಿಗೆ ಶ್ರದ್ಧಾ ಭಕ್ತಿಇಂದ ವಿನಯದಿಂದಲೆ ನಮಿಸಿ ಶ್ರವಣದಿಂದಲೆ ಕೇಳಿ ತಿಳಿದಾಗ ನಾನೇ ಸಚ್ಚಿದಾನಂದ ಪರಬ್ರಹ್ಮ ಆಗಿರುವೆ ಯೆಂದು ಮನಸ್ಸಿನಲ್ಲಿ ತಿಳಿದು ವ್ಯವಹರದಲ್ಲಿ ಎಲ್ಲರಂತೆಯೇ ನಾಟಕದಲ್ಲಿ ಅಭಿನಯಿಸುವಂತೆ ನಟಿಸಿ, ಸುಖಃ - ದುಃಖದಲ್ಲಿ ಸಮನಾಗಿಎಇರುವುದೇ ನಿಜವಾದ ಆನಂದವಾಗಿದೆ. ಇದೆ ನಿಜವಾದ ನಮ್ಮ ಸ್ವರೂಪದ ಆನಂದವಗಿದೆ.
ನಾವು ಪ್ರತಿದಿನಾ ೩ ಅವಸ್ಥೆಗಳನ್ನು ಪದೆಯುತ್ತೇವೆ. ಅವು ಯಾವುವೆಂದರೆ ಜಾಗ್ರುತ್, ಸ್ವಪ್ನ, ಸುಶುಪ್ತಿ. ಜಾಗ್ರತ್ದಲ್ಲಿ ನಮ್ಮ ಎಲ್ಲಾ ಇಂದ್ರಿಯಗಳು [೧೦] ಸರಿಯಾಗಿ ಚನ್ನಾಗಿ ಕೆಲಸ ಮಾಡುತ್ತವೆ. ಸ್ವಪ್ನದಲ್ಲಿ ಎಲ್ಲ ಇಂದ್ರಿಯಗಳು ಮನಸ್ಸಿನಲ್ಲಿ ಲಯವಾಗಿದ್ದು, ಇಲ್ಲಿ ಮನಸ್ಸು ಒಂದೆ ಕೆಲಸ ಮಡುತ್ತದೆ. ನಂತರ ಸುಶುಪ್ತಿಯಲ್ಲಿ(ಗಾಢನಿದ್ರೆಯಲ್ಲಿ} ನಮ್ಮ ಯಾವ ಇಂದ್ರಿಯಗಳು ಕೆಲಸ ಮಾಡದೆ, ತಮ್ಮ ಮೂಲಸ್ಥಾನವಾದ ಅವಿದ್ಯೆಯಲ್ಲಿ ಲಯವಾಗಿದ್ದುದರಿಂದ ಕೇವಲ ಇಲ್ಲಿ ಅವಿದ್ಯೆ ಒಂದೆ ಇರುವುದರಿಂದ (ಯಾವ ಇಂದ್ರಿಯಗಳಾಗಲಿ ವಿಶಯಗಳಾಗಲಿ ಉಪಾಧಿಯಾಗಲಿ ಇಲ್ಲ.} ಇಲ್ಲಿ ಮುಖ್ಯವಾಗಿ ನಮ್ಮ ಮನಸ್ಸು ಕೆಲಸ ಮಾಡದೆ ಶಾಂತವಾಗಿರುವುದರಿಂದ ನಮ್ಮಲ್ಲಿಯೆ ಅನವರತವು ಅವ್ಯಕ್ತವಾಗಿರುವ ಆತ್ಮನ ಪ್ರತಿಬಿಂಬವು ಪ್ರತಿಫಲಿಸಿದೆ. ಆಗ ಅಲ್ಲಿ ನಾವು ನಿರ್ವಿಷಯವಾದ (ವಿಷಯಗಳ, ಇಂದ್ರಿಯಗಳ ಯಾವುದೆ ಉಪಾಧಿಗಳಿಲ್ಲದೆ ಇರುವ ಸ್ಥಿತಿ} ಆತ್ಮಾನಂದದ
ಅನುಭವವನ್ನೆ ಅನುಭವಿಸುತ್ತಿರುವುದರಿಂದಲೆ ನಿದ್ರೆಯಲ್ಲಿ ಸುಖವೇ ಆಗಿದೆ. ಅದು ನಮ್ಮ ಆತ್ಮನ ನಿಜವಾದ ಸುಖದ ಸ್ಯಾಂಪಲ್ ಆಗಿದೆ. ನಾವು ಪ್ರತಿದಿನ ಇಂಥಾ ಅವಸ್ಥೆಗಳನ್ನು ಪ್ರಕೃತಿ ಸಹಜವಾಗಿಯೆ ಅನುಭವಿಸುತ್ತಿದ್ದರೂ ಅದರ ಕಡೆಗೆ ಲಕ್ಷ ಕೊಡದೆ ನಮ್ಮಲ್ಲಿಯೇ ಇರುವ ಯಾವುದೆ ವಿಶಯಗಳನ್ನಾಗಲಿ ಆತ್ಮನನ್ನಾಗಲಿ; ತಿಳಿಯುವ ಕಡೆಗೆ ಗಮನವಿರಿಸದೆ ಕೇವಲ ನಮ್ಮನ್ನು ಬಿಟ್ಟು ಜಗತ್ತಿನ ಎಲ್ಲಾ ವಿಶಯಗಳನ್ನು ತಿಳಿಯಲಿಕ್ಕೆ ತುಂಬಾ ಪ್ರಯತ್ನದಿಂದ ಹರ ಸಾಧನ ಸಾಧಿಸುತ್ತೆವೆ. ಉದಾಹರಣೆಗೆ ಚಂದ್ರಲೋಕಕ್ಕೆ ಹೊಗಿ ಅಲ್ಲಿನ ಪರಿಸರದ, ಹವಾಮಾನದ ಬಗ್ಗೆ ತಿಳಿದೆವು.ಹಾಗೆಯೇ ಸಮುದ್ರದ ಆಳದ ಶೋಧನೆ ಮಾಡಿದೆವು. ಆದರೆ ಅವುಗಳಿಂದ ಏನು ಲಾಭ? ಕೇವಲ ಪ್ರಪಂಚದಲ್ಲಿ ನಮಗೆ ಇವುಗಳಿಂದ ಧನ, ಕೀರ್ತಿ ಯಶಸ್ಸು,ಇನ್ನೂ ಎನೆನೋ ಸಿಗಬಹುದು. ಆದರೆ ಈ ಎಲ್ಲವೂ ನಾವು ಜೀವಂತವಿರುವಾಗಶ್ಟೆ ಉಪಯೊಗವಿದೆ!!! ನಂತರ ಒಂದು ದಿನ ಮರಣ ಬಂದೇ ಬರುವುದು. "ಯದ್ ದೃಶ್ಯ್ಂ ತ್ಂ ನಶ್ಟ್ಂ."
ಯಾವುದು ಕಾಣುವುದೊ ಅದು ನಾಶವಾಗುವುದು ಖಂಡಿತ. ನಾವು ಹುಟ್ಟಿದ್ದೆವೆ ಎಂದಮೇಲೆ ಸಾವು ನಿಶ್ಚಿತ ಅದ್ದರಿಂದ ನಮ್ಮ ಜೀವನದ ಸಾರ್ಥ್ಕತೆಯ ಕಡೆಗೆ ಗಮನ ಕೊಟ್ಟು ನಮ್ಮ ಜೀವನದ ಮುಖ್ಯ ಉದ್ದೇಶವಾದ ನಮ್ಮ ಮೂಲಸ್ವರೂಪದ (ನಿಜವಾದ ನಾನು ಯಾರಿದ್ದೆನೆ} ಬಗ್ಗೆ ತಿಳಿಯುವುದಕ್ಕೆ ಬಹಳ ಪ್ರಯತ್ನಪೂರ್ವಕವಾಗಿ ಪ್ರಯತ್ನ ಪಟ್ಟಗಲೇ, ಸದ್ಗುರುವಿಗೆ ಅಹಂಕಾರ ತ್ಯಜಿಸಿ, ವಿನಯದಿಂದ ಶ್ರದ್ದೆಯಿಂದ,ಭಕ್ತಿಯಿಂದ ನಮಿಸಿ, ವಂದಿಸಿ ನಾನಾರು? ಯೆಂದು ಕೇಳಿ ತಿಳಿದಾಗ. ಸದ್ಗುರುವು ನಮ್ಮಿಂದ ಎನೊಂದನ್ನು ಅಪೇಕ್ಷಿಸದೆ, ಕೆವಲ ಶ್ರದ್ದೆ ಭಕ್ತಿಯನ್ನು ನೋಡಿ ವೇದ, ಉಪನಿಶತ್ತಿನ ಆಧಾರದಿಂದಲೆ ನಮಗೆ ತಿಳಿಯುವಂತೆ ಯುಕ್ತಿ ಉಪಮೆಗಳಿಂದ, ಅಂತಃಕರಣದಿಂದ ನಮ್ಮ ಅನುಭವಕ್ಕೆ ನಿಲುಕುವ ಹಾಗೆ ತಿಳಿಸಿ ಉದ್ಧಾರವನ್ನು ಮಾಡುವವನೇ ನಿಜವಾದ ಸದ್ಗುರು. ನಾವು ಯಾವಾಗಲು ಗುರುವಿನ ಸೆವೆ ಮಾಡುತ್ತ ಸದ್ ವಿಚಾರವನ್ನೇ, ನೆನೆಯುತ್ತ. ಆದಷ್ಟು ಪರೋಪಕಾರ್ಯಗಳನ್ನೆ ಮಾಡಿ, ಪ್ರಪಂಚದ ಎಲ್ಲಾ ವ್ಯವಹಾರಗಳನ್ನು ನಿಷ್ಠೆಯಿಂದಲೇ ಮಾಡುತ್ತ ಇದ್ದರೂ ಮನದಲ್ಲಿ ಮಾತ್ರ ನನಗೆ ಇದಾವುದೂ ಸಂಬಂಧವೇ ಇಲ್ಲದಂತೆ ಇರುವುದೆ ಒಂದು ರಹಸ್ಯವಾಗಿದೆ. ಇದರ ಗುಟ್ಟನ್ನು ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ತುಂಬಾ ಚನ್ನಾಗಿ ತಿಳಿಸಿದ್ದಾನೆ. ಅದನ್ನು ಓದಿ ತಿಳಿದು, ಅದರಂತೆ ನದೆಯಲು ಪ್ರಯತ್ನಿಸಬೇಕು. ಅವಿದ್ಯೆಯಿಂದ, ಮಾಯೆಯಿಂದ, ಪಾರಾಗಿ ಜ್ಞಾನವನ್ನು ಜನ್ಮವಿರುವಾಗಲೇ, ಅನುಭವಿಸುವುದೇ { ಆತ್ಮಾನಂದವನ್ನು} ಜೀವನ್ ಮುಕ್ತಿ ಆಗಿದೆ. ಅಂತಹ ಆತ್ಮಾನಂದವನ್ನು ವಿವೇಕ ವಿಚಾರ ಹೊಳೆದ ಕ್ಷಣದಲ್ಲಿಯೇ ಪಡೆದೇ ತೀರಬೇಕೆಂಬ ಉತ್ಕಟ ಇಚ್ಛೆ ಇದ್ದರೆ ನಮ್ಮ ಸುಕ್ರುತದಿಂದ, ಸದ್ಗುರುನಾಥನ ಕೃಪೆಯಿಂದ, ಈಶ್ವರನ ಅನುಗ್ರಹದಿಂದ, ನಮ್ಮ ಅಂತ:ಕರಣದ ಒಲುಮೆಯ ಸಾಧನೆಯಿಂದ, ನಮ್ಮ ಸ್ವರೂಪದ ಸಾಕ್ಷಾತ್ಕಾರವಾಗಿ, ಆತ್ಮಾನಂದದಲ್ಲಿ ರಮಿಸಿ, ಆತ್ಮಾನಂದವನ್ನು ಅನುಭವವನ್ನು ಪಡೆಯುವುದು ನಮ್ಮ ಗುರಿ.
ನಾವು ಯಾವಾಗಲೂ ನಮ್ಮ ಆಂತರ್ಯದಲ್ಲಿ ಮಾತ್ರ ನಮ್ಮ ಆತ್ಮನ ಚಿಂತನೆಯಲ್ಲಿರಬೆಕು. ಬಾಹ್ಯ ಪ್ರಪಂಚದಲ್ಲಿ ಎಲ್ಲರಂತೆಯೇ ವ್ಯವಹಾರವನ್ನೆ ಮಾಡುವುದೇ ನಮ್ಮ ಕರ್ತವ್ಯ ಆಗಿದೆ. ನಿಷ್ಕಾಮ ಕರ್ಮಗಳನ್ನು ನಾವು ಮಾಡಲೆಬೆಕು. ನಮ್ಮ ಸ್ವರೂಪದ ಜ್ಞಾನವನ್ನು ನಾವೇ ಸ್ವತಃ ತಿಳಿಯದೇ, ಸದ್ಗುರುವಿನ ಉಪದೆಶದಿಂದಲೇ ತಿಳಿದು, ನಾವು ಉದ್ಧಾರವಾಗುವುದೇ ಮನುಜ ಜನ್ಮದ ಲಾಭವಾಗಿದೆ. ಅಂಥ ಲಾಭವನ್ನು ನಾವು ನೀವು ಪಡೆದು ಧನ್ಯರಾಗೋಣ.
ಶ್ರೀ ಕೃಷ್ಣಾರ್ಪಣಮಸ್ತು!
ಅಂಬುಜಾ ಜೋಶಿ.
Comments
ಉ: ಆತ್ಮಚಿಂತನೆ..
ಉ: ಆತ್ಮಚಿಂತನೆ..
In reply to ಉ: ಆತ್ಮಚಿಂತನೆ.. by savithru
ಉ: ಆತ್ಮಚಿಂತನೆ..
ಉ: ಆತ್ಮಚಿಂತನೆ..